‘ಕೊರೋನಾ ವಿಷಾಣುಗಳಿಂದ’ ನಿರ್ಮಾಣವಾಗಿರುವ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಬೇಕೆಂದು ಸಪ್ತರ್ಷಿಗಳ ಆಜ್ಞೆಗನುಸಾರ ಮಾಡಿದ ಆಧ್ಯಾತ್ಮಿಕ ಉಪಾಯದ ಸಂದರ್ಭದಲ್ಲಿ ವೈಶಿಷ್ಟ್ಯಪೂರ್ಣ ಸಂಶೋಧನೆ !

ಅಧ್ಯಾತ್ಮಶಾಸ್ತ್ರದ ಕುರಿತು ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಕೊರೋನಾ ವಿಷಾಣು’ಗಳಿಂದ ನಿರ್ಮಾಣವಾಗಿರುವ ಆಪತ್ಕಾಲದ ಪರಿಸ್ಥಿತಿಯಿಂದಾಗಿ ೨೪ ಮಾರ್ಚ್ ೨೦೨೦ ರಿಂದ ಭಾರತದಲ್ಲಿ ಎಲ್ಲೆಡೆ ‘ಸಂಚಾರಸಾರಿಗೆ ನಿಷೇಧ’ವನ್ನು ಜಾರಿಗೆ ತರಲಾಯಿತು. ಭಾರತದ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ೩.೪.೨೦೨೦ ರಂದು ಬೆಳಗ್ಗೆ ೯ ಗಂಟೆಗೆ ದೇಶವನ್ನು ಉದ್ದೇಶಿಸಿ, “೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಭಾರತೀಯರು ತಮ್ಮ ಮನೆಯಲ್ಲಿನ ವಿದ್ಯುತ್ ದೀಪಗಳನ್ನು ೯ ನಿಮಿಷಗಳಿಗಾಗಿ ಆರಿಸಬೇಕು ಮತ್ತು ಆ ಕಾಲಾವಧಿಯಲ್ಲಿ ಎಣ್ಣೆಯ ದೀಪಗಳನ್ನು ಪ್ರಜ್ವಲಿಸಬೇಕು ಅಥವಾ ಮೇಣದಬತ್ತಿಗಳನ್ನು ಉರಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಸಂಚಾರವಾಣಿಯಲ್ಲಿರುವ ದೀಪಗಳನ್ನು ಉರಿಸಬೇಕು”, ಎಂದು ಹೇಳಿದರು, ಅದಕ್ಕನುಸಾರ ಎಲ್ಲ ದೇಶ ವಾಸಿಗಳು ಹಾಗೆಯೇ ಮಾಡಿದರು.

ಚೆನ್ನೈ (ತಮಿಳುನಾಡು) ನ ‘ಸಪ್ತರ್ಷಿ ಜೀವನಾಡಿ’ ಪಟ್ಟಿಯ ವಾಚಕರಾದ ಪೂ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಸಪ್ತರ್ಷಿಗಳು ಮುಂದಿನ ಉಪಾಯವನ್ನು ಮಾಡಲು ಹೇಳಿದರು. ಅವರು, “೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಸೇರಿ ಹರಳೆಣ್ಣೆಯ ೯ ದೀಪಗಳನ್ನು ಪ್ರಜ್ವಲಿಸಬೇಕು. ಈ ೯ ದೀಪಗಳನ್ನು ನವಗ್ರಹಗಳಿಗಾಗಿ ಪ್ರಜ್ವಲಿಸಬೇಕು. ‘ಕೊರೋನಾ ವಿಷಾಣು’ಗಳಿಂದಾಗಿ ನಿರ್ಮಾಣವಾದ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಬೇಕೆಂದು ಈ ಉಪಾಯವನ್ನು ಮಾಡಬೇಕು”, ಎಂದು ಹೇಳಿದರು. ಅದಕ್ಕನುಸಾರ ಸದ್ಗುರುದ್ವಯರು ೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಹರಳೆಣ್ಣೆಯ ೯ ದೀಪಗಳನ್ನು ಪ್ರಜ್ವಲಿಸಿದರು. ಹರಳೆಣ್ಣೆಯ ದೀಪಗಳನ್ನು ಪ್ರಜ್ವಲಿಸಿದ ನಂತರ ಅವುಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ದೀಪವನ್ನು ಪ್ರಜ್ವಲಿಸುತ್ತಿರುವ ಎಡಗಡೆಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಹರಳೆಣ್ಣೆಯ (ನವಗ್ರಹಗಳ) ೯ ದೀಪಗಳಿಗೆ (ಮಣ್ಣಿನ ಹಣತೆಗಳಿಗೆ) ಪರಾತ್ಪರ ಗುರು ಡಾ. ಆಠವಲೆಯವರು ಹಸ್ತಸ್ಪರ್ಶ ಮಾಡುವ ಮೊದಲು ಮತ್ತು ಅವರು ಹಸ್ತಸ್ಪರ್ಶ ಮಾಡಿದ ನಂತರ, ಸದ್ಗುರುದ್ವಯರು ದೀಪವನ್ನು ಪ್ರಜ್ವಲಿಸಿದ ನಂತರ ಮತ್ತು ಆ ದೀಪಗಳು ಆರಿದ ನಂತರ ಆ ಎಲ್ಲ ದೀಪಗಳ ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ನಂತರ ಈ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳಿಗೆ ಸಂಬಂಧಿಸಿದ  ನಿರೀಕ್ಷಣೆಗಳ ವಿಶ್ಲೇಷಣೆ – ಪರೀಕ್ಷಣೆಯಲ್ಲಿ ನವಗ್ರಹಗಳ ದೀಪಗಳಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ನಕಾರಾತ್ಮಕ ಊರ್ಜೆಗಳು ಕಂಡು ಬರಲಿಲ್ಲ. ಪರೀಕ್ಷಣೆಯಲ್ಲಿ ನವಗ್ರಹಗಳ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯನ್ನು ಮುಂದೆ ಕೊಡಲಾಗಿದೆ.

೧ ಅ ೧. ಪರೀಕ್ಷಣೆಯಲ್ಲಿ ನವಗ್ರಹಗಳ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಳಿ

ಟಿಪ್ಪಣಿ ೧ – (೨-೧ =) ೩. ಇದರಲ್ಲಿನ ೨ ಎಂದರೆ ‘ಪರಾತ್ಪರ ಗುರು ಡಾ. ಆಠವಲೆಯವರು ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಮತ್ತು ೧ ಅಂದರೆ ‘ಪರಾತ್ಪರ ಗುರು ಡಾ. ಆಠವಲೆಯವರು ದೀಪಗಳಿಗೆ ಹಸ್ತಸ್ಪರ್ಶ ಮಾಡುವ ಮೊದಲು’, ಟಿಪ್ಪಣಿ ೨ – ಪರೀಕ್ಷಣೆಯ ಸ್ಥಳವು ಕಡಿಮೆ ಇರುವುದರಿಂದ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯನ್ನು ೨೫ ಮೀಟರ್‌ಗಳಿಗಿಂತ ಹೆಚ್ಚು ಅಳೆಯಲು ಸಾಧ್ಯವಾಗಲಿಲ್ಲ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.

೧. ಪರೀಕ್ಷಣೆಯಲ್ಲಿನ ಎಲ್ಲ ದೀಪಗಳಲ್ಲಿ ಮೊದಲು ಸಕಾರಾತ್ಮಕ ಊರ್ಜೆ ಇತ್ತು.

. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಆ ಎಲ್ಲ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಯಿತು ಮತ್ತು ಪರೀಕ್ಷಣೆಯಲ್ಲಿ ಇತರ ದೀಪಗಳ ತುಲನೆಯಲ್ಲಿ ಶನಿ, ಕೇತು, ರಾಹು ಮತ್ತು ಗುರು ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು. (ಇದರ ಹಿಂದಿನ ಜ್ಯೋತಿಷ್ಯ ಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩ ಈ’ ಯಲ್ಲಿ ನೀಡಲಾಗಿದೆ.)

೩. ಸದ್ಗುರುದ್ವಯರು ದೀಪಗಳನ್ನು ಪ್ರಜ್ವಲಿಸಿದ ನಂತರ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಯಿತು. (ಪರೀಕ್ಷಣೆಯ ಸ್ಥಳವು ಕಡಿಮೆ ಇರುವುದರಿಂದ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯನ್ನು ೨೫ ಮೀಟರ್‌ಗಳಿಗಿಂತ ಹೆಚ್ಚು ಅಳೆಯಲು ಸಾಧ್ಯವಾಗಲಿಲ್ಲ.)

. ದೀಪಗಳು ಆರಿದ ನಂತರವೂ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಇತ್ತು ಮತ್ತು ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶುಕ್ರ, ಮಂಗಲ, ಕೇತು ಮತ್ತು ಬುಧ ಈ ಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಳಿಗಳು ಹೆಚ್ಚಾಗಿದ್ದವು. (ಇದರ ಹಿಂದಿನ ಜ್ಯೋತಿಷ್ಯ ಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩ ಉ’ರಲ್ಲಿ ನೀಡಲಾಗಿದೆ.)

೨. ಪರೀಕ್ಷಣೆಯ ನಿರೀಕ್ಷಣೆಗಳ

ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಶ್ರೀ. ರಾಜ ಧನಂಜಯ ಕರ್ವೆ

೨ ಅ. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಅವುಗಳಲ್ಲಿ (ದೀಪಗಳಲ್ಲಿ) ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗುವುದರ ಕಾರಣ : ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಕಳೆದ ಕೆಲವು ತಿಂಗಳುಗಳಿಂದ ಈಗಿನ ವಿಶಿಷ್ಟ ಗ್ರಹಸ್ಥಿತಿಯು ಸದ್ಯದ ಆಪತ್ಕಾಲಕ್ಕೆ ಪೂರಕವಾಗಿದೆ. ಸಪ್ತರ್ಷಿಗಳು ‘ಕೊರೋನಾ ವಿಷಾಣು’ಗಳಿಂದಾಗಿ ನಿರ್ಮಾಣವಾದ ಜಾಗತಿಕ ಆಪತ್ಕಾಲದಲ್ಲಿ ನವಗ್ರಹಗಳ ಆಶೀರ್ವಾದ ಲಭಿಸಬೇಕೆಂದು ಈ ದೀಪಗಳನ್ನು ಪ್ರಜ್ವಲಿಸಲು ಹೇಳಿದ್ದರು. ‘ಪರಾತ್ಪರ ಗುರು’ ಪದದಲ್ಲಿರುವ ಸಮಷ್ಟಿ ಸಂತರು (ಪರಾತ್ಪರ ಗುರು ಡಾ. ಆಠವಲೆಯವರು) ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿ ಅವುಗಳಲ್ಲಿ ಚೈತನ್ಯವನ್ನು ಸಂಕ್ರಮಿಸಿದರು; ಇದರಿಂದ ಅವುಗಳಿಗೆ (ದೀಪಗಳಿಗೆ) ತಮ್ಮ ಕಾರ್ಯ ಮಾಡಲು ಆವಶ್ಯಕವಿರುವ ಬಲ ಪ್ರಾಪ್ತವಾಯಿತು. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ದೀಪಗಳಿಗೆ ಹಸ್ತ ಸ್ಪರ್ಶ ಮಾಡಿದ ನಂತರ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಯಿತು.

೨ ಆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನವಗ್ರಹಗಳ ದೀಪಗಳನ್ನು ಪ್ರಜ್ವಲಿಸಿದ ನಂತರ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗುವುದರ ಕಾರಣ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನವಗ್ರಹಗಳಿಗೆ ಭಾವಪೂರ್ಣ ಪ್ರಾರ್ಥನೆಯನ್ನು ಮಾಡಿ ೯ ದೀಪಗಳನ್ನು ಅತ್ಯಂತ ಭಾವಪೂರ್ಣ ರೀತಿಯಲ್ಲಿ ಪ್ರಜ್ವಲಿಸಿದರು. ಆದುದರಿಂದ ನವಗ್ರಹಗಳ ದೀಪಗಳತ್ತ ನವಗ್ರಹಗಳ ಚೈತನ್ಯವು ಆಕರ್ಷಿಸಲ್ಪಟ್ಟು ಅವು ಕಾರ್ಯನಿರತವಾದವು. ಇದರಿಂದ ಸದ್ಗುರುದ್ವಯರು ದೀಪಗಳನ್ನು ಪ್ರಜ್ವಲಿಸಿದ ನಂತರ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಯಲ್ಲಿ ಬಹಳಷ್ಟು ಹೆಚ್ಚಳವಾಯಿತು.

೨ ಇ. ಮರುದಿನ ಬೆಳಗ್ಗೆ ದೀಪಗಳು ಆರಿದ ನಂತರವೂ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಕಂಡು ಬರುವುದು : ಸದ್ಗುರುದ್ವಯರು ೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ಪ್ರಜ್ವಲಿಸಿದ ದೀಪಗಳು ಮರುದಿನ ಬೆಳಗ್ಗೆ ೭ ರಿಂದ ೧೧ ಗಂಟೆಯವರೆಗೆ ನಿಧಾನವಾಗಿ ಆರಿದವು. ದೀಪಗಳು ಆರಿದ ನಂತರವೂ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು ಪರೀಕ್ಷಣೆಯಿಂದ ಕಂಡು ಬಂದಿತು. ಇದರ ಕಾರಣವೆಂದರೆ ‘ದೀಪಗಳಿಗೆ ಸಮಷ್ಟಿ ಸಂತರಿಂದಾದ ಚೈತನ್ಯಮಯ ಹಸ್ತಸ್ಪರ್ಶ, ನವಗ್ರಹಗಳ ಚೈತನ್ಯವನ್ನು ಆಕರ್ಷಿಸಿ ಅದನ್ನು ಪ್ರಕ್ಷೇಪಿಸುವ ಅವುಗಳ (ದೀಪಗಳ) ಕ್ಷಮತೆ, ಹಾಗೆಯೇ ಸನಾತನ ಆಶ್ರಮದ ಸಾತ್ತ್ವಿಕ ವಾತಾವರಣ ಇವುಗಳಿಂದ ದೀಪಗಳಲ್ಲಿ ಬಹಳಷ್ಟು ಚೈತನ್ಯ ನಿರ್ಮಾಣವಾಯಿತು. ಮರುದಿನ ಬೆಳಗ್ಗೆ ೭ ರಿಂದ ೧೧ ಗಂಟೆಯವರೆಗೆ ನವಗ್ರಹಗಳ ದೀಪಗಳು ನಿಧಾನವಾಗಿ ಆರಿದರೂ ಅವುಗಳಲ್ಲಿ ಬಹಳಷ್ಟು ಚೈತನ್ಯ ಉಳಿದುಕೊಂಡಿತ್ತು; ಆದುದರಿಂದ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಕಂಡು ಬಂದಿತು.

೨ ಈ. ಪರತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಎಲ್ಲ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು ಮತ್ತು ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶನಿ, ಕೇತು, ರಾಹು ಮತ್ತು ಗುರು ಈ ಗ್ರಹಗಳ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗುವುದು, ಇದರ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ : ‘ಶನಿ, ಕೇತು, ರಾಹು ಮತ್ತು ಗುರು ಈ ಗ್ರಹಗಳು ಸಮಷ್ಟಿಗೆ ಸಂಬಂಧಿಸಿದ ಗ್ರಹಗಳಾಗಿವೆ. ರಾಷ್ಟ್ರದ ಭವಿಷ್ಯವನ್ನು ಹೇಳುವಾಗ ಈ ೪ ಗ್ರಹಗಳ ಬಗ್ಗೆ ಪ್ರಮುಖವಾಗಿ ವಿಚಾರ ಮಾಡಲಾಗುತ್ತದೆ; ಏಕೆಂದರೆ ಈ ೪ ಗ್ರಹಗಳು ಮಂದಗತಿಯಿಂದ ಸೂರ್ಯನ ಸುತ್ತಲೂ ಸುತ್ತುತ್ತವೆ. ಶನಿ ಗ್ರಹಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು ಎರಡುವರೆ ವರ್ಷಗಳು, ರಾಹು ಮತ್ತು ಕೇತು ಇವುಗಳಿಗೆ ಪ್ರತಿಯೊಂದಕ್ಕೆ ಒಂದೂವರೆ ವರ್ಷಗಳು ಮತ್ತು ಗುರು ಗ್ರಹಕ್ಕೆ ೧೧ ರಿಂದ ೧೨ ತಿಂಗಳುಗಳು ಬೇಕಾಗುತ್ತವೆ. ಆದುದರಿಂದ ದೊಡ್ಡ ಸಾಮಾಜಿಕ ಘಟನೆಗಳ ಅಧ್ಯಯನ ಮಾಡಲು ಈ ೪ ಗ್ರಹಗಳ ಬಗ್ಗೆ ಪ್ರಾಧಾನ್ಯತೆಯಿಂದ ವಿಚಾರ ಮಾಡಲಾಗುತ್ತದೆ. ಡಿಸೆಂಬರ್ ೨೦೧೯ ರಲ್ಲಿನ ಕೊನೆಯ ವಾರದಲ್ಲಿ ಕೊರೋನಾ ವಿಷಾಣುಗಳ ಸೋಂಕು ಹರಡಲು ಆರಂಭವಾಯಿತು. ಆಗ ಶನಿ, ಕೇತು ಮತ್ತು ಗುರು ‘ಧನು’ ರಾಶಿಯಲ್ಲಿ ಒಟ್ಟಾಗಿದ್ದವು. ಈ ಮೂರು ಗ್ರಹಗಳ ಮೇಲೆ ರಾಹುವಿನ ದೃಷ್ಟಿ ಅಂದರೆ ಪ್ರಭಾವವಿತ್ತು. ಈ ಅಶುಭ ಯೋಗವು ‘ಕೊರೋನಾ ಜಾಗತಿಕ ಮಹಾಮಾರಿ’ಗೆ ಕಾರಣವಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಎಲ್ಲ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಮತ್ತು ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶನಿ, ಕೇತು, ರಾಹು ಮತ್ತು ಗುರು ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು. ಇದರಿಂದ ‘ಶನಿ, ಕೇತು, ರಾಹು ಮತ್ತು ಗುರು ಈ ನಾಲ್ಕೂ ಗ್ರಹಗಳ ಅಶುಭ ಪ್ರಭಾವವನ್ನು ಕಡಿಮೆ ಮಾಡಲು ಅವುಗಳಿಗೆ ಸಂಬಂಧಿಸಿದ ದೀಪಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಆವಶ್ಯಕವಿರುವ ಸಕಾರಾತ್ಮಕ ಊರ್ಜೆಯನ್ನು ಸಂಕ್ರಮಿಸಿದ್ದರು’, ಎಂಬುದು ಗಮನಕ್ಕೆ ಬರುತ್ತದೆ.

೨ ಉ. ಮರುದಿನ ಬೆಳಗ್ಗೆ ದೀಪಗಳು ಆರಿದ ನಂತರವೂ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಕಂಡು ಬಂದಿತು ಮತ್ತು ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶುಕ್ರ, ಮಂಗಳ, ಕೇತು ಮತ್ತು ಬುಧ ಈ ಗ್ರಹಗಳ ದೀಪಗಳಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಗಳು ಹೆಚ್ಚಾಗಿದ್ದವು, ಇದರ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ : ಶುಕ್ರ ಗ್ರಹ ‘ಆನಂದ’, ಮಂಗಲ ಗ್ರಹ ‘ಪರಾಕ್ರಮ-ವಿಜಯ’, ಬುಧ ಗ್ರಹ ‘ಸಂಚಾರಸಾರಿಗೆ’ ಮತ್ತು ಕೇತು ಗ್ರಹ ‘ಮುರಿಯುವುದು ಇವುಗಳ ಕಾರಕವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ‘ಕೊರೋನಾ ಮಹಾಮಾರಿ’ಯ ಕೊಂಡಿಯನ್ನು ಆದಷ್ಟು ಬೇಗನೆ ಮುರಿದು ಅದನ್ನು ನಾಶ ಮಾಡುವುದು ಬಹಳ ಮಹತ್ವದ್ದಾಗಿದೆ, ಇದರಿಂದ ಮನುಕುಲದ ಮೇಲೆ ಬಂದಿರುವ ಸಂಕಟವು ದೂರವಾಗುವುದು. ‘ಇತರ ಗ್ರಹಗಳ ದೀಪಗಳ ತುಲನೆಯಲ್ಲಿ ಶುಕ್ರ, ಮಂಗಳ, ಕೇತು ಮತ್ತು ಬುಧ ಈ ಗ್ರಹಗಳ ದೀಪಗಳಲ್ಲಿ ಸಕರಾತ್ಮಕ ಊರ್ಜೆಯ ಪ್ರಭಾವಳಿಗಳು ಹೆಚ್ಚಾಗಿರುವುದು, ‘ಕೊರೋನಾ ಮಹಾಮಾರಿ’ಯ ವಿರುದ್ಧ ಸಾರಿದ ಯುದ್ಧದಲ್ಲಿ ಭಾರತಕ್ಕೆ ವಿಜಯಶ್ರೀ ದೊರಕಿ ‘ಕೊರೋನಾ ವಿಷಾಣು’ಗಳ ಸಮೂಲ ನಾಶವಾಗುವುದರ ಖಾತ್ರಿಯಾದುದರ ಪ್ರತೀಕವಾಗಿದೆ.

೨ ಊ. ೫.೪.೨೦೨೦ ಈ ರಾತ್ರಿ ೯ ಗಂಟೆಗೆ ದೀಪಗಳನ್ನು ಪ್ರಜ್ವಲಿಸುವ ಜ್ಯೋತಿಷ್ಯಶಾಸ್ತ್ರೀಯ ಮಹತ್ವ : ೫.೪.೨೦೨೦ ರಂದು ರಾತ್ರಿ ೯ ಗಂಟೆಗೆ ‘ತ್ರಯೋದಶಿ’ ತಿಥಿ ಇತ್ತು. ತ್ರಯೋದಶಿಗೆ ‘ಜಯಾ’ ಎಂಬ ಸಂಜ್ಞೆ ಇದೆ, ಅಂದರೆ ಅದು ವಿಜಯವನ್ನು ಪ್ರದಾನಿಸುವ ತಿಥಿಯಾಗಿದೆ. ವಾಯುವಿನ ಮಾಧ್ಯಮದಿಂದ ವೇಗದಿಂದ ಹರಡುವ ಈ ‘ಕೊರೋನಾ ವಿಷಾಣುಗಳ’ ಸೋಂಕು ರೋಗವನ್ನು ಕಡಿಮೆ ಮಾಡಲು, ಹಾಗೆಯೇ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತೇಜತತ್ತ್ವ ಮತ್ತು ಪೃಥ್ವಿತತ್ತ್ವದ ಆವಶ್ಯಕತೆ ಇದೆ. ೫.೪.೨೦೨೦ ರಂದು ಚಂದ್ರನು ಸಿಂಹ ರಾಶಿ ಯಲ್ಲಿದ್ದನು. ಸಿಂಹವು ಕ್ಷತ್ರೀಯ ವರ್ಣದ (ತೇಜತತ್ತ್ವದ) ಮತ್ತು ಸ್ಥಿರ ಸ್ವಭಾವದ (ಪೃಥ್ವಿತತ್ತ್ವದ) ರಾಶಿಯಾಗಿದೆ, ಹಾಗೆಯೇ ಈ ರಾತ್ರಿ ೯ ಗಂಟೆಗೆ ಚಂದ್ರನು ‘ಪೂರ್ವಾಫಾಲ್ಗುಣಿ’ ಈ ತೇಜತತ್ತ್ವದ ನಕ್ಷತ್ರದಲ್ಲಿದ್ದನು. ಈ ದಿನ ರವಿವಾರವೂ ಇತ್ತು. ಆದುದರಿಂದ, ತೇಜತತ್ತ್ವ ಮತ್ತು ಪೃಥ್ವಿತತ್ತ್ವ ಹೆಚ್ಚಿರುವ ಮುಹೂರ್ತದಲ್ಲಿ ಸಪ್ತರ್ಷಿಗಳು ನವಗ್ರಹಗಳಿಗಾಗಿ ೯ ದೀಪಗಳನ್ನು ಪ್ರಜ್ವಲಿಸಲು ಹೇಳಿದರು, ಹಾಗೆಯೇ ಸಂಪೂರ್ಣ ದೇಶವೂ ಆ ರಾತ್ರಿ ೯ ಗಂಟೆಗೆ ದೀಪಗಳನ್ನು ಪ್ರಜ್ವಲಿಸಿತು. ಆದುದರಿಂದ ಸೂಕ್ಷ್ಮ ಸ್ತರದಲ್ಲಿ ವಾತಾವರಣದಲ್ಲಿ ತಮೋಗುಣದ ಪ್ರಭಾವ ಕಡಿಮೆಯಾಗಲು ಸಹಾಯವಾಯಿತು ಮತ್ತು ಸ್ಥೂಲ ಸ್ತರದಲ್ಲಿ ಭಾರತೀಯರಲ್ಲಿ ಕೊರೋನಾ ವಿಷಾಣುಗಳ ವಿರುದ್ಧ ಹೋರಾಡಲು ಆವಶ್ಯಕವಿರುವ ಆತ್ಮಬಲವೂ ವೃದ್ಧಿಯಾಯಿತು’, ಎಂಬುದು ಗಮನಕ್ಕೆ ಬರುತ್ತದೆ. – ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

೩. ಆಪತ್ಕಾಲದಲ್ಲಿಯೂ ವಿಶ್ವಕಲ್ಯಾಣಕ್ಕಾಗಿ ಕಾಲಕಾಲಕ್ಕೆ ನಾಮಜಪಾದಿ ಉಪಾಯವನ್ನು ಹೇಳಿ ಮಾರ್ಗದರ್ಶನವನ್ನು ಮಾಡುವ ಮಹಾನ ಋಷಿಮುನಿಗಳ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳು !

ಸೌ. ಮಧುರಾ ಕರ್ವೆ

೩೦.೩.೨೦೨೦ ಈ ದಿನದಂದು ಬೆಳಗ್ಗೆ ೧೧ ಗಂಟೆಗೆ ಪೂ. ಡಾ. ಓಂ ಉಲಗನಾಥನ್, ಇವರು ಸಪ್ತರ್ಷಿಗಳ ಸಂದೇಶವನ್ನು ಹೇಳಿದರು. ಅವರು, “ಸಪ್ತರ್ಷಿಗಳು ತಕ್ಷಣ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ದಕ್ಷಿಣ ಮತ್ತು ಉತ್ತರ ದಿಕ್ಕು ಗಳಿಗೆ ಮುಖ ಮಾಡಿ ಒಂದೊಂದು ಮಣ್ಣಿನ ಹಣತೆಯನ್ನು ಇಡಲು ಹೇಳಿದರು. ಈ ಹಣತೆಗಳು ಎಂದಿಗಿಂತಲೂ ಸ್ವಲ್ಪ ದೊಡ್ಡ ಆಕಾರದ್ದಾಗಿರಬೇಕು. ದಕ್ಷಿಣ ದಿಕ್ಕಿನ ಕಡೆಗೆ ಮುಖ ಮಾಡಿ ಇಡಬೇಕಾದ ಹಣತೆಯಲ್ಲಿ ನೀರು, ಸ್ವಲ್ಪ ಅರಿಶಿಣದ ಪುಡಿ ಮತ್ತು ಕಹಿಬೇವಿನ ೪-೫ ಎಲೆಗಳಿರಬೇಕು. ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ಇಡಬೇಕಾದ ಹಣತೆಯಲ್ಲಿ ಹರಳೆಣ್ಣೆ ಮತ್ತು ಹತ್ತಿಯಿಂದ ಮಾಡಿದ ಬತ್ತಿ ಇರಬೇಕು; ಆದರೆ ಈ ಬತ್ತಿಯನ್ನು ಪ್ರಜ್ವಲಿಸಬಾರದು. ಎಲ್ಲಿಯವರೆಗೆ ಸಪ್ತರ್ಷಿಗಳ ಮುಂದಿನ ಆಜ್ಞೆಯು ಬರುವುದಿಲ್ಲವೋ ಅಲ್ಲಿಯವರೆಗೆ ಈ ಎರಡೂ ಹಣತೆಗಳನ್ನು ಹಾಗೆಯೇ ಇಡಬೇಕು. ಮುಂದೆ ಒಂದು ಶುಭಶಕುನವು ಬಂದಾಗ ಈ ಬಗ್ಗೆ ಸಪ್ತರ್ಷಿಗಳು ತಿಳಿಸುವರು”, ಎಂದು ಹೇಳಿದರು. (ಸಪ್ತರ್ಷಿಗಳು ಹೇಳಿದಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ತಕ್ಷಣ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ದಕ್ಷಿಣ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿ ಮಣ್ಣಿನ ಒಂದೊಂದು ಹಣತೆಯನ್ನು ಇಟ್ಟರು.)

೩.೪.೨೦೨೦ ಈ ದಿನದಂದು ಬೆಳಗ್ಗೆ ೯ ಗಂಟೆಗೆ ಪ್ರಧಾನ ಮಂತ್ರಿಗಳು ಭಾರತೀಯರನ್ನು ಉದ್ದೇಶಿಸಿ ಮಾಡಿದ ಸಂಬೋಧನೆಯ ನಂತರ ಪೂ. ಡಾ. ಓಂ ಉಲಗನಾಥನ್ ಇವರು ಸಂಚಾರವಾಣಿ ಕರೆ ಮಾಡಿ, “ಈ ಮೊದಲೇ ಸಪ್ತರ್ಷಿಗಳು ಉತ್ತರ ದಿಕ್ಕಿಗೆ ಮುಖ ಮಾಡಿ ಹರಳೆಣ್ಣೆಯ ದೀಪಗಳನ್ನು ಪ್ರಜ್ವಲಿಸದೇ ಇಡಲು ಏಕೆ ಹೇಳಿದರು ಎಂದು ಗಮನಕ್ಕೆ ಬಂದಿರಬಹುದು”, ಎಂದು ಹೇಳಿದರು. ಅನಂತರ ಅವರು ಸಪ್ತರ್ಷಿಗಳ ಮುಂದಿನ ಆಜ್ಞೆಯನ್ನು ಹೇಳಿದರು. ಇದರಿಂದ ಸಪ್ತರ್ಷಿಗಳ ಸರ್ವಜ್ಞತೆಯು ಗಮನಕ್ಕೆ ಬರುತ್ತದೆ. ಆಪತ್ಕಾಲದಲ್ಲಿಯೂ ವಿಶ್ವಕಲ್ಯಾಣಕ್ಕಾಗಿ ಕಾಲಕಾಲಕ್ಕೆ ನಾಮಜಪಾದಿ ಉಪಾಯಗಳನ್ನು ಹೇಳಿ ಮಾರ್ಗದರ್ಶನ ವನ್ನು ಮಾಡುವ ಇಂತಹ ಮಹಾನ ಋಷಿಮುನಿಗಳ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳು !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೬.೪.೨೦೨೦)

ವಿ-ಅಂಚೆ : [email protected]