ಸಾಮಾನ್ಯವಾಗಿ ದೇಶದಲ್ಲಿ ಚಳಿಗಾಲದಲ್ಲಿ ಶೀತ ಲಹರಿಗಳು ಬರುತ್ತವೆ. ಹಿಮಾಲಯದಲ್ಲಿಯಂತೂ ತಾಪಮಾನವು ಶೂನ್ಯ ಸೆಲ್ಸಿಯಸ್‌ಗಿಂತ ಕೆಳಗೆ, ಅಂದರೆ ೪೦ ಸೆಲ್ಸಿಯಸ್ ವರೆಗೆ ಕಡಿಮೆಯಾಗಿರುತ್ತದೆ. ಸದ್ಯದ ಆಪತ್ಕಾಲದಲ್ಲಿ ಶೀತ ಲಹರಿಗಳು ಬರುವ ಸಾಧ್ಯತೆಯನ್ನು ನಿರಾಕರಿಸಲಾಗದು. ಇತ್ತೀಚೆಗಷ್ಟೇ ಅಮೇರಿಕಾದ ಟೆಕ್ಸಾಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮಪಾತವಾಯಿತು. ಅದರಲ್ಲಿಯೇ ಅಲ್ಲಿನ ವಿದ್ಯುತ್ ಪೂರೈಕೆಯಲ್ಲಿ ದೊಡ್ಡ ವ್ಯತ್ಯಯವುಂಟಾದುದರಿಂದ ನಾಗರಿಕರಿಗೆ ಹೀಟರ್‌ಗಳನ್ನು ಬಳಸಲು ಆಗಲಿಲ್ಲ. ನಲ್ಲಿಯ ನೀರು ಹೆಪ್ಟುಗಟ್ಟಿದುದರಿಂದ ನೀರಿನ ಪೂರೈಕೆಯೂ ನಿಂತುಹೋಗಿತ್ತು. ಆಹಾರವನ್ನು ತಯಾರಿಸಲು ವಿದ್ಯುತ್ ಉಪಕರಣಗಳನ್ನು ಬಳಸಲಾಗದೇ ಅಲ್ಲಿನ ನಾಗರಿಕರಿಗೆ ಕೆಲವು ದಿನ ತುಂಬಾ ತೊಂದರೆಯಾಯಿತು. ಇದಕ್ಕೆ ಆಪತ್ಕಾಲವೇ ಎಂದು ಹೇಳಬಹುದು. ಇಂತಹ ಸ್ಥಿತಿ ಎಲ್ಲ ಕಡೆಗೆ ಬಂದರೆ ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಬಹುದು. ಈ ಲೇಖನದಲ್ಲಿ ಭಾರತದಲ್ಲಿ ಶೀತ ಲಹರಿಗಳು ಬಂದರೆ ಸಾಮಾನ್ಯವಾಗಿ ಯಾವ ಉಪಾಯಯೋಜನೆಗಳನ್ನು ಮಾಡಬಹುದು, ಎಂಬುದರ ಮಾಹಿತಿಯನ್ನು ನೀಡಲಾಗಿದೆ.
೨ ಈ. ಶೀತಲಹರಿಗಳು
೨ ಈ ೧. ಶೀತಲಹರಿ ಎಂದರೆ ಏನು ? : ‘ಸಾಮಾನ್ಯವಾಗಿ ವಾತಾವರಣದ ತಾಪಮಾನವು ಕಡಿಮೆಯಾಗಿ ಮೈನಸ್ (minus) ಶೂನ್ಯ ಸೆಲ್ಸಿಯಸ್‌ವರೆಗೆ ಹೋದರೆ ಅದಕ್ಕೆ ‘ಶೀತಲಹರಿ, ಎಂದು ಹೇಳುತ್ತಾರೆ.
೨ ಈ ೨. ಶೀತಲಹರಿಗಳಿಂದಾಗುವ ತೊಂದರೆಗಳು
‘ಹೈಪೋಥರ್ಮಿಯಾದಿಂದ ಜಾಗರೂಕರಾಗಿರಬೇಕು ! : ಹೆಚ್ಚು ತಂಪಿನಿಂದ ಕೆಲವು ಜನರಿಗೆ ‘ಹೈಪೋಥರ್ಮಿಯಾದ ತೊಂದರೆಯಾಗಬಹುದು. ಪ್ರತಿಯೊಬ್ಬ ವ್ಯಕ್ತಿಯ ಶರೀರಕ್ಕೆ ಒಂದು ಸಾಮಾನ್ಯ ತಾಪಮಾನವಿರುತ್ತದೆ. ಅದನ್ನು ಶರೀರ ನಿಯಂತ್ರಿಸುತ್ತದೆ. ಶರೀರದ ತಾಪಮಾನವು ಈ ಸಾಮಾನ್ಯ ತಾಪಮಾನದ ಕೆಳಗೆ ಹೋದರೆ ಅದಕ್ಕೆ ‘ಹೈಪೋಥರ್ಮಿಯಾ ಎನ್ನುತ್ತಾರೆ. ಇದು ಪ್ರಾಣಘಾತಕವಾಗಬಹುದು; ಏಕೆಂದರೆ ಈ ತಾಪಮಾನವನ್ನು ಎದುರಿಸಲು ಆವಶ್ಯಕವಾಗಿರುವ ಉಷ್ಣತೆಯನ್ನು ಶರೀರವು ಉತ್ಪಾದಿಸಲಾರದು. ವಿಶೇಷವಾಗಿ ನವಜಾತ ಶಿಶುಗಳು ಮತ್ತು ವೃದ್ಧರಿಗೆ ಇದರಿಂದ ಹೆಚ್ಚು ಅಪಾಯವಿರುತ್ತದೆ. ಆದುದರಿಂದ ಯಾರಿಗಾದರೂ ಶರೀರವು ಹೆಚ್ಚು ತಣ್ಣಗಾಗಿ ನಡುಗುತ್ತಿದ್ದರೆ, ಅವನಲ್ಲಿ ಹೆಚ್ಚು ಉಷ್ಣತೆಯನ್ನು ಉತ್ಪತ್ತಿಸಲು ಹೆಚ್ಚು ಬಟ್ಟೆಗಳನ್ನು, ಸ್ವೇಟರ್, ಕಂಬಳಿ (ಬ್ಲ್ಯಾಂಕೇಟ್) ಮುಂತಾದವುಗಳನ್ನು ಕೊಡಬೇಕು. ಅವನ ಬಟ್ಟೆಗಳು ಹಸಿಯಾಗಿದ್ದರೆ, ಅವುಗಳನ್ನು ಬದಲಾಯಿಸಬೇಕು. ಉಷ್ಣತೆಯನ್ನು ಉತ್ಪತ್ತಿ ಮಾಡುವ ಪಾನೀಯಗಳನ್ನು (ಉದಾ. ಚಹಾ, ಕಾಫಿ) ಕುಡಿಸಬೇಕು. ಆವಶ್ಯಕತೆಗನುಸಾರ ಆಧುನಿಕ ವೈದ್ಯರ ಸಲಹೆಯನ್ನು ಪಡೆಯಬೇಕು.
೨ ಈ ೩. ಶೀತ ಲಹರಿಗಳಿಂದ ರಕ್ಷಿಸಿಕೊಳ್ಳಲು ಮಾಡಬೇಕಾದ ಪೂರ್ವ ಸಿದ್ಧತೆ : ‘ಚಳಿಗಾಲದಲ್ಲಿ ಧರಿಸುವಂತಹ ಬಟ್ಟೆಗಳನ್ನು ಸಾಕಷ್ಟು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಉದಾ. ಸ್ವೆಟರ್ ಅಥವಾ ಜ್ಯಾಕೇಟ್, ಮಫಲರ್, ಶಾಲು, ಕಿವಿ ಮುಚ್ಚುವ ಟೊಪ್ಪಿಗೆ, ಕೈ ಗವಸುಗಳು ಮತ್ತು ಕಾಲುಚೀಲಗಳು, ಕೌಂದಿ, ರಜಯೀ, ಕಂಬಳಿ (ಬ್ಲ್ಯಾಂಕೇಟ್) ಮುಂತಾದವುಗಳು. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಅವು ಸಾಕಾಗುವಷ್ಟಿರಬೇಕು. ವೃದ್ಧರಿಗೆ ಚಳಿಯಿಂದ ಹೆಚ್ಚು ತೊಂದರೆಯಾಗಬಹುದು; ಆದುದರಿಂದ ಅವರಿಗೆ ಸಾಕಷ್ಟು ಬಟ್ಟೆಗಳು ಇವೆಯಲ್ಲ, ಎಂಬುದರ ಕಡೆಗೆ ಗಮನ ನೀಡಬೇಕು.
೨ ಈ ೪. ಪ್ರತ್ಯಕ್ಷ ಶೀತ ಲಹರಿಗಳು ಬಂದಾಗ ಏನು ಮಾಡಬೇಕು ?
ಅ. ಚಳಿಯಿಂದಾಗಿ ಜಲವಾಹಿನಿಗಳಲ್ಲಿ ನೀರು ಹೆಪ್ಪುಗಟ್ಟುವ ಸಾಧ್ಯತೆ ಇರುವುದರಿಂದ ಇಂತಹ ಸಮಯದಲ್ಲಿ ಮನೆಯಲ್ಲಿ ಸಾಕಷ್ಟು ನೀರನ್ನು ಸಂಗ್ರಹಿಸಿಡಬೇಕು.
ಆ. ಒದ್ದೆ ಬಟ್ಟೆಗಳನ್ನು ಧರಿಸಬಾರದು. ಕಾರಣಾಂತರದಿಂದ ಬಟ್ಟೆಗಳು ಒದ್ದೆಯಾಗಿದ್ದರೆ, ಅವುಗಳನ್ನು ಬದಲಾಯಿಸಿ ಒಣ ಬಟ್ಟೆಗಳನ್ನು ಧರಿಸಬೇಕು.
ಇ. ನಿಯಮಿತವಾಗಿ ಉಷ್ಣ ಪಾನೀಯ ಮತ್ತು ಪದಾರ್ಥಗಳನ್ನು ಸೇವಿಸಬೇಕು.
ಈ. ಸರಾಯಿ ಕುಡಿಯಬಾರದು. ಸರಾಯಿ ಕುಡಿಯುವುದರಿಂದ ಶರೀರದಲ್ಲಿನ ಉಷ್ಣತೆ ಇನ್ನೂ ಕಡಿಮೆಯಾಗುತ್ತದೆ.
ಉ. ಚಳಿಯಿಂದ ಕೈಕಾಲುಗಳ ಬೆರಳುಗಳು, ಕಿವಿಗಳ ಹಾಲೆಗಳು ಮೂಗಿನ ತುದಿ ಮುಂತಾದವುಗಳು ಮರಗಟ್ಟಬಹುದು ಆದುದರಿಂದ ಅವುಗಳ ಕಡೆಗೆ ಗಮನ ಕೊಡಬೇಕು ಮತ್ತು ಅವುಗಳಿಗೆ ಉಷ್ಣತೆಯು ಹೇಗೆ ಸಿಗಬಹುದು ಎಂಬುದನ್ನು ನೋಡಬೇಕು.
ಊ. ಚಳಿಯಿಂದ ಮರಗಟ್ಟಿದ ಭಾಗಗಳನ್ನು ತಿಕ್ಕಬಾರದು. ತಿಕ್ಕಿದರೆ ಅಪಾಯವಾಗಬಹುದು.
ಎ. ಮರಗಟ್ಟಿದ ಭಾಗಗಳನ್ನು, ಉದಾ. ಕೈಕಾಲುಗಳನ್ನು ಬೆಚ್ಚಗಿನ (ಅತಿ ಬಿಸಿ ಅಲ್ಲ) ನೀರಿನಲ್ಲಿ ಮುಳುಗಿಸಿಡಬಹುದು.
ಏ. ಶೀತ ಲಹರಿಗಳ ಕಾಲದಲ್ಲಿ ಸಾಧ್ಯವಿದ್ದಷ್ಟು ಮನೆಯ ಹೊರಗೆ ಹೋಗಬಾರದು. ಹೊರಗಡೆ ಹೋದ ನಂತರ ನಡುಕ ಬರುತ್ತಿದ್ದರೆ ತಕ್ಷಣ ಮನೆಗೆ ಹಿಂದಿರುಗಬೇಕು.
ಐ. ಮನೆಯಲ್ಲಿ ಆದಷ್ಟು ಹಿಟರ್‌ನ್ನು ಬಳಸಬೇಕು.
ಒ. ದೂರದರ್ಶನ ಅಥವಾ ಆಕಾಶವಾಣಿ (Radio) ಇವುಗಳಲ್ಲಿನ ಹವಾಮಾನದ ಮಾಹಿತಿ, ಹಾಗೆಯೇ ಆ ಕುರಿತು ನೀಡಲಾಗುವ ಸೂಚನೆಗಳ ಕಡೆಗೆ ಗಮನ ನೀಡಿ ಅವುಗಳನ್ನು ಪಾಲಿಸಬೇಕು. (ಆಧಾರ : Pocketbook-do-dont-hindi)
‘ಪರಾತ್ಪರ ಗುರು ಡಾ. ಆಠವಲೆಯವರು ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯನ್ನು ಹೇಗೆ ಮಾಡುವವರಿದ್ದಾರೆ ?, ಎಂಬುದರ ಬಗ್ಗೆ ಸಾಧಕಿಯು ಅನುಭವಿಸಿದ ಒಂದು ತುಣುಕು !‘ನವೆಂಬರ್ ೨೦೨೦ ರಲ್ಲಿ ನಾನು ಸೇವೆಗಾಗಿ ಮುಂಬಯಿಗೆ ಹೋಗಿದ್ದೆನು. ಆಗ ನಾನು ಯಾವ ಸಾಧಕ ಕುಟುಂಬದವರ ಬಳಿ ಹೋಗಿದ್ದೆನೋ, ಅವರ ಸದಸ್ಯರ ಸಂಖ್ಯೆಯು ತುಂಬಾ ಕಡಿಮೆ ಇತ್ತು. ಬೆಳಗಿನ ಮಹಾಪ್ರಸಾದಕ್ಕಾಗಿ ಚಪಾತಿ-ಪಲ್ಯ ಮತ್ತು ರಾತ್ರಿಯ ಮಹಾಪ್ರಸಾದಕ್ಕಾಗಿ ಅನ್ನ ಮತ್ತು ಸಾರು, ಹೀಗೆ ಅಲ್ಲಿ ಮಹಾಪ್ರಸಾದದ ಆಯೋಜನೆಯನ್ನು ಮಾಡಲಾಗಿತ್ತು. ನಾನು ಬೆಳಗಿನ ಮಹಾಪ್ರಸಾದದ ಸಮಯದಲ್ಲಿ ಶ್ರೀ ಅನ್ನಪೂರ್ಣಾದೇವಿಗೆ ಚಪಾತಿ ಮತ್ತು ಬೆಲ್ಲ ಇವುಗಳ ನೈವೇದ್ಯವನ್ನು ತೋರಿಸಿದೆನು. ಅನಂತರ ನಾನು ಕೈಗಳನ್ನು ಜೋಡಿಸಿ ಪ್ರಾರ್ಥನೆಯನ್ನು ಮಾಡಲು ಕಣ್ಣುಗಳನ್ನು ಮುಚ್ಚಿದೆನು. ಆಗ ನನಗೆ ಮುಂದಿನ ದೃಶ್ಯವು ಕಾಣಿಸಿತು. ನಾನು ತೋರಿಸಿದ ನೈವೇದ್ಯವನ್ನು ಶ್ರೀ ಅನ್ನಪೂರ್ಣಾ ದೇವಿಯು ಸೇವಿಸಿದಳು ಮತ್ತು ಅವಳು ತೃಪ್ತಳಾಗಿ ತೇಗಿದಳು. ಅನಂತರ ನನಗೆ ಸನಾತನದ ಎಲ್ಲ ಸಾಧಕರು ಕಾಣಿಸಿದರು. ಶ್ರೀ ಅನ್ನಪೂರ್ಣಾ ದೇವಿಯು ತೇಗಿದ ನಂತರ ಆ ಎಲ್ಲ ಸಾಧಕರ ಹಸಿವು ದೂರವಾಗಿತ್ತು ಮತ್ತು ಅವರ ಮುಖದಲ್ಲಿ ತೃಪ್ತಿ ಕಾಣಿಸುತ್ತಿತ್ತು. ಈ ಪ್ರಸಂಗದಲ್ಲಿ ‘ವಿಷ್ಣುಸ್ವರೂಪ ಗುರುದೇವರು ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯನ್ನು ಹೇಗೆ ಮಾಡಲಿರುವರು ?, ಎಂಬುದನ್ನು ನನಗೆ ಅನುಭವಿಸಲು ಸಿಕ್ಕಿತು ಮತ್ತು ಆ ಕ್ಷಣ ‘ಶಬ್ದದ ಆಚೆಗಿನ ಕೃತಜ್ಞತೆಯೂ ಹೇಗಿರುತ್ತದೆ ?, ಎಂಬುದನ್ನೂ ನನಗೆ ಅನುಭವಿಸಲು ಸಿಕ್ಕಿತು. ಇದಕ್ಕಾಗಿ ನಾನು ವಿಷ್ಣು ಸ್ವರೂಪ ಗುರುದೇವರ ಚರಣಗಳಲ್ಲಿ ಅತ್ಯಂತ ಶರಣಾಗತಭಾವದಿಂದ ಕೃತಜ್ಞಳಿದ್ದೇನೆ. – ನ್ಯಾಯವಾದಿ ಪ್ರೀತಿ ಪಾಟೀಲ, ಸಾಂಗಲಿ (೧೫.೧೨.೨೦೨೦) |