ಭಕ್ತವತ್ಸಲ ತನ್ನ ಅವತಾರತ್ವವನ್ನು ತೋರಿಸದಿರುವ ಶ್ರೀರಾಮನ ಅಲೌಕಿಕವನ್ನು ಗುರುತಿಸಿದ ದೇವಾನುದೇವತೆಗಳು !

೧. ಸ್ಥೂಲದಲ್ಲಿ ಯಾವುದನ್ನೂ ಸ್ವೀಕರಿಸಲು ಸಿದ್ಧರಾಗದ ಶ್ರೀರಾಮನ ಭಕ್ತರು

ಅ. ರಾಮನು ಜನಿಸಿದನು, ಆಗ ಕೌಸಲ್ಯೆಯು ದಾಸಿಗೆ ಉಂಗುರವನ್ನು ಕೊಟ್ಟಳು. ಅದನ್ನು ಅವಳು ನಿರಾಕರಿಸಿದಳು. ರಾಣಿಯು ಅವಳಿಗೆ ಹಾರವನ್ನು ಕೊಡಲಿಚ್ಛಿಸಿದಳು, ಅದನ್ನೂ ಅವಳು ನಿರಾಕರಿಸಿದಳು. ಆಗ ಕೌಸಲ್ಯೆಯು, “ನಿನಗೆ ಏನು ಬೇಕು ? ಎಂದು ಕೇಳಿದಾಗ ದಾಸಿಯು, “ನನಗೆ ಮಗುವನ್ನು ಎತ್ತಿಕೊಳ್ಳಲು ಕೊಡಿ. ನನಗೆ ರಾಮ ಬೇಕು ಅನಿಸಲಿ, ಎಂದಳು.

. ‘ಶ್ರೀರಾಮನು ಅಯೋಧ್ಯೆಗೆ ಮರಳಿ ಬಂದನು. ೧೪ ವರ್ಷಗಳವರೆಗೆ ವನವಾಸದಲ್ಲಿರುವಾಗ ಯಾರು ಯಾರು ಅವನಿಗೆ ಸಹಾಯ ಮಾಡಿದರೋ, ಅವರೆಲ್ಲರನ್ನೂ ಶ್ರೀರಾಮನು ಅಯೋಧ್ಯೆಗೆ ಕರೆತಂದನು ಮತ್ತು ಎಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟನು. ಗಂಗಾನದಿಯನ್ನು ದಾಟಿಸಿದ ನಾವಿಕನು ಬಂದಿದ್ದನು. ಅವನಿಗೆ “ನಿನಗೆ ಏನು ಬೇಕು ? ಎಂದು ಕೇಳಿದನು. ಆಗ ನಾವಿಕನು, “ಶ್ರೀರಾಮ, ನಿನ್ನ ಬಳಿ ಬಂದವರು ಮರಳಿ ಹೋಗುವುದಿಲ್ಲ, ಎಂದು ನಾವು ಕೇಳಿದ್ದೇವೆ ಶ್ರೀರಾಮನು ನಗುತ್ತ ಹೇಳಿದನು, “ನೀನು ಗಂಗಾನದಿಯನ್ನು ದಾಟಿಸಿದಾಗ ನಾನು ನಿನಗೆ ಉಂಗುರವನ್ನು ಕೊಟ್ಟೆನು. ಅದನ್ನು ನೀನು ನಿರಾಕರಿಸಿದೆ ಹಾಗೂ ಹೇಳಿದೆ, “ದೇವರೆ, ಕೊಡು-ಕೊಳ್ಳುವುದು ಬೇಡ. ಬರುವುದು ಹೋಗುವುದು ಇರಲಿ.

೨. ಶ್ರೀರಾಮನು ಕನ್ನಡಿಯಲ್ಲಿ ನೋಡುತ್ತಾರೆ, ಆಗ ಭಕ್ತರು ಹೇಳುತ್ತಾರೆ, “ನಾವು ನಿನಗಿಂತಲೂ ಭಾಗ್ಯವಂತರು; ಏಕೆಂದರೆ ನೀನು ನಿನ್ನ (ಶ್ರೀರಾಮನ) ಪ್ರತಿಬಿಂಬವನ್ನು ನೋಡಬಹುದು. ಆದರೆ ನಮಗೆ ಪ್ರತ್ಯಕ್ಷ ಬಿಂಬವು ಕಾಣಿಸುತ್ತದೆ.

೩. ಶ್ರೀರಾಮನ ಅಲೌಕಿಕತ್ವವನ್ನು ಅರಿತ ವಸಿಷ್ಠ ಋಷಿಗಳು

ಅ. ದಶರಥನು ರಾಮನಿಗೆ ಪ್ರಥಮಬಾರಿ ನೋಡಿದಾಗ, ರಾಮನು ಮಧುರ ಹಾಸ್ಯ ಬೀರುತ್ತಾನೆ. ಆಗ ದಶರಥನು, “ನನಗೆ ರಾಮನು ತಂದೆ ಎಂದು ಗುರುತಿಸಿದನು”, ಎಂದನು. ಆಗ ವಸಿಷ್ಠರು, “ಇದು ನಿನ್ನ ಅಜ್ಞಾನವಿದೆ. ಅವನು ಜಗತ್ತಿನ ತಂದೆ ಇದ್ದಾನೆ, ಹಾಗೆಯೇ ನಿನಗೂ ತಂದೆಯೇ ಆಗಿದ್ದಾನೆ. ಇದನ್ನು ನೀನು ಗುರುತಿಸಲಿಲ್ಲ, ಈ ನಿನ್ನ ಅಜ್ಞಾನವನ್ನು ಗುರುತಿಸಿ ಅವನು ನಕ್ಕನು, ಎಂದು ಹೇಳುತ್ತಾರೆ.

ಆ. ವನವಾಸದಲ್ಲಿ ರಾಮನು ವಸಿಷ್ಠರ ಆಶ್ರಮಕ್ಕೆ ಹೋಗುತ್ತಾನೆ. ಆಗ ರಾಮನು ಕೇಳುತ್ತಾನೆ, “ನಾನು ಎಲ್ಲಿ ಇರಲಿ ? ಆಗ ವಸಿಷ್ಠರು, ನೀನಂತೂ ಎಲ್ಲೆಡೆಯಲ್ಲಿಯೂ ಇದ್ದಿಯಾ. ನೀನು ಎಲ್ಲಿ ಇಲ್ಲ ? ಎಂಬ ಸ್ಥಳವನ್ನು ತೋರಿಸು ಎಂದು ಹೇಳುತ್ತಾರೆ.

– ಪುಷ್ಪಾಂಜಲಿ, ಬೆಳಗಾವಿ.(೨೪.೪.೨೦೧೯)