ಬಾಂಗ್ಲಾದೇಶವು ತನ್ನ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯ ಅತಿಥಿಯೆಂದು ಆಹ್ವಾನಿಸಿತ್ತು. ಈ ಆಹ್ವಾನವನ್ನು ಸ್ವೀಕರಿಸಿ ಪ್ರಧಾನಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತದ ಕಾರಣದಿಂದಲೇ ಬಾಂಗ್ಲಾದೇಶದ ಸ್ಥಾಪನೆಯಾಗಿರುವುದರಿಂದ, ಬಾಂಗ್ಲಾದೇಶವು ಈ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಮಂತ್ರಿಗಳನ್ನು ಆಹ್ವಾನಿಸಲೇ ಬೇಕಾಗಿತ್ತು. ಅಲ್ಲದೇ ಪ್ರಸ್ತುತ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ ಹಸೀನಾರೊಂದಿಗೆ ಭಾರತದ ಸಂಬಂಧ ಚೆನ್ನಾಗಿದೆ. ೧೯೭೧ ರಂದು ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯವು ಶೇಖ ಹಸೀನಾರ ತಂದೆ ಬಾಂಗ್ಲಾದೇಶದ ಮೊದಲ ಪ್ರಧಾನಮಂತ್ರಿಗಳಾಗಿದ್ದ ಶೇಖ ಮುಜೀಬುರ ರೆಹಮಾನ ಮತ್ತು ಅವರ ಕುಟುಂಬದವರನ್ನು ಪಾಕಿಸ್ತಾನ ಸೈನ್ಯದ ಕಪಿಮುಷ್ಠಿಯಿಂದ ರಕ್ಷಿಸಿತ್ತು. ಈ ಕಾರಣದಿಂದಲೂ ಆಗಿನಿಂದ ಈ ಸಂಬಂಧ ಬಲಿಷ್ಠವಾಗಿದೆ. ಬಳಿಕ ಮುಜೀಬುರ ರೆಹಮಾನ ಮತ್ತು ಅವರ ಕುಟುಂಬದವರನ್ನು ಅಲ್ಲಿಯ ಸೈನ್ಯವು ಅವರ ಭವನದಲ್ಲಿಯೇ ಯುದ್ಧಟ್ಯಾಂಕರ್‌ನಿಂದ ತೋಪುಗಳನ್ನು ಹಾರಿಸಿ ಹತ್ಯೆ ಮಾಡಿತು. ಈ ಸಂದರ್ಭದಲ್ಲಿ ಶೇಖ ಹಸೀನಾ ಮತ್ತು ಅವರ ಸಹೋದರಿ ಶೇಖ ರೆಹಾನಾ ಜರ್ಮನಿಗೆ ಹೋಗಿದ್ದರಿಂದ ಬದುಕುಳಿದಿದ್ದರು. ಇಂದಿರಾ ಗಾಂಧಿಯವರೊಂದಿಗೆ ಮುಜೀಬುರ ರೆಹಮಾನರು ಉತ್ತಮ ಸಂಬಂಧ ಹೊಂದಿದ್ದರು. ಆದರೆ ಸೈನ್ಯವು ದಂಗೆಯೆದ್ದು, ಅಧಿಕಾರ ಹಸ್ತಾಂತರವಾದ ಬಳಿಕ ಅಲ್ಲಿ ಮತಾಂಧರು ಸರಕಾರದ ಮೇಲೆ ಹಿಡಿತ ಹೊಂದಿದ್ದರು. ಮುಂದಿನ ಅವಧಿಯಲ್ಲಿ ಶೇಖ ಹಸೀನಾ ತಮ್ಮ ಪಕ್ಷವನ್ನು ಜೀವಂತವಾಗಿರಿಸಿ ಅಧಿಕಾರವನ್ನು ಪಡೆದರು. ಪುನಃ ಭಾರತದೊಂದಿಗೆ ಉತ್ತಮ ಬಾಂಧವ್ಯ ನಿರ್ಮಾಣವಾಯಿತು. ತದನಂತರ ಅವರು ತಮ್ಮ ತಂದೆಯವರನ್ನು ಅಧಿಕಾರದಿಂದ ಕಿತ್ತೆಸೆದ ಮತಾಂಧರನ್ನು ಮತ್ತು ಸೈನ್ಯಾಧಿಕಾರಿಗಳನ್ನು ಬಂಧಿಸಿ ಅವರ ಮೇಲೆ ಖಟ್ಲೆಯನ್ನು ನಡೆಸಿ ಅನೇಕರಿಗೆ ಗಲ್ಲು ಶಿಕ್ಷೆಯನ್ನು ನೀಡಿದರು. ಇಂದಿಗೂ ಬಾಂಗ್ಲಾದೇಶದಲ್ಲಿ ಮತಾಂಧರು ಬಹಳ ಪ್ರಭಾವಶಾಲಿಯಾಗಿದ್ದಾರೆ. ಅದು ಕಡಿಮೆಯಾಗಿಲ್ಲ. ಶೇಖ ಹಸೀನಾರೊಂದಿಗಿನ ಬಾಂಧವ್ಯ ಎಷ್ಟೇ ಉತ್ತಮವಾಗಿದ್ದರೂ, ಭಾರತ ಸರಕಾರಕ್ಕೆ ಹಿಂದೂಗಳ ರಕ್ಷಣೆಗಾಗಿ ಏನೂ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ವಸ್ತುಸ್ಥಿತಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಾಂಗ್ಲಾದೇಶದ ಪ್ರವಾಸದಲ್ಲಿದ್ದಾಗ ಅಲ್ಲಿಯ ೫೧ ಶಕ್ತಿಪೀಠಗಳಲ್ಲಿ ಒಂದಾಗಿರುವ ಜೇಶೋರೇಶ್ವರಿ ಕಾಳಿ ಮಾತೆಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಅಲ್ಲದೇ, ಇನ್ನಿತರ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇದು ಅಲ್ಲಿಯ ಮತಾಂಧರಿಗೆ ರುಚಿಸಲಿಲ್ಲ. ಮುಸಲ್ಮಾನ ಬಹುಸಂಖ್ಯಾತ ದೇಶಕ್ಕೆ ಹೋಗಿ ಅಲ್ಲಿಯ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಧೈರ್ಯವನ್ನು ತೋರಿಸಿದ ಪ್ರಧಾನಮಂತ್ರಿ ಮೋದಿಯವರ ಮೇಲೆ ಸೇಡು ತೀರಿಸಿಕೊಳ್ಳಲೇ ಬೇಕು ಎನ್ನುವ ಭಾವನೆಯಿಂದ ಮೋದಿಯವರು ಭಾರತಕ್ಕೆ ಮರಳಿದ ಬಳಿಕ ತಕ್ಷಣವೇ ಮತಾಂಧರು ಹಿಂದೂಗಳ ಮೇಲೆ ಮತ್ತು ಅವರ ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಿದರು. ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ದೇವಸ್ಥಾನಗಳ ಮೇಲೆ ಆಕ್ರಮಣಗಳಾಗುತ್ತಲೇ ಇರುತ್ತವೆ. ಬಾಂಗ್ಲಾದೇಶದಲ್ಲಿ ಆಗಿರುವ ಇತ್ತೀಚಿನ ಆಕ್ರಮಣವು ಕೇವಲ ಮೋದಿಯವರನ್ನು ಕೆಣಕುವುದಕ್ಕಾಗಿಯೇ ಮಾಡಲಾಗಿದೆಯೆಂದು ಹೇಳಲಡ್ಡಿಯಿಲ್ಲ. ಇದು ‘ನಾವು ನಿಮ್ಮ ಧರ್ಮದ ಮೇಲೆ ಆಕ್ರಮಣ ಮಾಡಬಲ್ಲೆವು ಇಲ್ಲಿ ನಮ್ಮ ಆಡಳಿತವಿದೆ, ಎಂದು ತೋರಿಸುವ ಪ್ರಯತ್ನವಾಗಿದೆ. ಮೋದಿಯವರು ದೇವಸ್ಥಾನಕ್ಕೆ ಹೋಗುವುದರ ಹಿಂದಿನ ಉದ್ದೇಶವೂ ಹಿಂದೂಗಳ ದೃಷ್ಟಿಯಿಂದ ದೇವಸ್ಥಾನಗಳ ಮಹತ್ವ ಅಧಿಕವಿದೆಯೆಂದು ತೋರಿಸುವುದೂ ಆಗಿರಬಹುದು. ಭಾರತದ ಪ್ರಧಾನಮಂತ್ರಿಗಳೂ ಅದೇ ದೃಷ್ಟಿಯಿಂದ ನೋಡುತ್ತಾರೆ. ದೇವಸ್ಥಾನದ ಸಂದರ್ಭದಲ್ಲಿ ಯಾರಾದರೂ ಕೆಡುಕನ್ನುಂಟು ಮಾಡಿದರೆ ಭಾರತವು ಅದನ್ನು ಸಹಿಸುವುದಿಲ್ಲ. ಮೋದಿಯವರ ಬಾಂಗ್ಲಾದೇಶದ ಪ್ರವಾಸವನ್ನು ಅಲ್ಲಿಯ ಜಿಹಾದಿ ಸಂಘಟನೆಯು ವಿರೋಧಿಸುತ್ತಿತ್ತು. ಅದು ಮೋದಿಯವರ ಭೇಟಿಯ ವಿರುದ್ಧ ನಡೆಸಿದ ಪ್ರತಿಭಟನೆಯ ಹಿಂಸಾಚಾರದಲ್ಲಿ ೧೦ ಜನರು ಮೃತಪಟ್ಟಿದ್ದಾರೆ. ಮುಂದೆಯೂ ಇನ್ನೆಷ್ಟು ದಿನ ಮತಾಂಧರು ಮೋದಿಯವರ ದೇವಸ್ಥಾನಗಳ ದರ್ಶನದ ಸೇಡು ತೀರಿಸಿಕೊಳ್ಳುವರೆಂದು ಹೇಳಲು ಸಾಧ್ಯವಿಲ್ಲ. ಮತಾಂಧರಿಗೆ ಹಿಂದೂಗಳ ಮೇಲೆ ಆಕ್ರಮಣ ನಡೆಸಲು ಏನಾದರೂ ಕಾರಣ ಬೇಕಾಗುತ್ತದೆ. ಅದರಲ್ಲಿಯೂ ಮೋದಿಯವರ ದೇವಸ್ಥಾನ ದರ್ಶನದ ಕಾರಣದಿಂದ ಮತ್ತಷ್ಟು ಅಧಿಕ ಆವೇಶ ಉಮ್ಮಳಿಸುವ ಸಾಧ್ಯತೆಯಿದೆ. ಇದನ್ನು ಶೇಖ ಹಸೀನಾ ಯಾವ ರೀತಿ ನಿಯಂತ್ರಿಸಿ ಹಿಂದೂಗಳನ್ನು ರಕ್ಷಿಸುತ್ತಾರೆ ಎಂದು ನೋಡಬೇಕಾಗಿದೆ. ಇಲ್ಲಿಯವರೆಗಂತೂ ಅವರು ದೂಗಳಿಗೆ ವಿಶೇಷ ರಕ್ಷಣೆ ನೀಡಿರುವುದು ಕಂಡು ಬಂದಿಲ್ಲ.
ಭಾರತದಲ್ಲಿಯೂ ಹಿಂದೂಗಳು ಅಸುರಕ್ಷಿತ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೦೨ ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಧ್ರಾದಲ್ಲಿ ಮತಾಂಧರು ಕಾರಸೇವಕರಿದ್ದ ಸಾಬರಮತಿ ಎಕ್ಸಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದರು. ಈ ಗಲಭೆಯಲ್ಲಿ ೫೯ ಕಾರಸೇವಕರು ಮೃತಪಟ್ಟರು. ತದನಂತರ ಗುಜರಾತಿನಲ್ಲಿ ಗಲಭೆ ಭುಗಿಲೆದ್ದಿತು. ಅದರಲ್ಲಿ ಮತಾಂಧರಿಗೆ ಪಾಠ ಕಲಿಸಲಾಯಿತು. ತದನಂತರ ಮುಂದಿನ ೧೯ ವರ್ಷಗಳಲ್ಲಿ ಮತಾಂಧರಿಗೆ ಪುನಃ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಧೈರ್ಯವಾಗಿಲ್ಲ. ಭಾರತದಲ್ಲಿ ಈ ಹಿಂದೆ ಯಾವತ್ತೂ ಹೀಗೆ ಆಗಿರಲಿಲ್ಲ. ಅದು ಗುಜರಾತಿನಲ್ಲಿ ಜರುಗಿತು. ಅದಕ್ಕಿಂತ ಮೊದಲು ಮತ್ತು ತದನಂತರ ಗುಜರಾತನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಆಕ್ರಮಣಗಳಾಗುತ್ತಲಿದೆ. ಆದರೆ ಅದಕ್ಕೆ ಸೂಕ್ತ ಉಪಾಯ ಯೋಜನೆಗಳನ್ನು ಇದುವರೆಗೂ ಕೈಗೆತ್ತಿಕೊಂಡಿಲ್ಲ. ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಭಾಜಪ ಸರಕಾರವಿರುವಾಗಲೂ ಅವರಿಗೂ ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಯಲು ಸಾಧ್ಯವಾಗಿಲ್ಲ. ಇದರಿಂದ ಬಾಂಗ್ಲಾದೇಶದಲ್ಲಿರುವವರಷ್ಟೇ ಅಲ್ಲ ಜಗತ್ತಿನಲ್ಲಿ ವಿಶೇಷವಾಗಿ ಮುಸ್ಲಿಂ ದೇಶಗಳಲ್ಲಿರುವ ಹಿಂದೂಗಳ ಮೇಲಿನ ಆಕ್ರಮಣವನ್ನು ತಡೆಯುವುದು ಕಠಿಣವೇ ಆಗಿದೆ. ಅದರಲ್ಲಿಯೂ ‘ಬಾಂಗ್ಲಾದೇಶದ ಮತಾಂಧರು ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಿ, ಈಗ ಮೋದಿಯವರಿಗೆ ಒಂದು ರೀತಿಯಲ್ಲಿ ಸವಾಲೊಡ್ಡಿದ್ದಾರೆ, ಎಂದು ಹೇಳಿದರೆ ತಪ್ಪಾಗಲಾರದು. ಮೋದಿಯವರು ಸುತ್ತಮುತ್ತಲಿನ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ, ಸ್ವಲ್ಪ ಮಟ್ಟಿಗೆ ಅಲ್ಲಿ ನೌಕರಿ ನಿಮಿತ್ತ ಹೋಗಿರುವ ಹಿಂದೂಗಳೊಂದಿಗೆ ಅಲ್ಲಿಯ ಸ್ಥಳೀಯರು ಚೆನ್ನಾಗಿ ನಡೆದುಕೊಳ್ಳುತ್ತಾರೆ. ಅಬುಧಾಬಿಯಲ್ಲಿ ಹಿಂದೂಗಳ ಭವ್ಯ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಹೀಗೆ ಎಂದಿಗೂ ಆಗಿರಲಿಲ್ಲ; ಆದರೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹೀಗೆ ನಡೆಯುವುದು ಅಸಾಧ್ಯವೆಂದೇ ಹೇಳಬೇಕಾಗುವುದು. ‘ಮೋದಿಯವರಲ್ಲಿ ಕ್ಷಮತೆಯಿರುವುದರಿಂದ, ಮುಂಬರುವ ಕಾಲದಲ್ಲಿ ಅವರು ಈ ಸವಾಲನ್ನು ಎದುರಿಸಿ ತೋರಿಸಬಲ್ಲರು, ಎಂದು ಯಾರಿಗಾದರೂ ಅನಿಸಿದರೆ ತಪ್ಪಾಗಲಾರದು. ಬಾಂಗ್ಲಾದೇಶದ ಮತಾಂಧರು ಅಥವಾ ಅವರ ಸೈನ್ಯವು ದಂಗೆಯೆದ್ದು ಶೇಖ ಹಸೀನಾ ಎಂಬ ತಮ್ಮ ದಾರಿಗೆ ಅಡ್ಡವಾದ ಮುಳ್ಳನ್ನು ಕಿತ್ತೆಸೆದರೆ, ಅಲ್ಲಿಯ ಹಿಂದೂಗಳ ರಕ್ಷಣೆಗಾಗಿ ಇರುವ ಒಂದೇ ಒಂದು ಆಸೆಯೂ ನಶಿಸುವುದು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭಾರತವು ಅಲ್ಲಿಯ ಹಿಂದೂಗಳ ರಕ್ಷಣೆಗಾಗಿ ಶೀಘ್ರ ಕ್ರಮ ಕೈಕೊಳ್ಳಬೇಕಾಗಿದೆಯೆಂದು ಅನಿಸುತ್ತದೆ.
ಭಾರತವು ಆಕ್ರಮಣಕಾರಿ ಆಗಬೇಕಾಗಿದೆ
ಭಾರತದೊಂದಿಗೆ ಜಗತ್ತಿನಾದ್ಯಂತ ಇರುವ ಹಿಂದೂಗಳ ಮತ್ತು ಅವರ ದೇವಸ್ಥಾನಗಳ ರಕ್ಷಣೆಗಾಗಿ ಭಾರತವು ಆಕ್ರಮಣಕಾರಿಯಾಗಲೇ ಬೇಕಾಗಿದೆ. ಜಗತ್ತಿನ ಯಾವ ಮೂಲೆಯಲ್ಲಿಯೂ ಜ್ಯೂ ವ್ಯಕ್ತಿಯ ಮೇಲೆ ಆಕ್ರಮಣವಾದರೆ, ದೌರ್ಜನ್ಯ ನಡೆದರೆ, ಇಸ್ರೈಲ್ ಅವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ. ಭಾರತವೂ ಅದೇ ವ್ಯೂಹಾತ್ಮಕ ನಡೆಯನ್ನು ಅನುಸರಿಸಬೇಕಾಗಿದೆ. ಅದಕ್ಕಾಗಿ ಸರಕಾರದ ಮಟ್ಟದಲ್ಲಿ ಅಂತಹ ನೀತಿಗಳನ್ನು ಸಿದ್ಧಪಡಿಸಬೇಕಾಗುವುದು. ಇಂದಿನ ಸ್ಥಿತಿಯಲ್ಲಿ ಭಾರತದಲ್ಲಿರುವ ಹಿಂದೂಗಳದ್ದೇ ರಕ್ಷಣೆಯಾಗುತ್ತಿಲ್ಲ. ಹೀಗಿರುವಾಗ ಇತರೆ ದೇಶಗಳಲ್ಲಿರುವ ಮತ್ತು ವಿಶೇಷವಾಗಿ ಮುಸ್ಲಿಂ ದೇಶಗಳಲ್ಲಿರುವ ಹಿಂದೂಗಳ ರಕ್ಷಣೆಯಾಗಲು ಹೇಗೆ ಸಾಧ್ಯ? ಸ್ವಾತಂತ್ರ್ಯವೀರ ಸಾವರಕರರು ಮತಾಂಧರ ವಿಷಯದಲ್ಲಿ ‘ಯಾವ ಸ್ಥಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಿರುತ್ತಾರೆಯೋ, ಅಲ್ಲಿ ಅವರಿಗೆ ಮತಾಂಧರಿಂದ ಪೆಟ್ಟು ತಿನ್ನಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ರಕ್ಷಣೆ ಮಾಡಲು ಎಲ್ಲಿ ಬಹುಸಂಖ್ಯಾತ ಹಿಂದೂಗಳಿದ್ದಾರೆಯೋ ಮತ್ತು ಮತಾಂಧರು ಅಲ್ಪಸಂಖ್ಯಾರಿದ್ದಾರೆಯೋ ಅಲ್ಲಿ ಹಿಂದೂಗಳು ಅವರ ಮೇಲೆ ಹಿಡಿತವನ್ನು ಹೊಂದಿದ್ದಲ್ಲಿ, ಹಿಂದೂಗಳು ಅಲ್ಪಸಂಖ್ಯಾತರಿರುವಲ್ಲಿ ಅವರ ಕೂದಲಿಗೂ ಧಕ್ಕೆಯಾಗುವುದಿಲ್ಲ ಎಂದಿದ್ದರು. ‘ಸ್ವಾತಂತ್ರ್ಯ ಬಂದು ೭೪ ವರ್ಷಗಳಾದರೂ ಭಾರತವು ಸಾವರಕರ ನೀತಿ ಯನ್ನು ಅವಲಂಬಿಸದೇ ಇರುವುದರಿಂದ ಹಿಂದೂಗಳು ಎಲ್ಲೆಡೆ ಪೆಟ್ಟು ತಿನ್ನಬೇಕಾಗುತ್ತಿದೆ. ಈ ಸ್ಥಿತಿಯನ್ನು ನೋಡಿದರೆ ಭಾರತವು ಸಾವರಕರರ ನೀತಿಯನ್ನು ಅವಲಂಬಿಸಲು ಇದೇ ಸೂಕ್ತ ಸಮಯವಾಗಿದೆ ಎಂದೆನಿಸುತ್ತದೆ.