ಶಿಥಿಲಗೊಂಡ ನ್ಯಾಯಾಂಗ ಮತ್ತು ನ್ಯಾಯಾಧೀಶರ ರಾಷ್ಟ್ರೀಯ ಕರ್ತವ್ಯ !

೧. ರಾಮ ಮಂದಿರದಂತಹ ತೀರ್ಪುಗಳನ್ನು ನೀಡಿದ ನಂತರ ವಿಪಕ್ಷಗಳಿಗೆ ಮತ್ತು ಪ್ರಗತಿಪರರಿಗೆ ಬೇಡವಾದ ಮಾಜಿ ಮುಖ್ಯ ನ್ಯಾಯಾಧೀಶ ಗೋಗೋಯಿ

‘ದೀಪಕ್ ಮಿಶ್ರಾ ಇವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿರುವಾಗ ೧೨ ಜನವರಿ ೨೦೧೮ ರಂದು ಹಿರಿಯ ನ್ಯಾ. ಕುರಿಯನ್ ಜೋಸೆಫ್, ನ್ಯಾ. ಚೆಲಮೇಶ್ವರ, ನ್ಯಾ. ರಂಜನ ಗೋಗೋಯಿ ಮತ್ತು ನ್ಯಾ. ಮದನ ಲೋಕೂರ ಇವರು ದೂರದರ್ಶನದ ಮುಂದೆ ಪತ್ರಕರ್ತರ ಪರಿಷತ್ತು ಕರೆದು ಅಂದಿನ ನ್ಯಾಯಾಧೀಶ ದೀಪಕ್ ಮಿಶ್ರಾ ಇವರ ವರ್ತನೆಯ ಬಗ್ಗೆ ಆಕ್ಷೇಪವೆತ್ತಿದ್ದರು. ಆಗ ನ್ಯಾ. ಗೋಗೋಯಿಯವರು ಪ್ರಗತಿಪರರ, ವಿಚಾರವಂತರ ಮತ್ತು ಸರ್ವಧರ್ಮಸಮಭಾವದವರ ಅಚ್ಚುಮೆಚ್ಚಿನವರಾಗಿದ್ದರು. ಆದರೆ ಅವರು ಮುಖ್ಯ ನ್ಯಾಯಾಧೀಶರಾದ ನಂತರ ರಾಮಜನ್ಮಭೂಮಿ, ರಾಫೆಲ್ ಮತ್ತು ಇನ್ನಿತರ ಕೆಲವು ತೀರ್ಪುಗಳನ್ನು ನೀಡಿದಾಗಿನಿಂದ ಪ್ರಗತಿಪರರು, ವಿಚಾರವಂತರು ಮತ್ತು ಸರ್ವಧರ್ಮಸಮಭಾವವನ್ನು ಪುರಸ್ಕರಿಸುವವರಿಗೆ ಗೋಗೋಯಿ ಬೇಡವಾದರು. ೨೦೧೯ ರಲ್ಲಿ ಅವರು ಮುಖ್ಯ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದ ನಂತರ ಭಾಜಪ ಸರಕಾರವು ಅವರನ್ನು ರಾಜ್ಯಸಭೆಯ ಸಂಸದರೆಂದು ನೇಮಿಸಿತು. ಇಲ್ಲಿಂದ ಮುಂದೆ ಗೋಗೋಯಿಯವರ ವನವಾಸವು ಆರಂಭವಾಯಿತು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ರಂಜನ ಗೋಗೋಯಿ ಇವರು ನ್ಯಾಯಾಂಗವ್ಯವಸ್ಥೆಯಲ್ಲಿನ ಕೊರತೆಗಳನ್ನು ತೋರಿಸಿಕೊಡುವುದು

ಕೆಲವು ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಹುಆ ಮೋಯಿತ್ರಾ ಇವರು ಮಾಜಿ ಮುಖ್ಯ ನ್ಯಾಯಾಧೀಶ ಗೋಗೋಯಿಯವರ ಮೇಲೆ ಗಂಭೀರ ಆರೋಪವನ್ನು ಮಾಡಿದ್ದರು. ‘ಈ ಟೀಕೆಯ ಬಗ್ಗೆ ನೀವು ನ್ಯಾಯಾಲಯಕ್ಕೆ ಹೋಗುವಿರಾ ?, ಎಂದು ಪ್ರಶ್ನಿಸಿದಾಗ ಗೋಗೋಯಿಯವರು, ನ್ಯಾಯಾಲಯಕ್ಕೆ ಹೋದರೆ ಪಶ್ಚಾತ್ತಾಪಪಡಬೇಕಾಗುವುದು; ಆದ್ದರಿಂದ ನಾನು ನ್ಯಾಯಾಲಯಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ತಮ್ಮ ಹೇಳಿಕೆಯನ್ನು ಸಮರ್ಥಿಸಲು ಅವರು ನ್ಯಾಯವ್ಯವಸ್ಥೆಯ ಕೆಲವು ಕೊರತೆಗಳನ್ನು ತೋರಿಸಿದರು. ಅವರು, ಕನಿಷ್ಠ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದವರೆಗೆ ಕೋಟಿಗಟ್ಟಲೆ ಖಟ್ಲೆಗಳು ನೆನೆಗುದಿಯಲ್ಲಿವೆ. ದೇಶಕ್ಕೆ ೫ ಲಕ್ಷ ಕೋಟಿ ರೂಪಾಯಿಗಳ ಅರ್ಥವ್ಯವಸ್ಥೆಯ ಅವಶ್ಯಕತೆಯಿದೆ; ಆದರೆ ನ್ಯಾಯ ವ್ಯವಸ್ಥೆಗೆ ಬೇಕಾಗುವಷ್ಟು ಹಣವನ್ನು ಸರಕಾರ ಕೊಡುವುದಿಲ್ಲ. ಆದ್ದರಿಂದ ನ್ಯಾಯ ವ್ಯವಸ್ಥೆಯು ಶಿಥಿಲವಾಗಿದೆ. ಕೆಲವರು ದಾದಾಗಿರಿ ಮಾಡಿ ನ್ಯಾಯ ವ್ಯವಸ್ಥೆಗೆ ತನ್ನ ಕೆಲಸವನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿದರು. ಗೋಗೋಯಿಯವರು ಈ ಹಿಂದೆಯೂ ನ್ಯಾಯ ವ್ಯವಸ್ಥೆಯ ಬಗ್ಗೆ ಪತ್ರಕರ್ತರ ಮುಂದೆ ಅವರ ವ್ಯಥೆಯನ್ನು ವ್ಯಕ್ತ ಪಡಿಸಿದ್ದರು.

೩. ಉನ್ನತ ಹುದ್ದೆಯಲ್ಲಿರುವಾಗ ಕಾರ್ಯನಿರತರಾಗಿದ್ದಾಗ ವ್ಯವಸ್ಥೆಯಲ್ಲಿನ ಕೊರತೆಗಳನ್ನು ದೂರಗೊಳಿಸದೇ ಈಗ ಹುದ್ದೆ ಇಲ್ಲದಿರುವಾಗ ಆರೋಪಗಳನ್ನು ಮಾಡುವುದು ದೇಶ ಹಿತದ ದೃಷ್ಟಿಯಿಂದ ಯೋಗ್ಯವಲ್ಲ !

ಅ. ಮಾಜಿ ಮುಖ್ಯ ನ್ಯಾಯಾಧೀಶ ರಂಜನ ಗೋಗೋಯಿಯವರು ಕೆಲವರು ತಮಗೆ ಕರ್ತವ್ಯವನ್ನು ನಿರ್ವಹಿಸಲು ಬಿಡುತ್ತಿರಲಿಲ್ಲ ಅಥವಾ ಅಂತಹವರು ನ್ಯಾಯವ್ಯವಸ್ಥೆಗಿಂತ ಮೇಲಿನವರಾಗಿದ್ದರು ಎಂದು ಹೇಳಿದ್ದಾರೆ, ಆದರೆ ಇದರ ಬಗ್ಗೆ ಅವರು ಯಾವುದೇ ಮಾಹಿತಿಯನ್ನು ಹೇಳಿಲ್ಲ. ಹಾಗೆಯೇ ಅವರನ್ನು ನಿಯಂತ್ರಿಸಲು ಇವರು ಏನು ಪ್ರಯತ್ನ ಮಾಡಿದರು, ಎಂಬುದನ್ನೂ ಗೋಗೋಯಿಯವರು ಹೇಳಿಲ್ಲ. ಗೋಗೋಯಿಯವರು ಸ್ವತಃ ಮುಖ್ಯ ನ್ಯಾಯಾಧೀಶರಾಗಿರುವಾಗ ಅವರು ನ್ಯಾಯವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಲು ಏನು ಪ್ರಯತ್ನಗಳನ್ನು ಮಾಡಿದರು, ಎಂಬುದನ್ನೂ ಅವರು ಹೇಳಿಲ್ಲ.

ಆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ದೀಪಕ ಗುಪ್ತಾ ಇವರು ಸಹ ತಮ್ಮ ನಿವೃತ್ತಿಯ ನಂತರ ಪತ್ರಕರ್ತರೊಂದಿಗೆ ಮಾತನಾಡುವಾಗ, ಸರ್ವೋಚ್ಚ ನ್ಯಾಯಾಲಯವು ಕೇವಲ ಶ್ರೀಮಂತರ ಹಿತವನ್ನು ಕಾಪಾಡುತ್ತದೆ ಮತ್ತು ಬಡವರ ಖಟ್ಲೆಗಳ ದುರ್ಲಕ್ಷವಾಗುತ್ತದೆ ಎಂದು ಹೇಳಿದ್ದರು. ಹುದ್ದೆಯಲ್ಲಿರುವಾಗ ನ್ಯಾಯವ್ಯವಸ್ಥೆಯು ಯೋಗ್ಯ ರೀತಿಯಲ್ಲಿ ನಡೆಯಬೇಕೆಂದು ಅವರು ಏನು ಪ್ರಯತ್ನ ಮಾಡಿದರು, ಎಂಬುದನ್ನು ಇವರೂ ಹೇಳಲಿಲ್ಲ.

ಇ. ಗೋಗೋಯಿ ಇರಲಿ ಅಥವಾ ದೀಪಕ್ ಗುಪ್ತಾ ಇರಲಿ ಇವರೆಲ್ಲ ಒಂದು ವಿಷಯವನ್ನು ಮರೆಯುತ್ತಾರೆ, ಅದೆಂದರೆ, ಈಗಲೂ ೧೩೦ ಕೋಟಿ ಭಾರತೀಯರಿಗೆ ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ. ಇಂತಹ ಹೇಳಿಕೆಗಳಿಂದ ಅರ್ಜಿದಾರರು ವಿಚಲಿತರಾಗಬಹುದು ನ್ಯಾಯಾಂಗ ಮಂಡಳಿ, ಆಡಳಿತ ವ್ಯವಸ್ಥೆ, ಕಾನೂನುಗಳನ್ನು ಅನ್ವಯಗೊಳಿಸುವ ವಿಭಾಗ, ನ್ಯಾಯವ್ಯವಸ್ಥೆ ಮತ್ತು ಪತ್ರಿಕಾರಂಗ ಇವು ಸಂವಿಧಾನವು ನಿರ್ಧರಿಸಿ ಕೊಟ್ಟಿರುವ ವ್ಯವಸ್ಥೆಗಳಾಗಿವೆ. ಯಾವುದೇ ವ್ಯವಸ್ಥೆಯಲ್ಲಿ ಗುಣ-ದೋಷಗಳು ಇದ್ದೇ ಇರುತ್ತವೆ. ಆದ್ದರಿಂದ ಎಲ್ಲ ವ್ಯವಸ್ಥೆಗಳು ನೆಲಕಚ್ಚಿದೆ ಎಂಬ ಚಿತ್ರಣವು ಮೂಡಬಾರದು.

೪. ರಾಜಕೀಯ ಪಕ್ಷಗಳು ಗೋಗೋಯಿಯವರನ್ನು ಟೀಕಿಸುವುದು

ಭಾಜಪವನ್ನು ಬಿಟ್ಟು ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಗೋಗೋಯಿಯವರನ್ನು ಟೀಕಿಸಿದವು. ಇಲ್ಲಿ ಕಾಟ್ಜೂರಂತಹ ಜನರು ಸಹ ಹಿಂದುಳಿಯಲಿಲ್ಲ. ಕಾಟ್ಜೂರವರು ನೀರವ ಮೋದಿಯ ಸಮರ್ಥನೆಗಾಗಿ ಲಂಡನ್‌ನ ನ್ಯಾಯಾಲಯದಲ್ಲಿ ಭಾರತೀಯ ನ್ಯಾಯವ್ಯವಸ್ಥೆಯನ್ನು ಟೀಕಿಸಿದ್ದರು. ರಾಜಕೀಯ ಹಾಗೂ ಪ್ರಗತಿಪರರು ಒಂದು ವಿಷಯವನ್ನು ಮರೆಯುತ್ತಾರೆ, ಈ ಹಿಂದೆಯೂ ಕೆಲವು ನ್ಯಾಯಾಧೀಶರು ಹುದ್ದೆಯಲ್ಲಿರುವಾಗ ಹಾಗೂ ನಿವೃತ್ತಿಯ ನಂತರ ರಾಜಕೀಯ ಪಕ್ಷಗಳನ್ನು ಸೇರಿ ರಾಜ್ಯಸಭೆಯ ಸಂಸದರಾಗಿದ್ದಾರೆ. ೧೯೮೬ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವಾಗ ಮಾದೋಸ್ಕರ ಇವರು ನಿವೃತ್ತಿಯನ್ನು ಪಡೆದುಕೊಂಡು ತಕ್ಷಣ ಕಾಂಗ್ರೆಸ್ಸಿನ ಟಿಕೇಟ್ ನಲ್ಲಿ ರಾಜ್ಯಸಭೆಯ ಸಂಸದರಾದರು. ೨೦೧೮ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಭಯ ಠಿಪ್ಸೆ ಇವರು ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶ ಮಾಡಿದರು. ಈ ಎರಡೂ ಸಮಯದಲ್ಲಿ ಯಾರೂ ಟೀಕಿಸಿರುವುದು ಕಂಡು ಬರಲಿಲ್ಲ.

೫. ಗೋಗೋಯಿಯವರ ವಿರುದ್ಧ ಮಾನಹಾನಿಯ ಅರ್ಜಿಯನ್ನು ದಾಖಲಿಸುವುದು

ಗೋಗೋಯಿಯವರ ಹೇಳಿಕೆಯ ನಂತರ ಸಾಖೇತ ಗೋಖಲೆಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅವರ ವಿರುದ್ಧ ಮಾನಹಾನಿಯ ಅರ್ಜಿಯನ್ನು ದಾಖಲಿದರು. ಅಟರ್ನಿ ಜನರಲ್ ವೇಣುಗೋಪಾಲ ಇವರು, ‘ಅವರ ಟೀಕೆಯಿಂದ ಅವಮಾನವಾಗುವುದಿಲ್ಲ. ಅವರು ನ್ಯಾಯವ್ಯವಸ್ಥೆಯ ಒಳಿತಿಗಾಗಿ ಹೇಳಿಕೆಯನ್ನು ನೀಡಿದ್ದಾರೆ, ಎಂದು ಹೇಳಿದರು ಹಾಗೂ ‘ಗೋಗೋಯಿಯವರ ವಿರುದ್ಧ ಮಾನಹಾನಿಯ ಅರ್ಜಿಯನ್ನು ದಾಖಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಎಂದು ಹೇಳಿ ವಿಷಯವನ್ನು ಮುಗಿಸಿದರು.

೬. ಗೋಗೋಯಿಯವರ ವಿರುದ್ಧದ ಸಂಚನ್ನು ತಳ್ಳಿಹಾಕಿದ ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು (ನ್ಯಾ. ಸಂಜಯ ಕೌಲ್, ನ್ಯಾ. ಬೋಪಣ್ಣಾ ಮತ್ತು ನ್ಯಾ. ರಾಮಸುಬ್ರಹ್ಮಣ್ಯಮ್) ೧೮.೨.೨೦೨೧ ರ ನಿರ್ಣಯದ ಮೂಲಕ ಗೋಗೋಯಿಯವರ ವಿರುದ್ಧದ ಲೈಂಗಿಕ ಆರೋಪದ ಖಟ್ಲೆಯನ್ನು ತಳ್ಳಿಹಾಕಿತು. ಈ ರೀತಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಗೋಗೋಯಿಯವರ ವಿರುದ್ಧವಿರುವ ಅರ್ಜಿ ಮತ್ತು ಅವಮಾನ ಅರ್ಜಿ ಇವುಗಳ ವಿಷಯವನ್ನು ಮುಗಿಸಿತು.

೭. ನ್ಯಾಯಾಲಯವು ಆರೋಪಗಳಲ್ಲಿನ ಸತ್ಯವನ್ನು ಪರಿಶೀಲಿಸಿ ಯೋಗ್ಯ ನ್ಯಾಯವನ್ನು ನೀಡಬೇಕು !

೧೩೦ ಕೋಟಿ ಭಾರತೀಯರು ನ್ಯಾಯ ಸಿಗಬಹುದೆಂಬ ಆಶೆಯಿಂದ ನ್ಯಾಯಾಲಯದತ್ತ ನೋಡುತ್ತಾರೆ. ಆದ್ದರಿಂದ ಇಂತಹ ಎಲ್ಲ ಆರೋಪ-ಪ್ರತ್ಯಾರೋಪಗಳ ಅರ್ಜಿಗಳನ್ನು ಮೇಲು ಮೇಲಿನ ಆಲಿಕೆ ನೀಡಿ ನಿರ್ಣಯವನ್ನು ನೀಡಬಾರದು. ಅವರ ಮೇಲಿನ ಆರೋಪ ಸತ್ಯವಾಗಿದ್ದರೆ, ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಆರೋಪ ನಿರಾಧಾರವಾಗಿದ್ದರೆ, ಸುಳ್ಳು ಆರೋಪ ಮಾಡುವವರನ್ನು ಶಿಕ್ಷಿಸಬೇಕು. ಇದರೊಂದಿಗೆ ಉನ್ನತಹುದ್ದೆಯಲ್ಲಿರುವ ಜನರು ನಿವೃತ್ತಿಯ ನಂತರ ಪತ್ರಕರ್ತರ ಪರಿಷತ್ತು ತೆಗೆದುಕೊಂಡು ನ್ಯಾಯವ್ಯವಸ್ಥೆಗೆ ಅವಮಾನ ಮಾಡುವುದನ್ನು ನಿಲ್ಲಿಸಬೇಕು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ.