ಸದ್ಯದ ಯುಗವನ್ನು ಡಿಜಿಟಲ್ ಕ್ರಾಂತಿಯ ಯುಗವೆಂದು ಗುರುತಿಸಲಾಗುತ್ತದೆ. ಈ ಯುಗದಲ್ಲಿ ‘ಆನ್‌ಲೈನ್’ನ ಮಾಧ್ಯಮದಿಂದ ಕಡಿಮೆ ಸಮಯದಲ್ಲಿ ತಮ್ಮ ಸ್ವಂತದ ಬೇರೆಯೇ ಆದ ಒಂದು ಸ್ಥಾನವನ್ನು ನಿರ್ಮಿಸಲಾಗುತ್ತದೆ. ಇದರಿಂದ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ (ಮನೆಯಲ್ಲಿಯೇ) ಜನರಿಗೆ ಅಸೀಮಿತ ಮನೋರಂಜನೆಯನ್ನು ಒದಗಿಸಲಾಗುತ್ತದೆ. ಇದರ ಉದಾಹರಣೆಗಳೆಂದರೆ ಓಟಿಟಿ (ಒವರ-ದ-ಟಾಪ್) ಪ್ಲ್ಯಾಟ್‌ಫಾರ್ಮ್‌ನ ಮೇಲಿನ ನೆಟ್‌ಫ್ಲಿಕ್ಸ್, ಅಮೇಝಾನ್ ಪ್ರೈಮ್, ಹಾಟ್‌ಸ್ಟಾರ್ ಇತ್ಯಾದಿಗಳು ! ಸದ್ಯದ ವಿಶ್ವದಲ್ಲಿ ‘ನೆಟ್‌ಫ್ಲಿಕ್ಸ್’ನ್ನು ಬಳಸದಿರುವವರು ಅಪರೂಪವೇ. ಈ ಮಾಧ್ಯಮಗಳು ಹೊಸ ಪೀಳಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಎಲ್ಲ ಕಡೆಗಳಲ್ಲಿ ಜನರು ಅವುಗಳಲ್ಲಿ ತಲೆ ತುರುಕಿಸಿಕೊಂಡು ಕುಳಿತಿರುವುದು ಕಂಡು ಬರುತ್ತದೆ. ಈಗ ಮಾತ್ರ ‘ನೆಟ್‌ಫ್ಲಿಕ್ಸ್’ನ ಮಾಯಾಜಾಲದಲ್ಲಿ ಸಿಲುಕಿರುವವರ ತಲೆಯನ್ನು ಮೇಲೆ ಮಾಡುವ ಸಮಯ ಬಂದಿದೆ. ಯುನೈಟೆಡ್ ಕಿಂಗ್ಡಮ್‌ನ ಪ್ರತಿಷ್ಠಿತ ರಾಯಲ್ ಸೊಸೈಟಿಯ ವಿಜ್ಞಾನಿಗಳು ಈ ‘ನೆಟ್‌ಫ್ಲಿಕ್ಸ್’ನಲ್ಲಿ ೧ ಗಂಟೆ ಮಾಲಿಕೆಯನ್ನು ನೋಡಿದರೆ ಅದರಿಂದ ಗ್ರಹಗಳ ಮೇಲೆ ನೇರ ಪರಿಣಾಮವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಅತ್ಯಂತ ಚಿಂತಾಜನಕ ವಿಷಯವಾಗಿದೆ. ದೊಡ್ಡ ಆಕಾರದ ಅಥವಾ ಉಚ್ಚ ಗುಣಮಟ್ಟದ ವಿಡಿಯೋಗಳನ್ನು ಸಂಗ್ರಹಿಸಲು ದೊಡ್ಡ ‘ಡೆಟಾ ಸೆಂಟರ್’ನ ಆವಶ್ಯಕತೆ ಇರುತ್ತದೆ. ಅದಕ್ಕಾಗಿ ಹೆಚ್ಚು ವಿದ್ಯುತ್ ಊರ್ಜೆ ಬೇಕಾಗುತ್ತದೆ. ಆದುದರಿಂದ ಈ ಮಾಧ್ಯಮದಿಂದ ಪರೋಕ್ಷವಾಗಿ ಕಾರ್ಬನ್ ಡೈ ಆಕ್ಸೈಡ್‌ನ ಉತ್ಸರ್ಜನೆ ಹೆಚ್ಚಾಗುತ್ತದೆ. ‘ಸ್ಮಾರ್ಟ್ ಫೋನ್’ನಲ್ಲಿ ಯಾವುದಾದರೊಂದು ವಿಡಿಯೋವನ್ನು ಪ್ರಸಾರ ಮಾಡಿದರೆ ‘ಸ್ಟ್ಯಾಂಡರ್ಡ್ ಡೆಫಿನಿಶನ್’ಗಿಂತ ‘ಗ್ರೀನಹೌಸ್ ಗ್ಯಾಸ್’ನ ಸುಮಾರು ಎಂಟು ಪಟ್ಟು ಗ್ಯಾಸ ಉತ್ಸರ್ಜನೆಯಾಗುತ್ತದೆ. ಹೇಗೆ ಯಾವುದಾದರೊಂದು ಚತುಷ್ಚಕ್ರ ವಾಹನವನ್ನು ಸಾಧಾರಣ ೬ ಕಿಲೋಮೀಟರ್ ನಡೆಸಿದಾಗ ಅದರಿಂದ ಉತ್ಸರ್ಜನೆಯಾಗುವ ವಿಷಕಾರಿ ಪದಾರ್ಥವು ಗಿಡಗಳಿಗಾಗಿ ಅಪಾಯಕಾರಿಯಾಗುತ್ತದೆಯೋ, ಅದೇ ರೀತಿ ನೆಟ್‌ಫ್ಲಿಕ್ಸ್‌ನ ಸಂದರ್ಭದಲ್ಲಿ ಆಗುತ್ತಿದೆ. ‘ನೆಟ್‌ಫ್ಲಿಕ್ಸ್’ನಂತಹ ಓಟಿಟಿ ಫ್ಲ್ಯಾಟ್‌ಫಾರ್ಮಗಳಲ್ಲಿ ೩೦ ನಿಮಿಷಗಳ ಯಾವುದಾದರೊಂದು ವಿಡಿಯೋವನ್ನು ನೋಡುವುದರಿಂದ ಚತುಷ್ಚಕ್ರ ವಾಹನವನ್ನು ೬ ಕಿ.ಮೀ. ನಡೆಸಿದಷ್ಟು ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯಾಗುತ್ತದೆ, ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬರುವ ಕೆಲವು ವರ್ಷಗಳಲ್ಲಿ ಈ ಸಂಖ್ಯೆಯು ಎರಡು ಪಟ್ಟಿನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಭವಿಷ್ಯದಲ್ಲಿ ಇದರ ಭೀಕರ ಪರಿಣಾಮವಾಗಬಾರದೆಂದು, ಸಂಶೋಧಕರು ‘ನೆಟ್‌ಫ್ಲಿಕ್ಸ್’ನ ಪ್ರಸಾರದ ಕುರಿತು ಕೆಲವು ಮಿತಿಗಳ ಪಾಲನೆಗಳನ್ನು ಮಾಡುವ, ಹಾಗೆಯೇ ಪ್ರತಿಯೊಬ್ಬನಿಗೆ (ತಲಾ) ನಿರ್ಧರಿಸಿದ ಕಾರ್ಬನ್‌ನ ಉತ್ಸರ್ಜನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂಬ ಕರೆಯನ್ನು ನೀಡಿದ್ದಾರೆ. ಜಾಗತಿಕ ಸ್ತರದ ಉತ್ಸರ್ಜನೆಯಲ್ಲಿ ಡಿಜಿಟಲ್ ಕ್ಷೇತ್ರದ ಯೋಗದಾನವು ಶೇ. ೧ ರಿಂದ ೯.೯ ರಷ್ಟಿದೆ. ಡಿಜಿಟಲ್ ಮಾಧ್ಯಮಗಳ ಮಿತಿಮೀರುವ ಬಳಕೆಯೇ ಇದಕ್ಕೆ ಕಾರಣವಾಗಿದೆ. ‘ನೆಟ್‌ಫ್ಲಿಕ್ಸ್’ನ ಹೇಳಿಕೆಗನುಸಾರ ೧ ಗಂಟೆ ಮಾಡಿದ ವಿಡಿಯೋದ ಪ್ರಸಾರದಿಂದ ೧೦೦ ಗ್ರಾಂಗಳಿಗಿಂತಲೂ ಕಡಿಮೆ ಕಾರ್ಬನ್ ಡೈ ಆಕ್ಸೈಡ್ ವಿಸರ್ಜನೆಯಾಗುತ್ತದೆ. ಸಂಶೋಧಕರು ಅಥವಾ ವಿಜ್ಞಾನಿಗಳು ಮತ್ತು ‘ನೆಟ್‌ಪ್ಲಿಕ್ಸ್’ನ ಹೇಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ವಿಜ್ಞಾನಿಗಳ ನಿಷ್ಕರ್ಷದ ಕಡೆಗೆ ದುರ್ಲಕ್ಷವನ್ನು ಮಾಡುವಂತಿಲ್ಲ. ೨೦೨೦ ರಲ್ಲಿ ವಿಜ್ಞಾನಿಗಳು ಜರ್ಮನ್ ಸರಕಾರದ ಸಹಾಯದಿಂದ ಈ ಉತ್ಸರ್ಜನೆಯನ್ನು ಕಡಿಮೆ ಮಾಡಲು ಕೆಲವೊಂದು ಪ್ರಮಾಣದಲ್ಲಿ ಅಧ್ಯಯನವನ್ನೂ ಮಾಡಿದ್ದರು. ಎಲ್ಲ ದೇಶಗಳೂ ಈ ರೀತಿ ಪ್ರಯತ್ನಿಸಬೇಕು. ಇಂಗ್ಲೆಂಡ್‌ನ ಶೆಫಿಲ್ಡ್ ಹ್ಯಲಮ್ ವಿದ್ಯಾಪೀಠದ ಹಿರಿಯ ವ್ಯಾಖ್ಯಾನಕಾರರಾದ ಬರ್ನಾಡಿ ಪ್ರನ್ಗಗೊನೊ ಇವರು, ಜನರು ‘ನೆಟ್‌ಫ್ಲಿಕ್ಸ್’ನಲ್ಲಿ ಮಾಲಿಕೆಯನ್ನು ನೋಡುವುದಕ್ಕಿಂತ ಅವರು ೩೦ ನಿಮಿಷಗಳ ಕಾಲ ತಿರುಗಾಡಲು ಹೋದರೆ ಅದು ಎಲ್ಲರ, ಅಂದರೆ ಗ್ರಹಗಳ ದೃಷ್ಟಿಯಿಂದಲೂ ಲಾಭದಾಯಕವಾಗುವುದು; ಆದರೆ ಮಾರುಕಟ್ಟೆಗೆ ಅಥವಾ ಸಿನೆಮಾಗೃಹಗಳಿಗೆ ಹೋಗಲು ೩೦ ನಿಮಿಷಗಳ ಕಾಲ ವಾಹನವನ್ನು ನಡೆಸಿದರೆ ಅದು ಉಪಯುಕ್ತವಾಗಲಾರದು’, ಎಂದು ಹೇಳಿದ್ದಾರೆ. ‘ನೆಟ್‌ಫ್ಲಿಕ್ಸ್’ನ ವಿಶ್ವದಲ್ಲಿ ಸಿಲುಕಿದ ಎಲ್ಲ ಜನರೂ ಮೇಲಿನ ವಿಷಯಗಳ ಕುರಿತು ಗಂಭೀರವಾಗಿ ವಿಚಾರ ಮಾಡಬೇಕು.
ಕೋಟ್ಯವದಿ ಬಳಕೆದಾರರು!
‘ನೆಟ್‌ಫ್ಲಿಕ್ಸ್’ಅನ್ನು ೨೯ ಅಗಸ್ಟ್ ೧೯೯೭ ಈ ದಿನದಂದು ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಲಾಗಿತ್ತು. ‘ನೆಟ್‌ಫ್ಲಿಕ್ಸ್’ ಇದು ಸದ್ಯದ ಸ್ಥಿತಿಯಲ್ಲಿ ಜಾಗತಿಕ ಸ್ತರದಲ್ಲಿ ಎಲ್ಲಕ್ಕಿಂತ ದೊಡ್ಡ ಪ್ರಸಾರ (ಸ್ಟ್ರಿಮಿಂಗ್) ಮಾಡುವ ಕಂಪನಿಯಾಗಿದೆ. ೨೦೦೦ ದಲ್ಲಿ ‘ನೆಟ್‌ಫ್ಲಿಕ್ಸ್’ನ ೨ ಲಕ್ಷ ಗ್ರಾಹಕರಿದ್ದರು. ೨೦೧೧ ರಲ್ಲಿ ಅಮೇರಿಕಾವೊಂದರಲ್ಲಿಯೇ ‘ನೆಟ್‌ಫ್ಲಿಕ್ಸ್’ನ ೨ ಲಕ್ಷ ಮತ್ತು ಜಗತ್ತಿನಾದ್ಯಂತ ೨೦ ಲಕ್ಷಗಳಿಗಿಂತಲೂ ಹೆಚ್ಚು ಗ್ರಾಹಕರಿದ್ದರು. ೨೦೨೦ ರಲ್ಲಿ ಕೊರೋನಾದಿಂದ ಉದ್ಭವಿಸಿದ ಸಂಚಾರಸಾರಿಗೆ ನಿರ್ಬಂಧದ ಕಾಲದಲ್ಲಿ ‘ನೆಟ್‌ಫ್ಲಿಕ್ಸ್’ನ ಬಳಕೆದಾರರ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದ್ದು ಈಗ ಅದು ೨೦ ಕೋಟಿಗಳಿಗಿಂತ ಹೆಚ್ಚಾಗಿದೆ. ಅದರ ಹಿಂದಿನ ವರ್ಷದ ತುಲನೆಯಲ್ಲಿ ಈ ಸಂಖ್ಯೆಯು ಶೇ. ೫೦ ಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಇಂಧನಕ್ಷೇತ್ರಗಳ ಮೇಲೆಯೂ ಈ ಸಂಖ್ಯೆಯಿಂದ ಹೆಚ್ಚು ಭಾರ ಬೀಳುತ್ತದೆ. ಒಂದು ವೇಳೆ ಇಷ್ಟು ದೊಡ್ಡ ಪ್ರಮಾಣದಲ್ಲಿ ‘ನೆಟ್‌ಫ್ಲಿಕ್ಸ್’ನ ಬಳಕೆಯು ಹೆಚ್ಚಾಗುತ್ತಿದ್ದರೆ, ವಿಜ್ಞಾನಿಗಳು ಮಂಡಿಸಿದ ಅಭಿಪ್ರಾಯಕ್ಕನುಸಾರ ಇದರ ಗ್ರಹಗಳ ಮೇಲೆ ಮತ್ತು ಪರಿಸರದ ಮೇಲೆ ಎಷ್ಟು ಹಾನಿಕರ ಮತ್ತು ಭಯಾನಕ ಪರಿಣಾಮವಾಗಬಹುದು ಎಂಬುದರ ಕಲ್ಪನೆಯನ್ನು ಮಾಡಬಹುದು. ಈ ಭೀಕರ ಪರಿಣಾಮವನ್ನು ತಪ್ಪಿಸಲು ಎಲ್ಲ ದೇಶಗಳು ಮತ್ತು ಎಲ್ಲ ದೇಶಗಳಲ್ಲಿನ ನಾಗರಿಕರು ಪರಿಸರದ ಅಧೋಗತಿಯನ್ನು ಮಾಡುವ ಓಟಿಟಿ ಪ್ಲ್ಯಾಟ್‌ಫಾರ್ಮಗಳ ಹೆಚ್ಚುತ್ತಿರುವ ಬಳಕೆಯ ಮೇಲೆ ನಿಯಂತ್ರಣವನ್ನು ಇಡಬೇಕು, ಹಾಗೆಯೇ ಎಲ್ಲೆಡೆಯ ಇಂಧನಕ್ಷೇತ್ರಗಳನ್ನು ಸುಸಜ್ಜಿತಗೊಳಿಸಬೇಕು.
ದಿಶಾಹೀನ ‘ನೆಟ್‌ಫ್ಲಿಕ್ಸ್’ !
‘ನೆಟ್‌ಫ್ಲಿಕ್ಸ್’ ಈ ಮಾಧ್ಯಮವು ಯಾವ ರೀತಿ ಆಕಾಶದಲ್ಲಿನ ಗ್ರಹಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆಯೋ, ಅಷ್ಟೇ ಪ್ರಮಾಣದಲ್ಲಿ ಅದು ಮನುಷ್ಯನ ಆಯುಷ್ಯ, ಸಮಾಜ ಮತ್ತು ಮನಸ್ಸು ಇವುಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಈ ಮಾಧ್ಯಮದಿಂದ ಪ್ರಸಾರ ಮಾಡಲಾಗುವ ವೆಬ್ ಸಿರೀಜ್‌ಗಳು (ಮನೋರಂಜನೆಯ ಕಾರ್ಯಕ್ರಮಗಳು) ಸದಾ ವಿವಾದಕ್ಕೀಡಾಗುತ್ತವೆ; ಹಿಂದಿ ಚಲನಚಿತ್ರಗಳನ್ನು ಬಿಡಿ, ಆಂಗ್ಲ ಚಲನಚಿತ್ರಗಳಿಗೂ ನಾಚಿಕೆ ಆಗುವಂತಹ ವೆಬ್ ಸೀರಿಜ್‌ಗಳು ಈ ಮಾಧ್ಯಮಗಳಿಂದ ಪ್ರಸಾರವಾಗುತ್ತಿವೆ. ಶೈಕ್ಷಣಿಕ, ಭೌಗೋಲಿಕ, ವೈಜ್ಞಾನಿಕ, ಸಾಮಾಜಿಕ, ರಾಜಕೀಯ, ರಾಷ್ಟ್ರೀಯ ಇಂತಹ ವಿಷಯಗಳ ಮೇಲಲ್ಲ, ಕೇವಲ ಮತ್ತು ಕೇವಲ ಧರ್ಮ, ಜಾತಿ, ಅಶ್ಲೀಲತೆ, ಹಣ, ಅಪರಾಧಿ ಜಗತ್ತು, ವಿವಾಹಬಾಹ್ಯ ಸಂಬಂಧ, ಡ್ರಗ್ಸ್, ಪ್ರಗತಿಪರತ್ವ ಇವೇ ವಿಷಯಗಳ ಮೇಲೆ ಆಧರಿಸಿದ ಮಾಲಿಕೆಗಳನ್ನು ಪ್ರಸಾರ ಮಾಡಲಾಗುತ್ತದೆ. ಮನೋರಂಜನೆಯ ಹೆಸರಿನಲ್ಲಿ ‘ನೆಟ್‌ಫ್ಲಿಕ್ಸ್’ ಇಂತಹ ವಿಷಯಗಳಿಂದ ಸಮಾಜವನ್ನು ಎಲ್ಲಿ ಕರೆದುಕೊಂಡು ಹೋಗಲು ನೋಡುತ್ತಿದೆ ? ಅದಕ್ಕೆ ಯಾವುದೇ ದಿಶೆ ಅಂತು ಇಲ್ಲವೇ ಇಲ್ಲ, ತದ್ವಿರುದ್ಧ ತಾನೂ ದಿಶಾಹೀನವಾಗಿ ಸಮಾಜವನ್ನೂ ದಿಶಾಹೀನಗೊಳಿಸುತ್ತಿದೆ. ಸಮಾಜ ಮತ್ತು ಸಂಸ್ಕೃತಿಗೆ ಗೆದ್ದಲು ಹಿಡಿಸುತ್ತಿದೆ. ‘ನೆಟ್‌ಫ್ಲಿಕ್ಸ್’ನ ಸಾಮ್ರಾಜ್ಯವು ಪೃಥ್ವಿ, ಆಕಾಶ, ಗ್ರಹಗಳಿಗೆ ಹೊದಿಕೆಯನ್ನು ಹಾಕುತ್ತಾ ಮನುಷ್ಯನ ಮನಸ್ಸಿನಲ್ಲಿಯೂ ಬಿಡಾರ ಬಿಟ್ಟಿದೆ. ಅಂದರೆ ಈ ಹೊದಿಕೆಯು ಖಂಡಿತವಾಗಿಯೂ ಪ್ರಗತಿಶೀಲವಲ್ಲ. ಆದುದರಿಂದ ‘ಕಲಿಯುಗವನ್ನು ಆದಷ್ಟು ಬೇಗನೆ ವಿನಾಶದ ಕಡೆಗೆ ತೆಗೆದುಕೊಂಡು ಹೋಗುವ ಕೆಲಸವನ್ನೇ ‘ನೆಟ್‌ಫ್ಲಿಕ್ಸ್’ನಂತಹ ಮಾಧ್ಯಮಗಳು ಮಾಡುತ್ತಿವೆ’, ಎಂದು ಹೇಳಿದರೆ ತಪ್ಪಾಗಲಾರದು. ‘ನೆಟ್‌ಫ್ಲಿಕ್ಸ್’ನ ಜಾಲದಿಂದ, ಹಾಗೆಯೇ ಅದರ ಭವಿಷ್ಯದ ಭೀಕರ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಈಗ ನಾಗರಿಕರೇ ಜಾಗರೂಕರಾಗಿ ಈ ಮಾಧ್ಯಮಗಳ ಮೇಲೆ ಬಹಿಷ್ಕಾರ ಹಾಕಬೇಕು, ಇದೇ ಇದರಿಂದ ರಕ್ಷಿಸಿಕೊಳ್ಳುವ ಏಕೈಕ ಮಾರ್ಗವಾಗಿದೆ.