ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಗಳಿಂದ ವಾತಾವರಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ವನಸ್ಪತಿಗಳ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಸೌ. ಮಧುರಾ ಕರ್ವೆ

‘ಹಿಂದೂ ಧರ್ಮದಲ್ಲಿ ತುಳಸಿಗೆ ಅಸಾಧಾರಣ ಮಹತ್ವವಿದೆ. ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಮಾರ್ಗದರ್ಶನ ಮಾಡುವ ಮಹರ್ಷಿಗಳು ರಾಮತುಳಸಿ ಮತ್ತು ಕೃಷ್ಣತುಳಸಿಯ ಸಸಿಗಳನ್ನು ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿ ನೆಡಲು ಹೇಳಿದ್ದರು. ಅದರಂತೆ ೧೬.೫.೨೦೧೭ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ರಾಮ ತುಳಸಿಯ ಸಸಿಯನ್ನು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕೃಷ್ಣತುಳಸಿಯ ಸಸಿಯನ್ನು ಎರಡು ಕುಂಡಗಳಲ್ಲಿ ವಿಧಿವತ್ತಾಗಿ ನೆಟ್ಟಿದ್ದರು. ೨೭.೫.೨೦೧೭ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ಬಳಿಕ ಈ ತುಳಸಿ ಗಿಡಗಳಿಗೆ ನೀರು ಹಾಕಿ ಪ್ರದಕ್ಷಿಣೆಗಳನ್ನು ಹಾಕಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ರಾಮತುಳಸಿ ಮತ್ತು ಕೃಷ್ಣತುಳಸಿ ಇವುಗಳ ಸಂದರ್ಭದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ವೈಜ್ಞಾನಿಕ ಉಪಕರಣದ ಮೂಲಕ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗಿದೆ. ೨೦೧೮ ನೇ ಇಸವಿಯಲ್ಲಿ ಈ ತುಳಸಿಗಳ ವಿಷಯದಲ್ಲಿ ಮಾಡಿದ ಸಂಶೋಧನೆಯನ್ನು ಮುಂದೆ ನೀಡಲಾಗಿದೆ.

ರಾಮತುಳಸಿ ಮತ್ತು ಕೃಷ್ಣತುಳಸಿ ಈ ಗಿಡಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನವನ್ನು ಮಾಡಲು ೧೭.೮.೨೦೧೮ರಂದು ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯು.ಎ.ಎಸ್.) ಈ ಉಪಕರಣದ ಮೂಲಕ ಎರಡೂ ತುಳಸಿಗಳ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳ ವಿವೇಚನೆ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ವಿಷಯದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ : ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿರುವ ಎರಡೂ ತುಳಸಿ ಗಿಡಗಳಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಲ್ಪಡುವುದು : ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿರುವ ಎರಡೂ ತುಳಸಿ ಗಿಡಗಳಲ್ಲಿ ಸಕಾರಾತ್ಮಕ ಊರ್ಜೆಯಿದ್ದು, ಸ್ವಲ್ಪವೂ ನಕಾರಾತ್ಮಕ ಊರ್ಜೆ ಇರಲಿಲ್ಲ. ರಾಮತುಳಸಿಗಿಂತ ಕೃಷ್ಣತುಳಸಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೦.೪೩ ಮೀಟರ್‌ಗಳಷ್ಟು ಅಧಿಕವಿದೆ. ಇದು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೨ ಅ.ತುಳಸಿಯ ಮಹತ್ವ : ತುಳಸಿಯಲ್ಲಿ ಶ್ರೀವಿಷ್ಣುತತ್ತ್ವವಿರುತ್ತದೆ. ತುಳಸಿಯು ಸತತವಾಗಿ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸುವುದರಿಂದ ಅದು ಸುತ್ತಲಿನ ವಾತಾವರಣವನ್ನು ಶುದ್ಧ ಮತ್ತು ಪವಿತ್ರಗೊಳಿಸುತ್ತದೆ. (ತುಳಸಿ ೨೪ ಗಂಟೆ ಪ್ರಾಣವಾಯುವನ್ನು ಹೊರಸೂಸುತ್ತದೆ, ಎಂದು ವಿಜ್ಞಾನವೂ ಹೇಳುತ್ತದೆ) ವಾತಾವರಣದಲ್ಲಿರುವ ರಜತಮದಿಂದ ಪ್ರತಿಯೊಂದು ವಸ್ತುವಿನ ಮೇಲೆ ಪರಿಣಾಮ ಆಗುತ್ತಿರುತ್ತದೆ. ತುಳಸಿಯಿಂದ ಪ್ರಕ್ಷೇಪಿಸಲ್ಪಡುವ ಸಾತ್ತ್ವಿಕ ಸ್ಪಂದನಗಳಿಂದ ವಾತಾವರಣದಲ್ಲಿನ ರಜ-ತಮ ನಾಶವಾಗುತ್ತದೆ. ಸ್ವಲ್ಪದರಲ್ಲಿ, ತುಳಸಿಯು ಸಾತ್ತ್ವಿಕ ವನಸ್ಪತಿಯಾಗಿದ್ದು, ಅದರಿಂದ ವಾತಾವರಣವು ನಿರಂತರವಾಗಿ ಶುದ್ಧವಾಗುತ್ತಿರುತ್ತದೆ. ಆದುದರಿಂದ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಪ್ರವೇಶದ್ವಾರದ ಬಳಿ (ಮುಂಬಾಗಿಲಿನ ಬಳಿ) ‘ತುಳಸಿ ವೃಂದಾವನ ಇರುತ್ತಿತ್ತು. ಮನೆಯ ಸ್ತ್ರೀಯರು ಪ್ರತಿದಿನ ಭಕ್ತಿ ಭಾವದಿಂದ ತುಳಸಿಯ ಪೂಜೆಯನ್ನು ಮಾಡಿ ನಮಸ್ಕಾರ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದರು. ಹಾಗೆಯೇ ಸಾಯಂಕಾಲ ತುಳಸಿಯ ಬಳಿ ದೀಪವನ್ನು ಹಚ್ಚುತ್ತಿದ್ದರು. ಇಂದಿನ ವಿಜ್ಞಾನಯುಗದಲ್ಲಿಯೂ ಗ್ರಾಮೀಣ ಭಾಗಗಳಲ್ಲಿ ಈ ಪರಂಪರೆ ಮುಂದುವರಿದಿದೆ.

೨ ಆ. ಮಹರ್ಷಿಗಳು ರಾಮತುಳಸಿ ಮತ್ತು ಕೃಷ್ಣತುಳಸಿಯ ಸಸಿಗಳನ್ನು ನೆಡಲು ಹೇಳಿರುವುದರ ಹಿಂದಿನ ಕಾರಣ : ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ರಾಮತತ್ತ್ವ ಹಾಗೆಯೇ ಕೃಷ್ಣ ತತ್ತ್ವವೂ ಇದೆ ಎಂದು ಮಹರ್ಷಿಗಳು ಹೇಳಿದ್ದಾರೆ. ‘ಸನಾತನದ ಸಾಧಕರಿಗೆ ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳ ಲಾಭವಾಗಬೇಕು ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಶ್ರೀಕೃಷ್ಣ ಹಾಗೂ ಶ್ರೀರಾಮ ಇವೆರಡೂ ಅವತಾರಗಳ ಆಶೀರ್ವಾದ ಲಭಿಸಬೇಕು, ಎಂದು ಮಹರ್ಷಿಗಳು ರಾಮತುಳಸಿ ಮತ್ತು ಕೃಷ್ಣತುಳಸಿಯ ಸಸಿಗಳನ್ನು ವಿಧಿವತ್ತಾಗಿ ಕುಂಡಗಳಲ್ಲಿ ನೆಡಲು ಹೇಳಿದ್ದರು. ‘ಧರ್ಮಸಂಸ್ಥಾಪನೆಗಾಗಿ ಕೃಷ್ಣತುಳಸಿ ಮತ್ತು ತದನಂತರ ರಾಮರಾಜ್ಯ ಬರಲು ರಾಮತುಳಸಿಯನ್ನು ನೆಡಲು ಹೇಳಿದ್ದರು, ಮಹರ್ಷಿಗಳು ಹೇಳಿದುದರ ಉದ್ದೇಶವು ಇದೇ ಆಗಿತ್ತು.

ಕೃಷ್ಣತುಳಸಿ ಮತ್ತು ರಾಮತುಳಸಿ

೨ ಇ. ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿರುವ ಎರಡೂ ತುಳಸಿಗಳಿಂದ ವಾತಾವರಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸು ವುದು : ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಬೆಳಗ್ಗೆ ಸ್ನಾನವಾದ ಬಳಿಕ ಈ ತುಳಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಪರಾತ್ಪರ ಗುರು ಡಾಕ್ಟರರು ಈ ಕೃತಿಯನ್ನು ಅತ್ಯಂತ ಭಾವಪೂರ್ಣವಾಗಿ ಮಾಡುತ್ತಾರೆ. ಪರಾತ್ಪರ ಗುರು ಡಾಕ್ಟರರು ಮಾಡಿದ ಭಾವಪೂರ್ಣ ಅರ್ಚನೆಯಿಂದ (ಪೂಜೆಯಿಂದ) ತುಳಸಿಯಲ್ಲಿರುವ ದೇವತೆಯ ತತ್ತ್ವವು ಜಾಗೃತವಾಗಿ ಕಾರ್ಯನಿರತವಾಗಿದೆ. ಇದರಿಂದ ತುಳಸಿಯಿಂದ ವಾತಾವರಣ ದಲ್ಲಿ ಚೈತನ್ಯ ಪ್ರಕ್ಷೇಪಿತವಾಯಿತು

೨ ಈ. ರಾಮತುಳಸಿಗಿಂತ ಕೃಷ್ಣತುಳಸಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಅಧಿಕವಿರುವುದು : ರಾಮತುಳಸಿಗಿಂತ ಕೃಷ್ಣತುಳಸಿಯಲ್ಲಿ ಅಧಿಕ ಚೈತನ್ಯವಿರುವುದರಿಂದ ಅದರ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಅಧಿಕವಿದೆ. ಶ್ರೀ. ರಾಮ ಹೊನಪ ಇವರು ಎರಡೂ ತುಳಸಿಗಳ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ‘ಕೃಷ್ಣ ತುಳಸಿಯಲ್ಲಿರುವ ಚೈತನ್ಯವು ‘ರಾಮ ತುಳಸಿಯಲ್ಲಿರುವ ಚೈತನ್ಯದ ತುಲನೆಯಲ್ಲಿ ಅಧಿಕವಿರುವುದು ಅರಿವಾಯಿತು. ಈ ವಿಷಯದಲ್ಲಿ ಪರಾತ್ಪರ ಗುರು ಡಾಕ್ಟರರು ವಿವರಿಸುತ್ತಾ, ‘ಕೃಷ್ಣತತ್ತ್ವದ ಕಾರ್ಯವು ಕಾಲಾನುಸಾರ ಅಧಿಕವಿರುವುದರಿಂದ ಹೀಗಾಗಿದೆ. ಸೂಕ್ಷ್ಮ ಪ್ರಯೋಗಗಳಿಗೆ ಅಂತ್ಯವಿಲ್ಲ. ಈಗ ಮಾಡಿದ ಪ್ರಯೋಗದಲ್ಲಿ ಹೀಗೆ ಅರಿವಾಗಿದೆ; ಆದರೆ ಹಿಂದೂ ರಾಷ್ಟ್ರದಲ್ಲಿ ರಾಮತತ್ತ್ವದ ಕಾರ್ಯ ಅಧಿಕವಿರಲಿದೆ, ಆಗ ಮತ್ತೊಮ್ಮೆ ತುಳಸಿಯ ಪ್ರಯೋಗವನ್ನು ಮಾಡೋಣ, ಎಂದು ಹೇಳಿದರು.

(ವರ್ಷ ೨೦೨೦ ರಲ್ಲಿ ಮಾಡಿದ ಪರೀಕ್ಷಣೆಯಿಂದ ಕೃಷ್ಣತುಳಸಿಗಿಂತ ರಾಮತುಳಸಿಯಲ್ಲಿ ಸಕಾರಾತ್ಮಕ ಸ್ಪಂದನಗಳು ಅಧಿಕವಿರುವುದು ಕಂಡು ಬರುತ್ತಿದೆ. – ಸಂಕಲನಕಾರರು)

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೧೧.೨೦೨೦)