ಕೊಂಡೆವೂರಿನ (ಕೇರಳ) ‘ನಕ್ಷತ್ರವನದಲ್ಲಿರುವ ವೃಕ್ಷಗಳ ವಿಷಯದಲ್ಲಿ ಮಾಡಿದ ಸಂಶೋಧನೆ !

ವನಸ್ಪತಿಗಳ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಜ್ಯೋತಿಷ್ಯಶಾಸ್ತ್ರದಲ್ಲಿ ಅಶ್ವಿನಿ, ಭರಣಿ, ಇತ್ಯಾದಿ ೨೭ ನಕ್ಷತ್ರಗಳಿವೆ. ಪಂಚಾಂಗದಲ್ಲಿ ಪ್ರತಿಯೊಂದು ನಕ್ಷತ್ರಕ್ಕೆ ಒಂದು ವಿಶಿಷ್ಟ ವೃಕ್ಷವನ್ನು ಉಲ್ಲೇಖಿಸಲಾಗಿದ್ದು ಅದಕ್ಕೆ ಆ ನಕ್ಷತ್ರದ ‘ಆರಾಧ್ಯವೃಕ್ಷ ಎಂದು ಹೇಳುತ್ತಾರೆ, ಉದಾ. ಅಶ್ವಿನಿ ನಕ್ಷತ್ರಕ್ಕೆ ‘ಕಾಸರಕ ಇದು ಆರಾಧ್ಯವೃಕ್ಷವಾಗಿದೆ. ವ್ಯಕ್ತಿಗೆ ವಿಶಿಷ್ಟ ಪ್ರಸಂಗದಲ್ಲಿ ಉದಾ. ಸಂಕಟ-ನಿವಾರಣೆಗಾಗಿ ಅವನ ಜನ್ಮ-ನಕ್ಷತ್ರಕ್ಕೆ ಸಂಬಂಧಿಸಿದ ವೃಕ್ಷದ (ಆರಾಧ್ಯವೃಕ್ಷದ) ಉಪಾಸನೆಯನ್ನು ಮಾಡಲು ಹೇಳಲಾಗುತ್ತದೆ. ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಇತ್ಯಾದಿ ರಾಜ್ಯಗಳಲ್ಲಿ ‘ನಕ್ಷತ್ರವನಗಳನ್ನು ಬೆಳೆಸಲಾಗಿದೆ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ೨೨.೨.೨೦೧೯ ರಂದು ಕೇರಳದ ಕೊಂಡೆವೂರಿನ ‘ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಭೇಟಿ ನೀಡಿತು. ಅಲ್ಲಿನ ನಕ್ಷತ್ರವನದಲ್ಲಿ ೨೭ ನಕ್ಷತ್ರಗಳಿಗೆ ಸಂಬಂಧಿಸಿದ ೨೭ ವೃಕ್ಷಗಳಿವೆ. ಈ ವೃಕ್ಷಗಳಿಂದ ಪ್ರಕ್ಷೇಪಿಸುವ ಸ್ಪಂದನಗಳನ್ನು ವಿಜ್ಞಾದ ಮೂಲಕ ಅಧ್ಯಯನ ಮಾಡಲು ಅವುಗಳನ್ನು ‘ಯುನಿವರ್ಸಲ್ ಔರಾ ಸ್ಕ್ಯಾನರ್ ಈ ವೈಜ್ಞಾನಿಕ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

‘ಯು.ಎ.ಎಸ್. ಉಪಕರಣದ ಮೂಲಕ ನಕ್ಷತ್ರವನದಲ್ಲಿ ವೃಕ್ಷಗಳ ಪರೀಕ್ಷಣೆಯನ್ನು ಮಾಡುತ್ತಿರುವ ಶ್ರೀ. ರೂಪೇಶ ರೇಡಕರ್
‘ವಿದೇಶಗಳಲ್ಲಿ ನಡೆಯುವ ಸಂಶೋಧನೆಗಳನ್ನು ಎಲ್ಲರೂ ಹೊಗಳುತ್ತಾರೆ. ಹೊಗಳುವವರಿಗೆ ಈ ಲೇಖನದಲ್ಲಿ ನೀಡಿರುವ ಸಾವಿರಾರು ವರ್ಷಗಳ ಹಿಂದೆ ಆಗಿರುವ ಸಂಶೋಧನೆ ಬಗ್ಗೆ ಕಿಂಚಿತ್ತಾದರೂ ಕಲ್ಪನೆಯಿದೆಯೇ ? – (ಪರಾತ್ಪರ ಗುರು) ಡಾ. ಆಠವಲೆ
ಪ್ರಾ. ಸುಹಾಸ ಜಗತಾಪ

ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿ ಪರೀಕ್ಷಣೆಗಳ ವಿಶ್ಲೇಷಣೆ 

ನಕ್ಷತ್ರವನದ ವೃಕ್ಷಗಳಲ್ಲಿ ‘ಇನ್ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ನಕಾರಾತ್ಮಕ ಊರ್ಜೆಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿಯೂ ಉಳಿಯಲಿಲ್ಲ. ಅವುಗಳಲ್ಲಿ ಸಕಾರಾತ್ಮಕ ಊರ್ಜೆಯು ದೊಡ್ಡ ಪ್ರಮಾಣದಲ್ಲಿರುವುದು ಈ ಮುಂದಿನ ಕೋಷ್ಟಕದಿಂದ ಕಂಡುಬರುತ್ತದೆ.

೨. ಪರಿಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ನಕ್ಷತ್ರವನದ ವೃಕ್ಷಗಳಲ್ಲಿ ಸಾತ್ತ್ವಿಕತೆ ಇರುವುದರಿಂದ ಅವುಗಳಲ್ಲಿ ತುಂಬಾ  ಸಕಾರಾತ್ಮಕ ಊರ್ಜೆ ಕಂಡುಬಂದಿತು : ಜ್ಯೋತಿಷ್ಯ ಶಾಸ್ತ್ರದಲ್ಲಿ ೨೭ ನಕ್ಷತ್ರಗಳಿಗೆ ಸಂಬಂಧಪಟ್ಟ ವೃಕ್ಷಗಳಲ್ಲಿ ವಿಶೇಷ ಗುಣಧರ್ಮಗಳಿವೆ, ಉದಾ. ನೆಲ್ಲಿ, ಕಹಿಬೇವು ಇವುಗಳಲ್ಲಿ ಔಷಧಿಯ ಗುಣಧರ್ಮಗಳಿವೆ. ಆದ್ದರಿಂದ ಅವುಗಳನ್ನು ಆಯುರ್ವೇದದಲ್ಲಿ ರೋಗನಿವಾರಣೆಗಾಗಿ ಉಪಯೋಗಿಸಲಾಗುತ್ತದೆ. ಬಿಲ್ವ, ಅತ್ತಿ ಇತ್ಯಾದಿ ವೃಕ್ಷಗಳಲ್ಲಿ ವಿಶಿಷ್ಟ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿದೆ. ಉದಾ. ಬಿಲ್ವಪತ್ರೆಯಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿದೆ. ‘ದೈವೀ ವೃಕ್ಷಗಳಲ್ಲಿನ ದೇವತೆಯ ತತ್ತ್ವಗಳಿಂದ ಮಾನವನಿಗೆ ಆಧಾತ್ಮಿಕ ಲಾಭವಾಗಬೇಕೆಂದು’, ನಮ್ಮ ಪ್ರಾಚೀನ ಋಷಿಮುನಿಗಳು ಅವುಗಳನ್ನು ಮಾನವನ ಜೀವನದಲ್ಲಿ ವಿವಿಧ ಕೃತಿಗಳೊಂದಿಗೆ ಒಳ್ಳೆಯ ರೀತಿಯಿಂದ ಜೊತೆಗೂಡಿಸಿದ್ದಾರೆ, ಉದಾ. ದೇವರ ಪೂಜೆಯಲ್ಲಿ ವಿಶಿಷ್ಟ ದೇವತೆಗೆ ವಿಶಿಷ್ಟ ಪತ್ರೆಗಳನ್ನು ಅರ್ಪಿಸುವುದು (ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದು), ದೈವೀ ವೃಕ್ಷಗಳ ಪೂಜೆಯನ್ನು ಮಾಡುವುದು (ಅತ್ತಿ, ಅರಳಿ ಮರ ಇವುಗಳ ಪೂಜೆಯನ್ನು ಮಾಡುವುದು) ಜ್ಯೋತಿಷ್ಯಶಾಸ್ತ್ರದಲ್ಲಿನ ೨೭ ನಕ್ಷತ್ರಗಳಿಗೆ ಸಂಬಂಧಿಸಿದ ವೃಕ್ಷಗಳು ಸಾತ್ತ್ವಿಕವಾಗಿದ್ದು ಅವುಗಳಲ್ಲಿ ಚೈತನ್ಯವಿದೆ. ‘ಶ್ರೀ ನಿತ್ಯಾನಂದ ಯೋಗಾಶ್ರಮ’ದ ನಕ್ಷತ್ರವನದಲ್ಲಿನ ವೃಕ್ಷಗಳಲ್ಲಿ ಸಾತ್ತ್ವಿಕತೆ ಇರುವುದರಿಂದ ಅವುಗಳಲ್ಲಿ ತುಂಬಾ ಸಕರಾತ್ಮಕ ಊರ್ಜೆಯು ಕಂಡುಬಂದಿತು.’

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೧.೨೦೧೯)

ವಿ-ಅಂಚೆ : [email protected]