ಪ್ರಾರಬ್ಧ ಮತ್ತು ಸಾಧನೆ
೧ ಅ. ಪ್ರಾರಬ್ಧವನ್ನು ನಾಶ ಮಾಡಲು ಸಾಧನೆಯನ್ನು ಮಾಡಲಾಗುತ್ತದೆ !
ಸಾಧಕ : ನಾನು ಕಂದಾಯ ಇಲಾಖೆಯಲ್ಲಿ (ರೆವಿನ್ಯೂ ಡಿಪಾರ್ಟಮೆಂಟ್) ನೌಕರಿ ಮಾಡುತ್ತೇನೆ. ನೌಕರಿಯನ್ನು ಸಾಧನೆಯ ಜೊತೆಗೆ ತುಲನೆ ಮಾಡುವುದೆಂದರೆ ಭೂಮಿ-ಆಕಾಶದ ತುಲನೆಯನ್ನು ಮಾಡಿದಂತಾಗಿದೆ; ಆದರೆ ತಮ್ಮ ಕೃಪೆಯಿಂದಾಗಿ ನೌಕರಿಯನ್ನು ಮಾಡುತ್ತಿರುವಾಗ ಅಲ್ಲಿಯೂ ಸಾಧನೆಯೇ ಆಗುತ್ತಿದೆ.
ಪರಾತ್ಪರ ಗುರು ಡಾಕ್ಟರ : ತುಂಬಾ ಒಳ್ಳೆಯದಿದೆ !
ಸಾಧಕ : ‘ನೌಕರಿಯಿಂದ ಕೊಡುಕೊಳ್ಳುವಿಕೆಯ ಲೆಕ್ಕವು ಇನ್ನೂ ಹೆಚ್ಚಾಗುವುದು ಮತ್ತು ಹೊಸ ಪ್ರಾರಬ್ಧ ನಿರ್ಮಾಣವಾದರೆ, ಸಾಧನೆಯಲ್ಲಿ ನನ್ನ ಪ್ರಗತಿ ಆಗುವುದಿಲ್ಲ’, ಎಂದು ನನಗೆ ಅನಿಸುತ್ತದೆ.
ಪರಾತ್ಪರ ಗುರು ಡಾಕ್ಟರರು : ಇಲ್ಲ. ‘ಪ್ರಾರಬ್ಧ, ಪ್ರಾರಬ್ಧ’ ಎಂದು ಅಳುತ್ತ ಕುಳಿತುಕೊಳ್ಳಬಾರದು. ಸಾಧಕನು ಪ್ರಾರಬ್ಧವನ್ನು ನಾಶ ಮಾಡುವುದಕ್ಕಾಗಿಯೇ ಸಾಧನೆಯನ್ನು ಮಾಡುತ್ತಾನೆ, ಇಲ್ಲದಿದ್ದರೆ ಸಾಧನೆಯನ್ನು ಏಕೆ ಮಾಡಬೇಕು ? ಸಂಪೂರ್ಣ ಜೀವನ ‘ಪ್ರಾರಬ್ಧ, ಪ್ರಾರಬ್ಧ’ ಎಂದು ಜಪ ಮಾಡಿದರೆ. ಅದಕ್ಕೆ ಯಾವ ಬೆಲೆಯೂ ಇಲ್ಲ. ಅದಕ್ಕೆ ಏನೂ ಅರ್ಥವಿಲ್ಲ !
ಸಾಧಕ : ‘ನನ್ನ ಕ್ರಿಯಮಾಣ ತಪ್ಪಾಗುತ್ತದೆ ಎಂದು ನನಗೆ ಭಯ ವಾಗುತ್ತದೆ !
ಪರಾತ್ಪರ ಗುರು ಡಾಕ್ಟರರು : ಅದಕ್ಕಾಗಿಯೇ ಸ್ವಯಂಸೂಚನೆಗಳನ್ನು ನೀಡಿ ಸಾಧನೆಯ ಮಹತ್ವವನ್ನು ಅಂತರ್ಮನಸ್ಸಿಗೆ ತಿಳಿಸಿ ಹೇಳಬೇಕು. ಅದರಿಂದ ಕ್ರಿಯಮಾಣ ಯೋಗ್ಯವಾಗುತ್ತದೆ ಮತ್ತು ತಪ್ಪುಗಳ ವಿಚಾರ ಮಾಡಬಾರದು.
೧ ಆ. ತಂದೆ-ತಾಯಿಯರ ನಡುವೆ ಆಗುವ ಜಗಳಗಳೆಡೆಗೆ ಸಾಕ್ಷೀಭಾವದಿಂದ ನೋಡಬೇಕು
ಸಾಧಕ : ತಂದೆ-ತಾಯಿಯರಲ್ಲಿ ತುಂಬಾ ಜಗಳಗಳು ಆಗುತ್ತಿರುತ್ತವೆ.
ಪರಾತ್ಪರ ಗುರು ಡಾಕ್ಟರರು : ಕುಟುಂಬದ ಸದಸ್ಯರು (ಫ್ಯಾಮಿಲಿ ಮೆಂಬರ್ಸ್) ಒಟ್ಟಿಗೆ ಇರುವುದರ ಹಿಂದಿನ ಕಾರಣವೇನು ? ಅವರ ಪ್ರಾರಬ್ಧವಿರುತ್ತದೆ, ಆದುದರಿಂದಲೇ ಅವರು ಒಟ್ಟಿಗಿರುತ್ತಾರೆ. ಜನ್ಮ, ಮೃತ್ಯು ಮತ್ತು ವಿವಾಹ ಇವು ಪ್ರಾರಬ್ಧಕ್ಕನುಸಾರವಿರುತ್ತದೆ. ಪತಿ-ಪತ್ನಿಯರಲ್ಲಿ ಕೊಡುಕೊಳ್ಳುವ ಲೆಕ್ಕಾಚಾರವು ಪ್ರಾರಬ್ಧದಲ್ಲಿ ಶೇ. ೫೦ ರಷ್ಟಿರುತ್ತದೆ. ಮಕ್ಕಳು ಮತ್ತು ತಂದೆ-ತಾಯಿಯ ನಡುವೆ ಕೊಡುಕೊಳ್ಳುವ ಲೆಕ್ಕವು ಶೇ. ೧೦ ರಷ್ಟು ಮತ್ತು ಇತರ ಅಪ್ತರು, ನಾವು ಕೆಲಸ ಮಾಡುವ ಕಚೇರಿಯ ಜನರು ಅವರೊಂದಿಗೆ ಕೊಡುಕೊಳ್ಳುವ ಲೆಕ್ಕವು ಶೇ. ೧೦ ರಷ್ಟಿರುತ್ತದೆ. ಉಳಿದ ಶೇ. ೩೦ ರಷ್ಟು ಜೀವನದಲ್ಲಿ ಪ್ರಸಂಗಗಳಿಗನುಸಾರ ಭೇಟಿಯಾಗುವ ಜನರಿಂದ ಇರುತ್ತದೆ, ಉದಾ. ರೈಲಿನಲ್ಲಿ ಹೋಗುತ್ತಿರುವಾಗ ಯಾರಾದರೊಂದಿಗೆ ಏನಾದರೂ ಪ್ರಸಂಗಗಳಾಗುತ್ತವೆ. ಇಂತಹ ಬೇರೆಬೇರೆ ಪ್ರಸಂಗಗಳಿರುತ್ತವೆ, ಅದೂ ನಮ್ಮ ಪ್ರಾರಬ್ಧವೇ ಆಗಿರುತ್ತದೆ. ಅವರ (ತಂದೆ-ತಾಯಿಗಳ) ಪ್ರಾರಬ್ಧವನ್ನು ನಾವು ಹೇಗೆ ಬದಲಾಯಿಸಲು ಸಾಧ್ಯ ? ಬಿಟ್ಟುಬಿಡಿ. ಅವರ ಕಡೆಗೆ ಸಾಕ್ಷೀಭಾವದಿಂದ ನೋಡಿರಿ.
ಸಾಧಕ : ಪ್ರಯತ್ನಿಸುತ್ತೇನೆ.’
(ಮುಂದುವರಿಯುವುದು)