ಐತಿಹಾಸಿಕ ಬದಲಾವಣೆ ಮತ್ತು ಹಿಂದೂದ್ವೇಷಿಗಳ ಕೋಪ

ವಿಶ್ವವಿದ್ಯಾಲಯ ಅನುದಾನ ಆಯೋಗವು (‘ಯುಜಿಸಿ) ಸಿದ್ಧ ಪಡಿಸಿರುವ ಕಲಾ ವಿಭಾಗದ (ಬಿ.ಎ.) ಅಧ್ಯಯನದ ಹೊಸ ಪಠ್ಯಕ್ರಮದ ಇತಿಹಾಸ ಪುಸ್ತಕದಲ್ಲಿ ಕೆಲವು ‘ಐತಿಹಾಸಿಕ ಬದಲಾವಣೆಗಳನ್ನು ಮಾಡಲಾಗಿದೆ. ಇದು ಹಿಂದೂಗಳ ದೇಶವಾಗಿದ್ದು, ಇಲ್ಲಿ ನೂರಾರು ಪರಾಕ್ರಮಶಾಲಿ ಹಿಂದೂ ರಾಜರು ಆಳ್ವಿಕೆ ನಡೆಸಿದ್ದರೂ, ಇಲ್ಲಿಯವರೆಗೆ ಮುಸ್ಲಿಂ ಆಕ್ರಮಣಕಾರರ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಅತ್ಯಂತ ವಿಸ್ತೃತರೂಪದಲ್ಲಿ ಕಲಿಸಲಾಗಿದೆ ಮತ್ತು ಹಿಂದೂ ರಾಜರನ್ನು ಅಕ್ಷರಶಃ ಅಪಮಾನಿಸಲಾಯಿತು. ಇದರಿಂದ ಸಹಜವಾಗಿಯೇ ಹಿಂದೂಗಳು ಮಾನಸಿಕವಾಗಿ ಕುಗ್ಗಿದರು ಮತ್ತು ಅವರಲ್ಲಿ ಕೀಳರಿಮೆ ಉತ್ಪನ್ನವಾಯಿತು. ಈಗ ಸ್ವಾತಂತ್ರ್ಯದ ಬಳಿಕ ಪ್ರಥಮಬಾರಿಗೆ ಹಿಂದೂಗಳ ಸತ್ಯ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ಕಲಿಸುವವರಿದ್ದಾರೆ ಮತ್ತು ಇದರಿಂದ ಈ ಬದಲಾವಣೆ ಖಂಡಿತವಾಗಿಯೂ ಅತ್ಯಂತ ಶ್ಲಾಘನೀಯ ಹಾಗೂ ಹಿಂದೂಗಳ ಸ್ವಾಭಿಮಾನವನ್ನು ಮರಳಿಗಳಿಸುವಂತಹದ್ದಾಗಿರುವುದರಿಂದ ‘ಐತಿಹಾಸಿಕವಾಗಿದೆ. ಈ ಕಾರಣದಿಂದ ಈ ಹೊಸ ಪಠ್ಯಕ್ರಮಕ್ಕೆ ಎಮ್.ಐ.ಎಮ್. ಮುಖಂಡರಾದ ಅಸಾದುದ್ದೀನ ಓವೈಸಿ ಮತ್ತು ಕೆಲವು ಸಾಮ್ಯವಾದಿ ಪ್ರಾಧ್ಯಾಪಕರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಹೊಸ ಪಠ್ಯಕ್ರಮದಲ್ಲಿ ಮೊಗಲರ ಆಳ್ವಿಕೆಯ ವರ್ಚಸ್ಸು ತೋರಿಸುವ ವರ್ಣನೆಯನ್ನು ಕಡಿಮೆ ಮಾಡಿ, ಪ್ರಾಚೀನ ಭಾರತೀಯ ನಾಗರಿಕರ ಜೀವನ, ಅವರ ಧರ್ಮಪದ್ಧತಿ, ಸಮಾಜ ವ್ಯವಸ್ಥೆ ಮತ್ತು ರಾಜಕೀಯವ್ಯವಸ್ಥೆ ಇತ್ಯಾದಿಗಳನ್ನು ವರ್ಣಿಸಲಾಗಿದೆ. ಇದರಿಂದ ಓವೈಸಿ ಮತ್ತು ತಥಾಕಥಿತ ಬುದ್ಧಿಜೀವಿ ಪ್ರಾಧ್ಯಾಪಕರು ಮತ್ತು ವಿಚಾರವಂತರು ಕೋಪೋದ್ರಿಕ್ತರಾಗಿದ್ದಾರೆ. ಸ್ವಲ್ಪದರಲ್ಲಿ ಹೇಳುವುದಾದರೆ ಸತ್ಯ ಇತಿಹಾಸವನ್ನು ಮಂಡಿಸಿದ್ದರಿಂದ ಹಿಂದೂದ್ವೇಷಿಗಳಿಗೆ ಹೊಟ್ಟೆಶೂಲೆ ಎದ್ದಿದೆ. ಕಲಾ ವಿಭಾಗದ ಮೊದಲ ‘ಪೇಪರ್ ಹೆಸರು ‘ದಿ ಐಡಿಯಾ ಆಫ್ ಇಂಡಿಯಾ ಆಗಿದೆ. ಸರಕಾರವು ಆರ್.ಎಸ್. ಶರ್ಮಾ ಮತ್ತು ಇರ್ಫಾನ್ ಹಬೀಬ ಈ ಲೇಖಕರನ್ನು ಬದಲಾಯಿಸಿ ಹೊಸ ಲೇಖಕರನ್ನು ನೇಮಿಸಿದೆ. ಇದೂ ಸಾಮ್ಯವಾದಿಗಳ ಹೊಟ್ಟೆನೋವಿಗೆ ಒಂದು ಕಾರಣವಾಗಿದೆ. ಹಿಂದೂಗಳ ಸತ್ಯ ಇತಿಹಾಸ ಬಹಿರಂಗವಾಗುವುದು ಎಂದರೆ ಹಿಂದೂಗಳ ಸ್ವಾಭಿಮಾನ ಜಾಗೃತಗೊಳ್ಳುವುದಾಗಿದೆ ಮತ್ತು ಇದರಿಂದಲೇ ಹಿಂದೂದ್ವೇಷಿಗಳ ಹೊಟ್ಟೆಯಲ್ಲಿ ಹೆದರಿಕೆಯ ಖಾರ ಕಿವುಚಿದಂತಾಗಿದೆ.

ಹಿಂದೂದ್ವೇಷಿಗಳ ಜಾತ್ಯತೀತ ಮತ್ತು ಡಾಂಭಿಕ ಆಕ್ಷೇಪ

ಈ ಪಠ್ಯಕ್ರಮದಲ್ಲಿ ಸದ್ಯಕ್ಕೆ ಗುಪ್ತಗಾಮಿನಿಯಾಗಿರುವ, ಆದರೆ ಅತಿಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಸರಸ್ವತಿ ನದಿಯ ಉಲ್ಲೇಖವಿದೆ. ವೇದಗಳಲ್ಲಿಯೂ ಇದರ ಉಲ್ಲೇಖವಿದೆ. ಹೀಗಿರುವಾಗ ಬುದ್ಧಿ ಜೀವಿಗಳು ಇದನ್ನು ಆಕ್ಷೇಪಿಸಿದ್ದಾರೆ. ಸರಸ್ವತಿ ನದಿಯ ಅಸ್ತಿತ್ವದ ದಾಖಲೆಗಳು ಪಾಶ್ಚಿಮಾತ್ಯ ವಿಜ್ಞಾನಿಗಳಿಗೂ ದೊರಕಿದೆ ಮತ್ತು ಅವರು ಅದನ್ನು ಜಗತ್ತಿನೆದುರು ಮಂಡಿಸಿದ್ದಾರೆ. ಬುದ್ಧಿಜೀವಿಗಳ ಹೇಳಿಕೆಯಂತೆ ಈ ಪಠ್ಯಕ್ರಮದಿಂದ ಬಾಬಾಸಾಹೇಬ ಅಂಬೇಡಕರ, ನೆಹರೂ ಮತ್ತು ಗಾಂಧಿಗಳ ಮಹತ್ವ ಕಡಿಮೆಯಾಗುತ್ತಿದೆ. ಕೆಲವು ಪೌರಾಣಿಕ ಸಂದರ್ಭಗಳು ಈ ಪಠ್ಯಕ್ರಮದಲ್ಲಿದೆ. ಪಾಶ್ಚಿಮಾತ್ಯ ವಿಚಾರಧಾರೆಯಂತೆ ಬುದ್ಧಿಜೀವಿಗಳು ಅದನ್ನು ‘ಮೈಥಾಲಜಿ (ಅಂದರೆ ಪುರಾಣಗಳು, ಸತ್ಯಕ್ಕೆ ದೂರವಾದ ಕಥೆಯಾಗಿದೆ) ಎನ್ನುತ್ತಾರೆ. ಪಾಶ್ಚಿಮಾತ್ಯರ ಕಣ್ಣುಪಟ್ಟಿಯನ್ನು ಕಟ್ಟಿಕೊಂಡಿರುವ ದೃಷ್ಟಿಯಿಂದ ಅವರು ‘ಮಿಥ್ಯ (ಕಥೆಗಳು) ‘ಮಿಥ್ಯಾ (ಅಂದರೆ ಅಸತ್ಯವಾದುದು) ಆಗಿದ್ದರೂ, ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಅದರಲ್ಲಿ ಚಮತ್ಕಾರ ಅಥವಾ ಅಸತ್ಯವಾದುದು ಇಲ್ಲ. ಅದು ಅವರ ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿಯ ಅಭಿಮಾನ ಪಡುವಂತಹ ವಿಷಯವಾಗಿದೆ. ಬುದ್ಧಿಜೀವಿಗಳ ಹೇಳಿಕೆಯಂತೆ, ಈ ಪಠ್ಯಕ್ರಮದಲ್ಲಿ ಹಿಂದೂ ಮತ್ತು ಮುಸಲ್ಮಾನರ ೧೩ ರಿಂದ ೧೮ ನೇ ಶತಮಾನದ ಸಂಬಂಧವನ್ನು ತೋರಿಸದೇ ಇರುವುದರಿಂದ ಅವರಲ್ಲಿ ಭಿನ್ನಮತವಿತ್ತು ಎಂದೆನಿಸುತ್ತಿದೆ ಎಂದಿದ್ದಾರೆ. ಪ್ರತ್ಯಕ್ಷದಲ್ಲಿಯೂ ಈಗಲೂ ಅವರಲ್ಲಿ ಭಿನ್ನಮತವಿದೆ ಮತ್ತು ಅದು ಅವರನ್ನು ಒಂದುಗೂಡಿಸಲು ಸಾಧ್ಯವಿಲ್ಲದಷ್ಟು, ವಿರೋಧಾಭಾಸದ ಮಿತಿಯನ್ನು ತಲುಪಿದೆ. ಆದುದರಿಂದ ಇದು ಖಂಡಿತವಾಗಿಯೂ ಮತ್ತೊಂದು ಆಕ್ಷೇಪಾರ್ಹ ಅಂಶವಾಗಿದೆ. ಹಿಂದೂ ಸಂಸ್ಕೃತಿಯು ಅತಿಪ್ರಾಚೀನ ಕಾಲದಿಂದಲೂ ಇರುವುದು ಕಂಡು ಬಂದಿದೆ. ಪರಕೀಯ ಆಕ್ರಮಣಕಾರರ ಗುಂಪು ಅರಣ್ಯಗಳಲ್ಲಿ ಅಲೆದಾಡುತ್ತಿದ್ದ ಕಾಲದಲ್ಲಿಯೂ ವಿಶಾಲವಾದ ಭರತಭೂಮಿಯಲ್ಲಿ ಹಿಂದೂ ಸಂಸ್ಕೃತಿಯಿತ್ತು. ‘ಅಲ್ಲಿ ಮುಸಲ್ಮಾನ ಮತ್ತು ಹಿಂದೂಗಳು ಸಂತೋಷದಿಂದ ಒಟ್ಟಿಗೆ ವಾಸಿಸುತ್ತಿದ್ದರು ಎಂದು ತೋರಿಸಬೇಕೆಂದು ಡಾಂಭಿಕ ‘ಜಾತ್ಯತೀತ ಬುದ್ಧಿಜೀವಿಗಳು ಅಪೇಕ್ಷಿಸುತ್ತಿದ್ದಾರೆ. ಅದಕ್ಕಿಂತ ನಿಜವಾದ ಒಳಗಿನ ಮರ್ಮವೆಂದರೆ ಹೊಸ ಪಠ್ಯಕ್ರಮದಲ್ಲಿ ತೈಮೂರ ಮತ್ತು ಬಾಬರ ಆಕ್ರಮಣಕಾರರಾಗಿದ್ದರು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದರಿಂದ ಓವೈಸಿಯಂತಹವರಿಗೆ ಇದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಮುಸಲ್ಮಾನರ ಇತಿಹಾಸವನ್ನು ಮುಗಿಸಿದ್ದಾರೆಂದು ಅವರು ಆರೋಪಿಸಿದ್ದಾರೆ. ‘ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಕಲಿಸಬೇಕು, ಎಂದು ಯಾವುದೇ ಜಾತ್ಯತೀತವಾದಿಗಳು ಹೇಳುವುದಿಲ್ಲ. ವಿಶೇಷವೆಂದರೆ ವರ್ಷಾನುವರ್ಷದಿಂದ ‘ಆರ್ಯರು ಹೊರಗಿನಿಂದ ಬಂದು ಸ್ಥಳೀಯರ ಮೇಲೆ ಆಕ್ರಮಣ ಮಾಡಿ ಆಡಳಿತ ಮಾಡಿದರು. (ಆದ್ದರಿಂದ ಉಚ್ಚವರ್ಣೀಯರನ್ನು ದ್ವೇಷಿಸಿರಿ) ಎನ್ನುವ ಆಂಗ್ಲರು ರಚಿಸಿದ್ದ ಕಪಟತನವು ಈ ಪಠ್ಯಕ್ರಮದಲ್ಲಿ ಪರೋಕ್ಷವಾಗಿ ಬಹಿರಂಗವಾಗಿದೆ. ಹೊಸ ಪಠ್ಯಕ್ರಮದಲ್ಲಿ ವೇದ, ಉಪನಿಷತ್ತು, ‘ವಸುಧೈವ ಕುಟುಂಬಕಮ್ ಸಂಕಲ್ಪನೆ ಇತ್ಯಾದಿ ವಿಷಯಗಳನ್ನು ಅಳವಡಿಸಲಾಗಿದೆ. ಇದರಿಂದ ಜಾತ್ಯತೀತ ಸಾಹಿತ್ಯಕ್ಕಿಂತ ಧಾರ್ಮಿಕ ಸಾಹಿತ್ಯವನ್ನು ಕಲಿಸಲಾಗುತ್ತಿದೆಯೆಂದು ಬುದ್ಧಿಜೀವಿಗಳು ಆರೋಪಿಸಿದ್ದಾರೆ. ಹಿಂದೂಗಳ ಭಾರತದಲ್ಲಿ ಅವರ ಸಂಸ್ಕೃತಿಯ ಇತಿಹಾಸವನ್ನು ಕಲಿಸುವುದೆಂದರೆ ಇಂದು ಕಳ್ಳತನವೆಂಬಂತೆ ಬಿಂಬಿಸಲಾಗಿದೆ. ಇದು ಕಳೆದ ೬೦ ವರ್ಷಗಳಿಂದ ಆಡಳಿತವನ್ನು ಅನುಭವಿಸಿರುವ ಮತ್ತು ಮತಾಂಧರನ್ನು ಓಲೈಸುವುದರಲ್ಲಿಯೇ ಪುರುಷಾರ್ಥವಿದೆಯೆಂದು ತಿಳಿಯುವ ಕಾಂಗ್ರೆಸ್ಸಿನ ಕೊಡುಗೆಯಾಗಿದೆ.

ಸತ್ಯ ಇತಿಹಾಸವನ್ನು ತಿಳಿಸುವುದು ಕಳ್ಳತನವೇ ?

ಮೊದಲು ಭಾರತಾದ್ಯಂತ ಚದುರಿದ್ದ ಹಿಂದೂಗಳ ಮತ್ತು ರಜಪೂತ ರಾಜ್ಯಗಳು ಮತ್ತು ಅವರ ಆಡಳಿತಗಾರರ ಎಷ್ಟೋ ಪೀಳಿಗೆಯವರು ಮೊಗಲ ಆಕ್ರಮಣಕಾರರೊಂದಿಗೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ. ಆದುದರಿಂದಲೇ ಒಂದೂವರೆ ಸಾವಿರ ವರ್ಷಗಳ ವರೆಗೆ ಆಕ್ರಮಣಕಾರರು ಆಕ್ರಮಣವನ್ನು ನಡೆಸಿದ್ದರೂ ಸಂಪೂರ್ಣ ಭಾರತದ ಮೇಲೆ ಅವರಿಗೆ ಅಧಿಕಾರವನ್ನು ಸ್ಥಾಪಿಸಲು ಎಂದಿಗೂ ಸಾಧ್ಯವಾಗಲಿಲ್ಲ. ಇದು ನೈಜ ಇತಿಹಾಸವಾಗಿದೆ. ಭರತಭೂಮಿಯಲ್ಲಿ ಇಂತಹ ನೂರಾರು ಹಿಂದೂ ರಾಜರು ಮೊಗಲರೊಂದಿಗೆ ನಡೆಸಿದ ಪರಾಕ್ರಮಿ ಹೋರಾಟವು ಹಿಂದೂಗಳ ವಿಜಯದ ನೈಜ ಇತಿಹಾಸವಾಗಿದೆ. ಇದನ್ನು ಕಾಂಗ್ರೆಸ್ ಸರಕಾರವು ದೊಡ್ಡ ಷಡ್ಯಂತ್ರ್ಯವನ್ನು ರಚಿಸಿ ಇಂದಿನವರೆಗೆ ಮುಚ್ಚಿಟ್ಟಿತ್ತು. ನೆಹರೂ ಕಾಲದಿಂದಲೂ ಮೊದಲ ೬ ಶಿಕ್ಷಣಸಚಿವರು ಅಲ್ಪಸಂಖ್ಯಾತರಾಗಿದ್ದರು. ಇದರಿಂದ ಕೇಂದ್ರೀಯ ಪಠ್ಯಕ್ರಮದೊಂದಿಗೆ ರಾಜ್ಯಮಟ್ಟದ ಪಠ್ಯಕ್ರಮದಲ್ಲಿಯೂ ಮೊಗಲರ ಆಳ್ವಿಕೆಯನ್ನು ಹೊಗಳಲಾಯಿತು. ಹಿಂದೂಗಳ ವಾಸ್ತುಗಳ ಮೇಲೆ ಆಕ್ರಮಣ ನಡೆಸಿ, ಕಟ್ಟಿರುವ ಅವರ ವಾಸ್ತುಶಿಲ್ಪಕಲೆಯನ್ನು ಎಲ್ಲರೂ ಪ್ರಶಂಸಿಸಿದರು. ಆದರೆ ಪ್ರತ್ಯಕ್ಷದಲ್ಲಿ ಅದರ ಮೂಲವು ಹಿಂದೂಗಳ ಪ್ರಾಚೀನ ಇತಿಹಾಸದಲ್ಲಿದೆ; ಅದು ೩ ಸಾವಿರ ವರ್ಷಗಳ ಹಿಂದಿನ ತುಕ್ಕುಹಿಡಿಯದ ವಿಷ್ಣುಸ್ತಂಭ ವಿರಲಿ ಅಥವಾ ತೇಜೋಮಹಾಲಯ ಇರಲಿ. ಈ ಸತ್ಯ ಈಗ ಹೊರಬಂದರೆ, ತಮಗೆ ಅಪಮಾನವಾಗಬಹುದು ಮತ್ತು ಹಿಂದೂಗಳ ಸ್ವಾಭಿಮಾನ ಜಾಗೃತಗೊಳ್ಳಬಹುದು ಎನ್ನುವ ಹೆದರಿಕೆ ಓವೈಸಿ ಮತ್ತು ಬುದ್ಧಿಜೀವಿಗಳ ಮನಸ್ಸಿನಲ್ಲಿದೆ. ಇದರಲ್ಲಿ ಕೇಸರೀಕರಣವೆಲ್ಲಿದೆ ? ಮತ್ತು ಇದ್ದರೂ ಅದರಲ್ಲಿ ತಪ್ಪೇನಿದೆ ? ೭೦ ವರ್ಷಗಳಿಂದ ಇಸ್ಲಾಮೀಕರಣದ ಅಸತ್ಯ ಇತಿಹಾಸವನ್ನು ಸಂಪೂರ್ಣ ಭಾರತವು ಸಹಿಸಿದೆ. ಈಗ ಸತ್ಯ ಇತಿಹಾಸವನ್ನು ಹಿಂದೂಗಳಿಗೆ ತಿಳಿಸುವ ಮತ್ತು ಅವರು ಅದನ್ನು ತಿಳಿದುಕೊಳ್ಳ್ಳುವ ಸಮಯ ಕಾಲಾನುಸಾರ ಬಂದಿದೆ. ಇದರಿಂದ ಹಿಂದೂದ್ವೇಷಿಗಳು ಎಷ್ಟು ಧೂರ್ತತನವನ್ನು ತೋರಿಸಿದರೂ, ಸೂರ್ಯನ ತೇಜಸ್ಸು ಮುಚ್ಚಿಡಲು ಸಾಧ್ಯವಿಲ್ಲ ಮತ್ತು ಸತ್ಯ ಇತಿಹಾಸ ಹೊರಗೆ ಬಂದೇ ಬರುತ್ತದೆ.