ಪ್ರತಿಜ್ಞೆ
೧. ‘ನಾವೆಲ್ಲ ಹಿಂದೂಗಳು ಯುಗಾದಿಯ ಶುಭಮುಹೂರ್ತದಲ್ಲಿ ಕೇವಲ ಭಾರತದಲ್ಲಿ ಅಷ್ಟೇಅಲ್ಲ, ಪೃಥ್ವಿಯ ಮೇಲೆ ಎಲ್ಲೆಡೆ ಹಿಂದೂ ಧರ್ಮ ಪ್ರಸ್ಥಾಪಿತಗೊಳಿಸಿ ಅಖಿಲ ಮನುಕುಲಕ್ಕೆ ಸುಸಂಸ್ಕೃತ ಮತ್ತು ಸುಖ-ಸಮೃದ್ಧಿಯುಕ್ತ ಜೀವನ ನೀಡಲು ನಿಶ್ಚಯ ಮಾಡುತ್ತೇವೆ.
೨. ವ್ಯಷ್ಟಿ ಸಾಧನೆ, ಎಂದರೆ ನಾಮಜಪ ಧರ್ಮಾಚರಣೆ ಮಾಡಿ ಮತ್ತು ಸಮಷ್ಟಿ ಸಾಧನೆ, ಎಂದರೆ ಹಿಂದೂ ರಾಷ್ಟ್ರ ಹಾಗೂ ಧರ್ಮರಕ್ಷಣೆ ಮಾಡಿ ಹಿಂದೂ ಧರ್ಮದ ಪತಾಕೆಯನ್ನು ಇಡೀ ವಿಶ್ವದಲ್ಲಿ ಹಾರಿಸೋಣ, ಎಂದು ನಾವು ಬ್ರಹ್ಮಧ್ವಜದ ಎದುರು ಪ್ರತಿಜ್ಞೆ ಮಾಡುತ್ತೇವೆ.
ಪ್ರಾರ್ಥನೆ
‘ಹೇ ಬ್ರಹ್ಮದೇವ, ಹೇ ವಿಷ್ಣು, ಈ ಧ್ವಜದ ಮಾಧ್ಯಮದಿಂದ ವಾತಾವರಣದಲ್ಲಿ ವಿದ್ಯಮಾನವಾಗಿರುವ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸುವಂತಾಗಲಿ. ಅದರಲ್ಲಿ ಸಿಗುವ ಶಕ್ತಿಯ ಚೈತನ್ಯವು ಸತತವಾಗಿರಲಿ. ನನಗೆ ಪ್ರಾಪ್ತವಾದ ಶಕ್ತಿಯು ನಮ್ಮಿಂದ ಸಾಧನೆಗಾಗಿ, ಗುರುಸೇವೆಗಾಗಿ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಉಪಯೋಗವಾಗಲಿ’ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.