ಭಾರತವನ್ನು ‘ಹುಲಿಗಳ ದೇಶ ಎಂದು ಕರೆಯಲಾಗುತ್ತದೆ; ಆದರೆ ಪ್ರಸ್ತುತ ಭಾರತದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂಖ್ಯೆಯನ್ನು ಹಲವು ವರ್ಷಗಳಿಂದ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದ ಹಿಂದಿನ ಆಡಳಿತಗಾರರು ಹುಲಿಗಳಂತೆ ಶೂರರು ಮತ್ತು ಕರ್ತವ್ಯನಿಷ್ಠರಾಗಿದ್ದರು. ಆದ್ದರಿಂದ, ಭಾರತದ ಮೇಲೆ ಹಲವಾರು ದಾಳಿಗಳಾದರೂ ಅದನ್ನು ಹಿಮ್ಮೆಟ್ಟಿಸಲಾಯಿತು. ಆಕ್ರಮಣಕಾರರನ್ನು ಸೋಲಿಸಲಾಯಿತು ಆದರೂ ಅಂತಿಮವಾಗಿ ಮೊಘಲರು ಮತ್ತು ಬ್ರಿಟಿಷರು ಕೆಲವು ಶತಮಾನಗಳ ಕಾಲ ಭಾರತವನ್ನು ಆಳಿದರು. ಭಾರತ ಸ್ವತಂತ್ರವಾದರೂ, ನೆರೆಯ ರಾಷ್ಟ್ರವಾದ ಮೊಘಲ್ ವಂಶದ ಪಾಕಿಸ್ತಾನ ಎಂಬ ದೇಶ ಅಸ್ತಿತ್ವಕ್ಕೆ ಬಂದಿತು. ಅಷ್ಟೇ ಅಲ್ಲ, ಅಂತಹ ರಾಜವಂಶಗಳು ಭಾರತದಲ್ಲಿ ಉಳಿದುಕೊಂಡಿವೆ ಮತ್ತು ಅವು ಇಲ್ಲಿ ಬಹುಸಂಖ್ಯಾತ ಹಿಂದೂಗಳ ಅಸ್ತಿತ್ವಕ್ಕೆ ಕುತ್ತು ತರುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಅದನ್ನು ಪ್ರತ್ಯಕ್ಷ ಮಾಡಿ ತೋರಿಸಿದರು. ಕಾಶ್ಮೀರದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕಳೆದ ೩ ದಶಕಗಳಿಂದ ಭಾರತದಲ್ಲಿ ಜಿಹಾದಿ ಭಯೋತ್ಪಾದನೆ ನಡೆಯುತ್ತಿದೆ. ದೇಶದಲ್ಲಿ ನರೇಂದ್ರ ಮೋದಿಯವರ ಸರಕಾರ ಬಂದಾಗಿನಿಂದ ಅದು ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಆದರೂ ಅದು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಅಥವಾ ಜಿಹಾದಿ ಮನಸ್ಸಿನ ಜನರ ಸಂಖ್ಯೆ ಕಡಿಮೆಯಾಗಿಲ್ಲ ಅಥವಾ ಅವರ ಮೇಲೆ ನಿರ್ಬಂಧ ಹೇರುವ ಪ್ರಯತ್ನಗಳು ನಡೆದಿಲ್ಲ. ಇದಕ್ಕೆ ಸರ್ವಧರ್ಮಸಮಭಾವ ಹೆಸರಿನ ಹಿಂದೂಗಳು ಮತ್ತು ಪರ್ಯಾಯವಾಗಿ ಭಾರತದ ಶತ್ರುಗಳು ಅಡ್ಡ ಬರುವುದೇ ಇದಕ್ಕೆ ಕಾರಣವಾಗಿದೆ. ಇದುವರೆಗಿನ ಎಲ್ಲ ಪಕ್ಷದ ಆಡಳಿತಗಾರರು ಮತಾಂಧರ ದಾಳಿಯಲ್ಲಿ ಹಿಂದೂಗಳನ್ನು ಹತ್ತಿಕ್ಕಲು ಬಿಟ್ಟಿದ್ದಾರೆ. ಇಂದಿಗೂ ಅದರಲ್ಲಿ ಹೆಚ್ಚು ಬದಲಾಗಿಲ್ಲ. ಇಂದಿಗೂ ಹಿಂದೂಗಳು ದೇಶದ ಅನೇಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಿಂದ ಪಲಾಯನ ಮಾಡಬೇಕಾಗಿದೆ. ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಭಾರತದ ನೆರೆಯ ದೇಶಗಳು, ಉದಾ. ಮ್ಯಾನ್ಮಾರ್ ಮತ್ತು ಈಗ ಶ್ರೀಲಂಕಾವು ಜಿಹಾದಿಗಳನ್ನು ಬಗ್ಗುಬಡಿಯುತ್ತಿದೆ ಅಥವಾ ಅದನ್ನು ಮಾಡಲು ಪ್ರಯತ್ನಿಸುತ್ತಿದೆ. ಭಾರತವು ಅವರಿಂದ ಕಲಿಯಬೇಕಿದೆ. ಭಾರತ ಈಗ ಅಂತಹ ಪ್ರಯತ್ನವನ್ನು ಮಾಡದಿದ್ದರೆ ಭವಿಷ್ಯದಲ್ಲಿ ಪ್ರಯತ್ನಿಸಲು ಭಾರತಕ್ಕೆ, ಅಂದರೆ ಹಿಂದೂಗಳಿಗೆ ಅವಕಾಶ ಸಿಗುವುದಿಲ್ಲ ಎಂದು ಹೇಳುವುದು ಅತಿಶಯೋಕ್ತಿಯಲ್ಲ.
ಶ್ರೀಲಂಕಾದಿಂದ ಕಲಿಯಿರಿ !
ಜಿಹಾದಿ ಉಗ್ರರು ೨೦೧೯ ರಲ್ಲಿ ಶ್ರೀಲಂಕಾದಲ್ಲಿ ಚರ್ಚುಗಳು ಮತ್ತು ಹೋಟೆಲ್‌ಗಳ ನಡೆಸಿದ ಸರಣಿ ಬಾಂಬ್‌ಸ್ಫೋಟಗಳು ಸಿಂಹಳೀಯ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು ಮತ್ತು ಮತಾಂಧರನ್ನು ಗುರಿಯಾಗಿಸಿತು. ಅನೇಕ ಮಸೀದಿಗಳನ್ನು ಮುಚ್ಚಲು ಒತ್ತಾಯಿಸಲಾಯಿತು. ಅಂದಿನಿಂದ ಸರಕಾರವು ಕೆಲವು ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿದೆ. ‘ಜಿಹಾದಿ ಭಯೋತ್ಪಾದಕ ಮನಸ್ಥಿತಿಯನ್ನು ನಾಶ ಮಾಡಲು ಹೀಗೆ ಮಾಡಬೇಕಾಗುತ್ತದೆ ಎಂದು ಅಲ್ಲಿನ ಸರಕಾರ ಮತ್ತು ಜನರಿಗೆ ಅನಿಸಿದ್ದರಿಂದ ಅದು ಆ ರೀತಿಯ ಕೃತಿ ಮಾಡಿತು. ಇನ್ನೂ ಮುಂದೆ ಹೋದರೆ, ದೇಶಾದ್ಯಂತ ಬುರ್ಖಾ ಮತ್ತು ಮದರಸಾಗಳನ್ನು ನಿಷೇಧಿಸಲು ಕಾನೂನು ಜಾರಿಗೆ ತರಲಿದೆ. ಕರೋನಾ ಅವಧಿಯಲ್ಲಿ ಮುಸಲ್ಮಾನರ ದೇಹಗಳನ್ನು ಹೂಳಲು ನಿಷೇಧಿಸಲಾಗಿತ್ತು; ಆದರೆ ವಿರೋಧದ ನಂತರ ಅದನ್ನು ಹಿಂಪಡೆದರೂ ಅದರಿಂದ ಹಿಂದೆ ಸರಿಯಲಿಲ್ಲ ಎಂಬುದು ಬುರ್ಖಾ ಮತ್ತು ಮದರಸಾ ನಿಷೇಧದ ಪ್ರಯತ್ನದಿಂದ ಗಮನಕ್ಕೆ ಬರುತ್ತದೆ. ಶ್ರೀಲಂಕಾ ಬೌದ್ಧರು ಬಹುಸಂಖ್ಯಾತರಿರುವ ದೇಶವಾಗಿದೆ. ಬೌದ್ಧ ಎಂದರೆ ಶಾಂತಿ ಎಂದು ತಿಳಿಯಲಾಗುತ್ತದೆ; ಆದರೆ ಚೀನಾ ಮತ್ತು ಮ್ಯಾನ್ಮಾರ್ ನೋಡಿದಾಗ ಇಂದು ಯಾವುದೇ ಬೌದ್ಧ ದೇಶವು ಒಂದೆರಡು ಅಪವಾದ ಬಿಟ್ಟರೆ ಯಾರೂ ಈ ರೀತಿ ವರ್ತಿಸುವುದಿಲ್ಲ. ಹಾಗಾದರೆ ಶ್ರೀಲಂಕಾ ಹೇಗೆ ಹಿಂದುಳಿಯಬಹುದು ? ‘ಲಿಬರೇಶನ್ ಟೈಗರ್ಸ್ ಆಫ್ ತಮಿಳ ಈಲಂನ ಬಂಡುಕೋರರನ್ನು ಸದೆಬಡಿಯುವಾಗ ಇದೇ ಶ್ರೀಲಂಕಾ ಸಾವಿರಾರು ಅಮಾಯಕ ಹಿಂದೂಗಳನ್ನು ಕೊಂದಿತ್ತು ಎಂಬುದನ್ನು ಮರೆಯಲಾಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಈ ದೇಶವನ್ನು ‘ಸಿಂಹಳಿಯ ಎಂದು ಕರೆಯಲಾಗುತ್ತಿತ್ತು. ಇದು ತನ್ನ ರಾಷ್ಟ್ರೀಯ ಧ್ವಜ ಮತ್ತು ಲಾಂಛನದಲ್ಲಿ ಸಿಂಹದ ಚಿತ್ರವನ್ನು ಹೊಂದಿದೆ. ಮತಾಂಧರ ವಿರುದ್ಧ ಶ್ರೀಲಂಕಾ ಕೈಗೊಂಡ ಕ್ರಮಗಳನ್ನು ನೋಡಿ, ಅದು ಅದಕ್ಕೆ ತಕ್ಕಂತೆ ಅವರು ನಡೆದುಕೊಂಡಿದೆ ಎಂದು ಹೇಳಬಹುದು. ‘ಜಗತ್ತು ಏನು ಹೇಳುತ್ತದೆ ? ಎಂದು ಭಾರತೀಯರಿಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ. ಭಾರತವು ಅಂತಹ ಆಡಳಿತಗಾರರನ್ನು ಹೊಂದಿದ್ದರೆ, ಭಾರತವು ಇಂದು ‘ಸೂಪರ್ ಪವರ್ ಆಗಿರುತ್ತಿತ್ತು ದುರದೃಷ್ಟವಶಾತ್, ದೇಶದಲ್ಲಿ ಕಪಟ ಅಹಿಂಸೆ ಮತ್ತು ಗಾಂಧಿಗಿರಿ ಸೃಷ್ಟಿಯಾದ ಕಾರಣ, ಭಾರತವು ‘ಹುಲಿ ದೇಶವಾಗಿ ಉಳಿದಿಲ್ಲ. ಸಂಸತ್ತಿನಲ್ಲಿ ಬುರ್ಖಾ ಮತ್ತು ಮದರಸಾಗಳನ್ನು ನಿಷೇಧಿಸಲು ಶ್ರೀಲಂಕಾ ಪ್ರಸ್ತಾಪಿಸಿದೆ. ಇದನ್ನು ಇಸ್ಲಾಮಿಕ್ ರಾಷ್ಟ್ರಗಳು ಇನ್ನೂ ವಿರೋಧಿಸಿಲ್ಲ. ಬಹುಶಃ ಅದು ಸಂಭವಿಸಬಹುದು; ಆದರೆ ಶ್ರೀಲಂಕಾ ಅದಕ್ಕೆ ಸೊಪ್ಪು ಹಾಕಲಿಕ್ಕಿಲ್ಲ. ನಿಜವಾದ ರಾಜಧರ್ಮ ವೆಂದರೆ ಜಿಹಾದಿ ಭಯೋತ್ಪಾದಕ ದಾಳಿ ಪುನಃ ಸಂಭವಿಸದಂತೆ ತಡೆಯಲು ಪ್ರಯತ್ನಿಸುವುದು ಎಂಬುದು ಶ್ರೀಲಂಕಾದ ಆಡಳಿತಗಾರರಿಗೆ ಬಹುಶಃ ಚೆನ್ನಾಗಿ ತಿಳಿದಿದೆ.
ಇಡೀ ಜಗತ್ತಿನ ವಿರುದ್ಧ !
ಜಿಹಾದಿಗಳ ಹಲವಾರು ದಾಳಿಯ ನಂತರ, ಫ್ರಾನ್ಸ್ ಸರಕಾರವು ಅಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ದೇಶವೂ ತನ್ನ ಜನರನ್ನು ರಕ್ಷಿಸಲೇ ಬೇಕಾಗುತ್ತದೆ ಹಾಗೂ ಆ ರೀತಿ ಮಾಡುತ್ತವೆ. ಆದರೆ ಭಾರತ ಇದಕ್ಕೆ ಅಪವಾದವಾಗಿದೆ. ಯುರೋಪಿನ ಅನೇಕ ದೇಶಗಳು ಬುರ್ಖಾವನ್ನು ನಿಷೇಧಿಸಿವೆ. ಇವರೆಲ್ಲರೂ ಬುರ್ಖಾವನ್ನು ಜಿಹಾದಿ ಭಯೋತ್ಪಾದಕರು ದುರ್ಲಾಭ ಪಡೆದುಕೊಳ್ಳುತ್ತಾರೆ ಮತ್ತು ಇದನ್ನು ‘ಕಟ್ಟರ್‌ವಾದದ ಸಂಕೇತವಾಗಿಯೂ ಬಳಸಲಾಗುತ್ತದೆ ಎಂದು ಹೇಳುತ್ತಾರೆ. ಜಿಹಾದಿ ಭಯೋತ್ಪಾದಕರ ಕ್ರಮಗಳ ಬಗ್ಗೆ ಸಾರ್ವಜನಿಕರ ಆಕ್ರೋಶವೂ ಇದೆ. ಅಮೇರಿಕಾದ ಮೇಲೆ ೯/೧೧ ದಾಳಿಯ ನಂತರ, ಅಲ್ಲಿ ಅನೇಕ ಮುಸಲ್ಮಾನರ ಮೇಲೆ ದಾಳಿ ನಡೆಸಲಾಯಿತು, ಇದನ್ನು ನಿರ್ಲಕ್ಷಿಸಲಾಗುವುದಿಲ್ಲ. ಎರಡು ವರ್ಷಗಳ ಹಿಂದೆ ನ್ಯೂಜಿಲ್ಯಾಂಡ್ ನಲ್ಲಿ ಎರಡು ಮಸೀದಿಗಳಲ್ಲಿ ಇಬ್ಬರು ಮುಸಲ್ಮಾನರನ್ನು ಗುಂಡಿಕ್ಕಿ ಕೊಂದಾಗ ಇದೇ ರೀತಿಯ ಆಕ್ರೋಶ ವ್ಯಕ್ತವಾಯಿತು. ಜಗತ್ತಿನಲ್ಲಿ ಯಾರೂ ಇನ್ನು ಮುಂದೆ ಜಿಹಾದಿ ಭಯೋತ್ಪಾದನೆಯನ್ನು ಬಯಸುವುದಿಲ್ಲ. ಆದ್ದರಿಂದ ಎಲ್ಲರೂ ಅದರ ವಿರುದ್ಧ ಎದ್ದು ನಿಂತಿದ್ದಾರೆ. ಈ ಭಯೋತ್ಪಾದನೆಯ ಹಿಂದಿನ ಮನಸ್ಥಿತಿ ಅಥವಾ ಆಲೋಚನೆಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಅವರು ಗಮನಿಸಿದ್ದಾರೆ. ಭಾರತದಲ್ಲಿ ಶಿಯಾ ವಕ್ಫ್ ಬೋರ್ಡನ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಅವರು ಭಯೋತ್ಪಾದನೆಯನ್ನು ಉತ್ತೇಜಿಸುವ ಕುರಾನ್ ನಿಂದ ೨೬ ಆಯಾತಗಳನ್ನು ತೆಗೆದುಹಾಕಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಅಂತಿಮವಾಗಿ ನ್ಯಾಯಾಲಯ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೂ ಈಗ ಚರ್ಚೆ ನಡೆಯುತ್ತಿದೆ. ವಿಶ್ವದ ಸುಸಂಸ್ಕೃತ ಜನರು ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಇದಕ್ಕೆ ವಿರುದ್ಧವಾಗಿ, ಇಂದಿಗೂ, ಮಧ್ಯಕಾಲೀನ ಜನರು ಅಶಾಂತಿಯನ್ನು ಬಯಸುತ್ತಾರೆ. ಅವರು ತಮ್ಮ ದೇಶದಲ್ಲಿಯೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಎಂಬುದು ಸತ್ಯ. ಇಂಡೋನೇಷ್ಯಾದ ನಂತರ ಭಾರತ ಎರಡನೇ ಅತಿ ದೊಡ್ಡ ಮುಸಲ್ಮಾನರ ಜನಸಂಖ್ಯೆಯನ್ನು ಹೊಂದಿದೆ. ಮತಾಂಧರು ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತಡೆಯಲು ಈಗ ಶ್ರೀಲಂಕಾ, ಮ್ಯಾನ್ಮಾರ್ ಮುಂತಾದವುಗಳಂತೆ ಕಠಿಣವಾಗುವುದು ಅನಿವಾರ್ಯವಾಗಿರಲಿದೆ, ಎಂದೆ ಹೇಳಬೇಕೆನಿಸುತ್ತದೆ.