ಟಿಪ್ಪಣಿ ೧ : ೧ ಕೋಣೆ + ಅಡುಗೆಮನೆ+ ಸ್ನಾನಗೃಹ ಮತ್ತು ಶೌಚಾಲಯ,
ಟಿಪ್ಪಣಿ ೨ : ೧ ಕೋಣೆ + ಅಡುಗೆಮನೆ + ೧ ಬೆಡ್‌ರೂಮ್ + ಸ್ನಾನಗೃಹ ಮತ್ತು ಶೌಚಾಲಯ, ಟಿಪ್ಪಣಿ ೩: ೧ ಕೋಣೆ + ಅಡುಗೆಮನೆ + ೨ ಬೆಡ್‌ರೂಮ್ + ಸ್ನಾನಗೃಹ ಮತ್ತು ಶೌಚಾಲಯ
ಸೂಚನೆ

೧. ಇದು ಕೇವಲ ಮಾರ್ಗದರ್ಶಕ ಅಂಶಗಳಾಗಿವೆ.
೨. ಇವೆಲ್ಲ ಮನೆಗಳು ಕೇವಲ ಒಂದು ಅಂತಸ್ತಿನದ್ದಾಗಿವೆ.
೩. ‘ಇದು ಅಗ್ಗದ ವೆಚ್ಚದಲ್ಲಿ ಮನೆಗಳ ನಿರ್ಮಾಣ ಎಂಬ ಅಂಶದ ಆಧಾರದಲ್ಲಿ ವಿವರದಿಂದ ಮಾಡಿರುವ ಅಭ್ಯಾಸವಾಗಿದೆ.
೪. ಆಪತ್ಕಾಲದ ಸ್ಥಿತಿಯ ವಿಚಾರ ಮಾಡಿ ಈ ಮನೆಗಳ ರಚನೆ ಮತ್ತು ನಿರ್ಮಾಣದ ಅಭ್ಯಾಸವನ್ನು ಮಾಡಲಾಗಿದೆ.
೫. ಕಟ್ಟಡವನ್ನು ಪೂರ್ಣಗೊಳಿಸುವ ಅವಧಿಯು ಭೂಮಿಯ ಉಪಲಬ್ಧತೆಯನ್ನು ಅವಲಂಬಿಸಿದೆ. ಈ ಅವಧಿ ೩ ರಿಂದ ೬ ತಿಂಗಳೆಂದು ಹೇಳಿದ್ದರೂ ಕಾರ್ಮಿಕರ ಮತ್ತು ನಿರ್ಮಾಣದ ಸಾಹಿತ್ಯಗಳ ಉಪಲಬ್ದತೆಗನುಸಾರ ಹೆಚ್ಚು-ಕಡಿಮೆಯಾಗಬಹುದು.
೬. ನಿರ್ಮಾಣ ಸಾಹಿತ್ಯಗಳ ಉಪಲಬ್ಧತೆ, ಸಾಹಿತ್ಯಗಳ ಬೆಲೆ ಹಾಗೂ ಸ್ಥಳೀಯ ಕಾರ್ಮಿಕರು ಇತ್ಯಾದಿಗನುಸಾರ ಕಟ್ಟಡ ನಿರ್ಮಾಣದ ಖರ್ಚು ಹೆಚ್ಚು ಕಡಿಮೆಯಾಗಬಹುದು. (ಗೋವಾ ಮತ್ತು ಇತರ ರಾಜ್ಯಗಳಿಗಾಗಿ)
೭. ‘ಕಟ್ಟಡ ನಿರ್ಮಾಣ ಮಾಡುವ ಭೂಮಿಯವರೆಗೆ ಚತುಷ್ಚಕ್ರ ವಾಹನ ಹೋಗಲು ರಸ್ತೆ ಇದೆ ಎಂದು ಗ್ರಹಿಸಿ ನಿರ್ಮಾಣ ಕಾರ್ಯದ ಖರ್ಚನ್ನು ಅಂದಾಜು ಮಾಡಲಾಗಿದೆ. ಒಂದು ವೇಳೆ ಇಂತಹ ರಸ್ತೆ ಇಲ್ಲದಿದ್ದರೆ ನಿರ್ಮಾಣ ಸಾಹಿತ್ಯಗಳನ್ನು ಸಾಗಿಸಲು ಸಾಗಾಟದ ಖರ್ಚು ಹೆಚ್ಚಾಗುವುದರಿಂದ ನಿರ್ಮಾಣ ಕಾರ್ಯದ ಖರ್ಚು ಕೂಡ ಹೆಚ್ಚಾಗಬಹುದು.
– ಶ್ರೀ. ಮಧುಸೂಧನ ಕುಲಕರ್ಣಿ, ರಾಮನಾಥಿ, ಫೋಂಡಾ ಗೋವಾ.