೭೧ ವರ್ಷಗಳಲ್ಲಿ ರೈತರ ಹಿತದೃಷ್ಟಿಯಿಂದ ಯಾವುದೇ ಕಾನೂನುಗಳನ್ನು ಮಾಡದ ಇಂದಿನ ವಿರೋಧಿ ಪಕ್ಷದವರು ಮತ್ತು ಸೌಮ್ಯ ನೀತಿಯನ್ನು ಅವಲಂಬಿಸಿ ರೈತರ ಪ್ರತಿಭಟನೆಯನ್ನು ಹೆಚ್ಚಿಸುತ್ತಿರುವ ಇಂದಿನ ಅಧಿಕಾರರೂಢ ಪಕ್ಷ !

ರೈತರ ಆಂದೋಲನದ ಸಂಗ್ರಹಿತ ಛಾಯಾಚಿತ್ರ

೧. ಕಳೆದ ೭೧ ವರ್ಷಗಳಲ್ಲಿ ರೈತರ ಹಿತವನ್ನು ಕಾಪಾಡದ ರಾಜಕೀಯ ಪಕ್ಷಗಳು ಕೃಷಿ ಕಾಯದೆಗಳನ್ನು ವಿರೋಧಿಸುವುದು

೧೯೩೦ ರಲ್ಲಿ ಅಂದರೆ ಸ್ವಾತಂತ್ರ್ಯಕ್ಕೂ ಮೊದಲು ಕೃಷಿ ಉತ್ಪನ್ನಗಳ ಸರಕು ಮಾರಾಟದ ಸಂದರ್ಭದಲ್ಲಿ ಕಾಯದೆಗಳನ್ನು ಮಾಡಲಾಗಿತ್ತು. ೨೦೦೫ ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು, ಆಗ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕಾಯದೆಯಲ್ಲಿ ಸುಧಾರಣೆಯನ್ನು ಮಾಡಿ ರೈತರಿಗೆ ಅವರ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಾಗಬೇಕು (ದಲ್ಲಾಲಿಗಳಿಲ್ಲದೇ), ಕರಾರು ಪದ್ಧತಿಯಲ್ಲಿ ಕೃಷಿಯನ್ನು ಮಾಡಲು ಬರಬೇಕು, ಖಾಸಗಿ ಮಾರುಕಟ್ಟೆ  ವ್ಯವಸ್ಥೆಯನ್ನು ನಿರ್ಮಿಸಬೇಕು, ರೈತರಿಂದ ನೇರವಾಗಿ ಗ್ರಾಹಕರ  ಮಾರುಕಟ್ಟೆ ನಿರ್ಮಾಣವಾಗಬೇಕು ಮತ್ತು ಈ-ಟ್ರೆಡಿಂಗ್‌ನ ಸೌಲಭ್ಯವೂ ದೊರಕಬೇಕೆಂದು ಕೃಷಿ ಕಾಯದೆ ಮಾಡುವ ಕುರಿತು ಕಾಂಗ್ರೆಸ್ ಮತ್ತು ಅವರೊಂದಿಗೆ ಅಧಿಕಾರದಲ್ಲಿ ಪಾಲ್ಗೊಂಡ ಅನೇಕ ನೇತಾರರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು; ಆದರೆ ಅವರಿಗೆ ಆಡಳಿತಾವಧಿಯಲ್ಲಿ ‘ರೈತರ ಹಿತವನ್ನು ರಕ್ಷಿಸುವ’ ಕಾನೂನುಗಳನ್ನು ಮಾಡಲು ಸಾಧ್ಯವಾಗಲಿಲ್ಲ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಕಾಂಗ್ರೆಸ್ಸಿನ ಅಂದಿನ ಪ್ರಧಾನಮಂತ್ರಿಗಳಾದ ಮನಮೋಹನ ಸಿಂಗ್ ಇವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ, ‘ಕೃಷಿ ಕಾನೂನಿನಲ್ಲಿ ಆದಷ್ಟು ಬೇಗನೆ ಬದಲಾವಣೆಗಳನ್ನು ಮಾಡಲು ಅದರಲ್ಲಿ ಸುಧಾರಣೆಗಳನ್ನು ಮಾಡುವುದು ಆವಶ್ಯಕವಾಗಿದೆ’, ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅದೇ ರೀತಿ ಒಂದು ಸಮಯದಲ್ಲಿ ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದ ರಾಷ್ಟ್ರವಾದಿ ಕಾಂಗ್ರೆಸ್‌ನ ಅಧ್ಯಕ್ಷರೂ (ಶರದ ಪವಾರ) ‘ರೈತರ ಹಿತ ರಕ್ಷಣೆ ಮಾಡುವ ಕಾನೂನುಗಳು ಬೇಕು’, ಎಂದು ಹೇಳಿದ್ದರು. ಈ ರೀತಿಯ ಅಭಿಪ್ರಾಯಗಳನ್ನು ಅನೇಕ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ವ್ಯಕ್ತ ಪಡಿಸಿದ್ದರು. ಆದ್ದರಿಂದ ಈಗ ಕೇವಲ ‘ಬೇರೆ ಪಕ್ಷದ (ಬಿ.ಜೆ.ಪಿ) ಸರಕಾರವು ರೈತರ ಹಿತದ ನಿರ್ಣಯವನ್ನು ತೆಗೆದುಕೊಳ್ಳುತ್ತಿರುವುದರಿಂದ ಅವರನ್ನು ವಿರೋಧಿಸುವುದು’, ತಪ್ಪಾಗಿದೆ.

೨. ಕೃಷಿ ಕಾಯದೆಗಳ ಸಂದರ್ಭದಲ್ಲಿ ತಥಾಕಥಿತ ರೈತರು ದೀರ್ಘ ಕಾಲ ಆಂದೋಲನ ಮಾಡಿದುದರಿಂದ ದೇಶಕ್ಕಾದ ಅಪಾರ ಹಾನಿ !

ಕೃಷಿಗೆ ಸಂಬಂಧಿಸಿದ ಕಾನೂನುಗಳು ಮಾನ್ಯತೆ ಪಡೆದಾಗಿನಿಂದ ಅವುಗಳನ್ನು ವಿರೋಧಿಸಲು ಶಾಹೀನಬಾಗ್‌ದಂತೆ  ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ಸ್ವಹಿತಾಸಕ್ತಿಯವರು (ದೇಶವಿರೋಧಿ ಶಕ್ತಿಗಳು) ದೆಹಲಿ ಗಡಿಯಲ್ಲಿ ಆಂದೋಲನಕ್ಕೆ ಕುಳಿತಿದ್ದಾರೆ. ಈ ಆಂದೋಲನವನ್ನು ದೀರ್ಘಕಾಲ ಮುಂದುವರಿಸಿ ಸಾರ್ವಜನಿಕ ಮಾರ್ಗವನ್ನು ತಡೆದು ಹಾಗೆಯೇ ಕಾನೂನು-ಸುವ್ಯವಸ್ಥೆಯ ಸಮಸ್ಯೆಯನ್ನು ಉಂಟು ಮಾಡಲಾಗಿದೆ. ಈ ಆಂದೋಲನವು ಭಾರತದ ಆಂತರಿಕ ಶತ್ರುಗಳ ಇಚ್ಛೆಗನುಸಾರ ಮತ್ತು ವಿದೇಶಿ ಶಕ್ತಿಗಳ ಸಲಹೆಗಳ ಮೇರೆಗೆ ನಡೆಯುತ್ತಿರುವುದು ಕಂಡು ಬಂದಿದೆ.

ಮುಂಬಯಿಯಲ್ಲಿ ಜನವರಿ ೨೫ ರಂದು ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಇತರ ವಿರೋಧಿ ಪಕ್ಷಗಳ ನಾಯಕರು, ‘ರೈತರನ್ನು ಉದ್ಧ್ವಸ್ತಗೊಳಿಸುವ ಸರಕಾರವನ್ನು ನಾವು (ಸಮಾಜಕಾರಣದಿಂದ) ಉದ್ಧ್ವಸ್ತಗೊಳಿಸುವೆವು’, ಎಂಬ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದರು. ಅನಂತರ ದಿನಾಂಕ ೨೬ ರಂದು ದೆಹಲಿಯಲ್ಲಿ ದೊಡ್ಡ ಹಿಂಸಾಚಾರವಾಯಿತು, ಇದೇನು ಯೋಗಾಯೋಗವಾಗಿಲ್ಲ !

೩. ಪ್ರಜಾಪ್ರಭುತ್ವದ ದಿನ ಆಂದೋಲನದಲ್ಲಿ ಹಿಂಸಾಚಾರ ನಡೆದುದರಿಂದ ದೇಶ ಮತ್ತು ಸ್ವಾತಂತ್ರ್ಯ ಸೈನಿಕರು ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು !

ಜನವರಿ ೨೬ ರಂದು ಸರಕಾರವು ಈ ಪ್ರತಿಭಟನಾ ಮೆರವಣಿಗೆಗೆ ಮಧ್ಯಾಹ್ನ ೧ ಗಂಟೆಯ ಸಮಯ ನೀಡಿ ಮಾರ್ಗವನ್ನು ನಿಶ್ಚಯಿಸಿ ಕೊಟ್ಟಿತ್ತು. ಹೀಗಿರುವಾಗಲೂ ಉದ್ದೇಶಪೂರ್ವಕವಾಗಿ ಕಾನೂನು-ಸುವ್ಯವಸ್ಥೆಯ ಸಮಸ್ಯೆಯನ್ನು ನಿರ್ಮಿಸಲಾಯಿತು. ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ದಿನ ಇಂತಹ ಹಿಂಸಾಚಾರ ಮೊದಲ ಬಾರಿಗೆ ನಡೆಯಿತು. ಆಂದೋಲನಕಾರರು ಸರ್ವೋಚ್ಚ ನ್ಯಾಯಾಲಯದೊಳಗೆ ನುಗ್ಗುವವರಿದ್ದರು; ಆದರೆ ಪೊಲೀಸರು ತಮ್ಮ ಜೀವವನ್ನು ಪಣಕಿಟ್ಟು ಅವರನ್ನು ತಡೆದರು. ಬಲಿಷ್ಠರಾಷ್ಟ್ರ ಅಮೇರಿಕಾದ ರಾಷ್ಟ್ರಪತಿ ಟ್ರಂಪ್ ಇವರು ಬಂದಾಗ ದೆಹಲಿಯಲ್ಲಿ ಶಾಹೀನಬಾಗ್‌ದಲ್ಲಿ ಹಿಂಸಾಚಾರವಾಗುವುದು ಮತ್ತು ಪ್ರಜಾಪ್ರಭುತ್ವದ ದಿನ ಹಿಂಸಾಚಾರವಾಗುವುದು, ಇದನ್ನು ಯೋಗಾಯೋಗವೆನ್ನಲು ಸಾಧ್ಯವಿಲ್ಲ. ಈ ಹಿಂಸಾಚಾರದ ಹಿಂದೆ ಜಗತ್ತಿನಾದ್ಯಂತ ದೇಶದ ಮಾನಹಾನಿ ಮಾಡುವ ಕುಟಿಲ ಒಳಸಂಚಿರುವುದು ಕಂಡು ಬರುತ್ತದೆ. ೨೬ ಜನವರಿಯ ಮೊದಲೇ ಕೆನಡಾದಲ್ಲಿ ಖಲಿಸ್ತಾನವಾದಿಗಳು, ಭಾರತದ್ವೇಷಿಗಳು, ಪ್ರತ್ಯೇಕತಾವಾದಿಗಳು, ನಕ್ಸಲ್‌ವಾದಿಗಳು ಮತ್ತು ಭಯೋತ್ಪಾದಕ ಶಕ್ತಿಗಳು ಒಟ್ಟುಗೂಡಿದ್ದವು. ಯಾರಿಗೆ ಕೃಷಿಯ ‘ಅ, ಆ’ ಕೂಡ ತಿಳಿಯುವುದಿಲ್ಲವೋ, ಅಂತಹ ವಿದೇಶಿ ಚಲನಚಿತ್ರೋದ್ಯಮದಲ್ಲಿನ ಪ್ರಖ್ಯಾತ ವ್ಯಕ್ತಿಗಳು, ಕ್ರೀಡಾಪಟುಗಳು, ಮುಖಂಡರೂ ಭಾರತವನ್ನು ವಿರೋಧಿಸಿ ರೋಷವನ್ನು ತೀರಿಸಿಕೊಂಡರು. ಗ್ರೆಟಾ ಥನಬರ್ಗ್ ಮತ್ತು ಅಶ್ಲೀಲ ಚಲನಚಿತ್ರಗಳಲ್ಲಿ ನಡೆಸುವ ಮಿಯಾ ಖಲಿಫಾ ಇವರು ಆಂದೋಲನ ಉದ್ರೇಕಕಾರಿಯಾಗಲು ಪ್ರಯತ್ನಿಸಿದರು.

೪. ದೇಶದ ಹೆಸರಾಂತ ವ್ಯಕ್ತಿಗಳು ಕೃಷಿ ಕಾಯದೆಗಳನ್ನು ಬೆಂಬಲಿಸಿದ್ದರಿಂದ ಅವರ ಬಗ್ಗೆ ರಾಜ್ಯಾಡಳಿತಗಳ ಸಿಟ್ಟು

ಈ ಆಂದೋಲನದಲ್ಲಿ ಪರಕೀಯರು ಮೂಗು ತೂರಿಸುವ ಪ್ರಯತ್ನವನ್ನು ಮಾಡಿದಾಗ, ಕೆಲವು ‘ಭಾರತರತ್ನ’ ಪುರಸ್ಕೃತ ವ್ಯಕ್ತಿಗಳು, ಚಲನಚಿತ್ರೋದ್ಯಮದ ಹೆಸರಾಂತ ನಟ-ನಟಿಯರು, ಜಗತ್ತಿನಲ್ಲಿ ಭಾರತದ ಹೆಸರನ್ನು ಎತ್ತಿ ಹಿಡಿದಂತಹ ಕ್ರೀಡಾಪಟುಗಳು ಕೃಷಿ ಕಾಯದೆಗಳ ಸಮರ್ಥನೆಗಾಗಿ ‘ಟ್ವಿಟ್’ನ ಮೂಲಕ ಅಭಿಪ್ರಾಯ ಮಂಡಿಸಿದರು. ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕುವ ಪರಕೀಯ ಶಕ್ತಿಗಳಿಗೆ ಅವರ ಯೋಗ್ಯತೆಯನ್ನು ತೋರಿಸಿ ಕೊಡುವುದನ್ನು ಬಿಟ್ಟು ಮಹಾರಾಷ್ಟ್ರ ಸರಕಾರ ‘ಭಾರತ ರತ್ನ’ ಗಾನಕೋಗಿಲೆ ಲತಾ ಮಂಗೇಶಕರ, ‘ಭಾರತರತ್ನ’ ಸಚಿನ ತೆಂಡುಲಕರ, ವಿರಾಟ ಕೊಹಲಿ, ಅಜಯ ದೇವಗನ, ಅಕ್ಷಯಕುಮಾರ, ಕಂಗನಾ ರನೌತ ಈ ಮಂಡಳಿಯ ಹಿಂದೆ ಬಿದ್ದಿದೆ. ಈಗ ಈ ಮೇಲಿನ ವ್ಯಕ್ತಿಗಳು ಇತರರ ಆಗ್ರಹದಿಂದೇನಾದರೂ ‘ಟ್ವಿಟ್’ ಮಾಡಿದರೇನು ? ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುವವರಿದ್ದಾರೆ ! ಮಹಾರಾಷ್ಟ್ರ ಆಡಳಿತಕ್ಕೆ ಈ ವ್ಯಕ್ತಿಗಳ ವಯಸ್ಸು, ಕೀರ್ತಿ, ದೇಶಕ್ಕಾಗಿ ಅವರು ಮಾಡಿದ ಯೋಗದಾನ ಮರೆತು ಹೊಯಿತೇನು ? ಎಂಬ ಸಂದೇಹ ಮೂಡುತ್ತಿದೆ.

೫. ಕೇಂದ್ರ ಸರಕಾರದ ಸೌಮ್ಯ ನಿಲುವಿನಿಂದಾಗಿ ದೇಶವಿರೋಧಿ ಶಕ್ತಿಗಳು ಆಂದೋಲನದ ಮಾಧ್ಯಮದಿಂದ ಹಿಂಸಾಚಾರ ಮಾಡುವುದು

ಗುಪ್ತಚರ ಇಲಾಖೆಯವರು ಮೊದಲಿನಿಂದಲೇ ‘ರೈತರ ಆಂದೋಲನದ ಹಿಂದೆ ಪರಕೀಯ ಶಕ್ತಿಗಳು ಮತ್ತು ಖಲಿಸ್ತಾನ ವಾದಿಗಳಿದ್ದಾರೆ. ಆದ್ದರಿಂದ ಈ ಆಂದೋಲನದಲ್ಲಿ ದೊಡ್ಡ ಹಿಂಸಾಚಾರವಾಗಬಹುದು’, ಎಂಬ ಭೀತಿ ವ್ಯಕ್ತಪಡಿಸಿದ್ದರು. ಇಂತಹ ಸಮಯದಲ್ಲಿ ಕೇಂದ್ರ ಸರಕಾರವು ಕಠೋರ ಕಾರ್ಯಾಚರಣೆಯನ್ನು ಮಾಡಿ ದೇಶವಿರೋಧಿ ಶಕ್ತಿಗಳನ್ನು ಪರಾಭವಗೊಳಿಸಲು ಪ್ರಯತ್ನಿಸಬೇಕಾಗಿತ್ತು; ಆದರೆ ಶಾಹೀನಬಾಗ್ ಇರಲಿ ಅಥವಾ ರೈತರ ಆಂದೋಲನವಿರಲಿ, ಇವೆರಡೂ ಸಮಯದಲ್ಲಿ ಸರಕಾರದ ಕಾರ್ಯನೀತಿ ಅತ್ಯಂತ ಸೌಮ್ಯವಾಗಿತ್ತು. ಭಾರತ ಸರಕಾರವು ಈ ೬ ವರ್ಷಗಳಲ್ಲಿ ದೇಶವಿರೋಧಿ ಶಕ್ತಿಗಳಿಗೆ ಭಾರತದ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ಈಗ ಭಾರತದೊಂದಿಗೆ ನೇರ ಯುದ್ಧವನ್ನು ಮಾಡುವುದು ಸುಲಭವಲ್ಲ ಎಂದು ಜಗತ್ತಿಗೆ ತಿಳಿದಿದೆ. ಆದ್ದರಿಂದ ‘ಇಂತಹ ಆಂದೋಲನಗಳ ಮಾಧ್ಯಮಗಳಿಂದ ಭಾರತವಿರೋಧಿ ಹಿತವನ್ನು ಸಾಧಿಸಿಕೊಳ್ಳಬೇಕು’, ಎಂದು ಈ ಶಕ್ತಿಗಳ ಒಳಸಂಚಾಗಿದೆ. ‘ಈ ಒಳಸಂಚುಗಳು ಈ ಎರಡೂ ಆಂದೋಲನಗಳಲ್ಲಿ ಯಶಸ್ವಿಯಾದವು’, ಎಂದು ದುಃಖದಿಂದ ಹೇಳಬೇಕಾಗುತ್ತದೆ.

೬. ಕೃಷಿ ಕಾಯದೆಗಳನ್ನು ಸ್ಥಗಿತಗೊಳಿಸಿರುವಾಗ ಆಂದೋಲನ ಏತಕ್ಕಾಗಿ ?

ಆಂದೋಲನವನ್ನು ಹೆಚ್ಚಿಸುವಲ್ಲಿ  ಮಹತ್ವದ ಸಹಭಾಗವಿರುವ ಪಂಜಾಬಿ ನಟ ದೀಪ ಸಿದ್ಧೂ ಇವನನ್ನು ಪೊಲೀಸರು ಬಂಧಿಸಿದ್ದಾರೆ. ‘ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು’, ಎಂದು ಸಮಸ್ತ ಭಾರತಿಯರಿಗೆ ಅನಿಸುತ್ತದೆ. ರೈತರ ಆಂದೋಲನದ ಪ್ರಕರಣದಲ್ಲಿ ರಾಜ್ಯಸಭೆಯಲ್ಲಿ ಗೊಂದಲವನ್ನುಂಟು ಮಾಡಿದ ಆಮ ಆದಮಿ ಪಕ್ಷದ ೩ ಮಂದಿ ಸಂಸದರನ್ನು ಒಂದು ದಿನಕ್ಕಾಗಿ ಅಮಾನತುಗೊಳಿಸಲಾಗಿತ್ತು. ‘೪೦ ಲಕ್ಷ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ದೇಶದಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ಮಾಡುತ್ತೇನೆ’, ‘ಪ್ರತಿಯೊಂದು ರಾಜ್ಯದಲ್ಲಿ ಆಂದೋಲನ ಮಾಡುತ್ತೇನೆ’, ಎಂದು ಆಂದೋಲನದ ಪ್ರಮುಖರಾದ ರಾಕೇಶ ಟಿಕೈತ ಇವರು ಕೇಂದ್ರ ಸರಕಾರಕ್ಕೆ ಬೆದರಿಕೆಯೊಡ್ಡಿದ್ದರು. ‘ಈ ಕಾನೂನುಗಳನ್ನು ಸ್ಥಗಿತಗೊಳಿಸಿರುವಾಗ ಆಂದೋಲನ ಯಾವ ಕಾರಣಕ್ಕಾಗಿ ಮುಂದುವರಿದಿದೆ ?’, ಎಂಬ ಪ್ರಶ್ನೆ ಸರ್ವಸಾಮಾನ್ಯರಲ್ಲಿ ಮೂಡಿದೆ.

೭. ದೇಶದ ಆಂತರಿಕ ಸುರಕ್ಷೆಯ ದೃಷ್ಟಿಯಿಂದ ಹಾನಿಕರವಾದಂತಹ ಆಂದೋಲನಗಳನ್ನು ಸರಕಾರವು ಕಠೋರವಾಗಿ ಸದೆಬಡಿಯಬೇಕು !

೭ ಅ. ಕೃಷಿ ಕಾಯದೆಗಳ ವಿಷಯದ ಆಲಿಕೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲವು ತಿಂಗಳುಗಳಿಂದ ನಡೆದಿದೆ. ನ್ಯಾಯಾಲಯದಲ್ಲಿ ಆಂದೋಲನಕಾರರ ಸಹಕಾರ ಸಿಗುವುದಿಲ್ಲ, ಹಾಗೆಯೇ ಅವರು ಪ್ರತಿವಾದಿಯಾಗಲೂ ತಯಾರಿಲ್ಲ. ಅವರು ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಕೇಂದ್ರ ಸರಕಾರವು ಚರ್ಚೆಯನ್ನು ಮಾಡುತ್ತಿತ್ತು ಮತ್ತು ನ್ಯಾಯಾಲಯದಲ್ಲಿ ತನ್ನ ಪಕ್ಷವನ್ನು ಸಹ ಬದಿಯನ್ನೂ ಮಂಡಿಸುತ್ತಿತ್ತು. ‘ಪ್ರತಿದಿನ ಈ ವಿಷಯವನ್ನು ಆಲಿಸಿ ಇದನ್ನು ಆದಷ್ಟು ಬೇಗ ಕೊನೆಗೊಳಿಸಬೇಕು’, ಎಂದು ಕೇಂದ್ರ ಸರಕಾರದ ನಿಲುವಾಗಿತ್ತು. ೧೧.೧.೨೦೨೧ ರಂದು ಆಲಿಕೆಯ ಸಮಯದಲ್ಲಿ ‘ಈ ಆಂದೋಲನವು ಶಾಹಿನಬಾಗ್‌ದಂತೆ ಆಗುವುದು’, ಈ ರೀತಿ ಕೆಲವರು ಭವಿಷ್ಯ ನುಡಿದಿದ್ದರು. ವಾಸ್ತವದಲ್ಲಿ ನ್ಯಾಯಾಲಯವು ಹೇಳಿದ ನಂತರ ಸರಕಾರವು ಈ ಕಾಯದೆಗಳಿಗೆ ತಡೆ ನೀಡಿದೆ. ಅದರ ನಂತರ ಈ ವಿಷಯವು ಕೊನೆಗೊಳ್ಳಬೇಕಿತ್ತು; ಆದರೆ ಈ ರೀತಿ ಆಗುವುದು ಕಂಡು ಬರುತ್ತಿಲ್ಲ.

೭ ಆ. ೧೩.೦೧.೨೦೨೧ ಈ ದಿನದಂದು ಆಲಿಕೆಯ ಸಮಯದಲ್ಲಿ ನ್ಯಾಯಾಲಯವು, ‘ನಮ್ಮ ಸಹನಶಕ್ತಿಯ ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳಬೇಡಿ’, ಎಂದು ಹೇಳಿತ್ತು. ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ದ ರಾಷ್ಟ್ರೀಯ ಅಧ್ಯಕ್ಷ ಮಾನನ ಕುಮಾರ ಮಿಶ್ರಾ ಇವರು, ‘ಕಾಯದೆಗೆ ತಡೆಯಾಜ್ಞೆಯನ್ನು ನೀಡಿದ ನಂತರ ಶೇ. ೯೦ ರಷ್ಟು ರೈತರು ಈ ಆಂದೋಲನವನ್ನು ಮುಂದುವರಿಸಬಾರದು, ಎಂಬ ವಿಚಾರದವರಾಗಿದ್ದಾರೆ’, ಎಂದು ಹೇಳಿದರು. ಹೀಗಿದ್ದರೆ, ಪ್ರಾಮಾಣಿಕ, ವಿವೇಕವಾದಿ ಮತ್ತು ತಿಳುವಳಿಕೆಯುಳ್ಳ ವ್ಯಕ್ತಿಗಳು ಮುಂದೆ ಬಂದು ಈ ಆಂದೋಲನವನ್ನು ನಿಲ್ಲಿಸಲು ಆಂದೋಲನಕಾರರಿಗೆ ಹೇಳಬೇಕು, ಅದರಿಂದ ಜನರ ತೊಂದರೆಗಳು ಕಡಿಮೆಯಾಗುವವು. ಇಂದು ೭೦ ದಿನಗಳು ಕಳೆದ ನಂತರವೂ ಈ ಆಂದೋಲನವನ್ನು ಬೇಕೆಂದೇ ಮುಂದುವರಿಸಲಾಗಿದೆ. ‘ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷೆಯ ದೃಷ್ಟಿಯಿಂದ ಇಂತಹ ಆಂದೋಲನಗಳನ್ನು ಕಠೋರವಾಗಿ ಕೊನೆಗಾಣಿಸಬೇಕು’, ಎಂದು ಜನತೆಗೆ ಅನಿಸಿದರೆ ಅದರಲ್ಲಿ ತಪ್ಪೇನಿದೆ ? ಹಿಂದೂ ರಾಷ್ಟ್ರದಲ್ಲಿ ಇಂತಹ ಅನುಚಿತ ಘಟನೆಗಳು ನಡೆಯಲಾರವು. ಆದುದರಿಂದ ಹಿಂದೂ ರಾಷ್ಟ್ರವು ಬೇಗನೆ ಸ್ಥಾಪನೆಯಾಗು ವುದು ಆವಶ್ಯಕವಾಗಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ.