ಪ್ರವಾಸೋದ್ಯಮದಿಂದ ಸಂಸ್ಕೃತಿಯ ವಿಕಾಸ ಮಾಡುವುದು, ಇದು ರಾಷ್ಟ್ರೀಯ ನಿಲುವನ್ನು ಅವಲಂಬಿಸಿದೆ

ಪ್ರವಾಸೋದ್ಯಮದಿಂದ ಸಂಸ್ಕೃತಿಯ ವಿಕಾಸವಾಗುತ್ತದೆ. ವಿದೇಶಗಳಲ್ಲಿ ಹೊಸ ಹೊಸ ಜನರಿಗೆ ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯವಾಗುತ್ತದೆ. ಅವರ ಮನಸ್ಸಿನ ಮೇಲೆ ನಮ್ಮ ಸಂಸ್ಕೃತಿಯ ಮೌಲ್ಯಗಳ ಸಂಸ್ಕಾರವಾಗಲು ಸಹಾಯವಾಗುತ್ತದೆ ಮತ್ತು ಈ ಮೂಲಕ ಅವರಿಗೆ ಯೋಗ್ಯ ಪ್ರೇರಣೆ ಸಿಗುವ ಅವಕಾಶವೂ ಪ್ರಾಪ್ತವಾಗುತ್ತದೆ. ಇದೇ ಮಾಧ್ಯಮದಿಂದ ವಿದೇಶಗಳಲ್ಲಿನ ಜನರ ಸಂಸ್ಕೃತಿಯು ನಮ್ಮಲ್ಲಿ ಬರುತ್ತದೆ. ಹಾಗೆಯೇ ನಮ್ಮ ಜೊತೆಗಿನ ಅವರ ಸಂಬಂಧ ಸುಧಾರಿಸುತ್ತದೆ. ಅವರ ಮುಖಾಂತರ ನಮ್ಮ ಸಂಸ್ಕೃತಿಯು ಅವರ ದೇಶಗಳಿಗೆ ಹೋಗುತ್ತದೆ; ಆದರೆ ಈ ಸಂದರ್ಭದಲ್ಲಿ ನಾವು ಗಂಭೀರವಾಗಿ ವಿಚಾರ ಮಾಡದಿದ್ದರೆ ಪ್ರವಾಸೋದ್ಯಮದಿಂದ ನಮ್ಮ ಸಂಸ್ಕೃತಿ, ನಮ್ಮ ಸಂಸ್ಕಾರಗಳು ಸಹಜವಾಗಿ ಪಾಶ್ಚಾತ್ಯರಿಂದ ವಿಕೃತವಾಗಬಹುದು ಹಾಗೂ ನಮ್ಮ ಪ್ರಾಚೀನ ಅಮೂಲ್ಯ ಆಸ್ತಿಯು ನಾಶವಾಗಬಹುದು. ಇದರ ಕಡೆಗೆ ಸರಿಯಾಗಿ ಗಮನವಿಟ್ಟರೆ ಮಾತ್ರ ಈ ಪ್ರರ್ಯಟನೆಯು ನಮ್ಮ ಶ್ರೇಷ್ಠ ಸಂಸ್ಕೃತಿಯ ಪಾಠಶಾಲೆಯಾಗಬಹುದು, ಸಂಸ್ಕಾರದ ದೀಕ್ಷಾಕೇಂದ್ರವಾಗಬಹುದು. ಇದನ್ನು ನಾವು ಹೇಗೆ ಹಾಗೂ ಯಾವಾಗ ಉಪಯೋಗ ಮಾಡಿಕೊಳ್ಳಬಹುದು ? ಎಂಬುದನ್ನು ನೋಡುವುದು ಬಹಳ ಆವಶ್ಯಕವಾಗಿದೆ. ಇದೆಲ್ಲವು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ನಿಲುವನ್ನು ಅವಲಂಬಿಸಿದೆ. (ಆಧಾರ : ಮಾಸಿಕ ಅಖಂಡ ಜ್ಯೋತಿ, ಸಪ್ಟೆಂಬರ್ ೨೦೧೨)