‘ಕೆಲವು ಸಂತರು, ಕೆಲವೊಮ್ಮೆ ಸಾಧಕರಿಗೆ ಯಾವುದಾದರೊಂದು ನಾಮಜಪವನ್ನು ಕೆಲವು ಲಕ್ಷಗಳಿಂದ ಕೆಲವು ಕೋಟಿಗಳಷ್ಟು ಮಾಡಲು ಹೇಳುತ್ತಾರೆ. ಆಗ ನನಗೆ ‘ಇಷ್ಟೊಂದು ಜಪವನ್ನು ಅವರು ಹೇಗೆ ಎಣಿಸುತ್ತಾರೆ ? ಎಂಬ ಪ್ರಶ್ನೆ ಬರುತ್ತಿತ್ತು, ನಾನು ಪ. ಪೂ. ರಘುವೀರ ಮಹಾರಾಜರಲ್ಲಿ (ಪ.ಪೂ. ದಾಸ ಮಹಾರಾಜರಲ್ಲಿ) ಈ ಪ್ರಶ್ನೆಯನ್ನು ಕೇಳಿದೆ, ಆಗ ಪ.ಪೂ. ಮಹಾರಾಜರು ಲಕ್ಷಗಟ್ಟಲೆ ಜಪ ಮಾಡಲು ೧ ಸಾವಿರ ಮಣಿಗಳ ಜಪಮಾಲೆ ಬಳಸುತ್ತಾರೆ. ಆ ಜಪಮಾಲೆಯಿಂದ ಪ್ರತಿದಿನ ೧೦ ಮಾಲೆ ಜಪ ಮಾಡಿದರೆ ದಿನಕ್ಕೆ ೧೦,೦೦೦ ಜಪ, ಒಂದು ತಿಂಗಳಿಗೆ ೩ ಲಕ್ಷ ಜಪ ಮತ್ತು ಒಂದು ವರ್ಷಕ್ಕೆ ೩೬ ಲಕ್ಷ ೫೦ ಸಾವಿರ ಜಪವಾಗುತ್ತದೆ. ಈ ರೀತಿ ಎಣಿಸಬಹುದು, ಎಂದು ಹೇಳಿದರು. – (ಪರಾತ್ಪರ ಗುರು) ಡಾ. ಆಠವಲೆ