ಭಾರತದಲ್ಲಿ ಬಹುಸಂಖ್ಯಾತರಾಗಿರುವ ಹಿಂದೂ ಸಮಾಜದ ವಿಚಾರ ಮಾಡಿದರೆ ನಮ್ಮ ಬಳಿ #HinduLivesmatter ಹೆಸರಿನಲ್ಲಿ ಚಳುವಳಿ, ಆಂದೋಲನ, ಆನ್‌ಲೈನ್ ಅಭಿಯಾನಗಳನ್ನು ಕೈಕೊಳ್ಳಬೇಕಾಗುತ್ತದೆ. ಲವ್‌ಜಿಹಾದ್, ಗೋಹತ್ಯೆ, ಹಿಂದೂಗಳ ಮಂದಿರಗಳ ಧ್ವಂಸ, ಹಿಂದೂ ಮುಖಂಡರ ಅಥವಾ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲಾಗುವ ಆಕ್ರಮಣಗಳು ಮತ್ತು ಹತ್ಯೆಗಳು ಅಕ್ಷರಶಃ ವಿಪತ್ತನ್ನು ತಂದೊಡ್ಡಿದೆ. ‘ಶಾರ್ಟ ಟರ್ಮ ಮೆಮೊರಿ ಲಾಸ್ರೋಗದಿಂದ ಬಳಲುತ್ತಿರುವ ಹಿಂದೂ ಸಮಾಜವು ಕಮಲೇಶ ತಿವಾರಿ, ಪಾಲಘರನಲ್ಲಿ ಜರುಗಿದ ಹಿಂದೂ ಸಾಧುಗಳ ಹತ್ಯೆ ಮುಂತಾದವನ್ನು ಬಹುತೇಕವಾಗಿ ಮರೆತೂ ಹೋಗಿರಬಹುದು; ಆದರೆ ರಿಂಕೂ ಶರ್ಮಾ ಇವಳ ಉದಾಹರಣೆ ಸದ್ಯಕ್ಕಂತೂ ಎಲ್ಲರ ಸ್ಮರಣೆಯಲ್ಲಿದೆಯೆನ್ನಬಹುದು. ಅರ್ಥಾತ್ ಹಿಂದೂಗಳ ನಿರುಪದ್ರವಿ (ಸಾತ್ವಿಕ) ವಿಚಾರಸರಣಿಯಿಂದ ಅವರು ಯಾವಾಗಲೂ ಎಲ್ಲ ಸ್ತರದಲ್ಲಿಯೂ ಹೊಡೆತ ತಿನ್ನುತ್ತ ಬಂದಿದ್ದಾರೆ. ಈಗ ಮಾತ್ರ ಹಿಂದೂಗಳು ಈ ಆತ್ಮಘಾತುಕ ದುರ್ಗುಣಗಳ ವಿರುದ್ಧ ಹೋರಾಡಬೇಕಾಗಿದೆ. ಮುಂದಿನ ೨ ತಿಂಗಳುಗಳಲ್ಲಿ ಜರುಗಲಿರುವ ಬಂಗಾಲ, ಆಸ್ಸಾಂ ಮತ್ತು ಕೇರಳದ ಚುನಾವಣೆಯ ವಿಚಾರವನ್ನು ಮಾಡಿದರೆ ಇದು ಅತ್ಯಂತ ಅವಶ್ಯಕವಾಗಿದೆ. ಹಿಂದೂಗಳಿಗೆ ಅತ್ಯಧಿಕ ಅಸುರಕ್ಷಿತವಾಗಿರುವ ರಾಜ್ಯಗಳಲ್ಲಿ ಈ ಮೂರು ರಾಜ್ಯಗಳು ಮುಂಚೂಣಿಯಲ್ಲಿವೆಯೆಂದು ಹೇಳಬಹುದಾಗಿದೆ. ಮೂರೂ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳು ಪ್ರತ್ಯೇಕವಾಗಿದ್ದರೂ, ಅಲ್ಲಿರುವ ಸಮಾನತೆಯೆಂದರೆ ಬಹುಸಂಖ್ಯಾತರ ಸಂಸ್ಕೃತಿಯನ್ನು ನಾಶಗೊಳಿಸುವ ದೃಷ್ಟಿಯಿಂದ ನಡೆಯುತ್ತಿರುವ ರಾಜಕೀಯ ಮತ್ತು ಅರಾಜಕೀಯ ಷಡ್ಯಂತ್ರಗಳು.
ಬಂಗಾಲಿ ಹಿಂದೂಗಳ ಭವಿಷ್ಯ !
ಬಂಗಾಲದ ವಿಚಾರ ಮಾಡಿದರೆ ಕೇವಲ ೩೪ ವರ್ಷಗಳು ಅಂದರೆ ವರ್ಷ ೨೦೧೧ ರ ವರೆಗೆ ‘ಸಾಮ್ಯವಾದದ ಭದ್ರಕೋಟೆಯೆಂದು ಗುರುತಿಸಲ್ಪಡುತ್ತಿದ್ದ ಬಂಗಾಲದಲ್ಲಿ ಮತಾಂಧರಿಗೆ ಯಾವಾಗಲೂ ಯಾವುದೇ ಕಟ್ಟುಪಾಡುಗಳಿಲ್ಲದೇ ಮುಕ್ತತೆಯನ್ನು ನೀಡಲಾಗಿದೆ. ಅಲ್ಪಸಂಖ್ಯಾತರ ಅತಿರೇಕದ ಓಲೈಸುವಿಕೆಯ ಆದರ್ಶ ಉದಾಹರಣೆಯೆಂದರೆ ಬಂಗಾಲ ಎಂದು ಯಾರಾದರೂ ಹೇಳಿದರೆ ಅತಿಶಯೋಕ್ತಿಯೇನಲ್ಲ. ಬಂಗಾಲವು ಬಾಂಗ್ಲಾದೇಶದ ದಿಶೆಯಲ್ಲಿ ಮುಂದುವರಿಯುತ್ತಿರುವುದು ಈ ಶತಕದ ಮೊದಲನೇ ದಶಕದಲ್ಲಿಯೇ ಅನೇಕ ತಜ್ಞರ ತಂಡ ಹೇಳಿದೆ. ಮುರ್ಶಿದಾಬಾದ, ಉತ್ತರ ಮತ್ತು ದಕ್ಷಿಣ ೨೪ ಪರಗಣಾ, ವರ್ಧಮಾನ, ಉತ್ತರ ಮತ್ತು ದಕ್ಷಿಣ ದಿನಾಜಪೂರ, ಮಾಲದಾ ಇತ್ಯಾದಿ ಅನೇಕ ಬಂಗಾಳಿ ಜಿಲ್ಲೆಗಳು ಇಂದು ಮುಸಲ್ಮಾನ ಪ್ರಾಬಲ್ಯದ ಅರ್ಥಾತ್ ಬಾಂಗ್ಲಾದೇಶೀಯರ ಜನಸಂಖ್ಯೆ ಅಧಿಕವಿರುವ ಜಿಲ್ಲೆಗಳಾಗಿವೆ. ಇದರಿಂದ ಬಂಗಾಲದಲ್ಲಿರುವ ೨೯೪ರಲ್ಲಿ ಸುಮಾರು ೧೧೦ ಚುನಾವಣಾಕ್ಷೇತ್ರ್ರದಿಂದ ಯಾರು ಚುನಾಯಿತಗೊಳ್ಳುವರು ಎನ್ನುವುದು ಅಲ್ಲಿಯ ಶಾಂತಿಪ್ರಿಯ ಸಮಾಜ ನಿರ್ಧರಿಸುತ್ತದೆ. ೨೦೧೧ ನೇ ಇಸವಿಯಲ್ಲಿ ತೃಣಮೂಲ ಕಾಂಗ್ರೆಸ್ ಕೂಡ ಇದೇ ರಾಜಕಾರಣವನ್ನು ಮಾಡುತ್ತ, ಜಗತ್ತಿನಲ್ಲಿ ಅತ್ಯಧಿಕ ಅವಧಿಗೆ ಅಧಿಕಾರದಲ್ಲಿದ್ದ ಸಾಮ್ಯವಾದಿ ಪಕ್ಷದ ಸರಕಾರವನ್ನು ಮೂಲೆಗುಂಪು ಮಾಡಿತು. ಮಮತಾ ಬ್ಯಾನರ್ಜಿಯವರು ಸಾಮ್ಯವಾದಿಗಳ ನಡೆಯನ್ನೇ ಅನುಸರಿಸುತ್ತಾ ೧೦ ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವುದು ಮತ್ತು ಹಿಂದೂಗಳ ಪದ್ಧತಿ-ಪರಂಪರೆಯ ಮೇಲೆ ಗದಾಪ್ರಹಾರ ಮಾಡುವ ಅನೇಕ ನಿರ್ಣಯಗಳನ್ನು ತೆಗೆದುಕೊಂಡರು. ಯಾವ ರಾಜ್ಯ ಶಾರದೀಯ ನವರಾತ್ರಿಗೆ ಕಾಳಿಮಾತೆಯ ಪಾರಂಪರಿಕ ಪೂಜೆಗಾಗಿ ಜಗತ್ತಿನಲ್ಲಿ ಜನಪ್ರಿಯವಾಗಿದೆಯೋ, ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದುರ್ಗಾಪೂಜೆಯನ್ನು ನಿಷೇಧಿಸಲಾಯಿತು. ಆರತಿಯನ್ನು ಹಾಡಲು ಪ್ರತಿಬಂಧಿಸಲಾಯಿತು. ಇಷ್ಟೇ ಅಲ್ಲ ಅಲ್ಲಿಯ ಸಾಧಾರಣ ಹಿಂದೂಗಳು, ಪೊಲೀಸರು, ಸರಕಾರ ಮತ್ತು ಪ್ರಮುಖವಾಗಿ ಹಿಂದುತ್ವನಿಷ್ಠ ಮುಖಂಡರು ಹಾಗೂ ಕಾರ್ಯಕರ್ತರು ಅತ್ಯಧಿಕ ಅಸುರಕ್ಷಿತರಾಗುತ್ತಿರುವ ಅನೇಕ ಘಟನೆಗಳು ಆಗಾಗ ಜರುಗಿವೆ. ‘ಯಥಾ ರಾಜಾ ತಥಾ ಪ್ರಜಾ ಅನುಗುಣವಾಗಿ ‘ವಂದೇ ಮಾತರಮ್ ಹೇಳಿದಾಗ ಹೊಟ್ಟೆನೋವಾಗುವ ಮಮತಾ(ಬಾನೊ) ಬ್ಯಾನರ್ಜಿಯವರ ರಾಜ್ಯದಲ್ಲಿ ಮತ್ತಿನ್ನೇನು ಜರುಗಬಹುದು? ಹೀಗಿದ್ದರೂ, ಬಿಹಾರದ ಗಡಿಯಂಚಿನಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಜಯಶಾಲಿಯಾಗಿರುವ ಓವೈಸಿಯವರ ಎಮ್‌ಐಎಮ್ ಪಕ್ಷವು ಈ ಬಾರಿ ಬಂಗಾಲ ಚುನಾವಣೆ ಕಣಕ್ಕೆ ಸಂಪೂರ್ಣ ಶಕ್ತಿಯೊಂದಿಗೆ ಧುಮುಕಿರುವುದು ‘ಬಂಗಾಲಿ ಮುಸಲ್ಮಾನರ ರಕ್ಷಕ ಎಂದು ಹೆಸರುಗಳಿಸಿರುವ ಮಮತಾರವರ ಕಾಲಕೆಳಗಿನ ನೆಲ ಕುಸಿಯುತ್ತಿದೆ. ಈ ಕಾರಣದಿಂದ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಬಂಗಾಲದಲ್ಲಿ ಹೆಚ್ಚಿನ ಯಶಸ್ಸುಗಳಿಸಿರುವ ಮತ್ತು ಹಿಂದುತ್ವನಿಷ್ಠರೆಂದು ಹೇಳಿಕೊಳ್ಳುವ ಭಾಜಪಕ್ಕೆ ಬಂಗಾಲದಲ್ಲಿ ಪ್ರಥಮಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಅವಕಾಶವಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲವೆಂದು ರಾಜಕೀಯವಲಯದಲ್ಲಿ ಚರ್ಚೆಯಲ್ಲಿದೆ. ಏನೇ ಆದರೂ ಚುನಾವಣೆಯ ಈ ರಣಾಂಗಣದಲ್ಲಿ ಹಿಂದೂಗಳು ತಮ್ಮ ಒಗ್ಗಟ್ಟಿನ ಮತವನ್ನು ಹಿಂದೂಗಳ ಹಿತವನ್ನು ಕಾಪಾಡುವಂತಹ ಪಕ್ಷಕ್ಕೆ ನೀಡುವ ಸಂಘಟಿತ ಕಾರ್ಯವನ್ನು ಮಾಡಬೇಕು.
ಅಸ್ಸಾಮಿ ಸಂಸ್ಕೃತಿಯ ರಕ್ಷಣೆ !
ಪೂರ್ವೋತ್ತರ ಭಾರತದಲ್ಲಿ ಮುಖ್ಯ ರಾಜ್ಯವಾಗಿರುವ ಆಸ್ಸಾಮಿನ ವಿಚಾರವನ್ನು ಮಾಡಿದರೆ, ಅಲ್ಲಿ ಕಳೆದ ೫ ವರ್ಷಗಳಿಂದ ಭಾಜಪ, ಆಸ್ಸಾಂ ಗಣ ಪರಿಷತ್ ಮತ್ತು ‘ಬೊಡೊಲ್ಯಾಂಡ ಪೀಪಲ್ಸ್ ಫ್ರಂಟ ಇವುಗಳ ಸಂಯುಕ್ತ ಆಡಳಿತವಿದೆ. ಸರ್ವಾನಂದ ಸೊನೊವಾಲ ಇವರ ಮುಖಂಡತ್ವದಲ್ಲಿ ಈ ರಾಜ್ಯದಲ್ಲಿ ಅಲ್ಲಿಯ ಮೂಲನಿವಾಸಿ ಅಂದರೆ ಆಸ್ಸಾಮಿ ಹಿಂದೂಗಳ ರಕ್ಷಣೆಗಾಗಿ ರಾಜ್ಯಮಟ್ಟದಲ್ಲಿ ಅನೇಕ ದಶಕಗಳಿಂದ ತಡೆಹಿಡಿಯಲ್ಪಟ್ಟ ‘ಎನ್.ಆರ್.ಸಿ (ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕ್ರಿಯೆ) ಪ್ರಾರಂಭಿಸಲಾಯಿತು. ಅಸಮಿಯಾ ಸಂಸ್ಕೃತಿಯ ರಕ್ಷಣೆಗಾಗಿ ಕೈಗೆತ್ತಿಕೊಂಡಿರುವ ಕಾರ್ಯಗಳು ಪ್ರಶಂಸನೀಯವಾಗಿದ್ದರೂ, ಸದ್ಯ ಸೊನೊವಾಲ ಮತ್ತು ಆ ರಾಜ್ಯದ ಹಣಕಾಸು ಮಂತ್ರಿ ಹಿಮಾಂತಾ ಬಿಸ್ವ ಸರ್ಮಾ ಇವರ ಮೇಲೆ ಭ್ರಷ್ಟಾಚಾರದ ಆರೋಪಗಳಾಗುತ್ತಿವೆ. ಇನ್ನೊಂದೆಡೆ ಬದ್ರುದ್ದೀನ ಅಜಮಲ್ ಇವರ ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರನ್ನು ಸಮರ್ಥಿಸುವ ‘ಎ.ಐ.ಯೂ.ಡಿ.ಎಫ್ ಪಕ್ಷ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ. ಒಟ್ಟಾರೆ, ಈಗಲೂ ಆಸ್ಸಾಮಿನ ತಲೆನೋವಾಗಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಅಲ್ಲಿಂದ ಹೊರಗಟ್ಟಲು ಹಾಗೂ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡಲು ಹಿಂದೂಗಳು ಹಿಂದುತ್ವದ ಪರವಾಗಿ ಇರುವವರಿಗೆ ಮತ ನೀಡುವುದು ಒಳ್ಳೆಯದು; ಕಾರಣ ಮತಾಂಧಪ್ರೇಮಿ ಕಾಂಗ್ರೆಸ್ಸಿಗೆ ಮತ ನೀಡುವುದೆಂದರೆ ಆಸ್ಸಾಮಿನ ದೈನ್ಯಾವಸ್ಥೆಗೆ ಆಮಂತ್ರಣ ನೀಡಿದಂತೆ ಮತ್ತು ಹಿಂದೂಗಳಿಗೆ ಆತ್ಮಘಾತುಕವಾಗಿದೆಯೆಂದು ನಾವು ಮರೆಯಬಾರದು.
ಕೇರಳದ ಭಗವಾ ?
ಕಮ್ಯುನಿಸ್ಟ ಪಕ್ಷವಾಗಿರುವ ‘Let Democratic Front (LDF)‘ ಇವರೇ ಇಲ್ಲಿಯವರೆಗೆ ಅಧಿಕಾರವನ್ನು ನಡೆಸಿದ್ದಾರೆ. ಎಡಪಂಥೀಯರ ಆಕ್ರಮಣದಲ್ಲಿ ಮೇಲಿಂದ ಮೇಲೆ ನಡೆದಿರುವ ಭಾಜಪದ ಕಾರ್ಯಕರ್ತರು ಮತ್ತು ಸಂಘದ ಸ್ವಯಂಸೇವಕರ ಮೇಲೆ ಹತ್ಯೆ ಇವುಗಳಿಂದ ಕೇರಳದ ರಾಜಕಾರಣ ಯಾವಾಗಲೂ ರಕ್ತರಂಜಿತವಾಗಿಯೇ ಉಳಿದಿದೆ. ಕಳೆದ ೫ ವರ್ಷಗಳ ವಿಚಾರವನ್ನು ಮಾಡಿದರೆ ಅಲ್ಲಿಯ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರು ‘ಲವ್ ಜಿಹಾದ್ ಬಲೆಯಲ್ಲಿ ಸಿಲುಕಿರುವ ಅನೇಕ ಘಟನೆಗಳನ್ನು ಅನೇಕ ಪ್ರಮುಖ ಸುದ್ದಿವಾಹಿನಿಗಳು ಪ್ರಸಾರ ಮಾಡಲು ಪ್ರಾರಂಭಿಸಿದವು. ಪ್ರಗತಿಪರತೆಯ ಅಡಿಯಲ್ಲಿ ಮತ್ತು ‘ಸ್ತ್ರೀಸ್ವಾತಂತ್ರ್ಯದ ಸುಂದರ ಹೆಸರಿನಲ್ಲಿ ಇಲ್ಲಿಯ ಪ್ರಾಚೀನ ಶಬರಿಮಲೈ ಮಂದಿರದ ಪರಂಪರೆಯನ್ನು ಮುರಿಯುವ ಪ್ರಯತ್ನಗಳಿಗೆ ಸೆಡ್ಡು ಹೊಡೆದು ಕೇರಳದ ಹಿಂದೂ ಸಮಾಜವು ಮುನ್ನಡೆಸಿದ ಐತಿಹಾಸಿಕ ಸಂಘಟನೆಯು ಅನೇಕರ ಬಾಯಲ್ಲಿ ಬೆರಳು ಕಚ್ಚುವಂತೆ ಮಾಡಿತು. ಒಂದು ಕಾಲದಲ್ಲಿ ‘ಲವ್ ಜಿಹಾದ್ ಎಂದರೆ ‘ಫ್ರಿಂಜ್ ಎಲಿಮೆಂಟ್ಸ್ ಮೂಲಕ (ಜನಮನ್ನಣೆಯಿಲ್ಲದವರ ಮೂಲಕ) ಮುಸಲ್ಮಾನ ದ್ವೇಷಿಗಳ ಅಪಪ್ರಚಾರ ಎಂದು ಹೀಯಾಳಿಸುವ ಕೇರಳದಲ್ಲಿ ಈಗ ಭಗವಾ ರಾರಾಜಿಸುತ್ತಿದೆ ಎಂದೂ ಹೇಳಬಹುದಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಜರುಗಿದ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಭಾಜಪಕ್ಕೆ ೨ ನಗರಪಾಲಿಕೆ ಮತ್ತು ೧೯ ಗ್ರಾಮಪಂಚಾಯತಿಯಲ್ಲಿ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಯಿತು. ಒಟ್ಟಾರೆ ವಾತಾವರಣವನ್ನು ನೋಡಿದರೆ ಕೇರಳದ ಹಿಂದೂಗಳಿಗೆ ಒಳ್ಳೆಯ ದಿನಗಳು ಬರಲಿವೆಯೆಂದು ಹೇಳಲು ತೊಂದರೆಯಿಲ್ಲ. ಒಟ್ಟಾರೆ ಪರಿಸ್ಥಿತಿಯನ್ನು ನೋಡಿದರೆ, ಈ ಮೂರು ರಾಜ್ಯದ ಹಿಂದೂಗಳು ಭಾರತೀಯತ್ವದ ರಕ್ಷಣೆಗಾಗಿ ತಮ್ಮ ಮತವನ್ನು ನೀಡುವುದು ಕಾಲದ ಅವಶ್ಯಕತೆಯಾಗಿದೆ. ಅದಕ್ಕಾಗಿ ಅವರು ಟೊಂಕಕಟ್ಟಿ ನಿಲ್ಲಬೇಕಾಗಿದೆ. ಇದು ಸತ್ಯ !