ಸೂರ್ಯ ನಮಸ್ಕಾರಗಳಿಂದಾಗುವ ಲಾಭ ಮತ್ತು ನಾಮಜಪ ಸಹಿತ ಮಾಡಿದ ಸೂರ್ಯ ನಮಸ್ಕಾರಗಳಿಂದ ಆಗುವ ಹೆಚ್ಚುವರಿ ಪರಿಣಾಮ !

ದೈನಂದಿನ ಆಚಾರಗಳಿಗೆ ಸಂಬಂಧಿಸಿದ ನಾವೀನ್ಯಪೂರ್ಣ ಸಂಶೋಧನೆಗಳನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಮಾಘ ಮಾಸದಲ್ಲಿ ಸೂರ್ಯೋದಯ ವ್ಯಾಪಿನಿ, ಶುಕ್ಲಸಪ್ತಮಿಯಂದು ರಥಸಪ್ತಮಿಯನ್ನು ಆಚರಿಸಲಾಗುತ್ತದೆ. ಸೂರ್ಯನಿಂದ ಆರೋಗ್ಯ ಪ್ರಾಪ್ತಿಯಾಗುವುದರಿಂದ ಈ ದಿನಕ್ಕೆ ಆರೋಗ್ಯ ಸಪ್ತಮಿ ಎಂದೂ ಹೇಳುತ್ತಾರೆ. ಈ ದಿನದಂದು ರಥದಲ್ಲಿ ಆರೂಢನಾಗಿರುವ ಸೂರ್ಯನನ್ನು ಪೂಜಿಸಿ ಸೂರ್ಯ ನಮಸ್ಕಾರಗಳನ್ನು ಹಾಕುತ್ತಾರೆ. ಈ ದಿನಕ್ಕೆ ಜಾಗತಿಕ ಸೂರ್ಯನಮಸ್ಕಾರ ದಿನವೆಂದೂ ಹೇಳುತ್ತಾರೆ. ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?, ಎನ್ನುವುದನ್ನು ವೈಜ್ಞಾನಿಕ ಪದ್ದತಿಯಿಂದ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ನಿಷ್ಕರ್ಷವನ್ನು ಮುಂದೆ ನೀಡಲಾಗಿದೆ.

೧. ಸೂರ್ಯನಮಸ್ಕಾರದ ಮಹತ್ವ

ಆದಿತ್ಯಸ್ಯ ನಮಸ್ಕಾರಂ ಯೆ ಕುರ್ವನ್ತಂತಿ ದಿನೇ ದಿನೇ |

ಜನ್ಮಾಂತರ ಸಹಸ್ತ್ರೇಷು ದಾರಿದ್ರ್ಯಂ ನೋಪಜಾಯತೆ ||

ಅರ್ಥ : ಯಾರು ಪ್ರತಿದಿನ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ, ಅವರಿಗೆ ಸಾವಿರಾರು ಜನ್ಮಗಳಲ್ಲಿ ದಾರಿದ್ರ್ಯ ಬರುವುದಿಲ್ಲ.

೨. ಸೂರ್ಯನಮಸ್ಕಾರಗಳನ್ನು ಮಾಡುವುದರಿಂದಾಗುವ ಲಾಭಗಳು

ಅ. ಎಲ್ಲ ಮಹತ್ವದ ಅವಯವಗಳಿಗೆ ರಕ್ತಪೂರೈಕೆ ಹೆಚ್ಚಾಗುತ್ತದೆ.

. ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.

ಇ. ಭುಜ ಮತ್ತು ಸೊಂಟದ ಸ್ನಾಯುಗಳು ಸುದೃಢವಾಗುತ್ತವೆ.

ಈ. ಬೆನ್ನೆಲುಬುಗಳು (ಕಶೇರುಕಾಸ್ಥಿಗಳು) ಮತ್ತು ಸೊಂಟ ಸಡಿಲಾಗುತ್ತದೆ.

ಉ. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿ ತೂಕ ಕಡಿಮೆಯಾಗಲು ಸಹಾಯಕವಾಗುತ್ತದೆ.

ಊ. ಪಚನಕ್ರಿಯೆ ಸುಧಾರಿಸುತ್ತದೆ.

. ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ.

೩. ಸೂರ್ಯನ ಹೆಸರನ್ನು ಹೇಳದೇ ಮತ್ತು ಸೂರ್ಯನ ಹೆಸರನ್ನು ಹೇಳಿ ಮಾಡಿದ ಸೂರ್ಯನಮಸ್ಕಾರಗಳಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲಾಗುವ ಪರಿಣಾಮವನ್ನು ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್) ಉಪಕರಣದ ಮಾಧ್ಯಮದಿಂದ ಮಾಡಿದ ಅಧ್ಯಯನ

ವೈದ್ಯೆ (ಸೌ.) ನಂದಿನಿ ಸಾಮಂತ

ಈ ಅಧ್ಯಯನವನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀ ಹೀಗೆ ಇಬ್ಬರು ಸಾಧಕರ ಮೇಲೆ  ಮಾಡಲಾಯಿತು. ಇದಕ್ಕಾಗಿ ಮುಂದಿನಂತೆ ಪರೀಕ್ಷಣೆಯನ್ನು ಮಾಡಲಾಯಿತು.

ಅ. ಸೂರ್ಯನಮಸ್ಕಾರ ಹಾಕುವ ಮೊದಲು ಯೂ.ಎ.ಎಸ್. ಉಪಕರಣದ ಮೂಲಕ ಇಬ್ಬರೂ ಸಾಧಕರ ನಿರೀಕ್ಷಣೆಯನ್ನು ಮಾಡಲಾಯಿತು. ಇದು ಅವರ ಮೂಲ ಸ್ಥಿತಿಯ ನೋಂದಣಿಯಾಗಿದೆ.

ಆ. ತದನಂತರ ಇಬ್ಬರೂ ಸಾಧಕರ ಪ್ರತಿಯೊಬ್ಬರೂ ೧೨ ಸೂರ್ಯನಮಸ್ಕಾರಗಳನ್ನು ಸೂರ್ಯನ ಹೆಸರನ್ನು ಹೇಳದೇ ಮಾಡಿದ ಬಳಿಕ ಪುನಃ ಯು.ಎ.ಎಸ್. ಉಪಕರಣದ ಮೂಲಕ ಅವರ ನಿರೀಕ್ಷಣೆ ಮಾಡಲಾಯಿತು. ಈ ನಿರೀಕ್ಷಣೆಯಿಂದ ಅವರ ಮೇಲೆ ಸೂರ್ಯನ ಹೆಸರನ್ನು ಹೇಳದೇ ಸೂರ್ಯನಮಸ್ಕಾರಗಳನ್ನು ಮಾಡಿದಾಗ ಸೂಕ್ಷ್ಮ ಊರ್ಜೆಯ ಸ್ತರದಲ್ಲಿ ಆಗಿರುವ ಪರಿಣಾಮ ಗಮನಕ್ಕೆ ಬಂದಿತು.

. ಮರುದಿನ ಪುನಃ ಇಬ್ಬರೂ ಸಾಧಕರ ಮೂಲಸ್ಥಿತಿಯ ನೋಂದಣಿಯನ್ನು ಪಡೆದುಕೊಂಡ ಬಳಿಕ, ಅವರು ೧೨ ಸೂರ್ಯನ ಹೆಸರನ್ನು ಹೇಳುತ್ತ ಸೂರ್ಯನಮಸ್ಕಾರಗಳನ್ನು ಮಾಡಿದರು. ತದನಂತರ ಯು.ಎ.ಎಸ್. ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ಈ ನಿರೀಕ್ಷಣೆಯಿಂದ ಅವರ ಮೇಲೆ ಸೂರ್ಯನಮಸ್ಕಾರ ಸೂರ್ಯನ ಹೆಸರನ್ನು ಹೇಳುತ್ತಾ ಹಾಕಿದಾಗ ಸೂಕ್ಷ್ಮ ಊರ್ಜೆಯ ಸ್ತರದಲ್ಲಿ ಆಗಿರುವ ಪರಿಣಾಮ ಗಮನಕ್ಕೆ ಬಂದಿತು.

ಮೇಲಿನ ಪರೀಕ್ಷಣೆಯ ನಿರೀಕ್ಷಣೆಗಳು ಮುಂದಿನಂತೆ ಇದ್ದವು.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಸ್ಪಷ್ಟವಾಗುತ್ತವೆ

೧. ಪುರುಷ ಸಾಧಕನಲ್ಲಿ ಸೂರ್ಯನಮಸ್ಕಾರಗಳನ್ನು ಹಾಕುವ ಮೊದಲಿದ್ದ ನಕಾರಾತ್ಮಕ ಊರ್ಜೆಯು ಅವನು ಸೂರ್ಯನಮಸ್ಕಾರಗಳನ್ನು ಎರಡೂ ರೀತಿಯಲ್ಲಿ ಹಾಕಿದ ಬಳಿಕ ಇಲ್ಲವಾಯಿತು.

೨. ಪುರುಷ ಸಾಧಕನಲ್ಲಿ ಸೂರ್ಯನಮಸ್ಕಾರ ಹಾಕುವ ಮೊದಲಿದ್ದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಸೂರ್ಯನ ಹೆಸರನ್ನು ಹೇಳದೇ ಹಾಕಿದಾಗ ೨.೩೯ ಮೀಟರುಗಳಷ್ಟು, ಅಂದರೆ ಎರಡು ಪಟ್ಟುಗಳಿಗಿಂತ ಹೆಚ್ಚಾಯಿತು ಹಾಗೂ ಅವನು ಸೂರ್ಯನ ಹೆಸರನ್ನು ಹೇಳುತ್ತ ಹಾಕಿದಾಗ ೪.೧೭ ಮೀಟರುಗಳಷ್ಟು ಅಂದರೆ ಅದು ಇನ್ನೂ ಹೆಚ್ಚಾಯಿತು.

. ಸ್ತ್ರೀ ಸಾಧಕಿಯಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ. ಅವಳಲ್ಲಿ ಸೂರ್ಯನಮಸ್ಕಾರಗಳನ್ನು ಹಾಕುವ ಮೊದಲಿದ್ದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಸೂರ್ಯನ ಹೆಸರನ್ನು ಹೇಳದೆ ಹಾಕಿದಾಗ ೩.೦೫ ಮೀಟರುಗಳಷ್ಟು ಹೆಚ್ಚಾಯಿತು, ಅಂದರೆ ಎರಡು ಪಟ್ಟುಗಳಿಗಿಂತ ಹೆಚ್ಚಾಯಿತು. ಅವಳು ಸೂರ್ಯನಮಸ್ಕಾರಗಳನ್ನು ಸೂರ್ಯನ ಹೆಸರನ್ನು ಹೇಳುತ್ತ ಹಾಕಿದಾಗ ೪.೬೬ ಮೀಟರಗಳಷ್ಟು ಅಂದರೆ ಅದಕ್ಕಿಂತಲೂ ಹೆಚ್ಚಾಯಿತು.

೪. ಪರೀಕ್ಷಣೆಯ ನಿಷ್ಕರ್ಷ – ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ತುಂಬಾ ಲಾಭವಾಗುತ್ತದೆ ಮತ್ತು ಅದನ್ನು ನಾಮಜಪದೊಂದಿಗೆ ಮಾಡಿದರೆ ಇನ್ನೂ ಹೆಚ್ಚು ಲಾಭವಾಗುತ್ತದೆ : ಈ ಪರೀಕ್ಷಣೆಯಿಂದ ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ಸೂಕ್ಷ್ಮ ಊರ್ಜೆಯ ಸ್ತರದಲ್ಲಿ ಆಗುವ ಲಾಭ ಗಮನಕ್ಕೆ ಬಂದಿತು. ಈ ಲಾಭ ಸೂರ್ಯ ನಮಸ್ಕಾರಗಳನ್ನು ನಾಮಜಪದೊಂದಿಗೆ ಮಾಡಿದರೆ ಇನ್ನೂ ಹೆಚ್ಚಾಗುತ್ತದೆ ಎಂಬುದೂ ಗಮನಕ್ಕೆ ಬಂದಿತು. ಈ ಲಾಭವನ್ನು ನೋಡಿದರೆ ೫ ಸಾವಿರ ವರ್ಷಗಳ ಹಿಂದೆ ನಮ್ಮ ಋಷಿ-ಮುನಿಗಳು ಯಾವುದೇ ಬಾಹ್ಯ, ಸ್ಥೂಲ ಉಪಕರಣಗಳ ಆಧಾರವಿಲ್ಲದೇ ಅದ್ವಿತೀಯ ಯೋಗಾಸನಗಳನ್ನು ನಿರ್ಮಿಸಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಇವುಗಳಿಗೆ ಚೈತನ್ಯಮಯ ನಾಮಜಪವನ್ನು ಜೋಡಿಸಿದಾಗ ಲಾಭದಲ್ಲಿ ಆಗುವ ಹೆಚ್ಚಳವನ್ನು ನೋಡಿದರೆ, ನಮ್ಮ ಋಷಿ-ಮುನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಬ್ದಗಳೇ ಸಾಲುವುದಿಲ್ಲ ಮತ್ತು ಅವರ ಚರಣಗಳಿಗೆ ಶಿರಬಾಗಿ ನಮಸ್ಕರಿಸಬೇಕೆನಿಸುತ್ತದೆ.

ಇಂದಿನ ಬಿಡುವಿಲ್ಲದ ಜೀವನದಲ್ಲಿ ಸೂರ್ಯನಮಸ್ಕಾರಗಳನ್ನು ಮಾಡುವುದು ಒಂದು ಉತ್ತಮ ಪರ್ಯಾಯವಾಗಿದೆ; ಏಕೆಂದರೆ ಒಂದು ಸೂರ್ಯ ನಮಸ್ಕಾರದಲ್ಲಿ ೧೨ ಯೋಗಾಸನಗಳು ಬರುತ್ತದೆ. ಈ ಪರೀಕ್ಷಣೆಯಿಂದ ನಾಮಜಪದೊಂದಿಗೆ ಯೋಗಾಸನಗಳನ್ನು ಹಾಕುವುದರಿಂದ ಆಗುವ ಲಾಭಗಳನ್ನು ಗಮನಿಸಿ ಸಾಧ್ಯವಾದಷ್ಟು ಅಧಿಕಾಧಿಕ ವ್ಯಕ್ತಿಗಳು ನಾಮಜಪದೊಂದಿಗೆ ತಮ್ಮ ದಿನಚರ್ಯೆಯಲ್ಲಿ ಅಳವಡಿಸಿಕೊಳ್ಳಲೆಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ. (೧೮.೬.೨೦೨೦)

– ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.