ಈ ಮೊದಲು ಪ್ರಕಟಿಸಿದ ಎರಡು ಭಾಗಗಳಲ್ಲಿ ಭಗವಂತನೊಂದಿಗೆ ಏಕರೂಪವಾಗಲು ಗುರುಗಳ ಆಜ್ಞೆಯನ್ನು ಪಾಲಿಸುವುದು, ನಗರವನ್ನು ಬಿಟ್ಟು ಗ್ರಾಮದ ಕಡೆಗೆ ಹೋಗುವುದರಿಂದ ಆಗುವ ವಿವಿಧ ಲಾಭಗಳು ಗಮನದಲ್ಲಿ ತೆಗೆದುಕೊಳ್ಳುವುದು, ‘ಆಪತ್ಕಾಲದ ನಂತರದ ಸ್ಥಿತಿಯು ಹೇಗಿರುವುದು ?’, ಎಂಬುದನ್ನು ಈಗ ಬುದ್ಧಿಯಿಂದ ಕಲ್ಪಿಸುವುದು ಅಸಾಧ್ಯವಾಗಿರುವುದರಿಂದ ವರ್ತಮಾನದಲ್ಲಿದ್ದೂ ಗುರುಗಳ ಆಜ್ಞೆಯನ್ನು ಪಾಲಿಸುವುದು ಅವಶ್ಯಕವಾಗಿರುವುದು ಮತ್ತು ಕಾಲಮಹಿಮೆಗನುಸಾರ ೧೯೯೯ ರಿಂದ ಸೂಕ್ಷ್ಮದಿಂದ ಆಪತ್ಕಾಲಕ್ಕೆ ಆರಂಭವಾಗಿರುವುದು ಮತ್ತು ಸಾಧಕರ ಎಲ್ಲ ತೊಂದರೆಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃದ ಮೇಲೆ ತೆಗೆದುಕೊಂಡಿರುವುದು ಇವುಗಳ ಕುರಿತು ಓದಿದೆವು. ಈ ಲೇಖನದ ಮುಂದಿನ ಕೊನೆಯ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.
(ಭಾಗ ೩)
೧. ‘ಮುಂಬರುವ ಆಪತ್ಕಾಲದಲ್ಲಿ ನಮ್ಮ ಗ್ರಾಮಸ್ಥಳಕ್ಕೆ ಹೋಗುವುದು ಏಕೆ ಅವಶ್ಯಕವಿದೆ ?’, ಎಂಬ ಕುರಿತು ಕಳುಹಿಸಿದ ಲೇಖನವು ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿದೆ’, ಎಂಬುದು ಗಮನಕ್ಕೆ ಬರುವುದು
‘ಪರಾತ್ಪರ ಗುರು ಡಾಕ್ಟರ್, ‘ಮುಂಬರುವ ಆಪತ್ಕಾಲದಲ್ಲಿ ನಮ್ಮ ಹಳ್ಳಿಗೆ ಹೋಗುವುದು ಏಕೆ ಅವಶ್ಯಕವಿದೆ ?’, ಎಂಬ ಕುರಿತು ಲೇಖನವನ್ನು ಕಳುಹಿಸಿದ ನಂತರ ನನಗೆ ಸೇವೆಯಿಂದ ಆನಂದವು ಸಿಗಲಿಲ್ಲ. ನನಗೆ ‘ಲೇಖನದಲ್ಲಿ ಏನಾದರೂ ಉಳಿದಿದೆ, ಏನಾದರೂ ತಪ್ಪಾಗಿದೆ’, ಎಂದೆನಿಸತೊಡಗಿತು. ಲೇಖನವನ್ನು ಪುನಃ ೨-೩ ಬಾರಿ ಓದಿದ ನಂತರ ನನಗೆ ‘ಎಲ್ಲ ಲೇಖನವು ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿದೆ’, ಎಂದೆನಿಸಿತು. ತಮ್ಮ ಕೃಪೆಯಿಂದಾಗಿಯೇ ನನಗೂ ಅರಿವಾಗಿದೆ. ಲೇಖನವನ್ನು ಓದುತ್ತಿರುವಾಗ, ‘ಸಾಧನೆಯ ದೃಷ್ಟಿಯಿಂದ ಯಾವಾಗಲೂ ಆಧ್ಯಾತ್ಮಿಕ ಸ್ತರದಲ್ಲಿರಬೇಕು. ಮಾನಸಿಕ ಅಥವಾ ಬೌದ್ಧಿಕ ಸ್ತರದಲ್ಲಿ ದೃಷ್ಟಿಕೋನವನ್ನಿಟ್ಟರೆ ಎದುರಿಗೆ ಇರುವ ವ್ಯಕ್ತಿಯ ಮನಸ್ಸು ಮತ್ತು ಅಹಂಗೆ ನೋವಾಗುವ ಸಾಧ್ಯತೆಯಿದೆ’ ಎಂಬ ತಮ್ಮ ಮಾರ್ಗದರ್ಶನದ ಒಂದು ವಾಕ್ಯದ ನೆನಪಾಯಿತು. ಕಳುಹಿಸಿದ ಲೇಖನದಲ್ಲಿ ಇದೇ ರೀತಿಯಾಗಿದೆ. ಪರಾತ್ಪರ ಗುರು ಡಾಕ್ಟರರೇ, ‘ನನ್ನ ಬುದ್ಧಿಯ ಅಹಂ ಮತ್ತು ಅದು ಸಾಧನೆಯಲ್ಲಿ ಹೇಗೆ ಅಡಚಣೆ ತರುತ್ತದೆ ?’, ಎಂಬುದನ್ನು ಅರಿವು ಮಾಡಿ ಕೊಟ್ಟಿರುವ ಬಗ್ಗೆ ತಮ್ಮ ಚರಣಗಳಲ್ಲಿ ಅನಂತ ಕೃತಜ್ಞತೆಗಳು !
‘ಸನಾತನ ಪ್ರಭಾತ’ದ ಸೂಚನೆಯ ಚೌಕಟ್ಟನ್ನು ಪೂರ್ಣ ಓದಿದ ನಂತರ ಆಪತ್ಕಾಲದ ಬಗ್ಗೆ ಪೂರ್ವತಯಾರಿ ಮಾಡಬೇಕು ಆದರೆ ಪ್ರತ್ಯಕ್ಷ ತಕ್ಷಣ ಸ್ಥಳಾಂತರವಾಗುವ ಉಲ್ಲೇಖವಿಲ್ಲವೆಂದು ಗಮನಕ್ಕೆ ಬರುವುದು
ಪರಾತ್ಪರ ಗುರು ಡಾಕ್ಟರ್, ತದನಂತರ ಪುನಃ ಮುಖ್ಯ ಚೌಕಟ್ಟನ್ನು ಓದಿದೆನು ಮತ್ತು ‘ನಮ್ಮೆಲ್ಲ ಸಾಧಕರ ಗಡಿಬಿಡಿ ಏಲ್ಲಿ ಆಗಿದೆ ?’, ಎಂಬುದನ್ನು ತಾವು ಗಮನದಲ್ಲಿ ತಂದು ಕೊಟ್ಟಿರುವಿರಿ. ಮುಖ್ಯ ಚೌಕಟ್ಟನ್ನು ಓದಿದ ನಂತರ ನಮ್ಮೆಲ್ಲ ಸಾಧಕರಿಗೆ ‘ಈಗ ಮುಂದಿನ ೫ ತಿಂಗಳಲ್ಲಿ ಇರುವುದೆಲ್ಲವನ್ನು ಬಿಟ್ಟು ಮತ್ತು ನಗರಗಳಲ್ಲಿರುವ ಮನೆಗಳನ್ನು ಮಾರಿ ನಮ್ಮ ಗ್ರಾಮವಾಸ್ತವ್ಯಕ್ಕೆ ಹೋಗಬೇಕಾಗುವುದು’, ಎಂದು ಅನಿಸುತ್ತಿದೆ.
ಮುಖ್ಯ ಲೇಖನದಲ್ಲಿ ‘ಜಾಗತಿಕ ಸ್ತರದಲ್ಲಿ ಆಪತ್ಕಾಲವು ಯಾವ ಯಾವ ರೀತಿ ಬರಬಹುದು ?’ ಮತ್ತು ಅದರ ಪೆಟ್ಟು ಹೆಚ್ಚಾಗಿ ಮಹಾನಗರ ಮತ್ತು ದೊಡ್ಡ ಪಟ್ಟಣಗಳಿಗೆ ಬೀಳಬಹುದು. ಆದುದರಿಂದ ನಮ್ಮ ಹಾನಿಯನ್ನು ತಡೆಯಲು ಸುರಕ್ಷಿತ ವಾತಾವರಣದಲ್ಲಿ ಹೋಗುವ ವಿಚಾರವನ್ನು ಮಾಡಬೇಕು’, ಎಂದು ಹೇಳಲಾಗಿದೆ (‘ಎಲ್ಲರೂ ಹೋಗಬೇಕು’, ಎಂಬ ಉಲ್ಲೇಖವಿಲ್ಲ.) ಹಾಗೆಯೇ ‘ತಮ್ಮ ಗ್ರಾಮಸ್ಥಳಗಳಲ್ಲಿ ಯಾರ ಮನೆಗಳು, ಜಾಗ ಇರುವುದೋ ಅವರು ಮತ್ತು ಗ್ರಾಮಸ್ಥಳದಲ್ಲಿ ಇರುವ ವಿಚಾರವನ್ನು ಮಾಡುವವರಲ್ಲಿ ೩-೪ ಜನರು ಗ್ರಾಮವನ್ನು ಆಯ್ಕೆ ಮಾಡುವುದು, ಅಲ್ಲಿ ಮನೆಯನ್ನು ಕಟ್ಟುವುದು ಅಥವಾ ಖರೀದಿಸುವುದು’, ಇಂತಹ ಕೃತಿಗಳನ್ನು ಮಾಡಲು ಹೇಳಲಾಗಿದೆ. ಮುಂದಿನ ೫ ತಿಂಗಳಲ್ಲಿ ಮುಖ್ಯ ಪ್ರಕ್ರಿಯೆಯನ್ನು ಪೂರ್ತಿ ಮಾಡಲು ಹೇಳಲಾಗಿದೆ. ಸ್ಥಳಾಂತರ ಮಾಡಲು ಹೇಳಲಿಲ್ಲ.
ಸಾಧಕನಲ್ಲಿ ಆಗಿರುವ ವಿಚಾರಪ್ರಕ್ರಿಯೆ
ಪರಾತ್ಪರ ಗುರು ಡಾಕ್ಟರ, ಅದರ ನಂತರ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರಪ್ರಕ್ರಿಯೆಯಾಯಿತು. ಅದನ್ನು ತಮ್ಮ ಚರಣಗಳಲ್ಲಿ ಕಳುಹಿಸುತ್ತಿದ್ದೇನೆ. ‘ಇದರಲ್ಲಿ ಯೋಗ್ಯ-ಅಯೋಗ್ಯವೇನಿದೆ ?’, ಎಂಬುದು ಮಾರ್ಗದರ್ಶನವನ್ನು ಮಾಡಿ ಈ ಸಾಮಾನ್ಯ ಜೀವವನ್ನು ಉದ್ಧರಿಸಿರಿ.
ಪ್ರಶ್ನೆ : ಮುಂಬರುವ ಆಪತ್ಕಾಲವು ಸಮಷ್ಟಿ ಪ್ರಾರಬ್ಧವಾಗಿದೆ. ಅದನ್ನು ನಾವೆಲ್ಲ ಅನುಭವಿಸಲೇಬೇಕು. ನಾವು ನಮ್ಮ ವ್ಯಷ್ಟಿ ಪ್ರಾರಬ್ಧವನ್ನು ಸಹಿಸಲು ಸಾಧ್ಯವಿಲ್ಲದಿರುವಾಗ ಸಮಷ್ಟಿ ಪ್ರಾರಬ್ಧವನ್ನು ಹೇಗೆ ಸಹಿಸಲು ಸಾಧ್ಯ ?
ಉತ್ತರ : ಸಾಧನೆಯಿಂದ ಎಲ್ಲವನ್ನು ಸಹಿಸಬಹುದು. – (ಪರಾತ್ಪರ ಗುರು) ಡಾ. ಆಠವಲೆ
ಪ್ರಶ್ನೆ : ಸಾಧಕನಿಗೆ ಸಮಾಜಋಣವನ್ನು ತೀರಿಸಬೇಕಾಗುತ್ತದೆ. ಸಮಾಜವೆಂದರೆ ಭಗವಂತನ ವ್ಯಾಪಕ ರೂಪವಾಗಿದೆ. ನಮಗೆ ಆವಶ್ಯಕತೆ ಇರುವುದನ್ನು ಸಮಾಜದಲ್ಲಿ ಯಾರಾದರೂ ಪೂರ್ತಿ ಮಾಡುತ್ತಿದ್ದಾರೆ. ಈ ಸಮಾಜದಿಂದಾಗಿಯೇ ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಾಗುತ್ತಿದೆ. ಸಮಾಜವೇ ಇಲ್ಲದಿದ್ದರೆ. ನಾವು ಗುರುಗಳ ಸೇವೆ ಮತ್ತು ಧರ್ಮಕಾರ್ಯವನ್ನು ಹೇಗೆ ಮತ್ತು ಎಲ್ಲಿ ಮಾಡುವುದು ? ಆದ್ದರಿಂದ ಈ ಸಮಾಜದಿಂದ ದೂರ ಹೋಗಿ ಹೇಗೆ ನಡೆಯುವುದು ?
ಉತ್ತರ : ಎಲ್ಲಿ ಹೋಗುತ್ತೇವೆಯೋ ಅಲ್ಲಿಯೂ ಸಮಾಜವು ಇದ್ದೇ ಇರುವುದು. – (ಪರಾತ್ಪರ ಗುರು) ಡಾ. ಆಠವಲೆ
ಗುರುಕೃಪೆಯಿಂದಾಗಿ ಸಾಧಕರು ಆಪತ್ಕಾಲದಲ್ಲಿ ಇದೇ ಸಮಾಜಕ್ಕೆ ಆಧ್ಯಾತ್ಮಿಕ ಆಧಾರವನ್ನು ನೀಡಿ ಸಾಧನೆ ಮತ್ತು ಧರ್ಮಾಚರಣೆಯನ್ನು ಮಾಡಲು ಪ್ರವೃತ್ತಗೊಳಿಸಬಹುದು.
‘ಆಪತ್ಕಾಲದಲ್ಲಿ ದೇವರೇ ಭಕ್ತರ ರಕ್ಷಣೆಯನ್ನು ಮಾಡುವವನಿದ್ದಾನೆ’, ಈ ಕುರಿತು ಗಮನಕ್ಕೆ ಬಂದ ಪ್ರಸಂಗಗಳು
‘ದೇವ ತಾರಿ ತ್ಯಾಲಾ ಕೋಣ ಮಾರಿ |’, ಹಾಗೆಯೇ ‘ನನ್ನ ಭಕ್ತರ ನಾಶವಾಗಲು ಸಾಧ್ಯವಿಲ್ಲ’, ಎಂಬ ಮರಾಠಿ ವಚನಗಳ ನನಗೆ ನೆನಪಾಯಿತು ಮತ್ತು ಅನಂತರ ಅನೇಕ ಪ್ರಸಂಗಗಳು ಕಣ್ಣುಮುಂದೆ ಬಂದವು. ಅವುಗಳಲ್ಲಿ ಕೆಲವು ಪ್ರಸಂಗಗಳನ್ನು ಇಲ್ಲಿ ಕೊಟ್ಟಿದ್ದೇವೆ.
ಅ. ‘ಓರ್ವ ಸಂತರಿಗೆ ಕೆಲವು ಗೂಂಡಾಗಳು ಹೊಡೆಯುತ್ತಿರುತ್ತಾರೆ; ಆದರೆ ಸಂತರಿಗೆ ಗೂಂಡಾಗಳು ಹೂವು ಬಿಸಾಡುತ್ತಿದ್ದಂತೆ ಅರಿವಾಗುತ್ತಿತ್ತು.’ (ಆಧಾರ : ಸನಾತನದ ಗ್ರಂಥ ‘ಗುರುಕೃಪಾಯೋಗ’)
ಆ. ‘ಮುಂಬೈಯಲ್ಲಿ ಓರ್ವ ಸಾಧಕನಿಗೆ ಅವನು ಸಾಧನೆಯನ್ನು ಮಾಡಬಾರದೆಂದು, ಕೆಲವು ಗೂಂಡಾಗಳು ಹೊಡೆಯಲು ನಿರ್ಧರಿಸುತ್ತಾರೆ; ಆದರೆ ೨-೩ ದಿನ ಆ ಸಾಧಕನು ಮನೆಯೊಳಗೆ ಹೋಗುವಾಗ ಅಥವಾ ಮನೆಯಿಂದ ಹೋಗುವುದು ಆ ಗೂಂಡಾಗಳಿಗೆ ಕಾಣಿಸುವುದೇ ಇಲ್ಲ. ಆದುದರಿಂದ ಗೂಂಡಾಗಳು ಅವನಿಗೆ ಮನೆಗೆ ಹೋಗಿ ಹೊಡೆಯುವ ವಿಚಾರ ಮಾಡುತ್ತಾರೆ. ಪ್ರತ್ಯಕ್ಷದಲ್ಲಿ ಸಾಧಕನನ್ನು ನೋಡಿದ ನಂತರ ಗೂಂಡಾಗಳ ಕೈಯಲ್ಲಿನ ಆಯುಧಗಳು ಕೆಳಗೆ ಬೀಳುತ್ತವೆ.’ (ಆಧಾರ : ಸನಾತನದ ಗ್ರಂಥ ‘ಸಾಧಕರ ಅನುಭೂತಿ’)
ಇ. ‘ಮುಂಬೈಯಲ್ಲಿ ಕೆಲವು ವರ್ಷಗಳ ಹಿಂದೆ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್‌ಸ್ಫೋಟ ಆಯಿತು. ಆಗ ಒಬ್ಬ ಸಾಧಕನು ಒಂದು ಬಸ್‌ನಿಲ್ದಾಣದಲ್ಲಿ ನಿಂತಿದ್ದನು. ಅವನಿಗೆ ‘ಇಲ್ಲಿಂದ ತಕ್ಷಣ ದೂರ ಹೋಗು. ಇಲ್ಲಿ ಬಾಂಬ್‌ಸ್ಫೋಟ ಆಗುವುದಿದೆ’, ಎಂದು ಯಾರಾದರೂ ಸತತವಾಗಿ ಕಿವಿಗಳಲ್ಲಿ ಹೇಳುತ್ತಿದ್ದಾರೆ’, ಎಂಬ ಅರಿವಾಗುತ್ತಿತ್ತು. ಆ ಸಾಧಕನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋದನಂತರ ಆ ಬಸ್‌ನಿಲ್ದಾಣದ ಹತ್ತಿರ ಬಾಂಬ್‌ಸ್ಫೋಟವಾಯಿತು.
ಇನ್ನೊಂದು ಸ್ಥಳದಲ್ಲಿ ಬೇರೊಬ್ಬ ಸಾಧಕನು ತನ್ನ ಸಮಯಕ್ಕೆ ಯಾವಾಗಲೂ ಹೋಗುವ ರೈಲಿಂದ ಮನೆಗೆ ಹೋಗುವವನಿದ್ದನು. ಅವನಿಗೆ ‘ಆ ಸಮಯದ ಮುಂಚೆಯೇ ರೈಲಿನಿಂದ ಮುಂದೆ ಹೋಗಬೇಕು. ಇಲ್ಲಿ ಏನಾದರೂ ದುರ್ಘಟನೆ ನಡೆಯುವುದಿದೆ’, ಎಂದು ಸತತವಾಗಿ ಅರಿವಾಗುತ್ತಿತ್ತು. ಅದರಂತೆ ಅವನು ಮೊದಲನೇ ರೈಲಿನಿಂದ ಹೊರಟು ಹೋಗುತ್ತಾನೆ ನಂತರ ‘ಅವನು ಯಾವಾಗಲೂ ಹೋಗುವ ರೈಲಿನಲ್ಲಿ ಅವನು ಕುಳಿತುಕೊಳ್ಳುವ ಅದೇ ಬೋಗಿಯಲ್ಲಿ ಬಾಂಬ್‌ಸ್ಫೋಟ ಆಗಿದೆ,’ ಎಂದು ಅವನಿಗೆ ತಿಳಿಯುತ್ತದೆ.’
ಈ. ಜರಾಸಂಧನು ೧೭ ಬಾರಿ ಮಥುರೆಯ ಮೇಲೆ ದಾಳಿ ಮಾಡುತ್ತಾನೆ. ಆಗ ಭಗವಾನ ಶ್ರೀಕೃಷ್ಣನು ಅವನೊಂದಿಗೆ ಹೋರಾಡುತ್ತಾನೆ. ೧೮ ನೇ ಬಾರಿ ಜನತೆಗೆ (ಸಾಧಕರಿಗೆ) ತೊಂದರೆ ಆಗಬಾರದೆಂದು ತನ್ನ ಯೋಗಸಾರ್ಥ್ಯದಿಂದ ಅವನು ಎಲ್ಲರನ್ನು ದ್ವಾರಕಾಗೆ ಕರೆದುಕೊಂಡು ಹೋಗುತ್ತಾನೆ.
ಉ. ರಾಕ್ಷಸರೊಂದಿಗೆ ನಡೆದ ಯುದ್ಧದಲ್ಲಿ ಭಗವಂತನು ತನ್ನ ಭಕ್ತರನ್ನು (ಸಾಧಕರನ್ನು) ತನ್ನೊಂದಿಗೆ ಕರೆದುಕೊಂಡು ಯುದ್ಧವನ್ನು ಮಾಡಿದ್ದಾನೆ ಮತ್ತು ವಿಜಯವನ್ನು ಗಳಿಸಿದ್ದಾನೆ. ಅವನು ಭಕ್ತರಿಗೆ ಅವರ ಕ್ಷಾತ್ರಧರ್ಮ ಕರ್ತವ್ಯದ ಅರಿವನ್ನು ಪ್ರತಿಯೊಂದು ಅವತಾರದಲ್ಲಿ ಮಾಡಿಕೊಟ್ಟಿದ್ದಾನೆ.
ಊ. ಒಬ್ಬ ಶಿಷ್ಯನು ಗುರುಗಳ ಆಜ್ಞೆಗನುಸಾರ ಮದುವೆ ಮಾಡಿಕೊಳ್ಳುತ್ತಾನೆ. ಆ ಸಮಯದಲ್ಲಿ ಅವನು ಮರಳಿ ಶ್ರೀ ಗುರುಚರಣಗಳಲ್ಲಿ ಬರುವ ಅನುಮತಿಯನ್ನು ಬೇಡುತ್ತಾನೆ. ಆಗ ಶ್ರೀಗುರುಗಳು ಅವನಿಗೆ ‘ನಿನ್ನ ಮಗು ಜನಿಸಿದ ನಂತರ ನನ್ನ ಬಳಿಗೆ ಮರಳಿ ಬಾ’, ಎಂದು ಹೇಳುತ್ತಾರೆ. ಕಾಲಾಂತರದಿಂದ ಅವನಿಗೆ ಮಗುವಾಗುತ್ತದೆ; ಆದರೆ ಅದೇ ಕ್ಷಣದಲ್ಲಿ ಮಗುವಿನ ತಾಯಿ (ಶಿಷ್ಯನ ಪತ್ನಿಯು) ಮರಣಹೊಂದುತ್ತಾಳೆ. ‘ಈಗ ಗುರುಗೃಹಕ್ಕೆ ಮರಳಿ ಹೇಗೆ ಹೋಗುವುದು ?’, ಎಂಬ ವಿಚಾರ ಮಾಡುತ್ತ ಅವನು ಮರದ ಕೆಳಗೆ ಕುಳಿತಿರುತ್ತಾನೆ. ಅಷ್ಟರಲ್ಲಿ ಅವನಿಗೆ ಎದುರಿಗೆ ಮರದ ಮೇಲೆ ಗುಬ್ಬಚ್ಚಿಯ ಗೂಡಿನಲ್ಲಿನ ಚಿಕ್ಕ ಮರಿಗಳನ್ನು ಹೊಡೆಯಲು ಹದ್ದು ದಾಳಿ ಮಾಡುತ್ತಿರುವುದನ್ನು ಕಾಣಿಸುತ್ತದೆ. ಗುಬ್ಬಚ್ಚಿ ಮತ್ತು ಹದ್ದು ಇವುಗಳ ಹೊಡೆದಾಟದಲ್ಲಿ ಆ ಮರಿಗಳು ಕೆಳಗೆ ಹುಲ್ಲಿನ ಹೊರೆಯ ಮೇಲೆ ಬೀಳುತ್ತವೆ. ಆಗ ಆ ಶಿಷ್ಯನು, ‘ಯಾರನ್ನಾದರೂ ಬದುಕಿಸಲಿಕ್ಕಿದ್ದರೆ, ಅವನನ್ನು ದೇವರು ಹೇಗಾದರೂ ಮಾಡಿ ಬದುಕಿಸಬಹುದು ಮತ್ತು ಸಾಯಿಸುವುದಿದ್ದರೆ ಅವನನ್ನು ಹೇಗಾದರೂ ಸಾಯಿಸುವನು’ ಎಂಬ ವಿಚಾರ ಮಾಡುತ್ತಾನೆ. ನಂತರ ಮಗುವಿಗೆ ಬಿಟ್ಟು ಅವನು ಗುರುಗಳ ಸೇವೆಗಾಗಿ ಹೊರಟು ಹೋಗುತ್ತಾನೆ. (ಆಧಾರ : ಪರಾತ್ಪರ ಗುರು ಡಾ. ಆಠವಲೆಯವರ ಧ್ವನಿಯಲ್ಲಿನ ‘ಸಂದೇಹ ನಿವಾರಣೆ’ ಎಂಬ ಧ್ವನಿಮುದ್ರಿಕೆ)
‘ಭಗವಂತನ ಕೃಪೆಯನ್ನು ಸಂಪಾದನೆ ಮಾಡಲು, ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಮತ್ತು ಸಂಘರ್ಷಮಯ ಹಾಗೂ ಕಠೋರ ತಪಸ್ಸಿನಂತೆ ಸಾಧನೆಯನ್ನು ಮಾಡಲು ತಮ್ಮ ಕೃಪಾಶೀರ್ವಾದವು ನಮ್ಮೆಲ್ಲ ಸಾಧಕರ ಮೇಲಿರಲಿ, ಇದೇ ತಮ್ಮ ಚರಣಗಳಲ್ಲಿ ವಿನಮ್ರ ಪ್ರಾರ್ಥನೆ
(ಮುಕ್ತಾಯ)
– ಶ್ರೀ. ಮಂದಾರ ವಿಜಯ ಜೋಶಿ, ಬೆಳಗಾವಿ, ಕರ್ನಾಟಕ. (೨೬.೯.೨೦೨೦)