ನೃತ್ಯ ಹಾಗೂ ಸಂಗೀತದ ವಿಷಯದಲ್ಲಿ ಅದ್ವಿತೀಯ ಸಂಶೋಧನೆಗಳನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ೬೪ ಕಲೆಗಳಲ್ಲಿನ ಗಾಯನ, ವಾದನ, ನೃತ್ಯ ಹಾಗೂ ನಾಟ್ಯ (ಅಭಿನಯ ಈ ಕಲೆಗಳ ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ಭಾರತೀಯ ಕಲೆಗಳಲ್ಲಿರುವ ಸಾತ್ತ್ವಿಕತೆಯನ್ನು ಆಧುನಿಕ ಉಪಕರಣಗಳ ಮೂಲಕ ಅಭ್ಯಾಸ ಮಾಡಲಾಗುತ್ತಿದೆ. ಇದರ ಅಂತರ್ಗತ ಭಾರತೀಯ ಗಾಯನ, ವಾದ್ಯ, ನೃತ್ಯ, ಅಭಿನಯದ ಜೊತೆಗೆ ಪಾಶ್ಚಾತ್ಯ ಗಾಯನ, ವಾದ್ಯ, ನೃತ್ಯ ಹಾಗೂ ಅಭಿನಯದ ಬಗ್ಗೆ ತುಲನಾತ್ಮಕ ಅಭ್ಯಾಸ ವನ್ನೂ ಮಾಡಲಾಗುತ್ತಿದೆ. ಭಾರತೀಯ ಸಂಗೀತದಿಂದ ವ್ಯಕ್ತಿ, ಪ್ರಾಣಿ ಹಾಗೂ ವಾತಾವರಣದ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ ?, ಈ ವಿಷಯದಲ್ಲಿ ೬೦೦ ಕ್ಕೂ ಹೆಚ್ಚು ವಿವಿಧ ಪ್ರಯೋಗಗಳನ್ನು ಮಾಡಲಾಗಿದ್ದು ಇನ್ನೂ ಇದು ಮುಂದುವರೆಯುತ್ತಿದೆ.
ಈ ಪ್ರಯೋಗಕ್ಕಾಗಿ ‘ಯುನಿವರ್ಸ್‌ಲ್ ಆರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಆಧುನಿಕ ಉಪಕರಣವನ್ನು ಬಳಸಲಾಗು ತ್ತಿದೆ. ಈ ಉಪಕರಣದ ಮೂಲಕ ‘ಪ್ರಯೋಗಗಳಲ್ಲಿ ಭಾಗಿಯಾದ ಘಟಕಗಳ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವಲಯಗಳ ಮೇಲೆ ಯಾವ ಪರಿಣಾಮವಾಗುತ್ತದೆ ?, ಎಂಬುದರ ಅಧ್ಯಯನವನ್ನು ಮಾಡಲಾಗುತ್ತಿದೆ. ಈ ಎಲ್ಲಾ ಪ್ರಯೋಗಗಳನ್ನು ಭಾರತೀಯ ಹಾಗೂ ವಿದೇಶಿ ಸಾಧಕರ ಮೇಲೆ ಒಟ್ಟಾಗಿ ಹಾಗೂ ಬೇರೆ ಬೇರೆ ಯಾಗಿಯೂ ಮಾಡಲಾಗಿದೆ. ಇವುಗಳಿಂದ ಗಮನಕ್ಕೆ ಬಂದ ವಿಶೇಷ ವಿಷಯವೆಂದರೆ, ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದ ಪರಿಣಾಮ ಭಾರತೀಯ ಸಾಧಕರ ಮೇಲೆ ಕಂಡುಬಂದ ಹಾಗೆಯೇ ವಿದೇಶೀ ಸಾಧಕರ ಮೇಲೆಯೂ ಕೂಡ ಕಂಡು ಬಂತು.
ಈ ರೀತಿಯ ಆಧ್ಯಾತ್ಮಿಕ ಸಂಶೋಧನಗಳು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವೈಶಿಷ್ಟ್ಯವಾಗಿವೆ. ಇಂದಿನವರೆಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾಧ್ಯಮದಿಂದ ಗಾಯನ, ವಾದನ, ನೃತ್ಯ ಹಾಗೂ ನಾಟ್ಯದ ವಿಷಯದಲ್ಲಿ ಮಾಡಿದ ವಿವಿಧ ಪ್ರಯೋಗಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಈ ವಿಷಯದ ಸಂಶೋಧನೆಯಲ್ಲಿ ಆಸಕ್ತಿಯುಳ್ಳವರು [email protected] ಈ ಮೇಲ್‌ವಿಳಾಸವನ್ನು ಸಂಪರ್ಕಿಸಿ ತಮ್ಮ ಯೋಗದಾನವನ್ನು ನೀಡಬಹುದು.
ಗಾಯನ, ವಾದ್ಯ, ನಾಟಕ ಮತ್ತು ನೃತ್ಯ ಈ ಸಂದರ್ಭದಲ್ಲಿ ಇಲ್ಲಿಯ ವರೆಗೆ ಮಾಡಿದ ವಿವಿಧ ಪ್ರಯೋಗಗಳು
ಟಿಪ್ಪಣಿ ೧ : ವಿವಿಧ ರಾಗಗಳು ವಿವಿಧ ರೋಗಗಳ ಮೇಲೆ ಉಪಾಯಾತ್ಮಕವಾಗಿರುವುದು ತಿಳಿದ ಬಳಿಕ ಆ ರಾಗಗಳನ್ನು ಪಂ. ಭೀಮಸೇನ ಜೋಶಿಯವರ ಧ್ವನಿಯಲ್ಲಿ ಕೇಳಿಸಲಾಯಿತು.
ಟಿಪ್ಪಣಿ ೨ : ಶ್ರೀ. ಪ್ರದೀಪ ಚಿಟಣೀಸರವರು ವಿವಿಧ ರಾಗಗಳನ್ನು ಉಪಚಾರಾರ್ಥವಾಗಿ ವಿವಿಧ ರಾಗಗಳ ಬಗ್ಗೆ ಅಭ್ಯಾಸವಾಗಿದೆ. ಅದೇ ಸಮಯದಲ್ಲಿ ರಾಗಗಳನ್ನು ಅವರು ಹಾಡಿದರು.
ವಾದ್ಯಗಳ ಪ್ರಯೋಗ
ವಾದ್ಯಗಳ ಕ್ರಮವು ಸಂಗೀತಕ್ಕೆ ಅನುಸಾರವಾಗಿ ಪ್ರಾರಂಭದಲ್ಲಿ ಕೊಳವೆಯಾಕಾರದ ಅಂದರೆ ವಾಯುವಿಗೆ ಸಂಬಂಧಪಟ್ಟ ವಾದ್ಯಗಳು, ಅನಂತರ ತಂತಿಯಿರುವ ವಾದ್ಯಗಳು, ಚರ್ಮವಾದ್ಯಗಳು ಹಾಗೂ ಕೊನೆಯಲ್ಲಿ ಘನವಾದ್ಯಗಳು ಈ ರೀತಿಯ ಕ್ರಮಬದ್ಧವಾಗಿ ತೆಗೆದುಕೊಳ್ಳಲಾಗಿದೆ.
ಕು. ತೇಜಲ ಪಾತ್ರೀಕರ, ಸಂಗೀತ ಸಂಯೋಜಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.