ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಕೆಲವು ವೈಶಿಷ್ಟ್ಯಪೂರ್ಣ ಘಟನೆಗಳು !
ಫೆಬ್ರವರಿ ೨೧ ರಂದು ಆನ್‍ಲೈನ್ ಮೂಲಕ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಸಂಪನ್ನವಾಯಿತು. ಈ ಸಭೆಯ ಪ್ರಮುಖ ವಕ್ತಾರರಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಉಪಸ್ಥಿತರಿದ್ದರು. ಈ ಸಭೆಯ ಸಮಯದಲ್ಲಿನ ಮಹತ್ವದ ಘಟನಾವಳಿಗಳು ಮುಂದಿನಂತಿದೆ.
ಶ್ರೀ. ಪ್ರಮೋದ್ ಮುತಾಲಿಕ್‍ರವರು ಹಿಂದೂ ಜನಜಾಗೃತಿ ಸಮಿತಿ ಬಗ್ಗೆ ತೆಗೆದ ಗೌರವೋದ್ಗಾರ
ಸಭೆಗೆ ಪ್ರಮುಖ ವಕ್ತಾರರಾಗಿ ಆಗಮಿಸಿದ ಪ್ರಮೋದ್ ಮುತಾಲಿಕ್ ಅವರು ಈ ಸಭೆಯನ್ನು ಮಾತನಾಡುತ್ತಾ ಕೊರೋನಾದಂತಹ ಆಪತ್ಕಾಲದ ಸಮಯದಲ್ಲಿಯೂ ಹೊರಗಡೆ ಬಹಿರಂಗ ಸಭೆ ಮಾಡಲು ಅಡಚಣೆಯಿದ್ದಾಗಲೂ ‘ಆನ್‍ಲೈನ್’ ತಂತಜ್ಞಾನವನ್ನು ಸಂಪೂರ್ಣವಾಗಿ ಉಪಯೋಗಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯವು ಶ್ಲಾಘನೀಯವಾಗಿದೆ. ನಾನು ಹಿಂದೂ ಜನಜಾಗೃತಿ ಸಮಿತಿಗೆ ಅಭಿನಂದನೆಗಳನ್ನು ಹೇಳುತ್ತೇನೆ, ಎಂದರು.
ಸಭೆ ಆರಂಭವಾದಾಗ ಮತಾಂಧರಿಂದ ಆಗುತ್ತಿದ್ದ ವಿರೋಧವನ್ನು ಸಂಘಟಿತರಾಗಿ ವಿರೋಧಿಸಿದ ಹಿಂದೂ ಧರ್ಮಪ್ರೇಮಿಗಳು
ಆನ್‍ಲೈನ್ ಸಭೆಯು ಪ್ರಾರಂಭವಾಗುತ್ತಲೇ ೨ ಸಾವಿರಕ್ಕಿಂತ ಹೆಚ್ಚು ಧರ್ಮಪ್ರೇಮಿಗಳು ಕಾರ್ಯಕ್ರಮಕ್ಕೆ ಜೋಡಿಸಲ್ಪಟ್ಟಿದ್ದರು. ಸಭೆಯು ಪ್ರಾರಂಭವಾಗುತ್ತಿದ್ದಂತೆಯೇ ಕೆಲವು ಮತಾಂಧರು ‘ಚಾಟ್‍ಬಾಕ್ಸ್’ನಲ್ಲಿ (ಸಂದೇಶ ನೀಡುವಲ್ಲಿ) ಜಿಹಾದಿ ಸಂಘಟನೆಯ ಕಾರ್ಯಕರ್ತರು ‘ಎಸ್.ಡಿ.ಪಿ.ಐ. ಜಿಂದಾಬಾದ್’, ‘ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಸಾಧ್ಯವಿಲ್ಲ’, ‘ಹಿಂದೂ ರಾಷ್ಟ್ರ ಬೇಕಾದವರು ನೇಪಾಳಕ್ಕೆ ಹೋಗಿ’ ಎಂಬಂತೆ ದ್ವೇಷಯುಕ್ತ ಸಂದೇಶ ಕಳುಹಿಸಿದರು. ಜೊತೆಯಲ್ಲಿ ಸಭೆಯ ಪ್ರಸಾರಕ್ಕೆ ‘ಡಿಸ್‍ಲೈಕ್’ (ಇಷ್ಟವಿಲ್ಲವೆಂದು ತೋರಿಸುವುದು) ಮಾಡಲು ಪ್ರಾರಂಭ ಮಾಡಿದರು. ಈ ಪ್ರಕ್ರಿಯೆ ನಡೆಯುತ್ತಿರುವಾಗ ಅನೇಕ ಹಿಂದೂ ಧರ್ಮಪ್ರೇಮಿಗಳು ಸ್ವಯಂಪ್ರೇರಿತರಾಗಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರಕ್ಕೆ ಜಯಜಯಕಾರದ ಘೋಷಣೆಗಳನ್ನು ‘ಚಾಟ್‍ಬಾಕ್ಸ್’ನಲ್ಲಿ ಹಾಕಲು ಪ್ರಾರಂಭಿಸಿ ಮತಾಂಧರ ಸಂಚನ್ನು ವಿಫಲಗೊಳಿಸಿದರು.
ಆನ್‍ಲೈನ್ ಸಭೆಗೆ ದೊರೆತ ಪೂರ್ವಪ್ರಸಿದ್ಧಿ
೧೬ ನಿಯತಕಾಲಿಕೆಗಳಲ್ಲಿ ಮತ್ತು ೨ ಜಾಲತಾಣಗಳಲ್ಲಿ ಆನ್‍ಲೈನ್ ಸಭೆಯ ಆಮಂತ್ರಣ ನೀಡಲಾಯಿತು. ಹಾಗೆಯೇ ಸಭೆಯ ಸಂಪೂರ್ಣ ಮಾಹಿತಿಯಿರುವ ಲೇಖನಕ್ಕೆ ೩ ನಿಯತಕಾಲಿಕೆಗಳಲ್ಲಿ ಹಾಗೂ ೧ ವೆಬ್‍ಪೋರ್ಟಲ್‍ನಲ್ಲಿ ಪ್ರಸಿದ್ಧಿ ನೀಡಿದರು. ಸಭೆಯ ಪ್ರಸಾರದ ನಿಮಿತ್ತ ತಯಾರಿಸಿದ ಧ್ವನಿಚಿತ್ರ ಮುದ್ರಿಕೆಗಳನ್ನು ೧೩ ಚಾನೆಲ್‍ಗಳಲ್ಲಿ ಬಿತ್ತರಿಸಲಾಯಿತು.
ಸಭೆಗೆ ದೊರೆತ ಪ್ರಸಿದ್ಧಿ
ಸಭೆಯು ನಡೆಯುತ್ತಿರುವಾಗಲೇ ‘ಪ್ರವೀಣ್ ಕಟ್ಟೆ’, ‘ಪಾಂಚಜನ್ಯ’, ‘ಯೋಗಾಯೋಗ’ ಮುಂತಾದ ಯೂಟ್ಯೂಬ್ ಚಾನೆಲ್‍ಗಳಲ್ಲಿ ಹಾಗೂ ‘ಝೀ ಮೀಡಿಯಾ’, ಸ್ಮಾರ್ಟ್ ನ್ಯೂಸ್ ಈ ಫೇಸ್‍ಬುಕ್ ಪೇಜ್‍ಗಳಲ್ಲಿ, ‘ಮಾರಿಕಾಂಬಾ’ ಹಾಗೂ ‘ಎ.ಸಿ.ಎನ್.’ ಕೇಬಲ್ ಚಾನೆಲ್‍ನಲ್ಲಿ ಈ ಸಭೆಯ ಪ್ರಸಾರವನ್ನು ಮಾಡಲಾಯಿತು.
೫ ನಿಯತಕಾಲಿಕೆ ಮತ್ತು ೨ ವೆಬ್‍ಪೋರ್ಟ್‍ಲ್‍ಗಳಲ್ಲಿ ಸಭೆಯ ವಾರ್ತೆ ಪ್ರಕಟವಾಯಿತು.
ವಿಶೇಷ : ಈ ಆನ್‍ಲೈನ್ ಸಭೆಯನ್ನು ಯೂ-ಟ್ಯೂಬ್ ಮತ್ತು ಫೇಸಬುಕ್ ಸಹಿತ ಇತರ ವಾಹಿನಿಗಳಲ್ಲಿ ನೇರವಾಗಿ ವೀಕ್ಷಿಸಲಾಯಿತು. ಹಾಗಾಗಿ ಈ ಸಭೆಯನ್ನು ೪೧ ಸಾವಿರದ ೪೨೬ ಜನರು ನೋಡಿದರು.
ಗಮನಾರ್ಹ ಅಂಶಗಳು
೧. ಸಭೆಯಲ್ಲಿ ಹಿಂದೂ ಧರ್ಮ ಹಾಗೂ ರಾಷ್ಟ್ರದ ಬಗ್ಗೆ ಠರಾವನ್ನು ಮಂಡಿಸುವಾಗ ಅನೇಕ ಧರ್ಮಪ್ರೇಮಿಗಳು `ಚಾಟ್‍ಬಾಕ್ಸ್’ನಲ್ಲಿ `ಹರಹರ ಮಹಾದೇವ್’ ಘೋಷಣೆಯನ್ನು ಹಾಕಿದರು.
೨. ಅನೇಕ ಧರ್ಮಪ್ರೇಮಿಗಳು ಸಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಲು ತಮ್ಮ ಸಂಪರ್ಕಸಂಖ್ಯೆಯನ್ನು ನೀಡಿದರು.
೩. ಓರ್ವ ಧರ್ಮಪ್ರೇಮಿಯು ಸ್ವಯಂಪ್ರೇರಿತರಾಗಿ ಸಭೆಯ ಆಮಂತ್ರಣದ ರೀತಿಯಲ್ಲಿ ಭಿತ್ತಿಪತ್ರವನ್ನು ಮುದ್ರಿಸಿ ಅದನ್ನು ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಹಚ್ಚಿ ಸಭೆಯ ಪ್ರಸಾರವನ್ನು ಮಾಡಿದರು.
೪. ಓರ್ವ ಧರ್ಮಪ್ರೇಮಿಯು ತನ್ನ ಸಂಘಟನೆಯ ಸದಸ್ಯರಿಗೆ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಸಭೆಯ ಪ್ರಸಾರ ಮಾಡಲೆಂದು ಆನ್‍ಲೈನ್ ಸಭೆ ಮಾಡಿದರು.