ಭಾರತದಲ್ಲಿ ಸಾರಿಗೆ ಸೇವೆಯ ಚಿತ್ರಣವನ್ನೇ ಬದಲಾಯಿಸಿದ ಶ್ರೇಯಸ್ಸು ಅಭಿಯಂತರ ಈ. ಶ್ರೀಧರನ್ ಇವರಿಗೆ ಸಲ್ಲುತ್ತದೆ. ದೇಶದ ಅತ್ಯಧಿಕ ಕ್ಲಿಷ್ಟಕರ ರೈಲ್ವೆಯೆಂದು ಗುರುತಿಸಲ್ಪಡುವ ಕೊಂಕಣ ರೈಲ್ವೆಯ ಜವಾಬ್ದಾರಿಯನ್ನು ಈ. ಶ್ರೀಧರನ್ ಇವರು ಅತ್ಯಂತ ಕೌಶಲ್ಯಪೂರ್ಣವಾಗಿ ನಿಭಾಯಿಸಿದರು. ಆಂಗ್ಲರಿಂದಲೂ ಸಾಧ್ಯವಾಗದಿರುವುದನ್ನು ಶ್ರೀಧರನ್ ಇವರು ಪೂರ್ಣಗೊಳಿಸಿದರು. ಇಷ್ಟೇ ಅಲ್ಲ, ಕೋಲಕಾತಾದ ಮೆಟ್ರೋ ರೈಲ್ವೆಯನ್ನೂ ಅವರು ಪೂರ್ಣಗೊಳಿಸಿದರು. ನಾವಿಂದು ದೆಹಲಿಯಲ್ಲಿ ನೋಡುತ್ತಿರುವ ಮೆಟ್ರೋ ಜಾಲವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶ್ರೇಯಸ್ಸು ಸಂಪೂರ್ಣವಾಗಿ ಶ್ರೀಧರನ್ ಇವರಿಗೆ ಸಲ್ಲುತ್ತದೆ. ದೇಶದ ಇತರ ರಾಜ್ಯಗಳ ನಗರಗಳಲ್ಲಿ ನಿರ್ಮಿಸಲಾಗುತ್ತಿರುವ ಮೆಟ್ರೋ ಜಾಲಗಳಿಗೂ ಇವರೇ ಅಡಿಪಾಯವನ್ನು ಹಾಕಿದ್ದಾರೆ. ಶ್ರೀಧರನ್ ಇವರೇ ಹಾಕಿದ್ದಾರೆ. ೧೯೬೩ ನೇ ಇಸವಿಯಲ್ಲಿ ರಾಮೇಶ್ವರಮ್ ಮತ್ತು ತಮಿಳುನಾಡನ್ನು ಸಂಪರ್ಕಿಸುವ ರೈಲ್ವೆಯ ಪಂಬನ್ ಸೇತುವೆ ಮುರಿದಿತ್ತು. ರೈಲ್ವೆಯು ಅದನ್ನು ದುರಸ್ತಿ ಮಾಡಲು ೬ ತಿಂಗಳ ಗುರಿಯನ್ನು ನಿಗದಿಪಡಿಸಿತ್ತು. ಆದರೆ ಅಲ್ಲಿನ ಹಿರಿಯ ಅಧಿಕಾರಿಗಳು ಅದಕ್ಕಾಗಿ ೩ ತಿಂಗಳುಗಳ ಅವಧಿಯನ್ನು ನೀಡಿದ್ದರು; ಆದರೆ ಶ್ರೀಧರನ್ ಇವರಿಗೆ ಈ ಕೆಲಸವನ್ನು ವಹಿಸಿದ ಬಳಿಕ ಅವರು ಕೇವಲ ೪೫ ದಿನಗಳಲ್ಲಿ ಸೇತುವೆಯನ್ನು ದುರಸ್ತಿಗೊಳಿಸಿ ತೋರಿಸಿದರು.
ಇಸವಿ ೨೦೦೩ ರಲ್ಲಿ ಹೆಸರಾಂತ `ಟೈಮ್ಸ್’ ದಿನಪತ್ರಿಕೆಯು ಶ್ರೀಧರನ್ ಇವರನ್ನು ‘ಏಶಿಯಾ ಹೀರೋ’ ಎಂದು ಘೋಷಿಸಿತ್ತು. ಶ್ರೀಧರನ್ ಇವರ ವೈಶಿಷ್ಟ್ಯವೆಂದರೆ ನಿಗದಿಪಡಿಸಿದ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವುದು. ಭಾರತದಲ್ಲಿ ಸರಕಾರದ ಮಟ್ಟದಲ್ಲಿ ಯಾವುದೇ ಕೆಲಸಗಳು ಎಂದಿಗೂ ನಿಗದಿಪಡಿಸಿದ ಸಮಯದಲ್ಲಿ ಪೂರ್ಣಗೊಳ್ಳುವುದಿಲ್ಲ. ಆದರೆ ಅಲ್ಲಿ ಶ್ರೀಧರನ್‍ರಂತಹ ಅಧಿಕಾರಿಗಳು ಅದನ್ನು ಪೂರ್ಣಗೊಳಿಸಿ ತೋರಿಸುತ್ತಾರೆ. ಶ್ರೀಧರನ್ ಇದಕ್ಕೆ ಏಕೈಕ ಅಪವಾದ ಎನ್ನಬಹುದು. ಅವರಿಂದ ಈ ಗುಣವನ್ನು ಭಾರತದ ಪ್ರತಿಯೊಬ್ಬ ನಾಗರಿಕನು ಕಲಿಯುವ ಅವಶ್ಯಕತೆಯಿದೆ. ನೀಡಿರುವ ಕೆಲಸವನ್ನು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸುವ ನಿಯೋಜನೆ, ಅದರಲ್ಲಿ ಎದುರಾಗುವ ಅಡಚಣೆಯನ್ನು ದೂರಗೊಳಿಸುವುದು ಮುಂತಾದವುಗಳನ್ನು ನಿರೀಕ್ಷಣೆ ಮಾಡಿ, ಅದನ್ನು ಪ್ರತ್ಯಕ್ಷದಲ್ಲಿ ಕೃತಿಯಲ್ಲಿ ಜಾರಿ ಗೊಳಿಸಲು ಬಹುದೊಡ್ಡ ಕೌಶಲ್ಯದ ಅವಶ್ಯಕತೆಯಿರುತ್ತದೆ. ಇದು ಶ್ರೀಧರನ್ ಇವರಲ್ಲಿ ತುಂಬಿ ತುಳುಕುತ್ತಿದ್ದರಿಂದಲೇ ಈ ಕಾರ್ಯವನ್ನು ಲೀಲಾಜಾಲವಾಗಿ ಪೂರ್ಣಗೊಳಿಸಲು ಅವರಿಂದ ಸಾಧ್ಯವಾಯಿತು. ಅವರ ಈ ಕಾರ್ಯದಿಂದಲೇ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ನೀಡಿ ಸನ್ಮಾನಿಸಲಾಯಿತು.
ಸದ್ಯ ೮೮ ವರ್ಷದವರಾಗಿರುವ ಶ್ರೀಧರನ್ ರಾಜಕಾರಣದಲ್ಲಿ ಬರಲು ಇಚ್ಛಿಸುತ್ತಿದ್ದಾರೆ ಇದು ಭಾರತೀಯರ ದೃಷ್ಟಿಯಿಂದ ಒಳ್ಳೆಯ ವಿಷಯವಾಗಿದೆ. ಇಷ್ಟು ತಡವಾಗಿ ರಾಜಕಾರಣದಲ್ಲಿ ಬರಲು ಯಾವುದೇ ವ್ಯಕ್ತಿಯು ಇಚ್ಛಿಸುವುದು ಅತ್ಯಂತ ವಿರಳವೇ ಆಗಿರುತ್ತದೆ. ಶ್ರೀಧರನ್ ಇಚ್ಚಿಸಿದ್ದಾರೆ ಎಂದರೆ ಇದರ ಹಿಂದೆ ಖಂಡಿತವಾಗಿಯೂ ಅವರದ್ದೇ ಏನಾದರೂ ಯೋಜನೆಗಳಿರಬಹುದು ಮತ್ತು ಅದಕ್ಕನುಗುಣವಾಗಿ ಅವರು ಇಂತಹ ಹೆಜ್ಜೆಯನ್ನು ಇಟ್ಟಿರಬಹುದು ಎನ್ನುವುದರನ್ನು ಯಾವುದೇ ಸಂಶಯವಿಲ್ಲ. ಇದರಲ್ಲಿಯೂ ಅವರು ಖಂಡಿತವಾಗಿಯೂ ಯಶಸ್ವಿಯಾಗಬಹುದು ಎಂಬುದನ್ನು ಅವರ ಇತಿಹಾಸವನ್ನು ನೋಡಿ ಅಪೇಕ್ಷಿಸಬಹುದಾಗಿದೆ. ಶ್ರೀಧರನ್ ಭಾಜಪದಲ್ಲಿ ಪ್ರವೇಶಿಸುವುದು ಜಗಜ್ಜಾಹೀರಾಗಿದೆ ಮತ್ತು ಅವರೂ ಒತ್ತು ನೀಡಿದ್ದಾರೆ. ಈಗ ಕೇವಲ ಭಾಜಪ ಪ್ರವೇಶಿಸುವ ಔಪಚಾರಿಕತೆ ಬಾಕಿ ಉಳಿದಿದೆ. ಭಾರತೀಯ ರಾಜಕಾರಣದಲ್ಲಿ ಸದ್ಗುಣಗಳ ಗಣಿಯಾಗಿರುವ ಶ್ರೀಧರನ್‍ರಂತಹ ವ್ಯಕ್ತಿಯ ಆವಶ್ಯಕತೆ ಬಹಳವಿದೆ. ಭಾರತೀಯರ ದುರ್ದೈವವೆಂದರೆ ಅವರು ಯಾವತ್ತೂ ಉಚ್ಚ ಶಿಕ್ಷಣವನ್ನು ಪಡೆದ ಬಳಿಕ ರಾಜಕಾರಣದಲ್ಲಿ ಪ್ರವೇಶಿಸಿ ತನ್ಮೂಲಕ ಭಾರತದ ಅಭಿವೃದ್ಧಿಯ ವಿಚಾರ ಮಾಡಲಿಲ್ಲ. ಗೂಂಡಾ ಪ್ರವೃತ್ತಿಯ, ಅಶಿಕ್ಷಿತ ಅಥವಾ ಕಡಿಮೆ ಶಿಕ್ಷಣವನ್ನು ಪಡೆದ, ಚಾರಿತ್ರ್ಯಹೀನ, ಭ್ರಷ್ಟಾಚಾರಿ ಜನರೇ ಭಾರತೀಯ ರಾಜಕಾರಣದಲ್ಲಿ ರಾರಾಜಿಸುತ್ತಿರುವುದರಿಂದ ದೇಶಕ್ಕೆ ಅಪಾರ ಹಾನಿಯಾಗಿದೆ. ಇಂದಿಗೂ ಭಾರತೀಯರ ಮಾನಸಿಕತೆ ಅದೇರೀತಿ ಉಳಿದಿದೆ. ಅದರಲ್ಲಿಯೂ ಕೇವಲ ಉಚ್ಚ ಶಿಕ್ಷಿತರಾಗಿದ್ದು ಉಪಯೋಗವಿಲ್ಲ, ಆ ವ್ಯಕ್ತಿಯು ದೇಶಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತನಾಗಬೇಕು. ಇಲ್ಲದಿದ್ದರೆ ಇಂದು ದೇಶದ ಉಚ್ಚ ಶಿಕ್ಷಣವನ್ನು ಪಡೆದಿರುವವರು ರಾಜಕಾರಣದಲ್ಲಿ ಕಡಿಮೆಯೇನಿಲ್ಲ. ಆದರೆ ಅದರಲ್ಲಿ ಎಷ್ಟು ಜನರಲ್ಲಿ ಶ್ರೀಧರನ್‍ರಂತಹ ಸದ್ಗುಣಗಳಿವೆ ಮತ್ತು ಎಷ್ಟು ಜನರು ಸ್ವಚ್ಛ ರಾಜಕಾರಣಿಗಳಾಗಿದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಹಿಂದುತ್ವ ಮತ್ತು ಅಭಿವೃದ್ಧಿಯ ಆವಶ್ಯಕತೆ !
ಕೇರಳದಲ್ಲಿ ಶ್ರೀಧರನ್ ಇವರಿಗೆ ಭಾಜಪ ಯಾವುದೇ ಕಟ್ಟುಪಾಡುಗಳನ್ನು ವಿಧಿಸದೇ ಮುಕ್ತವಾಗಿ ಕೆಲಸ ಮಾಡಲು ಬಿಟ್ಟರೆ, ಅವರು ರಾಜಕಾರಣದ ಶುದ್ಧೀಕರಣವನ್ನು ಮಾಡಿ, ಅಭಿವೃದ್ಧಿಗಾಗಿ ಬಹಳ ಶ್ರಮಿಸಬಲ್ಲರು. ೮೮ ನೇ ವಯಸ್ಸಿನಲ್ಲಿಯೂ ಅವರ ಮಾತಿನಲ್ಲಿ ದೃಢತೆ, ಛಲ ಕಂಡು ಬಂದಿತು. ಅವರು ಹೇಳುವುದೇನೆಂದರೆ ‘ರಾಜಕಾರಣದಲ್ಲಿ ಬಂದು ರಾಜ್ಯಪಾಲರಾಗಲು ನನಗೆ ಆಸಕ್ತಿಯಿಲ್ಲ, ಆದರೆ ನನಗೆ ಮುಖ್ಯಮಂತ್ರಿಯಾಗಬೇಕೆಂದು ಅನಿಸುತ್ತದೆ’’ ಈ ಮಾತು ಶ್ರೀಧರನ್ ಇವರ ವ್ಯಕ್ತಿತ್ವಕ್ಕೆ ಹೊಂದುವಂತಿದೆ. ರಾಜ್ಯಪಾಲರಾಗಿ ರಬ್ಬರ್ ಸ್ಟ್ಯಾಂಪ್ ಆಗುವುದರಿಂದ ಶ್ರೀಧರನ್ ಇವರ ಗೌರವ ಕಡಿಮೆಯಾಗಬಹುದು. ಅದಕ್ಕಿಂತ ಮುಖ್ಯಮಂತ್ರಿಯಾಗಿ ಅವರು ಕೇರಳದ ನಕಾಶೆಯನ್ನೇ ಬದಲಾಯಿಸಿ ಮತ್ತು ಅದೂ ಅವರು ನಿರ್ಧರಿಸಿದ ಕಾಲಾವಧಿಯಲ್ಲಿ ಮಾಡುವ ಪ್ರಯತ್ನವನ್ನು ಮಾಡಬಲ್ಲರು. ಇದಕ್ಕಾಗಿ ಕೇರಳದ ಜನತೆಯು ಅವರ ಬೆನ್ನಿಗೆ ದೃಢವಾಗಿ ನಿಲ್ಲುವ ಅವಶ್ಯಕತೆಯಿದೆ. ಕೇರಳದ ಜನತೆಯು ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷಗಳ ಆಡಳಿತವನ್ನು ನೋಡಿದೆ. ದೇಶದ ಹಿತಕ್ಕಾಗಿ ಈಗ ಅವರು ಶ್ರೀಧರನ್ ಇವರ ನಾಯಕತ್ವದಲ್ಲಿ ಭಾಜಪದ ಸರಕಾರವನ್ನು ನೋಡಬೇಕು ಎಂದು ಅನಿಸುತ್ತದೆ. ಶ್ರೀಧರನ್ ಎಂದರೆ ‘ಹೆಸರೊಂದಿದ್ದರೆ ಸಾಕು !’ ಎಂದು ಹೇಳಬಹುದು. ಶ್ರೀಧರನ್ ಇವರು ಹಿಂದುತ್ವದ ವಿಚಾರವನ್ನು ಅಂಗೀಕರಿಸಿರುವುದು ಅವರ `ಲವ್ ಜಿಹಾದ್’ಅನ್ನು ವಿರೋಧಿಸಿದಾಗಲೇ ಸ್ಪಷ್ಟವಾಗಿದೆ. ಕೇರಳದಲ್ಲಿ ‘ಲವ್ ಜಿಹಾದ್’ ಸಂಕಟ ಬಹಳ ದೊಡ್ಡದಾಗಿದೆ ಮತ್ತು ಅದನ್ನು ಹಿಂದೂ ಮತ್ತು ಕ್ರೈಸ್ತರು ಬಹಳ ದೊಡ್ಡ ಪ್ರಮಾಣದಲ್ಲಿ ಅನುಭವಿಸುತ್ತಿದ್ದಾರೆ. ಕೇರಳ ಜನತೆಗೆ ಪರ್ಯಾಯ ಉಪಲಬ್ಧವಿಲ್ಲದಿರುವುದರಿಂದ ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಾರ್ಟಿ ಅಥವಾ ಕಾಂಗ್ರೆಸ್ ಇವರ ಸುತ್ತನೇ ಅಧಿಕಾರ ತಿರುಗುತ್ತ ಉಳಿದಿದೆ. ಅದಕ್ಕೆ ಮುಸಲ್ಮಾನರ ಜನಸಂಖ್ಯೆಯೂ ಕಾರಣವಾಗಿದೆ. ಭಾಜಪದ ವರ್ಚಸ್ಸು ಬಹಳವಿಲ್ಲದಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ, ಆದರೆ ಈಗ ಶ್ರೀಧರನ್ ಇವರಿಂದ ಏನಾದರೂ ಚಮತ್ಕಾರವಾಗಬೇಕು ಎಂದಾದರೆ ಜನತೆಯು ಅವರನ್ನು ಬೆಂಬಲಿಸಬೇಕು. ಅವರ ವಯಸ್ಸು ೮೮ ವರ್ಷವಾಗಿದ್ದರೂ ಅವರ ಪ್ರಬಲ ಇಚ್ಛಾಶಕ್ತಿಯು ಕಂಡು ಬರುತ್ತಿದೆ. ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ. ಮುಂಬರುವ ಮೇ ತಿಂಗಳಲ್ಲಿ ಕೇರಳದಲ್ಲಿ ಚುನಾವಣೆಗಳು ಜರುಗಲಿವೆ. ಮುಂದಿನ ೨-೩ ತಿಂಗಳುಗಳಲ್ಲಿ ಭಾಜಪಕ್ಕೆ ಬಹಳಷ್ಟು ಕಾರ್ಯಗಳನ್ನು ಮಾಡಬೇಕಾಗಬಹುದು.
ಬಂಗಾಳ ಮತ್ತು ಕೇರಳ ಈ ಎರಡೂ ರಾಜ್ಯಗಳ ಹಿಂದೂಗಳ ದಯನೀಯ ಸ್ಥಿತಿಯನ್ನು ನೋಡಿದರೆ ಮತ್ತು ಮತಾಂಧರ ಅತ್ಯಾಚಾರವನ್ನು ನೋಡಿದರೆ ಇಲ್ಲಿಯ ಆಡಳಿತ ಬದಲಾಗುವುದು ಹಿಂದೂಗಳಿಗೆ ಆವಶ್ಯಕವಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಪಾಯವನ್ನು ನೋಡಿದರೆ ಕೇರಳದಲ್ಲಿಯಂತೂ ಅತ್ಯಾವಶ್ಯಕವೇ ಆಗಿದೆ. ಪಿ.ಎಫ್.ಐ. ಮೋಪಲಾ ಹತ್ಯಾಕಾಂಡದ ಶತಮಾನೋತ್ಸವವನ್ನು ಆಚರಿಸಿ ಹಿಂದೂಗಳ ಗಾಯದ ಮೇಲೆ ಬರೆ ಎಳೆದಿದೆ. ಪಿ.ಎಫ್.ಐ.ಅನ್ನು ನಿಷೇಧಿಸುವಂತೆ ಕಳೆದ ಕೆಲವು ವರ್ಷಗಳಿಂದ ಕೋರುತ್ತಿದ್ದರೂ ಹಿಂದಿನ ಕಾಂಗ್ರೆಸ್ ಸರಕಾರ ಮೀನಮೇಷ ಎಣಿಸಿತು. ಆದರೆ ಈಗಿನ ಭಾಜಪ ಅದನ್ನು ಮಾಡಿ ‘ಹಿಂದೂಗಳಿಗಾಗಿ ಏನಾದರೂ ಮಾಡಲು ಪ್ರಯತ್ನಿಸುವುದು’, ಎನ್ನುವ ವಿಶ್ವಾಸವನ್ನು ಕೇರಳದ ಹಿಂದೂಗಳಲ್ಲಿಯಾದರೂ ಚುನಾವಣೆಯ ಹಿನ್ನೆಲೆಯಲ್ಲಿ ಮೂಡಿಸಬೇಕು. ಇದರಿಂದ ಚುನಾವಣೆಯಲ್ಲಿ ಪ್ರಯೋಜನವಾಗುತ್ತದೆಯೋ ಇಲ್ಲವೋ ಚುನಾವಣೆಯಲ್ಲಿ ಲಭಿಸುವುದೋ ಅಥವಾ ಇಲ್ಲವೋ ಎನ್ನುವ ವಿಚಾರವನ್ನು ಮಾಡದೇ ಅದನ್ನು ಮಾಡಬೇಕು. ಕೇರಳದಲ್ಲಿ ಪುನಃ ಮುಸಲ್ಮಾನರಿಗಾಗಿ ಸ್ವತಂತ್ರ ಮುಸಲ್ಮಾನ ಪ್ರಾಬಲ್ಯವಿರುವ ‘ಮಲಬಾರ’ ರಾಜ್ಯಬೇಕೆಂದು ಧ್ವನಿಯೆತ್ತಲಾಗುತ್ತಿದೆ. ಅದನ್ನು ತಡೆಯುವ ಅವಶ್ಯಕತೆಯಿದೆ; ಕಾರಣವೆಂದರೆ ಯಾವ ರೀತಿ ಭಾರತದ ಇಬ್ಭಾಗಕ್ಕಾಗಿ ಅನೇಕ ವರ್ಷಗಳಿಂದ ಮುಸಲ್ಮಾನರ ಬೇಡಿಕೆಯಿತ್ತೋ ಮತ್ತು ಕೊನೆಗೂ ಅವರು ಅದನ್ನು ಲಕ್ಷಾಂತರ ಹಿಂದೂಗಳ ಹತ್ಯೆಯನ್ನು ಮಾಡಿ ಪೂರ್ಣಗೊಳಿಸಿದರು. ಆ ಪರಿಸ್ಥಿತಿಯು ಬರಬಾರದು. ಅದಕ್ಕಾಗಿ ಕೇರಳದಲ್ಲಿ ಅಧಿಕಾರ ಪರಿವರ್ತನೆಯಾಗುವುದು ಆವಶ್ಯಕವಾಗಿದೆ. ಭಾಜಪವು ಶ್ರೀಧರನ್ ಇವರ ನಾಯಕತ್ವದಲ್ಲಿ ಕೇರಳದ ಅಭಿವೃದ್ಧಿಯ ‘ನೀಲನಕ್ಷೆ’ ಸಿದ್ಧಪಡಿಸಿ ಪ್ರಚಾರ ಮಾಡಬೇಕು. ಅದರಲ್ಲಿಯೂ ಪ್ರತಿಯೊಂದು ಆಶ್ವಾಸನೆಯನ್ನು ಅಧಿಕಾರಕ್ಕೆ ಬಂದರೆ ಎಷ್ಟು ದಿನಗಳಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ದಿನಾಂಕದೊಂದಿಗೆ ಘೋಷಿಸಬೇಕು ಎಂದೆನಿಸುತ್ತದೆ. ಮುಖ್ಯಮಂತ್ರಿಗಳಾದರೆ ಶ್ರೀಧರನ್ ಆ ದೃಷ್ಟಿಯಿಂದ ಪ್ರಯತ್ನಿಸುವರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.