ಸನಾತನ ಸಾಧಕಿ ಸೌ. ಛಾಯಾ ಪಾಟೀಲ ಇವರು ಬರೆದ ಪ್ರಬಂಧ ಅಂತಾರಾಷ್ಟ್ರೀಯ ಜರ್ನಲ್‍ನಲ್ಲಿ ಮುದ್ರಣ

ಸೌ. ಛಾಯಾ ಪಾಟೀಲ

ಬಾಗಲಕೋಟೆಯ ಸನಾತನದ ಸಾಧಕಿ ಸೌ. ಛಾಯಾ ಪಾಟೀಲ ಇವರು ಬೇವಿನೆಲೆಯ ಔಷಧೀಯ ಮಹತ್ವದ ಬಗ್ಗೆ ಬರೆದ ಪ್ರಬಂಧವು ಅಂತಾರಾಷ್ಟ್ರೀಯ ಮಟ್ಟದ ‘Journal of phytochemistry’ ಎಂಬ ಜರ್ನಲ್‍ನಲ್ಲಿ ಮುದ್ರಣವಾಗಿದೆ. ಮೈಕ್ರೋಬಯೋಲಾಜಿಯಲ್ಲಿ ಸ್ನಾತಕೋತ್ತರಪದವಿ ಪಡೆದಿರುವ ಇವರು ೮ ವರ್ಷಗಳಿಂದ ಸನಾತನದ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿದ್ದಾರೆ. ಗುರುಗಳ ಕೃಪೆ ಹಾಗೂ ತಂದೆ, ತಾಯಿ ಮತ್ತು ಪತಿಯವರ ಸಹಾಯದಿಂದಲೇ ಇದು ಸಾಧ್ಯವಾಯಿತು, ಅದಕ್ಕಾಗಿ ಕೃತಜ್ಞತೆಗಳು ಎಂದು ಹೇಳಿದ್ದಾರೆ.