ಬಿಸ್ಕೇಟ್‍ಗಳನ್ನು ತಯಾರಿಸುವಾಗ ಅವುಗಳಿಗೆ ವಿವಿಧ ಆಕಾರಗಳನ್ನು (shapes) ನೀಡುವುದರಿಂದ ಅವುಗಳ ಮೇಲೆ ಆಧ್ಯಾತ್ಮಿಕದೃಷ್ಟಿಯಲ್ಲಿ ಆಗುವ ಪರಿಣಾಮಗಳನ್ನು ಅರಿತುಕೊಳ್ಳಿರಿ !
ಆಹಾರ ಮತ್ತು ಆಚಾರಗಳ ಕುರಿತು ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ |
ಬೇಕರಿಯಲ್ಲಿ ಬಿಸ್ಕೇಟ್‍ಗಳನ್ನು ತಯಾರಿಸುವಾಗ ಅವುಗಳನ್ನು ಆಯತಾಕೃತಿ, ಚೌಕೋನ, ವರ್ತುಲಾಕಾರ, ನಕ್ಷತ್ರ, ಹೂವುಗಳು ಮುಂತಾದ ವಿವಿಧ ಆಕಾರಗಳಲ್ಲಿ (shapes) ತಯಾರಿಸಲಾಗುತ್ತದೆ. ಹಾಗೆಯೇ ಬಿಸ್ಕೇಟ್‍ಗಳು ಆಕರ್ಷಕವಾಗಿ ಕಾಣಿಸಬೇಕೆಂದು ಬಿಸ್ಕೇಟ್‍ಗಳ ಮೇಲೆ ಕಲಾಕುಸುರಿಯನ್ನು ಮಾಡಲಾಗುತ್ತದೆ, ಉದಾ. ಅವುಗಳ ಮೇಲೆ ಉದ್ದನೆಯ ಅಥವಾ ಅಡ್ಡ ಗೆರೆಗಳನ್ನು ಮೂಡಿಸುವುದು, ವಿವಿಧ ಆಕೃತಿಗಳನ್ನು ಮೂಡಿಸುವುದು ಇತ್ಯಾದಿ. ವಿವಿಧ ಆಕಾರಗಳ ಬಿಸ್ಕೇಟ್‍ಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೧೩.೧೨.೨೦೨೦ ಈ ದಿನದಂದು ರಾಮನಾಥಿ (ಗೋವಾ) ಯಲ್ಲಿನ ಸನಾತನದ ಆಶ್ರಮದಲ್ಲಿ ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷೆಯನ್ನು ಮಾಡಲಾಯಿತು. ಪರೀಕ್ಷೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಸನಾತನದ ಆಶ್ರಮದ ಬೇಕರಿಯಲ್ಲಿ ತಯಾರಿಸಿದ ಆಯತಾಕೃತಿ, ಚೌಕೋನ, ವರ್ತುಲಾಕಾರ, ನಕ್ಷತ್ರ, ಹೂವುಗಳು ಇತ್ಯಾದಿ ವಿವಿಧ ಆಕಾರಗಳ ಬಿಸ್ಕೇಟ್‍ಗಳ ನಿರೀಕ್ಷಣೆಯನ್ನು ಮಾಡಲಾಯಿತು. ಅದನ್ನು ಮುಂದೆ ಕೊಡಲಾಗಿದೆ.
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ – ಅಸಾತ್ತ್ವಿಕ ಆಕಾರಗಳ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಸ್ಪಂದನಗಳು, ಸಾತ್ತ್ವಿಕ ಆಕಾರಗಳ ಬಿಸ್ಕೇಟ್‍ಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಇದು ಮುಂದೆ ಕೊಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.
೧. ಸ್ಟಾರ್ ಮತ್ತು ರೆನಡ್ರಾಪ್ ಈ ಆಕಾರಗಳ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಅವುಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು.
೨. ಆರು ಪಕಳೆಗಳ ಹೂವಿನ ಆಕಾರದ ಬಿಸ್ಕೇಟ್‍ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಹದಿನೈದು ಪಕಳೆಗಳ ಹೂವಿನ ಆಕಾರದ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ. ಈ ಎರಡೂ ಬಿಸ್ಕೇಟ್‍ಗಳಲ್ಲಿ ಸ್ಟಾರ್ ಮತ್ತು ರೆನಡ್ರಾಪ್ ಈ ಆಕಾರಗಳ ಬಿಸ್ಕೇಟ್‍ಗಳ ತುಲನೆಯಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಇತ್ತು.
೩. ಆಯತಾಕೃತಿ, ಚೌಕೋನ ಮತ್ತು ವರ್ತುಲಾಕಾರಗಳ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಊರ್ಜೆಯು ಇರಲೇ ಇಲ್ಲ. ಬದಲಾಗಿ ಬಹಳ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು. ಆಯತಾಕೃತಿಗಿಂತ ಚೌಕೋನ ಆಕಾರದ ಬಿಸ್ಕೇಟ್‍ಗಳಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಇದೆ.
೪. ವರ್ತುಲಾಕಾರಗಳ ಬಿಸ್ಕೇಟ್‍ಗಳ ಪೈಕಿ ಕಲಾಕುಸುರಿ ಇರದ ಬಿಸ್ಕೇಟ್‍ಗಳಲ್ಲಿ ಅತ್ಯಧಿಕ ಸಕಾರಾತ್ಮಕ ಊರ್ಜೆ ಇದೆ.
೨. ನಿಷ್ಕರ್ಷ
ಸ್ಟಾರ್ ಮತ್ತು ರೆನಡ್ರಾಪ್ ಇವುಗಳಂತಹ ಆಕಾರಗಳು ಅಸಾತ್ತ್ವಿಕವಾಗಿವೆ. ಹೂವುಗಳ ಆಕಾರಕ್ಕಿಂತ ಆಯತಾಕೃತಿ, ಚೌಕೋನ ಮತ್ತು ವರ್ತುಲಾಕಾರ ಈ ಆಕಾರಗಳು ಉತ್ತರೋತ್ತರ ಹೆಚ್ಚು ಸಾತ್ತ್ವಿಕವಾಗಿವೆ. ಬಿಸ್ಕೇಟ್‍ಗಳನ್ನು ತಯಾರಿಸುವಾಗ ಸಾತ್ತ್ವಿಕ ಆಕಾರದಲ್ಲಿ ತಯಾರಿಸುವುದು ಆವಶ್ಯಕವಾಗಿದೆ, ಎಂದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.
೩. ಪರೀಕ್ಷೆಯಲ್ಲಿ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಅಸಾತ್ತ್ವಿಕ ಆಕಾರಗಳಿಂದ ನಕಾರಾತ್ಮಕ ಸ್ಪಂದನಗಳು ಮತ್ತು ಸಾತ್ತ್ವಿಕ ಆಕಾರಗಳಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಪ್ರತಿಯೊಂದು ಆಕಾರದ ಸ್ಪಂದನಗಳು ಬೇರೆಯಾಗಿರುತ್ತವೆ. ಸ್ಪಂದನಗಳಿಗನುಸಾರ ಆಕಾರಗಳ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಈ ರೀತಿ ವಿಭಜನೆ ಮಾಡಬಹುದು. ಪರೀಕ್ಷಣೆಯಲ್ಲಿ ಬಿಸ್ಕೇಟ್ ಗಳಿಗೆ ಚೌಕೋನ, ಆಯತಾಕೃತಿ, ವರ್ತುಲಾಕಾರ, ಸ್ಟಾರ್, ರೆನಡ್ರಾಪ್ ಮುಂತಾದ ವಿವಿಧ ಆಕಾರಗಳನ್ನು ನೀಡಲಾಗಿತ್ತು, ಹಾಗೆಯೇ ವರ್ತುಲಾಕಾರದ ಬಿಸ್ಕೇಟ್‍ಗಳ ಮೇಲೆ ದಪ್ಪ-ತೆಳು ಗೆರೆಗಳನ್ನು ಮೂಡಿಸಲಾಗಿತ್ತು. ಬಿಸ್ಕೇಟ್‍ಗಳಿಂದ ಪ್ರಕ್ಷೇಪಿತವಾಗುವ ಒಳ್ಳೆಯ ಅಥವಾ ತೊಂದರೆದಾಯಕ ಸ್ಪಂದನಗಳು ಈ ಬಿಸ್ಕೇಟ್‍ಗಳ ಆಕಾರ (Shapes), ಅವುಗಳ ಮೇಲೆ ಮೂಡಿಸಲಾದ ಆಕೃತಿಗಳು ಮತ್ತು ಅವುಗಳ ರಚನೆ ಇತ್ಯಾದಿ ಘಟಕಗಳ ಮೇಲೆ ಅವಲಂಬಿಸಿರುತ್ತದೆ. ಬಿಸ್ಕೇಟ್‍ಗಳ ಆಕಾರ ಮತ್ತು ಅವುಗಳ ಮೇಲಿನ ಆಕೃತಿಗಳು ಎಷ್ಟು ಸಾತ್ತ್ವಿಕವೋ, ಅಷ್ಟು ಅವುಗಳಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಇದುವೇ ಈ ಪರೀಕ್ಷಣೆಯಿಂದ ಮುಂದಿನ ರೀತಿಯಲ್ಲಿ ಬಂದಿತು.
೩ ಅ ೧. ಅಸಾತ್ತ್ವಿಕ ಆಕಾರದ ಬಿಸ್ಕೇಟ್‍ಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಸ್ಟಾರ್ ಮತ್ತು ರೆನಡ್ರಾಪ್ ಈ ಆಕಾರಗಳಲ್ಲಿ ಬಿಸ್ಕೇಟ್ ಗಳಿಗೆ ಚೂಪಾದ ಆಕಾರವು ಪ್ರಾಪ್ತವಾಗುತ್ತದೆ. ಮೊನೆಗಳಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಆದ್ದರಿಂದ ಈ ಎರಡೂ ಆಕಾರಗಳಲ್ಲಿ ಬಿಸ್ಕೇಟ್‍ಗಳನ್ನು ತಯಾರಿಸುವುದು ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಿದೆ.
೩ ಅ ೨. ಹೂವುಗಳ ಆಕಾರದ ಬಿಸ್ಕೇಟ್‍ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು: ಹೂವುಗಳ ಆಕಾರದ ಬಿಸ್ಕೇಟ್‍ಗಳಿಗಿಂತ ಆಯತ, ಚೌಕೋನ ಮತ್ತು ರ್ತುಲಾಕಾರದ ಬಿಸ್ಕೇಟ್‍ಗಳಲ್ಲಿ ಬಹಳ ಹೆಚ್ಚು ಸಕಾರಾತ್ಮಕ ಸ್ಪಂದನಗಳಿವೆ. ಇದರಿಂದ ಬಿಸ್ಕೇಟ್ ಗಳನ್ನು ಹೂವಿಗಿಂತ ಆಯತ, ಚೌಕೋನ ವರ್ತುಲ ಈ ಆಕಾರಗಳಲ್ಲಿ ತಯಾರಿಸುವುದು ಆರೋಗ್ಯದ ದೃಷ್ಟಿಯಿಂದ ಲಾಭದಾಯಕವಿದೆ.
೩ ಅ ೩. ಸಾತ್ತ್ವಿಕ ಆಕಾರದ ಬಿಸ್ಕೇಟ್‍ಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಆಯತಾಕೃತಿ, ಚೌಕೋನ ಮತ್ತು ವರ್ತುಲಾಕಾರದ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಸ್ಪಂದನಗಳು ಇರಲೇ ಇಲ್ಲ ಬದಲಾಗಿ ಬಹಳ ಸಕಾರಾತ್ಮಕ ಸ್ಪಂದನಗಳಿವೆ. ಅದರಲ್ಲೂ ವರ್ತುಲಾಕಾರದ ಕಲಾಕುಸುರಿ ಇಲ್ಲದ ಬಿಸ್ಕೇಟ್‍ಗಳಲ್ಲಿ ಅತ್ಯಧಿಕ ಸಕಾರಾತ್ಮಕ ಸ್ಪಂದನಗಳಿವೆ. ಇದರಿಂದ ಬಿಸ್ಕೇಟ್‍ಗಳನ್ನು ತಯಾರಿಸುವಾಗ ವರ್ತುಲಾಕಾರದಲ್ಲಿ ಮತ್ತು ಅದರ ಮೇಲೆ ಕಲಾಕುಸುರಿ ಮೂಡಿಸದೇ ತಯಾರಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಧಿಕ ಲಾಭದಾಯಕವಾಗಿದೆ, ಎಂದು ಗಮನಕ್ಕೆ ಬರುತ್ತದೆ. (ಸನಾತನದ ಆಶ್ರಮದ ಬೇಕರಿಯಲ್ಲಿ ಕಲಾಕುಸುರಿ ಇಲ್ಲದ ವರ್ತುಲಾಕಾರದ ಬಿಸ್ಕೇಟ್‍ಗಳನ್ನೇ ಏಕೆ ತಯಾರಿಸಲಾಗುತ್ತದೆ ? ಎಂಬುದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ. – ಸಂಕಲನಕಾರರು) ಸ್ವಲ್ಪದರಲ್ಲಿ, ಬಿಸ್ಕೇಟ್‍ಗಳಂತಹ ಪದಾರ್ಥವನ್ನು ತಯಾರಿಸು ವಾಗ ಇತರ ಘಟಕಗಳೊಂದಿಗೆ (ಉದಾ. ಪದಾರ್ಥವನ್ನು ತಯಾರಿಸುವ ಸ್ಥಳ, ತಯಾರಿಸುವ ವ್ಯಕ್ತಿ, ಬೇಕಾಗಿರುವ ಸಾಮಗ್ರಿಗಳು ಇತ್ಯಾದಿ ಸಹಿತ) ಅದರ ಆಕಾರವೂ ಸಾತ್ತ್ವಿಕವಾಗಿರುವುದು ಆವಶ್ಯಕವಾಗಿದೆ, ಎಂದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧೨.೨೦೨೦)
ವಿ-ಅಂಚೆ : [email protected]