ಸನಾತನವು ಕಳೆದ ಅನೇಕ ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಈಗ ಬಾಗಿಲಿನ ಹೊಸ್ತಿಲಿನ ಮೇಲೆ ಬಂದು ನಿಂತಿದೆ. ಅದು ಯಾವುದೇ ಕ್ಷಣ ಒಳಗೆ ಬರಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿದ ಕರೋನಾ ಮಹಾಮಾರಿಯೂ ಆಪತ್ಕಾಲದ ಒಂದು ಸಣ್ಣ ಮಾದರಿಯೇ ಆಗಿದೆ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಇದರಲ್ಲಿ ಮಾನವನಿರ್ಮಿತ ಮತ್ತು ನೈಸರ್ಗಿಕ ಎರಡೂ ವಿಪತ್ತುಗಳೂ ಇರಲಿವೆ, ಆಪತ್ಕಾಲವು ವಿಭಿನ್ನ ರೂಪಗಳಲ್ಲಿ ಬಂದೆರಗಲಿದೆ. ಅವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ ನೋಡಲಿದ್ದೇವೆ. ಈ ಆಪತ್ಕಾಲದಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಸ್ವಲ್ಪ ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸಿದೆ. ಈ ಲೇಖನ ಮಾಲಿಕೆಯಲ್ಲಿ ಜೈವಿಕ ಆಕ್ರಮಣಗಳು ಮತ್ತು ಅದಕ್ಕಾಗಿ ಮಾಡಬೇಕಾದ ಪರಿಹಾರೋಪಾಯಗಳ ಮಾಹಿತಿಯನ್ನು ನೀಡಲಾಗಿದೆ.
(ಭಾಗ ೩)
೧ ಆ. ಜೈವಿಕ ಅಸ್ತ್ರಗಳಿಂದ ಆಕ್ರಮಣ
೧ ಆ ೧. ‘ಜೈವಿಕಅಸ್ತ್ರ’ ಎಂದರೇನು ? : ಮಾನವರು, ಪ್ರಾಣಿಗಳು ಮತ್ತು ಬೆಳೆಗಳಿಗೆ ರೋಗ ಹರಡಲು ಅಸ್ತ್ರವಾಗಿ ಬಳಸುವ ವಿಷಾಣುಗಳನ್ನು (ಬ್ಯಾಕ್ಟೀರಿಯಾ ಅಥವಾ ವೈರಸ್‍ಗಳನ್ನು) ಜೈವಿಕ ಅಸ್ತ್ರಗಳು ಎಂದು ಕರೆಯಲಾಗುತ್ತದೆ. ಜಾನುವಾರುಗಳಿಗೆ ತಗಲುವ ಸೋಂಕು (ಆಂಥ್ರಾಕ್ಸ್), ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ತಗಲುವ ಗ್ಲ್ಯಾಂಡರ್ಸ, ಎರಡು ದಿನಕ್ಕೊಮ್ಮೆ ಕಾಣಿಸುವ ಜ್ವರ (ಬ್ರೂಸೆಲೋಸಿಸ್), ಕಾಲರಾ, ಪ್ಲೇಗ್, ಮೆಲಿಯೊಯ್ಡೋಸಿಸ್ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳನ್ನು ‘ಜೈವಿಕ ಅಸ್ತ್ರಗಳಾಗಿ’ ಬಳಸಲಾಗುತ್ತದೆ.
೧ ಆ ೨. ಜೈವಿಕ ಅಸ್ತ್ರಗಳ ದಾಳಿಯ ಸ್ವರೂಪ
೧. ಜೈವಿಕ ಅಸ್ತ್ರಗಳಿಂದ ದಾಳಿ ನಡೆಸಲು ಪ್ರಾಣಿಗಳು, ಪಕ್ಷಿಗಳು, ಮಾನವರು, ವಾಯು, ಅನಿಲ ಇತ್ಯಾದಿಗಳ ಬಳಕೆ : ಜೈವಿಕ ಅಸ್ತ್ರಗಳ ದಾಳಿಯ ಸಮಯದಲ್ಲಿ, ಕಾಲರಾದಂತಹ ಮೇಲೆ ತಿಳಿಸಲಾದ ರೋಗಗಳ ವೈರಸ್‍ಗಳನ್ನು ಗಾಳಿಯ ಮೂಲಕ ಅಥವಾ ಸೋಂಕಿತ ಪ್ರಾಣಿ, ಪಕ್ಷಿ, ಮಾನವರನ್ನು ಶತ್ರು ರಾಷ್ಟ್ರದಲ್ಲಿ ಬಿಡಲಾಗುತ್ತದೆ. ಈ ಕಾಯಿಲೆಯಿಂದ ಶತ್ರು ರಾಷ್ಟ್ರದ ಜೀವ, ಆಸ್ತಿ ಇತ್ಯಾದಿಗಳಿಗೆ ಅಪಾರ ಹಾನಿಯಾಗುತ್ತದೆ.
೨. ಜೈವಿಕ ಅಸ್ತ್ರಗಳ ದಾಳಿಯನ್ನು ಗುರುತಿಸುವುದು ಕಷ್ಟ : ಈ ದಾಳಿ ಸಾಮಾನ್ಯ ಬಾಂಬ್, ಕ್ಷಿಪಣಿ ಅಥವಾ ವಾಯುದಾಳಿಯಂತೆ ಆಗಿರುವುದಿಲ್ಲ. ಆದ್ದರಿಂದ, ಜೈವಿಕ ಅಸ್ತ್ರಗಳಿಂದ ತಮ್ಮ ಮೇಲೆ ದಾಳಿ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಯುವುದು ಕಷ್ಟ. ದೇಶದಲ್ಲಿ ಎಲ್ಲೋ ಒಂದು ಕಡೆ ಅಥವಾ ದೇಶದಲ್ಲಿ ಏಕಕಾಲಕ್ಕೆ ಎಲ್ಲೆಡೆ ಒಂದು ರೋಗ ಹಠಾತ್ತನೆ ಹರಡಿದರೆ, ಅದು ಶತ್ರು ರಾಷ್ಟ್ರದ ಆಕ್ರಮಣದಿಂದಾಗಿರಬಹುದು.
೩. ಜೈವಿಕ ಅಸ್ತ್ರಗಳಿಂದ ದಾಳಿ ಮಾಡುವ ಶತ್ರು ರಾಷ್ಟ್ರಗಳನ್ನು ಗುರುತಿಸುವುದು ಸಹ ಕಷ್ಟ : ‘ಜೈವಿಕ ಅಸ್ತ್ರಗಳನ್ನು ಬಳಸಿ ಶತ್ರುಗಳು ದಾಳಿಯನ್ನು ನಡೆಸಿದ್ದಾರೆ’ ಎಂದು ಗುರುತಿಸುವುದು ಸಹ ಕಷ್ಟ. ಕೊರೋನಾ ವೈರಸ್ ಅನ್ನು ಚೀನಾ ಜೈವಿಕ ಅಸ್ತ್ರವಾಗಿ ಅಭಿವೃದ್ಧಿಪಡಿಸಿ ಶತ್ರು ರಾಷ್ಟ್ರಗಳಲ್ಲಿ ಹರಡಿತು ಎಂದು ಆರೋಪಿಸಲಾಗಿದೆ.
೪. ಸರಕಾರದ ಪ್ರಕಟಣೆಯಿಲ್ಲದೆ ಜೈವಿಕ ಅಸ್ತ್ರಗಳ ದಾಳಿಯ ನಂತರ ಏನು ಮಾಡಬೇಕೆಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ : ಜೈವಿಕ ಅಸ್ತ್ರಗಳ ದಾಳಿಯು ಹೆಚ್ಚಾಗಿ ಸಾಂಕ್ರಾಮಿಕವಾಗಿರುತ್ತದೆ. ‘ಜೈವಿಕ ಆಕ್ರಮಣ ನಡೆದಿದೆ ಮತ್ತು ಅದು ಯಾವ ರೀತಿಯದ್ದಾಗಿದೆ’ ಎಂದು ಸರಕಾರವು ಅಧಿಕೃತವಾಗಿ ಹೇಳದೇ ‘ಇದರ ಬಗ್ಗೆ ಯಾವ ಕಾಳಜಿ ವಹಿಸಬೇಕು ?’ ಎಂದು ತೀರ್ಮಾನಕ್ಕೆ ಬರಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ.
೫. ಜೈವಿಕ ಅಸ್ತ್ರಗಳ ಬಳಕೆಯಾಗದೆ ಹಠಾತ್ತನೆ ಹರಡುವ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡು ಆಗುವ ಅಪಾರ ಹಾನಿ : ಯಾವುದೇ ಶತ್ರುಗಳು ಜೈವಿಕ ಅಸ್ತ್ರಗಳಿಂದ ದಾಳಿ ಮಾಡದೇ ಕೇವಲ ಸಾಂಕ್ರಾಮಿಕ ರೋಗಗಳು ಮಾತ್ರ ಹರಡಿದರೂ, ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿಯ ಹಾನಿಯಾಗುತ್ತದೆ. ಇಂದಿನವರೆಗೆ ಪ್ಲೇಗ್ ವಿಶ್ವದಲ್ಲಿ ಅತಿಹೆಚ್ಚು ಅಂದರೆ ಅನೇಕ ಕೋಟಿ ಜನರ ಪ್ರಾಣವನ್ನು ಬಲಿ ಪಡೆದಿದೆ. ಕಾಲರಾ, ಮಲೇರಿಯಾ, ಇನ್ಫ್ಲುಯೆನ್ಸಾ (ಶೀತ ಜ್ವರ), ಚಿಕನ್ ಪಾಕ್ಸ್, ವೂಪಿಂಗ್ ಕಾಫ್, ಡಿಪ್ತೀರಿಯ, ಕ್ಷಯ, ಕುಷ್ಠರೋಗ ಸಾಂಕ್ರಾಮಿಕ ರೋಗಗಳ ಕೆಲವು ಉದಾಹರಣೆಗಳು. `ಕೋವಿಡ್ 19‘ ಅಂದರೆ ‘ಕೊರೋನಾ’ ಇದಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಉದಾಹರಣೆಯಾಗಿದೆ. ೧೨ ಫೆಬ್ರವರಿ ೨೦೨೧ ರವರೆಗೆ, ವಿಶ್ವದಾದ್ಯಂತ ೧೦ ಕೋಟಿ ೮೨ ಲಕ್ಷ ೯೮ ಸಾವಿರ ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದು ಮತ್ತು ಅವರಲ್ಲಿ ೨೩ ಲಕ್ಷ ೭೮ ಸಾವಿರ ೮೭೩ ಜನರು ಸಾವನ್ನಪ್ಪಿದ್ದಾರೆ.
೧ ಆ ೩. ಜೈವಿಕ ಅಸ್ತ್ರಗಳು ಅಥವಾ ಇತರ ವಿಧಾನಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಲವು ಮುಂಜಾಗ್ರತೆಯ ಕ್ರಮಗಳು : ಜೈವಿಕ ಅಸ್ತ್ರಗಳ ಮೂಲಕ ಯಾವ ವಿಷಾಣುವಿನ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದುಬಂದರೆ ಸೂಕ್ತ ಪ್ರತಿಜೀವಕಗಳನ್ನು (antibiotics) ಬಳಸುವ, ಲಸಿಕೆಗಳನ್ನು ತಯಾರಿಸುವ ಮುಂತಾದ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ ಜೈವಿಕ ಅಸ್ತ್ರಗಳಿಂದ ದಾಳಿ ನಡೆದಿದೆ ಎಂದು ತಿಳಿಯುವಷ್ಟರಲ್ಲಿ ಅಪಾರ ಪ್ರಮಾಣದಲ್ಲಿ ಜೀವ ಮತ್ತು ಆಸ್ತಿಪಾಸ್ತಿ ಹಾನಿಯಾಗಿರುತ್ತದೆ. ಆದ್ದರಿಂದ, ಯಾವುದೇ ಒಂದು ರೋಗವು ಹೆಚ್ಚಾಗುತ್ತಿದೆ ಎಂದು ಗಮನಕ್ಕೆ ಬಂದ ತಕ್ಷಣ, ಸೋಂಕಿನ ರೋಗಗಳಿಂದ ರಕ್ಷಣೆಯಾಗಲು ವಹಿಸಬೇಕಾದ ಕ್ರಮಗಳನ್ನು ಮುಂಜಾಗ್ರತೆಯಾಗಿ ಕೂಡಲೇ ಜಾರಿಗೊಳಿಸಲಾಗುತ್ತದೆ. ಕೊರೋನಾ ವೈರಸ್‍ನಿಂದ ಉಂಟಾಗುವ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಜೈವಿಕ ಅಸ್ತ್ರಗಳ ಆಕ್ರಮಣವಾಗಿರಲಿ ಅಥವಾ ಸಾಂಕ್ರಾಮಿಕ ರೋಗವಾಗಿರಲಿ, ಅವುಗಳ ವಿರುದ್ಧ ರಕ್ಷಣೆ ಪಡೆಯಲು ಮುಂಜಾಗ್ರತೆಯ ಕ್ರಮಗಳು ಮಾರ್ಗದರ್ಶಕವಾಗುತ್ತವೆ.
೧ ಆ ೩ ಅ. ಕೊರೋನಾದಂತಹ ವಿಷಾಣುಗಳ ಸೋಂಕಿಗೆ ಒಳಗಾಗದಂತೆ ತೆಗೆದುಕೊಳ್ಳಬೇಕಾದ ಕಾಳಜಿ ಕೊರೋನಾ ಸೋಂಕಿನ ಲಕ್ಷಣಗಳು : ಸೋಂಕು ತಗುಲಿದಾಗ ಕೊರೋನಾ ವೈರಸ್ ಶ್ವಾಸಕೋಶಗಳಲ್ಲಿ ಹಬ್ಬುತ್ತದೆ. ಆದ್ದರಿಂದ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
೧. ಜ್ವರ
೨. ಒಣಕೆಮ್ಮು
೩. ಗಂಟಲು ಕೆರೆತ
೪. ಉಸಿರಾಟದ ತೊಂದರೆಗಳು, ಜೊತೆಗೆ ದಮ್ಮು ಮತ್ತು ಆಯಾಸ
೫. ತಲೆನೋವು, ಸ್ನಾಯುಗಳಲ್ಲಿ ನೋವು ಮುಂತಾದ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ
೧ ಆ ೩ ಆ. ಕೊರೋನಾ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ತೆಗೆದುಕೊಳ್ಳಬೇಕಾದ ಸರ್ವೇಸಾಮಾನ್ಯ ಕಾಳಜಿ
೧ ಆ ೩ ಆ ೧. ಮನೆಯಲ್ಲಿದ್ದಾಗ ವಹಿಸಬೇಕಾದ ಕಾಳಜಿ
ಅ. ಉಗುರುಗಳನ್ನು ಉದ್ದ ಬೆಳೆಸದೆ, ನಿಯಮಿತವಾಗಿ ಕತ್ತರಿಸಬೇಕು.
ಆ. ಗಾಯಗಳನ್ನು ಹೊರಗಿನ ಹವೆಗೆ ತೆರೆದಿಡಬಾರದು.
ಇ. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು.
ಈ. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
ಈ ೧. ಸಾಬೂನಿನಿಂದ ಕೈ ತೊಳೆದ ನಂತರವೇ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬೇಕು.
ಈ ೨. ಅಡುಗೆ ಮಾಡುವ ಮೊದಲು, ಅಡುಗೆ ಮಾಡುವಾಗ ಮತ್ತು ಅಡುಗೆ ಮಾಡಿದ ನಂತರ, ತಿನ್ನುವ ಮೊದಲು, ಶೌಚಾಲಯಕ್ಕೆ ಹೋಗಿ ಬಂದ ನಂತರ, ಕೈಗಳಿಗೆ ಧೂಳು ತಾಗಿದಾಗ, ಹರಿಯುವ ನಳ್ಳಿ ನೀರಿನ ಕೆಳಗೆ, ಸಾಬೂನಿನಿಂದ ಕೈ ತೊಳೆಯಬೇಕು ಅಥವಾ ‘ಆಲ್ಕೋಹಾಲ್’ ಇರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು.
ಈ ೩. ಪ್ರಾಣಿಗಳ ಸಂಪರ್ಕವಾದರೆ ಪಶುಗಳ ಆಹಾರ ಅಥವಾ ಉಗುಳಿನ ಸಂಪರ್ಕವಾದರೆ, ಇತರರ ಕೈಕುಲುಕಿದ ನಂತರ, ಹಾಗೆಯೇ ಕೆಮ್ಮಿದ ಅಥವಾ ಸೀನಿದ ನಂತರ, ರೋಗಿಗಳನ್ನು ಉಪಚರಿಸಿದ ಬಳಿಕ ಕೈ ತೊಳೆಯಬೇಕು.
ಉ. ಕೆಮ್ಮುವಾಗ ಅಥವಾ ಸೀನುವಾಗ ಟಿಶ್ಯೂ ಪೇಪರ್, ಕರವಸ್ತ್ರ ಅಥವಾ ಅಂಗಿಯ ತೋಳನ್ನು ಉಪಯೋಗಿಸಿ ಮೂಗು-ಬಾಯಿ ಮುಚಿಕೊಳ್ಳಬೇಕು. ಬಳಸಿದ ‘ಟಿಶ್ಯೂ ಪೇಪರ್’ ಅನ್ನು ತಕ್ಷಣ ಕಸದ ತೊಟ್ಟಿಯಲ್ಲಿ ಎಸೆದು ಅದರ ಮುಚ್ಚಳವನ್ನು ತಕ್ಷಣ ಮುಚ್ಚಬೇಕು.
ಊ. ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಶೀತ, ಜ್ವರ ಇದ್ದಲ್ಲಿ, ತಕ್ಷಣ ಆಧುನಿಕ ವೈದ್ಯರ ಸಲಹೆ ಪಡೆಯಬೇಕು.
ಋ. ದಿನವಿಡೀ ನಿಯಮಿತ ಅಂತರದಲ್ಲಿ ಬಿಸಿ (ಉಗುರು ಬೆಚ್ಚಗಿನ) ನೀರನ್ನು ಕುಡಿಯಬೇಕು. ಬಾಯಿ ಒಣಗದಂತೆ ನೋಡಿಕೊಳ್ಳಬೇಕು.
ಎ. ತಂಪು ಪಾನೀಯಗಳು ಮತ್ತು ಆಹಾರಗಳು ಉದಾ. ಶರಬತ್ತು, ಐಸ್ ಕ್ರೀಮ್, ಲಸ್ಸಿ ಇತ್ಯಾದಿಗಳನ್ನು ಸೇವಿಸುವುದನ್ನು ತಡೆಗಟ್ಟಿ.
ಐ. ಉಪಯೋಗಿಸಿದ ಉಣ್ಣೆಯ ಬಟ್ಟೆಗಳನ್ನು (ಸ್ವೆಟರ್, ಮಫ್ಲರ್ ಇತ್ಯಾದಿಗಳನ್ನು) ಪ್ರತಿದಿನ ಸ್ವಲ್ಪ ಹೊತ್ತುವರೆಗೆ ಬಿಸಿಲಿನಲ್ಲಿ ಇಡಬೇಕು. ಅಲ್ಲದೆ, ಪ್ರತಿದಿನ ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಮೈಯೊಡ್ಡಿ ನಿಂತುಕೊಳ್ಳಬೇಕು.
(ಮುಂದುವರಿಯುವುದು)