ಪೊಲೀಸ್ ದಳದ `ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ’ ಎಂಬ ಧ್ಯೇಯವಾಕ್ಯವನ್ನು ಪೊಲೀಸರು ಸಾರ್ಥಕಗೊಳಿಸುವರೇ ?

‘ಸಂತರಿಗೆ ಶಿಕ್ಷೆ, ದುಷ್ಟರಿಗೆ ರಕ್ಷೆ’, ಇದು ಪೊಲೀಸ್ ದಳದ ಇಂದಿನ ಸ್ಥಿತಿಯಾಗಿದೆ !

ಪೊಲೀಸರ ಅಮಲು ಪದಾರ್ಥ ಮಾಫಿಯಾದವರೊಂದಿಗಿನ ಸಂಬಂಧ   

ಪೊಲೀಸ್ ಅಧಿಕಾರಿಗಳನ್ನು ಸಂತೋಷಪಡಿಸಲು ನಿರಪರಾಧಿಗಳನ್ನು ಪೀಡಿಸುವ ಪೊಲೀಸರು !

ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸ್

ಪೊಲೀಸರ ಕುರಿತು ಓದಲು ಸಿಗುವ ವಾರ್ತೆಗಳು, ಅವರ ಚಲನಚಿತ್ರಗಳಲ್ಲಿ  ತೋರಿಸಲಾಗುವ ಖಳನಾಯಕರ ಪಾತ್ರ ಇವುಗಳಿಂದಾಗಿ ಮತ್ತು ಅನೇಕ ಬಾರಿ ನಮ್ಮ ಅನುಭವಗಳಿಂದಾಗಿ ಪೊಲೀಸರಲ್ಲಿ ಮತ್ತು ಸಮಾಜದಲ್ಲಿ ಅಂತರವಿರುವುದು ಕಂಡುಬರುತ್ತದೆ. ನಿಜವಾಗಿ ನೋಡಿದರೆ ಇದು ಬದಲಾಗಬೇಕು. ಸಮಾಜ ಆದರ್ಶವಾಗಿದ್ದರೆ, ಪೊಲೀಸರು  ಆದರ್ಶರಾಗಿರುವರು ಮತ್ತು ಪೊಲೀಸರು ಆದರ್ಶರಾಗಿದ್ದರೆ, ಸಮಾಜವೂ ಆದರ್ಶದ ಕಡೆಗೆ ಹೊರಳುವುದು. ಹೀಗೆ ಈ ಪರಸ್ಪರಾವಲಂಬಿ ಚಿತ್ರವಿರುವುದರಿಂದ ಜಾಗೃತಿಗಾಗಿ ಈ ಲೇಖನವನ್ನು ಮುದ್ರಿಸುತ್ತಿದ್ದೇವೆ. – ಸಂಪಾದಕರು

‘ಭಾರತದಲ್ಲಿ ಮಹಾರಾಷ್ಟ್ರವು ಪೊಲೀಸ್ ದಳವು ಮೂರನೇ ಕ್ರಮಾಂಕದ ಹಾಗೂ ಅತೀ ದೊಡ್ಡ ಪೊಲೀಸ್ ದಳವಿರುವ ರಾಜ್ಯವಾಗಿದೆ. ‘ಸದ್ರಕ್ಷಣಾಯ ಖಲನಿಗ್ರಹಣಾಯ’ (ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ) ಇದು ಮಹಾರಾಷ್ಟ್ರ ಪೊಲೀಸ್ ದಳದ ಧ್ಯೇಯವಾಕ್ಯವಾಗಿದೆ; ಆದರೆ ಈ ಧ್ಯೇಯವಾಕ್ಯದಂತೆ ಮಹಾರಾಷ್ಟ್ರದಲ್ಲಿ ಸಜ್ಜನರ ರಕ್ಷಣೆಯಾಗುತ್ತದೆಯೇ ? ಕಳೆದ ಭೂತಕಾಲದ ಘಟನೆಗಳನ್ನು ಮೆಲುಕು ಹಾಕಿದರೆ, ಅರಿವಾಗುವುದೇನೆಂದರೆ, ‘ಸಂತರಿಗೆ ಶಿಕ್ಷೆ ಹಾಗೂ ದುಷ್ಟರಿಗೆ ರಕ್ಷೆ’, ಇದು ಪೊಲೀಸ್ ದಳದ ಸ್ಥಿತಿಯಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗುವ ಜನಸಾಮಾನ್ಯರಿಗೆ ಏನೆಲ್ಲ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ‘ಪೊಲೀಸ್ ಠಾಣೆಯ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು’, ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಹಾಗಾದರೆ `ಪೊಲೀಸ್ ದಳದ ಧ್ಯೇಯವಾಕ್ಯವನ್ನು ಪೊಲೀಸ್ ದಳವು ಸಾರ್ಥಕಪಡಿಸುತ್ತದೆಯೇ ?’, ಎಂಬುದನ್ನು ವಿಚಾರ ಮಾಡಬೇಕು.

ಪೊಲೀಸ್ ದಳದಲ್ಲಿ ಅನೇಕ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ನಿವೃತ್ತಿ ಹೊಂದಿರುವ ಒಬ್ಬ ಪೊಲೀಸ್ ಅಧಿಕಾರಿಯು ಪೊಲೀಸ್ ದಳದ ವಿಷಯದಲ್ಲಿ ಅನುಭವಿಸಿರುವುದನ್ನು ಅವರ ಮಾತುಗಳಲ್ಲಿಯೇ ಇಲ್ಲಿ ನೀಡಲಾಗಿದೆ. ಇಲ್ಲಿಯವರೆಗೆ ಪ್ರಕಟಪಡಿಸಲಾದ ಲೇಖನಗಳಲ್ಲಿ ನಾವು ಪೊಲೀಸರಿಗೆ ನೀಡಲಾಗುವ ತರಬೇತಿ, ಅದರಲ್ಲಾಗುವ ಭ್ರಷ್ಟಾಚಾರ; ಪೊಲೀಸ್ ಮುಖ್ಯಾಲಯದಲ್ಲಿ ಕೆಲಸಗಳ ಹಂಚಿಕೆ ಯಲ್ಲಾಗುವ ಭ್ರಷ್ಟಾಚಾರ; ಪೊಲೀಸ್ ಕಲ್ಯಾಣ ವಿಭಾಗದಲ್ಲಾಗುವ ಭ್ರಷ್ಟಾಚಾರ; ಕಾರ್ಯಾಲಯ ಸಹಕಾರಿ ಮತ್ತು ಮನೆಯ ಕೆಲಸಗಳ ಸಂದರ್ಭದಲ್ಲಿನ (ಹೌಸ್) ಸಹಕಾರಿ ಇವರ ನಿಯುಕ್ತಿಯಲ್ಲಾಗುವ ಭ್ರಷ್ಟಾಚಾರ ಮುಂತಾದ ಮಾಹಿತಿಗಳನ್ನು ಓದಿದೆವು. ಈ ವಾರದ ಅದರ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.

೧೦. ಮತಾಂಧ ಪೊಲೀಸ್ ಅಧಿಕಾರಿಯು ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲುವುದು !

೧೯೯೨-೯೩ ನೇ ಇಸವಿಯ ಗಲಭೆಯಲ್ಲಿ ಒಂದು ನಗರದ ಮತಾಂಧ ಪೊಲೀಸ್ ಅಧಿಕಾರಿಯು ಹಿಂದೂ ವ್ಯಕ್ತಿಗಳನ್ನು ಹೆಕ್ಕಿ ಹೆಕ್ಕಿ ಗುಂಡು ಹಾಕಿದ್ದನು, ಎಂಬುದನ್ನು ನಾನು ಕೇಳಿದ್ದೆನು.

೧೧. ಪೊಲೀಸ್ ಅಧಿಕಾರಿಗಳಿಗೆ ಅಮಲು ಪದಾರ್ಥ ಮಾಫಿಯಾದವರೊಂದಿಗಿರುವ ಸಂಬಂಧ !

೧೯೯೦ ರ ದಶಕದಲ್ಲಿ ಓರ್ವ ಐ.ಪಿ.ಎಸ್. ಅಧಿಕಾರಿಯು ಮುಂಬೈ ಪೊಲೀಸರ ಅಮಲು ಪದಾರ್ಥವಿರೋಧಿ ವಿಭಾಗದ ಮುಖ್ಯಸ್ಥನಾಗಿರುವಾಗ ಅವನು ಅದರಲ್ಲಿ ಬಹಳ ದೊಡ್ಡ ಭ್ರಷ್ಟಾಚಾರವನ್ನು ಮಾಡಿದನು. ಅಪರಾಧದಲ್ಲಿ ಜಪ್ತಿ ಮಾಡಿದ ಕೆಲವು ಮೂಲ ಸರಕುಗಳನ್ನು ಅವನು ಅಮಲು ಪದಾರ್ಥ ಮಾಫಿಯಾಗಳಿಗೆ ಮಾರಾಟ ಮಾಡುತ್ತಿದ್ದನು ಮತ್ತು ಅವನು ಒಂದು ರೀತಿಯ ಪೌಡರ್ ನ್ನು ಈ ಪಾಕೀಟುಗಳಲ್ಲಿ ಹಾಕಿಡುತ್ತಿದ್ದನು. ಈ ರೀತಿ  ಅವನು ತುಂಬಾ ಹಣವನ್ನು ಒಟ್ಟು ಮಾಡಿ ವಿದೇಶಕ್ಕೆ ಪಲಾಯನಗೈದನು ಮತ್ತು ಈಗ ಅಲ್ಲಿಯೇ ವಾಸ್ತವ್ಯ ಹೂಡಿದ್ದಾನೆ ಎಂಬ ನಂಬಿಕೆ ಇದೆ. ಅಮಲು ಪದಾರ್ಥ ಮಾಫಿಯಾಗಳೊಂದಿಗೆ ಅವನ ಹತ್ತಿರದ ಸಂಬಂಧವಿತ್ತು.

೧೨. ಪೊಲೀಸ್ ದಳದಲ್ಲಿನ ಭ್ರಷ್ಟ ವಿಶ್ವಾಸಘಾತಕಿ ಪೊಲೀಸರು !

ಹಿಂದೆ ಪೊಲೀಸ್ ಠಾಣೆಗೆ ಪೊಲೀಸ್ ಆಯುಕ್ತರು ಅಥವಾ ಪೊಲೀಸ್ ಉಪಾಯುಕ್ತರ ಭೇಟಿ (ವಿಜಿಟ್) ಇರುತ್ತಿತ್ತು. ಆಗ ಅವರು ಸ್ಥಳೀಯ ಅಧಿಕಾರಿಗಳಿಗೆ, ಇಂತಹ ಮಟಕಾ ಆಡುವವರು, ಇಂತಹ ಬಾರ್‍ದವರ ಮೇಲೆ ಮತ್ತು ಸರಾಯಿ ಅಂಗಡಿಗಳ ಮೇಲೆ ಮುತ್ತಿಗೆ ಹಾಕುವ ಸಿದ್ಧತೆಯನ್ನು ಮಾಡಿರಿ, ಎಂದು ಹೇಳುತ್ತಿದ್ದರು. ಆಗ ಮುತ್ತಿಗೆ ಹಾಕುವ ಸುದ್ದಿಯು ಎಲ್ಲಕ್ಕಿಂತ ಮೊದಲು ಈ ವ್ಯವಸಾಯಗಳನ್ನು ಮಾಡುವವರಿಗೆ ಹೋಗುತ್ತಿತ್ತು. ಹೀಗೆ ಮಾಡಿದಾಗ ಆ ವ್ಯವಸಾಯದವರು ಎಲ್ಲ ಗಿರಾಕಿಗಳನ್ನು ಓಡಿಸಿಬಿಡುತ್ತಿದ್ದರು ಮತ್ತು ಪೊಲೀಸರ ಕೈಗೆ ಏನೂ ಸಿಗುತ್ತಿರಲಿಲ್ಲ. ಖಾತೆಯಲ್ಲಿ ಕೆಲವು ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರೆ, ಅವರು ಸ್ವತಃ ಪೊಲೀಸರನ್ನು ಕರೆದುಕೊಂಡು ಗುಪ್ತವಾಗಿ ಮುತ್ತಿಗೆಯನ್ನು ಹಾಕುತ್ತಿದ್ದರು, ಆದರೆ ಕೆಲವು ಪೊಲೀಸ್ ಠಾಣೆಗಳಲ್ಲಿ ಇಂತಹ ಕೆಲವು ವಂಚನೆಕೋರರು, ದೇಶದ್ರೋಹಿಗಳು, ಸುದ್ದಿಯನ್ನು (ಲೀಕ್ ಮಾಡುವ) ಸೋರಿಕೆ ಮಾಡುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ. ಇಂತಹ ಪೊಲೀಸ್‍ರು ಪೊಲೀಸ್ ಖಾತೆಯನ್ನು ಕಳಂಕಿತಗೊಳಿಸುತ್ತಾರೆ.

೧೩. ಕೆಲಸಗಳಿಗೆ ಒಳ್ಳೆಯ ಮೌಲ್ಯಾಂಕಗಳು ಸಿಗಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಸಂತೋಷಪಡಿಸಲು ಅಮಾಯಕ ಜನರನ್ನು ಪೀಡಿಸುವ ಪೊಲೀಸರು !

ಪೊಲೀಸ್ ಠಾಣೆಯಲ್ಲಿ ಪೊಲೀಸ್ ಶಾಸಕರ ವಾರ್ಷಿಕ ಗುಣಮಟ್ಟದ ಸೇವೆಯ ಪುಸ್ತಕದ ತಪಾಸಣೆಯನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಅವನು ವರ್ಷವಿಡಿ ಏನು ಕೆಲಸ ಮಾಡಿದನು ಎಂಬುದರ ಮೌಲ್ಯಮಾಪನವನ್ನು ಮಾಡಿ ಅವನಿಗೆ ಅಂಕಗಳನ್ನು (ಉದಾ.೧೦ ಕ್ಕೆ ೫ ಅಥವಾ ೬ ಇತ್ಯಾದಿ) ಕೊಡಲಾಗುತ್ತದೆ ಮತ್ತು ಅದರ ಮೇಲೆ ಅವರ ಅನಿಸಿಕೆಯನ್ನೂ ಬರೆಯಲಾಗುತ್ತದೆ. ಪೊಲೀಸ್ ಸಿಪಾಯಿಗಳ ಸೇವಾ ಪುಸ್ತಕದ ತಪಾಸಣೆಯ ಅಧಿಕಾರವು ಸಹಾಯಕ ಪೊಲೀಸ್ ಆಯುಕ್ತರ ಕಡೆಗೆ ಮತ್ತು ಪೊಲೀಸ್ ಹವಾಲದಾರರ ತಪಾಸಣೆಯು ಅಧಿಕಾರವು ಪೊಲೀಸ್ ಉಪಾಯುಕ್ತರ ಬಳಿ ಇರುತ್ತದೆ. ಆಗ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಕೆಲಸದ ಸಾರಾಂಶವನ್ನು ನೋಡುತ್ತಾರೆ. ಸಾರಾಯಿ ಪ್ರಕರಣದಲ್ಲಿನ ಎಷ್ಟು ಅಪರಾಧಗಳನ್ನು ದಾಖಲಿಸಿದ್ದಾರೆ ?, ಎಷ್ಟು ಜನ ಶಸ್ತ್ರಧಾರಿಗಳನ್ನು ಹಿಡಿದಿದ್ದಾರೆ ?, ಎಷ್ಟು ಅಪರಾಧಗಳನ್ನು ಬೆಳಕಿಗೆ ತಂದಿದ್ದಾರೆ?, ಗಂಭೀರ ಅಪರಾಧಗಳಲ್ಲಿ ಆರೋಪಿಗಳನ್ನು ಏಕೆ ಬಂಧಿಸಿಲ್ಲ?, ಬೇಕಾಗಿರುವ ಆರೋಪಿಗಳನ್ನು ಏಕೆ ಹಿಡಿಯಲಾಗುವುದಿಲ್ಲ?, ಮುಂತಾದ ಪ್ರಶ್ನೆಗಳನ್ನು ಹಿರಿಯ ಅಧಿಕಾರಿಗಳು ಕೇಳುತ್ತಾರೆ ಮತ್ತು ಅದನ್ನು ಪೂರ್ಣಗೊಳಿಸುವ ಆದೇಶವನ್ನು ನೀಡುತ್ತಾರೆ. ಈ ಆದೇಶಗಳನ್ನು ಪೂರ್ಣಗೊಳಿಸಲು ಈ ಪೋಲಿಸರು ಯಾರಾದರೊಬ್ಬ ನಿರಪರಾಧಿಯ ಕಿಸೆಯಲ್ಲಿ ಚೂರಿಯನ್ನು ಇಡುವುದು, ಯಾರಾದರೊಬ್ಬರ ಶರ್ಟ್ ನಲ್ಲಿ ಬ್ರೌನ್‍ಶುಗರ್ ಇಡುವುದು, ಇಂತಹ ಕೃತಿಯನ್ನು ಮಾಡಿ ಸುಳ್ಳು ದೂರು ದಾಖಲಿಸುತ್ತಾರೆ. ಇದರಿಂದ ನಿರಪರಾಧಿಗಳು ಸಿಕ್ಕಿಕೊಳ್ಳುತ್ತಾರೆ ಮತ್ತು ನಂತರ ಸೆರೆಮನೆಗೆ ಹೋಗಿ ಅಲ್ಲಿ ಅಪರಾಧಿಗಳ ಸಾಂಗತ್ಯದಲ್ಲಿ ತಮ್ಮ ಇಚ್ಛೆ ಇಲ್ಲದೆಯೂ ಅಪರಾಧಿಕ್ಷೇತ್ರದ ಕಡೆಗೆ ಹೊರಳುತ್ತಾರೆ. ಈ ರೀತಿ ಪೊಲೀಸರಿಂದ ಅಧರ್ಮ ಮತ್ತು ಪಾಪವಾಗುತ್ತದೆ ಮತ್ತು ಜನರ ಶೋಷಣೆಯಾಗುತ್ತದೆ.

೧೪. ರಾಜಕಾರಣಿಗಳ ಒತ್ತಡದಿಂದಾಗಿ ಪೊಲೀಸರು ದ್ವೇಷಭಾವನೆಯಿಂದ ನಿರಪರಾಧಿಗಳನ್ನು ಬಂಧಿಸುವುದು

ಪೊಲೀಸ್ ಠಾಣೆಯಲ್ಲಿ ಕೆಲವು ಅಧಿಕಾರಿಗಳು ರಾಜಕಾರಣಿಗಳ ಒತ್ತಡದಿಂದ ಅಥವಾ ಮೇಲಧಿಕಾರಿಗಳ ಒತ್ತಡದಿಂದ ಯಾವುದಾದರೊಂದು ಗಂಭೀರ ಅಪರಾಧದಲ್ಲಿ ಆರೋಪಿ ಸಿಗದಿದ್ದರೆ, ಏನೂ ಮಾಡದ ವ್ಯಕ್ತಿಯನ್ನು ದ್ವೇಷಭಾವನೆಯಿಂದ ಶಂಕಿತ ಆರೋಪಿ ಎಂದು ಬಂಧಿಸುತ್ತಾರೆ. ಯಾವುದಾದರೊಂದು ಗಂಭೀರ ಅಪರಾಧದಲ್ಲಿ ಆರೋಪಿಯು ಸಿಗದಿದ್ದರೆ, ಪೊಲೀಸ್ ಠಾಣೆಯ ಅಧಿಕಾರಿಗಳು ತಮ್ಮ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಠಾಣೆಯ ಭೇಟಿಯ ಸಮಯದಲ್ಲಿ ಯಾರಾದರು ನಿರಪರಾಧಿಗಳನ್ನು ಬಂಧಿಸಿ ಶಂಕಿತ ಆರೋಪಿಯನ್ನು ಬಧಿಸಲಾಗಿದೆ, ಎಂದು ತೋರಿಸುತ್ತಾರೆ. ನಂತರ ಆ ಆರೋಪಿಗಳು ನ್ಯಾಯಾಲಯದಿಂದ ನಿರಪರಾಧಿ ಎಂದು ಬಿಡುಗಡೆಯಾಗುತ್ತಾರೆ.

೧೫. ಆರೋಪಿಗಳಿಂದ ಲಂಚವನ್ನು ಪಡೆಯುವ ಪೊಲೀಸರು !

೧೫ ಅ. ಅಪರಾಧದಲ್ಲಿ ತೊಡಗಿರುವುದನ್ನು ಕಡಿಮೆ ತೋರಿಸಲು ಮತ್ತು ಬಂಧಿಸಬಾರದೆಂದು, ಆರೋಪಿಗಳಿಂದ ಲಂಚವನ್ನು ಕೇಳುವುದು : ಪೊಲೀಸ್ ಠಾಣೆಯ ಅಂತರ್ಗತ ಡಿಟೆಕ್ಶನ್ ಸ್ಟಾಫ್ (ಅಪರಾಧ ಪ್ರಕಟೀಕರಣ ಕಕ್ಷೆ) ಇರುತ್ತದೆ. ಪೊಲೀಸ್ ಠಾಣೆಯ ಹದ್ದಿನಲ್ಲಿನ ಗಂಭೀರ ದಾಖಲಾರ್ಹ ಆರೋಪಿಗಳನ್ನು ಹುಡುಕಿ ಅಪರಾಧಗಳು ಕಡಿಮೆ ಆಗಬೇಕೆಂದು, ಪೊಲೀಸ್ ಠಾಣೆಯ ಹದ್ದಿನಲ್ಲಿ ಪೆಟ್ರೋಲಿಂಗ್ ಮಾಡುವುದು (ಗಸ್ತು ಹಾಕುವುದು) ಮುಂತಾದ ಕೃತಿಗಳನ್ನು ಮಾಡುತ್ತಾರೆ. ಈ ಸಿಬ್ಬಂದಿಗಳಿಗೆ ಅಪರಾಧಗಳ ಮಾಹಿತಿಯು ಸುದ್ದಿಗಳನ್ನು ಕೊಡುವವರರಿಂದ (ಖಬರಿಗಳಿಂದ) ಸಿಗುತ್ತದೆ. ಈ ಸುದ್ದಿ ಕೊಡುವವನು ಪೊಲೀಸ್ ಠಾಣೆಯ ಹದ್ದಿನಲ್ಲಿ ಎಲ್ಲಿ ಏನು ನಡೆಯುತ್ತದೆ, ಎಂಬ ಮಾಹಿತಿಯನ್ನು ಈ ಡಿಟೆಕ್ಶನ್ ಸಿಬ್ಬಂದಿಗೆ ನೀಡುತ್ತಿರುತ್ತಾನೆ. ಅವನು ನೀಡಿದ ಮಾಹಿತಿಯು ನಿಜವಾದರೆ, ಪೊಲೀಸರು ಅವನಿಗೆ ನಿಶ್ಚಿಯಿಸಿದಂತೆ ಹಣವನ್ನು ಕೊಡುತ್ತಾರೆ. ಈ ಸಿಬ್ಬಂದಿಗೆ ಒಬ್ಬ ಪೊಲೀಸ್ ಉಪನಿರೀಕ್ಷಕ ಅಥವಾ ಸಹಾಯಕ ಪೊಲೀಸ್ ನಿರೀಕ್ಷಕ ದರ್ಜೆಯ ಅಧಿಕಾರಿಯು ಪ್ರಮುಖನಾಗಿರುತ್ತಾನೆ. ಯಾವುದಾದರೊಂದು ಅಪರಾಧದಲ್ಲಿ ಆರೋಪಿಯ ಸಹಭಾಗವನ್ನು ಕಡಿಮೆ ತೋರಿಸಲು ಅಥವಾ ಸಂಬಂಧಿತನನ್ನು ಅಪರಾಧದಲ್ಲಿ ಬಂಧಿಸಬಾರದೆಂದು, ಲಂಚವನ್ನು ಕೇಳುತ್ತಾರೆ. ಅದರಲ್ಲಿ ಆ ಪೊಲೀಸ್ ಠಾಣೆಯ ಇನ್‍ಚಾರ್ಜ್ ಅಧಿಕಾರಿಗೂ ಹಣವನ್ನು ನೀಡಲಾಗುತ್ತದೆ.

೧೫ ಆ. ಗಂಭೀರ ಅಪರಾಧಗಳ ಸಮಯದಲ್ಲಿ ವ್ಯಾವಸಾಯಿಕ ಪಂಚರನ್ನು ಉಪಯೋಗಿಸುವುದು, ಇದರಿಂದ ನ್ಯಾಯಾಲಯದಲ್ಲಿ ದೋಷಸಿದ್ಧತೆಯ ಪ್ರಮಾಣ ಕಡಿಮೆಯಾಗುವುದು : ಯಾವುದಾದರೊಂದು ಗಂಭೀರ ಅಪರಾಧದಲ್ಲಿ ವ್ಯಾವಸಾಯಿಕ ಪಂಚರನ್ನು (ಪೊಲೀಸರು ನಿಶ್ಚಿತಪಡಿಸಿದ ಪಂಚರು. ಇವರು ಹಣವನ್ನು ತೆಗೆದುಕೊಂಡು ಪಂಚರ ಕೆಲಸವನ್ನು ಮಾಡುತ್ತಾರೆ.) ಅವರಿಗೆ ಸ್ಟಾಕ್ ಪಂಚ ಎಂಬ ಹೆಸರಿದೆ. ಸ್ಟಾಕ್ ಪಂಚ ಅಂದರೆ ಪೊಲೀಸರ ಪರಿಚಯದ ಪಂಚರು ಅಥವಾ ಪೊಲೀಸ್ ಠಾಣೆಯ ಹೊರಗೆ ಚಹಾದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ಪಂಚನೆಂದು ತೆಗೆದುಕೊಳ್ಳುತ್ತಾರೆ. ಘಟನೆಯ ಸ್ಥಳದಲ್ಲಿ ಪಂಚನಾಮೆಯನ್ನು ಮಾಡದೇ ಪೊಲೀಸ್ ಠಾಣೆಯಲ್ಲಿ ಕುಳಿತು ಪಂಚನಾಮೆಯನ್ನು ಮಾಡುತ್ತಾರೆ. ಇದರಿಂದ ನ್ಯಾಯಾಲಯದಲ್ಲಿ ಅಪರಾಧ ಸಿದ್ಧವಾಗುವ ಪ್ರಮಾಣವು ಕಡಿಮೆಯಾಗುತ್ತದೆ. ಅಪರಾಧದ ಅನ್ವೇಷಣೆಯನ್ನು ಮಾಡುವಾಗ ಯೋಗ್ಯ ಪುರಾವೆಗಳನ್ನು ನ್ಯಾಯಾಲಯದಲ್ಲಿ ತರುವುದಿಲ್ಲ ಅಥವಾ ಮಂಡಿಸುವುದಿಲ್ಲ. ದೋಷದ ಆರೋಪಪತ್ರವನ್ನು ಬೇಕೆಂದೇ ತಡವಾಗಿ ದಾಖಲಿಸಲಾಗುತ್ತದೆ. ಇದರಿಂದ ಆರೋಪಿಯು ಹಣದ ಬಲದಿಂದ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾನೆ.

– ಓರ್ವ ನಿವೃತ್ತ ಪೊಲೀಸ್ (ಮುಂದುವರಿಯುವುದು)

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ಮತ್ತು ಹಿತಚಿಂತಕರಿಗೆ ವಿನಂತಿ !

ಪೊಲೀಸರು ಮತ್ತು ಆಡಳಿತವರ್ಗದವರ ವಿಷಯದಲ್ಲಿ ಬರುವ ಕಹಿ ಅನುಭವವನ್ನು ತಿಳಿಸಿರಿ !

ಇಲ್ಲಿ ಲೇಖನದಲ್ಲಿ ನೀಡಿದಂತೆ ಅಥವಾ ಪೊಲೀಸ್-ಆಡಳಿತದಲ್ಲಿ ಸಿಪಾಯಿ ಅಥವಾ ಅಧಿಕಾರಿಗಳ ಕುರಿತು ಕಹಿ ಅನುಭವ ಬಂದಿದ್ದರೆ ಅದನ್ನು ಮುಂದೆ ಕೊಡಲಾದ ವಿಳಾಸಕ್ಕೆ ಕಳುಹಿಸಬೇಕು. ಪೊಲೀಸರು ಮತ್ತು ಆಡಳಿತವು ಹೇಗಿರಬಾರದು ಎಂದು ಗಮನಕ್ಕೆ ಬರಬೇಕು, ಸಂಬಂಧಿತ ಸಿಬ್ಬಂದಿ/ಅಧಿಕಾರಿಗಳಿಗೆ ಅವರ ಅಯೋಗ್ಯ ಕೃತ್ಯಗಳ ಅರಿವಾಗಿ ಅವರು ಅದರಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಬೇಕು ಮತ್ತು ನಾಗರಿಕರು ತಮ್ಮ ರಾಷ್ಟ್ರಕರ್ತವ್ಯವೆಂದು ಇಂತಹ ವಿಷಯಗಳನ್ನು ದುರ್ಲಕ್ಷಿಸದೇ ಅವುಗಳನ್ನು ಸುಧಾರಿಸಲು ಪ್ರಯತ್ನಿಸಬೇಕು, ಸಮಯ ಬಂದಾಗ ಇದರ ವಿರುದ್ಧ ದೂರು ನೀಡಬೇಕು, ಎಂಬುದಕ್ಕಾಗಿ ಈ ಲೇಖನ ನೀಡಲಾಗಿದೆ.

ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ C/o ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.

ಸಂಪರ್ಕ ಕ್ರಮಾಂಕ : 9595984844

ವಿ-ಅಂಚೆ ವಿಳಾಸ : [email protected]