ಬ್ರಾಹ್ಮಮುಹೂರ್ತದಲ್ಲಿ ಏಳುವುದರಿಂದ ಆಗುವ ೯ ಲಾಭಗಳು

ಎಲ್ಲಕ್ಕಿಂತ ಮೊದಲು ನಾವೆಲ್ಲರೂ ಸಹಜವಾಗಿ ಹೇಳುವ ‘ಬ್ರಹ್ಮಮುಹೂರ್ತ’ ಶಬ್ದವು ಬ್ರಹ್ಮಮುಹೂರ್ತವಾಗಿರದೇ, ‘ಬ್ರಾಹ್ಮಮುಹೂರ್ತ’ವಾಗಿದೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬ್ರಾಹ್ಮಮುಹೂರ್ತವು ಪ್ರಾತಃಕಾಲ ೩.೪೫ ರಿಂದ ೫. ೩೦ ಹೀಗೆ ಒಂದು ಮುಕ್ಕಾಲು (೧ ಗಂಟೆ ೪೫ ನಿಮಿಷ) ಗಂಟೆಗಳದ್ದಾಗಿರುತ್ತದೆ. ಇದಕ್ಕೆ ರಾತ್ರಿಯ ‘ನಾಲ್ಕನೇಯ ಪ್ರಹರ’ ಅಥವಾ ‘ಉತ್ತರ ರಾತ್ರಿ’ ಎಂದೂ ಹೇಳುತ್ತಾರೆ. ಈ ಕಾಲದಲ್ಲಿ ನಮಗೆ ಸಂಪೂರ್ಣ ದಿನ ಕಾರ್ಯಕ್ಕೆ ಬೇಕಾಗುವ ಊರ್ಜೆಯನ್ನು ನೀಡುವಂತಹ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಈ ಮುಹೂರ್ತದಲ್ಲಿ ಏಳುವುದರಿಂದ ನಮಗೆ ಒಂದೇ ಸಲ ೯ ರೀತಿಯ ಲಾಭಗಳಾಗುತ್ತವೆ.

೧. ಪ್ರಾಣವಾಯು ಅಗಾಧ ಪ್ರಮಾಣದಲ್ಲಿ ಸಿಗುವುದು

ಈ ಕಾಲದಲ್ಲಿ ‘ಓಝೋನ್’ ವಾಯುವು ಪೃಥ್ವಿಯ ವಾತಾವರಣದ ಎಲ್ಲಕ್ಕಿಂತ ಕೆಳಗಿನ ಸ್ತರದಲ್ಲಿ ಬಹಳ ಹೆಚ್ಚು ಪ್ರಮಾಣದಲ್ಲಿ ಬಂದಿರುತ್ತದೆ. ಈ ‘ಓಝೋನ್’ನಲ್ಲಿ ಮಾನವನ ಉಸಿರಾಟಕ್ಕೆ ಆವಶ್ಯಕವಿರುವ ಪ್ರಾಣವಾಯು (ಆಕ್ಸಿಜನ್) ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಈ ಕಾಲದಲ್ಲಿ ಎದ್ದು ಬಲಗಡೆಯ ಮೂಗಿನ ಹೊಳ್ಳೆಯನ್ನು ತೆರೆದು (ಎಡಗಡೆಯ ಹೊಳ್ಳೆಯನ್ನು ಮುಚ್ಚಿ) ದೀರ್ಘ ಶ್ವಾಸವನ್ನು ತೆಗೆದುಕೊಂಡರೆ ರಕ್ತಶುದ್ಧಿಯಾಗುತ್ತದೆ. ರಕ್ತದಲ್ಲಿ ಆಕ್ಸಿಜನ್ ಪ್ರಮಾಣವು ಹೆಚ್ಚಾಗುವುದರಿಂದ ಹಿಮೊಗ್ಲೊಬಿನ್ ಸುಧಾರಿಸುತ್ತದೆ. ಇದರಿಂದ ಶೇ. ೯೦ ರಷ್ಟು ರೋಗಗಳಿಂದ ಮುಕ್ತಿ ಸಿಗುತ್ತದೆ.

೨. ಈ ಕಾಲದಲ್ಲಿ ಮಂದ ಪ್ರಕಾಶವಿರುತ್ತದೆ. ಕಣ್ಣುಗಳನ್ನು ತೆರೆದಾಗ ಒಮ್ಮೆಲೆ ನಮ್ಮ ಕಣ್ಣುಗಳ ಮೇಲೆ ತುಂಬಾ ಪ್ರಕಾಶ ಬಿದ್ದರೆ, ಸ್ವಲ್ಪ ಹೊತ್ತು ನಮಗೆ ಏನೂ ಕಾಣಿಸುವುದಿಲ್ಲ. ಹೀಗೆ ಮೇಲಿಂದ ಮೇಲೆ ಆಗತೊಡಗಿದರೆ, ಕಣ್ಣುಗಳ ರೋಗಗಳು ಬಂದು ದೃಷ್ಟಿ ಕ್ಷೀಣವಾಗಬಹುದು. ಹೀಗಾಗಬಾರದೆಂದು ನಕ್ಷತ್ರಗಳಿರುವಾಗಲೇ ಏಳಬೇಕು.

೩. ಅಪಾನವಾಯುವಿನ ಕಾರ್ಯವು ಸುಲಭವಾಗಿ ಆಗುವುದು ಈ ಕಾಲದಲ್ಲಿ ಪಂಚತತ್ತ್ವಗಳ ಪೈಕಿ ವಾಯುತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ ಮತ್ತು ಮಾನವನ ಶರೀರದಲ್ಲಿ ಅಪಾನವಾಯು ಕಾರ್ಯನಿರತವಾಗಿರುತ್ತದೆ. ಅಪಾನವಾಯು ಮಲನಿವಾರಣೆ ಮತ್ತು ಶರೀರಶುದ್ಧಿಯ ಕಾರ್ಯವನ್ನು ಮಾಡುತ್ತದೆ. ಈ ವಾಯುವು ಕಾರ್ಯನಿರತವಾಗಿರುವಾಗ ಮಲವನ್ನು ಹೊರಗೆ ಹಾಕುವ ಕಾರ್ಯವು ಸಹಜವಾಗಿ ನಡೆಯುತ್ತದೆ. ಪ್ರತಿದಿನ ಬಲವಂತದಿಂದ ಮಲವನ್ನು ಹೊರಗೆ ಹಾಕಿದರೆ ನಿಧಾನವಾಗಿ ಮೂಲವ್ಯಾಧಿಯಾಗುವ ಸಾಧ್ಯತೆಯಿರುತ್ತದೆ. ಮೂಲವ್ಯಾಧಿಯಾಗಬಾರದೆಂದು ಮತ್ತು ಒಳ್ಳೆಯ ರೀತಿಯಲ್ಲಿ ಶರೀರಶುದ್ಧಿಯಾಗಬೇಕೆಂದು, ಇದೇ ಕಾಲದಲ್ಲಿ ಮಲನಿವಾರಣೆ ಮಾಡಬೇಕು, ಹಾಗೆಯೇ ಜೈವಿಕ ಗಡಿಯಾರದಂತೆ ಈ ಅವಧಿಯಲ್ಲಿ ದೊಡ್ಡ ಕರುಳಿನಲ್ಲಿ ಊರ್ಜೆಯು ಕಾರ್ಯನಿರತವಾಗಿರುತ್ತದೆ.

೪. ಬ್ರಾಹ್ಮಮುಹೂರ್ತದಲ್ಲಿ ನವದ್ವಾರಗಳ ಮೂಲಕ ಕೊಳೆಯನ್ನು ಶರೀರದ ಹೊರಗೆ ಹಾಕುವುದರ ಮಹತ್ವ

ನಮ್ಮ ಶರೀರದಲ್ಲಿನ ದಿನವಿಡಿ ಸಂಗ್ರಹವಾಗಿರುವ ಕೊಳೆ ೯ ಸ್ಥಳಗಳಿಂದ ಹೊರಬೀಳುತ್ತಿರುತ್ತದೆ. ೨ ಕಣ್ಣು, ೨ ಮೂಗಿನ ಹೊಳ್ಳೆ, ೨ ಕಿವಿ, ೧ ಬಾಯಿ, ೧ ಮೂತ್ರದ್ವಾರ ಮತ್ತು ೧ ಗುದದ್ವಾರ ಹೀಗೆ ಈ ೯ ಸ್ಥಳಗಳಿಗೆ ನವದ್ವಾರಗಳು ಎಂದು ಹೇಳುತ್ತಾರೆ. ಈ ೯ ಸ್ಥಳಗಳಲ್ಲಿ ರಾತ್ರಿ ಶರೀರದಲ್ಲಿನ ಹೊಲಸು ಒಟ್ಟಾಗಿರುತ್ತದೆ. ಈ ಕೊಳೆಯಲ್ಲಿ ರೋಗಗಳನ್ನು ಉತ್ಪನ್ನ ಮಾಡುವಂತಹ ಅನೇಕ ಜೀವಾಣು ಮತ್ತು ವಿಷಾಣುಗಳಿರುತ್ತವೆ. ಈ ಜೀವಾಣು ಮತ್ತು ವಿಷಾಣುಗಳಿಗೆ ಸೂರ್ಯಪ್ರಕಾಶ ದೊರಕಿದರೆ ಅವು ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು ಮತ್ತು ನಾವು ರೋಗಕ್ಕೆ ತುತ್ತಾಗಬಹುದು. ಹೀಗಾಗಬಾರದೆಂದು, ಬ್ರಾಹ್ಮಮುಹೂರ್ತದಲ್ಲಿ ಎದ್ದು ಈ ಕೊಳೆಯನ್ನು (ಹೊಲಸನ್ನು) ಶರೀರದ ಹೊರಗೆ ಹಾಕಬೇಕು.

೫. ಬ್ರಾಹ್ಮಮುಹೂರ್ತದಲ್ಲಿ ಸ್ನಾನ ಮಾಡುವುದರ ಮಹತ್ವ

ಸೂರ್ಯೋದಯದ ಮೊದಲು ಬ್ರಾಹ್ಮಮುಹೂರ್ತದಲ್ಲಿ ಸ್ನಾನ ಮಾಡಿದರೆ ಚರ್ಮದಲ್ಲಿನ ರಂಧ್ರಗಳು ತೆರೆಯುತ್ತವೆ. ಇದರಿಂದ ಶರೀರದಲ್ಲಿ ಶುದ್ಧ ವಾಯು ಸೇರಿಕೊಳ್ಳುತ್ತದೆ ಮತ್ತು ಎಲ್ಲ ಅವಯವಗಳಿಗೆ ಶುದ್ಧ ಪ್ರಾಣವಾಯು ದೊರಕುತ್ತದೆ. ಇದರಿಂದ ಸಂಪೂರ್ಣ ಶರೀರದಲ್ಲಿ ದಿನವಿಡಿಯ ಕಾರ್ಯಕ್ಕಾಗಿ ಬೇಕಾಗುವ ಶಕ್ತಿ ತುಂಬಿಕೊಳ್ಳುತ್ತದೆ. ದಿನವಿಡಿ ಕೆಲಸ ಮಾಡಿದರೂ ನಾವು ಉತ್ಸಾಹಿಯಾಗಿಯೇ ಇರುತ್ತವೆ.

. ಈ ಕಾಲದಲ್ಲಿ ಓಂಕಾರ ಜಪವನ್ನು ಮಾಡಿದರೆ ಮೆದುಳಿನಲ್ಲಿ ಸ್ಮರಣಶಕ್ತಿಯ ಜೊತೆಗೆ ಇತರ ಶಕ್ತಿ ಕೇಂದ್ರಗಳು ಜಾಗೃತವಾಗುತ್ತವೆ. ಈ ಸಮಯದಲ್ಲಿ ವಿದ್ಯಾಧ್ಯಯನ ಮಾಡಿದರೆ ಅದು ಇತರ ಸಮಯಕ್ಕಿಂತ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ.

೭. ಬ್ರಾಹ್ಮಮುಹೂರ್ತದಲ್ಲಿ ಶರೀರದ ಶುದ್ಧಿಯನ್ನು ಮಾಡಿಕೊಳ್ಳುವುದರ ಆವಶ್ಯಕತೆ

ಸೂರ್ಯೋದಯದ ಸಮಯದಲ್ಲಿ ಅನೇಕ ರೀತಿಯ ಆರೋಗ್ಯದಾಯಕ ಲಹರಿಗಳು ವಾತಾವರಣದಲ್ಲಿ ಸೂರ್ಯಕಿರಣ ಗಳ ಮೂಲಕ ಬರುತ್ತಿರುತ್ತವೆ. ನಮ್ಮ ಚರ್ಮದ ರಂಧ್ರಗಳು ತೆರೆದಿದ್ದರೆ, ಈ ಆರೋಗ್ಯದಾಯಕ ಲಹರಿಗಳು ಶರೀರದಲ್ಲಿ ಸೇರಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬ್ರಾಹ್ಮಮುಹೂರ್ತದಲ್ಲಿ ಎದ್ದು ಶರೀರದ ಶುದ್ಧಿಯನ್ನು ಮಾಡಬೇಕು.

೮. ಸಾಧನೆಯನ್ನು ಮಾಡಿದರೆ ಸಪ್ತಚಕ್ರಗಳು ಜಾಗೃತವಾಗುವವು

ಈ ಕಾಲದಲ್ಲಿ ನಾವು ಓಂ ಮಂತ್ರಜಪದ ಸಾಧನೆಯನ್ನು ಮಾಡಿದರೆ ಸಪ್ತಚಕ್ರಗಳು ಜಾಗೃತವಾಗುತ್ತವೆ; ಏಕೆಂದರೆ ಈ ಮುಹೂರ್ತದಲ್ಲಿ ವಾತಾವರಣವು ಶುದ್ಧವಾಗಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ಕಂಪನಗಳು ನಿರ್ಮಾಣವಾಗಿ ಅವುಗಳ ಮೂಲಕ ಕುಂಡಲಿನಿಯು ಜಾಗೃತವಾಗುತ್ತದೆ.

೯. ಈ ಮುಹೂರ್ತದಲ್ಲಿ ಅನೇಕ ಪುಣ್ಯಾತ್ಮರು ಮತ್ತು ಸಿದ್ಧಾತ್ಮರು ಪರಲೋಕದಿಂದ ಪೃಥ್ವಿಯ ಮೇಲೆ ಬಂದಿರುತ್ತಾರೆ. ಈ ಪುಣ್ಯಾತ್ಮರನ್ನು, ಸಿದ್ಧಾತ್ಮರನ್ನು ನಾವು ಸಾಧನೆಯ ಬಲದಲ್ಲಿ ಭೇಟಿಯಾಗಿ ಉತ್ತಮ ಮಾರ್ಗದರ್ಶನ ಪಡೆಯಬಹುದು. ಈ ರೀತಿ ನಾವು ಬ್ರಾಹ್ಮಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮಾಡಿದರೆ ಈ ೯ ಲಾಭಗಳನ್ನು  ಪ್ರಾಪ್ತಮಾಡಿಕೊಳ್ಳಬಹುದು.

(ಆಧಾರ : ವಾಟ್ಸ್‍ಆ್ಯಪ್)