ನಾವು ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ, ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ!

ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳ ಘೋಷಣೆ!

ಭಾರತವೂ ಗಾಂಧಿಗಿರಿ ತೊರೆದು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮುಕ್ತಗೊಳಿಸಿ ಭಾರತದೊಂದಿಗೆ ಅದನ್ನು ಒಗ್ಗೂಡಿಸಲು ಮುಂದಾಗಬೇಕು!

ಕೋಟಲಿ (ಪಾಕ್ ಆಕ್ರಮಿತ ಕಾಶ್ಮೀರ) – ನಾವು ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ. ನಾವು ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಘೋಷಿಸಿದ್ದಾರೆ. ಕೊಟ್ಲಿಯ ಒಂದೇ ವೇದಿಕೆಯಿಂದ ಎಲ್ಲ ಪಕ್ಷದ ಮುಖಂಡರು ಬೇಡಿಕೆ ಮಾಡಿರುವ ವಿಡಿಯೋವು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ವಿಡಿಯೋ ಕಳೆದ ಫೆಬ್ರವರಿ ೧೧ ರದ್ದು ಎಂದು ಹೇಳಲಾಗಿದೆ. ಸಭೆಯಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಲಾಯಿತು. ಕೆಲವು ದಿನಗಳ ಹಿಂದೆ ಪ್ರಧಾನಿ ಇಮ್ರಾನ್ ಖಾನ್ ಅವರ ಸಭೆ ನಡೆದ ಸ್ಥಳದಲ್ಲೇ ಈ ಸಭೆ ನಡೆಸಲಾಯಿತು.

. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ನಾಯಕ ತಕೀರ್ ಗಿಲಾನಿಯವರು ಈ ಸಭೆಯನ್ನುದ್ದೇಶಿಸಿ ಮಾತನಾಡಿ, ಯಾವ ರೀತಿ ೫ ಆಗಸ್ಟ್ ೨೦೧೯ ರಲ್ಲಿ ಕಾಶ್ಮೀರದ ಕುರಿತಾದ ಕಲಮ್ ೩೭೦ ರದ್ದು ಪಡಿಸಿದ ನಂತರ ಅಲ್ಲಿನ ಜನರಿಗೆ ಪಾಕಿಸ್ತಾನದಿಂದ ಅಪೇಕ್ಷಾಭಂಗವಾಯಿತು ಮತ್ತು ಅವರು ಭಾರತದೊಂದಿಗೆ ಇರಲು ನಿರ್ಧರಿಸಿದರು, ಅದೇ ರೀತಿ ನಾವೂ ಭಾರತದಲ್ಲಿ ವಿಲೀನಗೊಳ್ಳೋಣ. ನಾವು ಯಾವುದೇ ವಿಭಜನೆಯನ್ನು ಸ್ವೀಕರಿಸುವುದಿಲ್ಲ, ಎಂದರು.

೨. ಮತ್ತೊಬ್ಬ ಜೆಕೆಎಲ್‌ಎಫ್ ನಾಯಕರು ಮಾತನಾಡುತ್ತಾ, ‘ನಾವು ಸ್ವಾತಂತ್ರ್ಯದಿಂದ ವಂಚಿತರಾಗಿರುವುದು ಭಾರತದಿಂದಲ್ಲ, ಪಾಕಿಸ್ತಾನದಿಂದ. ಭಾರತವಲ್ಲ, ಪಾಕಿಸ್ತಾನವೇ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ನಮಗೆ ಸಹಾಯ ಮಾಡಲು ಭಾರತ ಬಾಧ್ಯವಾಗಿದೆ’, ಎಂದರು.