ಬಂಗಾಳದ ಬಾಂಬ್ ಕಾರ್ಖಾನೆ

ಬಂಗಾಳದಲ್ಲಿ ನಡೆದ ಒಂದು ಬಾಂಬ್ ಹಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದಲ್ಲಿ ರಾಜ್ಯಮಂತ್ರಿಯಾಗಿರುವ ಝಾಕೀರ ಹುಸೇನ ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ಸಿನ ೨೨ ಕ್ಕಿಂತ ಅಧಿಕ ಕಾರ್ಯಕರ್ತರೂ ಗಾಯಗೊಂಡರು. ಅವರಲ್ಲಿ ೭ ಜನರ ಆರೋಗ್ಯಸ್ಥಿತಿಯು ಗಂಭೀರವಾಗಿದೆ. ಬಂಗಾಲದಲ್ಲಿಯೇ ಕೆಲವು ದಿನಗಳ ಹಿಂದೆ ಭಾಜಪ ಮುಖಂಡರ ಮೇಲೆ ಬಾಂಬ್ ಎಸೆದು ಗೋಲಿಬಾರ್ ನಡೆಸಲಾಗಿತ್ತು. ಇದರಲ್ಲಿ ಈ ಮುಖಂಡರು ಬಚಾವಾಗಿದ್ದರು. ಆದರೆ ಅವರ ವಾಹನಗಳಿಗೆ ಅಪಾರ ಹಾನಿಯಾಗಿತ್ತು. ಬಂಗಾಲದಲ್ಲಿ ಒಬ್ಬ ರಾಜ್ಯಮಂತ್ರಿಯು ರೈಲು ನಿಲ್ದಾಣಕ್ಕೆ ಬಂದಾಗ ಬಾಂಬ್ ಎಸೆಯಲಾಗುತ್ತದೆ  ಮತ್ತು ಅವರು ಗಾಯಗೊಳ್ಳುತ್ತಾರೆ. ಈ ಸ್ಥಿತಿಯನ್ನು ಗಮನಿಸಿದಾಗ ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿಯೇ ಇಲ್ಲವೆನ್ನುವುದು ಅರಿವಾಗುತ್ತದೆ.  ಮಹತ್ವದ ವಿಷಯವೆಂದರೆ ತಮ್ಮ ಪಕ್ಷದ ರಾಜ್ಯ ಮಂತ್ರಿಯ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾತನಾಡುತ್ತ, ಈ ಬಾಂಬ್ ಹಲ್ಲೆಯ ಹಿಂದೆ ಭಾಜಪದ ಕೈವಾಡವಿದೆಯೆಂದು ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಂಗಾಲದಲ್ಲಿ ಭಾಜಪದ ಮುಖಂಡರು ಮತ್ತು ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ. ಅದಕ್ಕೆ ಯಾರು ಜವಾಬ್ದಾರರು ? ಇದಕ್ಕೆ ಉತ್ತರ ನೀಡದೇ ಮಮತಾ(ಬಾನೊ) ನುಣುಚಿಕೊಂಡಿದ್ದಾರೆ.

ತನಿಖಾ ದಳಕ್ಕೆ ಬೆದರಿಕೆ!

ಕೆಲವು ವರ್ಷಗಳ ಹಿಂದೆ ಬಂಗಾಲದಲ್ಲಿ ಚಿಟ್‍ಫಂಡ್ ಮತ್ತು ಇತರ ಹಗರಣಗಳ ಬಗ್ಗೆ ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದರು. ಅಲ್ಲಿ ಅವರಿಗೆ ಪ್ರತಿದಿನ ತೃಣಮೂಲ ಕಾಂಗ್ರೆಸ್ಸಿನ ಪ್ರಭಾವವಿರುವ ಜಿಲ್ಲೆಗಳಲ್ಲಿ ಬಾಂಬ್‍ಗಳ, ಶಸ್ತ್ರಾಸ್ತ್ರಗಳ ದಾಸ್ತಾನು ಸಿಗುತ್ತಿತ್ತು. ಗೂಂಡಾಗಳ ಗುಂಪು ಅಲ್ಲಿ ಸಕ್ರಿಯವಾಗಿದೆಯೆಂದು ಗಮನಕ್ಕೆ ಬರುತ್ತಿತ್ತು. ಯಾವ ಸ್ಥಳದಲ್ಲಿ ತನಿಖೆಗಾಗಿ ಕಚೇರಿಯನ್ನು ಸ್ಥಾಪಿಸಲಾಗಿತ್ತೋ, ಆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಾಂಬ್ ಸ್ಫೋಟ ಮಾಡಿ ಭೀತಿಯುಂಟು ಮಾಡಲು ಪ್ರಯತ್ನಿಸಲಾಯಿತು. ಸಿ.ಬಿ.ಐ. ಮತ್ತು ಜಾರಿನಿರ್ದೇಶನಾಲಯಗಳ ಅಧಿಕಾರಿಗಳಲ್ಲಿ ಈ ಗೂಂಡಾಗಳು ಭಯ ಹುಟ್ಟಿಸುವುದನ್ನು ಗಮನಿಸಿದರೆ, ಅವರ ಉದ್ಧಟತನದ ಅರಿವಾಗುತ್ತದೆ. ಅವರಲ್ಲಿ ಇಷ್ಟು ಧೈರ್ಯ ಎಲ್ಲಿಂದ ಬಂದಿತು ? ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಬೆಂಬಲವಿಲ್ಲದೇ ಈ ರೀತಿ ಮಾಡಲು ಸಾಧ್ಯವಿಲ್ಲವೆಂದು ಹೇಳಲು ಯಾವುದೇ ರಾಜಕೀಯ ತಜ್ಞರ ಆವಶ್ಯಕತೆಯಿಲ್ಲ. ಇದರಿಂದ ಬಂಗಾಲದಲ್ಲಿ ಎಂತಹ ಪರಿಸ್ಥಿತಿಯಿರಬಹುದು ಎಂದು ಕಲ್ಪಿಸಬಹುದು.

ಬಂಗಾಲದಲ್ಲಿ ಹೃದಯ ವಿದ್ರಾವಕ ದುಃಸ್ಥಿತಿ !

ಎರಡು ವರ್ಷಗಳ ಹಿಂದೆ ಅಂದರೆ ವರ್ಷ ೨೦೧೯ ರಲ್ಲಿ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಬಂಗಾಳದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಜರುಗುತ್ತಿರುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಅಲ್ಲಿ ಪ್ರತಿದಿನ ಅಗ್ನಿ ಅನಾಹುತಗಳು ಮತ್ತು ಹಿಂಸಾಚಾರ  ನಡೆಯುತ್ತಿತ್ತು; ಆದರೆ ಸ್ಥಳೀಯ ಪ್ರಸಾರ ಮಾಧ್ಯಮಗಳಲ್ಲಿ ಆ ವಿಷಯಗಳು ಪ್ರಸಾರವಾಗುತ್ತಿರಲಿಲ್ಲ. ಒಬ್ಬ ಪೊಲೀಸ್ ಕಾನ್ಸ್‍ಟೇಬಲ್ ಒಬ್ಬ ಅಲ್ಲಿಯ ಹಿಂಸಾಚಾರದ ಕಾರಣದಿಂದ ತನ್ನ ಮನವಿಯನ್ನು ಅಳುತ್ತ ಹೇಳುತ್ತಿರುವ ಒಂದು ವಿಡಿಯೋ ಪ್ರಸಾರವಾಗಿತ್ತು, ಅಲ್ಲಿಯ ಕೆಲವು ಛಾಯಾಚಿತ್ರಗಳು ಮತ್ತು ವಿಡಿಯೋ ಪ್ರಸಾರವಾಗಿತ್ತು, ಅದರಲ್ಲಿ ರಸ್ತೆಯಲ್ಲಿ ಕೇವಲ ಯುವಕರಷ್ಟೇ ಅಲ್ಲ, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಕೂಡ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಓಡುತ್ತಿರುವುದು ಕಂಡು ಬಂದಿತು. ಬಂಗಾಲದ ಈ ಭೀಕರ ಪರಿಸ್ಥಿತಿಗೆ ಮಮತಾ(ಬಾನೊ) ಅವರೇ ಜವಾಬ್ದಾರರಾಗಿದ್ದಾರೆ. ಕೇಂದ್ರ ಸರಕಾರವು ಮತ್ತಷ್ಟು ದಾರಿ ಕಾಯದೇ ಬಂಗಾಲದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎನ್ನುವುದೇ ರಾಷ್ಟ್ರಪ್ರೇಮಿಗಳ ಕೋರಿಕೆಯಾಗಿದೆ.