ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನವನ್ನು ಸಹಿಸಲಾಗದು ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನವನ್ನು ಬೆಂಬಲಿಸಲು ಪ್ರಯತ್ನಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಈಗ ಕಾನೂನು ರೂಪಿಸಬೇಕು !

ಅಲಹಾಬಾದ್ ಉಚ್ಚ ನ್ಯಾಯಾಲಯ

ಪ್ರಯಾಗರಾಜ್ (ಉತ್ತರ ಪ್ರದೇಶ) – ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನ ಸಹಿಸಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸುವುದು ಸಂವಿಧಾನವನ್ನು ರೂಪಿಸುವವರ ಉದ್ದೇಶವಾಗಿತ್ತು. ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿ ಧರ್ಮವನ್ನು ಗುರಿಯಾಗಿಸಿಕೊಂಡು ಹಿಂದೂ ದೇವತೆಗಳ ವಿಡಂಬನಾತ್ಮಕ ದೃಶ್ಯಗಳನ್ನು ವೆಬ್ ಸಿರೀಸ್‌ಗಳಲ್ಲಿ ಚಿತ್ರಿಸುವುದು ಅಯೋಗ್ಯವಾಗಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ‘ತಾಂಡವ್‌’ ಈ ವೆಬ್‌ಸಿರೀಸ್‌ ವಿಷಯದಲ್ಲಿ ‘ಅಮೇಝಾನ್‌ ಪ್ರೈಮ್‌’ನ ಕಂಟೆಂಟ್‌ ಹೆಡ್‌ ಅಪರ್ಣಾ ಪುರೋಹಿತ್ ಅವರನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಲು ಸಹ ನಿರಾಕರಿಸಿತು. ಆದ್ದರಿಂದ ಪೊಲೀಸರು ಅವರನ್ನು ಈಗ ಬಂಧಿಸುವ ಸಾಧ್ಯತೆಯಿದೆ. ‘ತಾಂಡವ್’ ಎಂಬ ವೆಬ್ ಸಿರೀಸ್‌ಅನ್ನು‌ ‘ಅಮೆಜಾನ್ ಪ್ರೈಮ್’ ಈ ಒಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ಪ್ರದರ್ಶಿಸಲಾಯಿತು. ಇದರಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.