ಅನ್ಸಾರಿ ಮತ್ತು ಅಸುರಕ್ಷಿತತೆ

ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ ಅನ್ಸಾರಿಯವರ ಹೊಸ ಪುಸ್ತಕ ‘ಬಾಯ್ ಮೆನಿ ಎ ಹೆಪಿ ಎಕ್ಸಿಡೆಂಟ್; ರಿಕಲೆಕ್ಷನ್ ಆಫ್ ಲೈಫ್’ ಸದ್ಯಕ್ಕೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಒಬ್ಬ ಸರಕಾರಿ ಅಧಿಕಾರಿಯಾಗಿ ವಿವಿಧ ದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದ, ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ‘ಉಪಕುಲಪತಿ’ಯ ಹುದ್ದೆಯನ್ನು ಅಲಂಕರಿಸಿದ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಿರುವ ಮತ್ತು ೨ ಬಾರಿ ಎಂದರೆ ೧೦ ವರ್ಷಗಳ ಕಾಲ ಈ ಸಾರ್ವಭೌಮ ರಾಷ್ಟ್ರದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಈ ವ್ಯಕ್ತಿಯು ತನ್ನ ಸಾಮಾಜಿಕ ಜೀವನದಲ್ಲಿ ಘಟಿಸಿದ ಕೆಲವು  ಘಟನೆಗಳನ್ನು ಈ ಪುಸ್ತಕದ ಮೂಲಕ ಬಹಿರಂಗ ಪಡಿಸಿದ್ದಾರೆ. ದೇಶದ ಸದ್ಯದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಲು ಅನ್ಸಾರಿಯವರು ತಮ್ಮದೇ ಆದ ರೀತಿಯಿಂದ ಅಥವಾ ಪದ್ಧತಿಯಿಂದ ಪ್ರಯತ್ನಿಸಿದ್ದಾರೆ. ಈ ಪುಸ್ತಕದ ಕೆಲವು ಆಯ್ದಭಾಗಗಳ ಕುರಿತಾಗಿ ಸದ್ಯ ಅನೇಕ ಹೆಸರಾಂತ ಸಂಪಾದಕರು ಮತ್ತು ಪತ್ರಿಕಾ ವರದಿಗಾರರು ತೆಗೆದುಕೊಂಡಿರುವ ಅನ್ಸಾರಿಯವರ ಸಂದರ್ಶನಗಳ ಹೇಳಿಕೆಗಳ ಮೇಲೆ ಸದ್ಯ ವಾಕ್ಸಮರ ಪ್ರಾರಂಭವಾಗಿದೆ. ಅದರ ಕಾರಣವೂ ಒಂದು ರೀತಿಯಲ್ಲಿ ಸ್ವಾಭಾವಿಕವೇ ಆಗಿದೆ.

ಭಾರತೀಯ ಮುಸಲ್ಮಾನರು ‘ಖತರೆ ಮೆ’ ?

೨೦೧೭ ನೇ ಇಸ್ವಿಯಲ್ಲಿ ಉಪರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಅನ್ಸಾರಿಯವರು ಈ ಪುಸ್ತಕದಲ್ಲಿ ‘ದೇಶದಲ್ಲಿರುವ ಮುಸಲ್ಮಾನರು ಅಸುರಕ್ಷಿತ ಜೀವನವನ್ನು ಜೀವಿಸುತ್ತಿದ್ದಾರೆ’, ಎಂದು ಬರೆಯುತ್ತಿದ್ದಾರೆ.  ಒಬ್ಬ ಜವಾಬ್ದಾರಿಯುತ ವ್ಯಕ್ತಿಯು ಈ ರೀತಿ ಸಂವೇದನಾಶೀಲ ಹೇಳಿಕೆಯನ್ನು ನೀಡುವಾಗ  ಅದರ ಮೂಲ ಕಾರಣಮೀಮಾಂಸೆ ಮತ್ತು ತಾರ್ಕಿಕ ಆಧಾರವನ್ನು ನೀಡುವುದು ಅತ್ಯಂತ ಆವಶ್ಯಕವಾಗಿರುತ್ತದೆ; ಆದರೆ ಅನ್ಸಾರಿಯವರು ಮಾತ್ರ ಅದರ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಅವರ ಈ ವಿವಾದಾತ್ಮಕ ಹೇಳಿಕೆಯ ಮೇಲೆ ಬೊಟ್ಟು ಮಾಡಿ ಒಬ್ಬ ಪತ್ರಿಕಾ ವರದಿಗಾರ ತೆಗೆದುಕೊಂಡ ಸಂದರ್ಶನದಲ್ಲಿ  ಅವರನ್ನು ‘ಹಿಂದೂಗಳು ಅಸುರಕ್ಷಿತ ಜೀವನವನ್ನು ಜೀವಿಸುತ್ತಿದ್ದಾರೆ, ಎಂದು ನಿಮಗೆ ಅನಿಸುತ್ತಿಲ್ಲವೇ? ‘ಮಾಬ್ ಲಿಂಚಿಂಗ್’ ಕೇವಲ ಮುಸಲ್ಮಾನರಿಗಷ್ಟೇ ಅಲ್ಲ, ಹಿಂದೂಗಳಿಗೂ ಆಗುತ್ತದೆ. ಈ ಹತ್ಯೆಗಳು ಧರ್ಮವನ್ನು ಆಧರಿಸಿ ಆಗುತ್ತವೆಯೇ?’, ಎನ್ನುವ ಅರ್ಥವಿರುವ ಪ್ರಶ್ನೆಯನ್ನು ನೇರವಾಗಿ ಕೇಳಿದಾಗ ಅನ್ಸಾರಿ ಮಹಾಶಯರು ಸಂದರ್ಶನವನ್ನು ಅರ್ಧಕ್ಕೆ ಬಿಟ್ಟು ಎದ್ದು ಹೋದರು. ಅರ್ಥಾತ್ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ  ಅನೇಕ ವರ್ಷಗಳಿಂದ ಹಚ್ಚಲಾಗಿದ್ದ ಮಹಮ್ಮದ್ ಅಲಿ ಜಿನ್ನಾರ ತೈಲ ಚಿತ್ರವನ್ನು ತೆಗೆದಿರುವ ಬಗ್ಗೆ ಅದನ್ನುವಿರೋಧಿಸುವ ಮತ್ತು ಒಂದೆಡೆ ದಾದರದಲ್ಲಿ ಜರುಗಿದ ‘ಅಕಲಾಖ್’ ಹತ್ಯಾಕಾಂಡದ ಕುರಿತು ಆಕಾಶ ಪಾತಾಳವನ್ನು ಒಂದು ಮಾಡುವ; ಆದರೆ ಗೋರಕ್ಷಕ ‘ಪ್ರಶಾಂತ ಪೂಜಾರಿ’ಯವರ  ಘೋರ  ಹತ್ಯೆಯ ಬಗ್ಗೆ ಬಾಯಿಮುಚ್ಚಿಕೊಂಡಿರುವ ಆಗಿನ ಗೌರವಾನ್ವಿತ ಉಪರಾಷ್ಟ್ರಪತಿಯವರು  ತಮ್ಮ ಸಂದರ್ಶನದಿಂದ ಎದ್ದು ಹೋಗುವ ಕೃತಿಯಮೇಲೆ ಯಾರಿಗೂ ಯಾವುದೇ ಆಶ್ಚರ್ಯವೆನಿಸುವ ಕಾರಣವಿಲ್ಲ.

ಭಾರತೀಯ ಮುಸಲ್ಮಾನರಿಗೆ ಬಹುಮಾನ

ಅನ್ಸಾರಿಯವರು ‘ನಾವು ಮುಸಲ್ಮಾನರಾಗಿದ್ದೇವೆ, ಎಂದು ಹೇಳುವುದು ಈಗ ಮಹತ್ವದ್ದಾಗಿ ಉಳಿದಿಲ್ಲ. ನಮ್ಮಲ್ಲಿರುವ ಉದ್ಯೋಗ ಕೌಶಲ್ಯವೇ ಮಹತ್ವದ್ದಾಗಿದೆ. ನಾನು ಈ ದೇಶದ ನಾಗರಿಕನಾಗಿದ್ದರೆ, ನಾಗರಿಕತ್ವದ ಕಾರಣದಿಂದ ದೊರಕುವ ಎಲ್ಲ ಅಧಿಕಾರವೂ ನನಗೆ ಸಿಗಬೇಕು’ ಎಂದು ಹೇಳುತ್ತಾರೆ. ಅನ್ಸಾರಿಯವರ ಹೇಳಿಕೆಯು ಸತ್ಯವಾಗಿದೆ ಮತ್ತು ಈ ಕಾರಣದಿಂದಲೇ ಅವರಿಗೆ ಈ ‘ದೇಶದ ದ್ವಿತೀಯ ನಾಗರಿಕ’ ಆಗಿರುವ ಪುರಸ್ಕಾರವು ೧೦ ವರ್ಷಗಳವರೆಗೆ ಲಭಿಸಿದೆ. ಇದರಿಂದಲೇ ಒಬ್ಬ ಮುಸಲ್ಮಾನ ಮುಖಂಡರು ದೇಶದಲ್ಲಿ ಎಲ್ಲಕ್ಕಿಂತ ಅಧಿಕ ಅಭಿವೃದ್ಧಿ ಹೊಂದಿದ ರಾಜ್ಯದ ಮುಖ್ಯಮಂತ್ರಿಯಾದರು, ಒಬ್ಬ ಪ್ರತಿಭಾವಂತ ಮುಸಲ್ಮಾನ ವಿಜ್ಞಾನಿಯನ್ನು ‘ಭಾರತದ ಮಿಸೈಲ್ ಮ್ಯಾನ್’ ಹೆಸರಿನಿಂದ ಗೌರವಿಸಲಾಯಿತು. ಇಷ್ಟೇ ಅಲ್ಲ, ಅವರಿಗೆ ಈ ದೇಶದ ರಾಷ್ಟ್ರಪತಿಯಾಗುವ ಬಹುಮಾನವೂ ದೊರಕಿತು ಮತ್ತು ಸರ್ವೋಚ್ಚ ನಾಗರಿಕ ಪುರಸ್ಕಾರದಿಂದ ಅವರನ್ನು ಗೌರವಿಸಲಾಯಿತು. ಅಲ್ಲದೇ ಸಿಎಎ ಕಾನೂನನ್ನು ವಿರೋಧಿಸಿ ಮುಸಲ್ಮಾನ ನಾಗರಿಕರ ದಿಕ್ಕು ತಪ್ಪಿಸುವವರಿಗೆ, ಇದನ್ನು ಮಾಡುವ ಸ್ವಾತಂತ್ರ್ಯವೂ ಈ ದೇಶದ ಅವಿಭಾಜ್ಯ ಅಂಗ ಅರ್ಥಾತ್ ನಾಗರಿಕರಾಗಿರುವುದರಿಂದಲೇ ದೊರಕಿದೆಯೆನ್ನುವುದನ್ನು ಮರೆಯಬಹುದೇ ? ಇನ್ನೊಂದೆಡೆ ಜಮ್ಮೂ-ಕಾಶ್ಮೀರದಲ್ಲಿ ಒಮ್ಮೆಯಾದರೂ ಹಿಂದೂ ಮುಖ್ಯಮಂತ್ರಿ ಆಗಬಹುದು ಎಂದುಕನಸಿನಲ್ಲಿಯಾದರೂ ಯಾರಾದರೂ ಆಶಿಸಲು ಸಾಧ್ಯವಿದೆಯೇ ?

ಗಂಗಾ ಜಮುನಾ ಸಂಸ್ಕೃತಿ (ತೆಹಜೀಬ)

ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡುವ ಕಲಂ ೩೭೦ರನ್ನು ರದ್ದುಗೊಳಿಸಿರುವ ಪದ್ಧತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ೩೭೦ ಕಲಂ ರದ್ದುಗೊಳಿಸಿರುವುದು ಸೂಕ್ತವಾಗಿದೆಯೇ ಅಥವಾ ಇಲ್ಲವೇ, ಎನ್ನುವುದರ ಮೇಲೆ ಮಾತ್ರ ಮಹಾಶಯರು ಮಾತನಾಡಲು ಉತ್ಸುಕರಾಗಿಲ್ಲ ಎನ್ನುವುದು ಅವರ ಒಂದು ಸಂದರ್ಶನದಿಂದ ಕಂಡು ಬಂದಿತು. ದೇಶದ ಅಖಂಡತೆಯನ್ನು  ಕಾಯ್ದುಕೊಳ್ಳ್ಳುವ ಐತಿಹಾಸಿಕ ಪ್ರಯತ್ನಗಳ  ಬಗ್ಗೆ ಮೌನವಹಿಸುವುದು ಅಪಾಯಕಾರಿಯಾಗಿದೆ ಅಷ್ಟೇ ಅಲ್ಲ;ಅದಕ್ಕಾಗಿ ಮಾಡಿರುವ ಪದ್ಧತಿಯನ್ನು ಟೀಕಿಸುವುದು ಅದಕ್ಕಿಂತ ಅಧಿಕ ಭಯಾನಕವಾಗಿದೆ ಎನ್ನುವುದನ್ನು ಮರೆಯಬಾರದು. ದೇಶದ ೭೫ ಲಕ್ಷಕ್ಕಿಂತ ಅಧಿಕ ನಾಗರಿಕರನ್ನು ಹಿಂದುಳಿದವರನ್ನಾಗಿ ಮಾಡುವ, ಸಹಸ್ರಾರು ಸೈನಿಕರು ಮತ್ತು ಅಮಾಯಕ ನಾಗರಿಕರ ಬಲಿದಾನವನ್ನು ಸಹಿಸುವ ಪರಿಸ್ಥಿತಿಯ ಮೇಲೆ ಈ ಕಲಂ ರದ್ದುಗೊಳಿಸುವುದು ಏಕಮಾತ್ರ ಉಪಾಯವಾಗಿತ್ತು. ಅದರ ಮೇಲೆ ಸಿಟ್ಟುಗೊಳ್ಳುವ  ಉಪರಾಷ್ಟ್ರಪತಿಯವರು ೩ ದಶಕಗಳ ಮೊದಲು ಕಾಶ್ಮೀರ ಕಣಿವೆಯ ೭ ಲಕ್ಷ ಕಾಶ್ಮೀರಿ ಹಿಂದೂಗಳ ಮೇಲಾಗಿರುವ ಅಸಂಖ್ಯಾತ ದೌರ್ಜನ್ಯಗಳ ಬಗ್ಗೆ ಮತ್ತು ಹಿಂದೂಗಳ ನರಮೇಧದ ವಿರುದ್ಧ ಮಾತ್ರ ಚಕಾರವನ್ನೂ ಎತ್ತುವುದಿಲ್ಲ. ಇಂದಿಗೂ ಈ ಎಲ್ಲ ಹಿಂದೂಗಳು ದೇಶದ ವಿವಿಧ ಭಾಗಗಳಲ್ಲಿ ಅತ್ಯಂತ ದುಸ್ತರವಾದ ಜೀವನವನ್ನು ಸಾಗಿಸುತ್ತಿದ್ದಾರೆ. ಬಹುಸಂಖ್ಯಾತ ಸಮಾಜ ಅಸುರಕ್ಷಿತ ಜೀವನವನ್ನು ಜೀವಿಸುತ್ತಿದೆ. ಇದರ ಮೇಲೆ ಮಾಜಿ ಉಪರಾಷ್ಟ್ರಪತಿಯವರು ಏಕೆ ಮಾತನಾಡುವುದಿಲ್ಲ ? ಇದರಿಂದಲೇ ‘ಗಂಗಾ ಜಮುನಿ ಸಂಸ್ಕೃತಿ’ (ಗಂಗಾ ಮತ್ತು ಜಮುನಾ ದಂಡೆಯ ಮೇಲೆ ವಾಸ್ತವ್ಯ ಮಾಡುವ ಹಿಂದೂ ಮತ್ತು ಮುಸಲ್ಮಾನರಲ್ಲಿರುವ ತಥಾಕಥಿತ ಐಕ್ಯತೆ) ಅಂಗೀಕರಿಸುವುದು, ಕೇವಲ ಹಿಂದೂಗಳಿಗೆ ಮಾತ್ರ ಕಡ್ಡಾಯಗೊಳಿಸುವ ಮಾನಸಿಕತೆಯಿಂದ ಇಂದು ದೇಶವು ನಿಜ ಹೇಳಬೇಕೆಂದರೆ ಜಾಗೃತರಾಗಿರುವ ಆವಶ್ಯಕತೆಯಿದೆ. ಯಾವ ರಾಷ್ಟ್ರದ ಸಂಸ್ಕೃತಿಯ ಮೇಲೆ ೧ ಸಾವಿರ ವರ್ಷಗಳ ಕಾಲ ಆಘಾತವನ್ನು ಮಾಡಿದರೂ, ಆ ಸಂಸ್ಕೃತಿಯು ಅಲ್ಪಸಂಖ್ಯಾತರನ್ನು ಸ್ವೀಕರಿಸಿತು, ಅವರಿಗೆ ಬಹುಮಾನವನ್ನು ಕೊಟ್ಟಿತು, ಈ ಮಹಾಶಯರಿಗೆ ಆ ಬಹುಸಂಖ್ಯಾತರ ಮೇಲೆ ಬೆಂಕಿಯುಗುಳುವ ನೈತಿಕ ಅಧಿಕಾರವಾದರೂ ಇದೆಯೇ ? ಇಂದು ‘ಗ್ರೆಟಾ’ ಮತ್ತು ‘ರಿಹಾನಾ’ ಇವರ ಕಾಲದಲ್ಲಿ ಎಲ್ಲ ರಾಷ್ಟ್ರಪ್ರೇಮಿ ನಾಗರಿಕರು ಒಂದಾಗಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ  ಕಪ್ಪುಮಸಿ ಬಳಿಯಲು ನೋಡುವ ಅಂತರಾಷ್ಟ್ರೀಯ ಷಡ್ಯಂತ್ರ್ಯವನ್ನು ಬುಡಸಮೇತ ಕಿತ್ತೆಸೆಯಲು ಸಜ್ಜಾಗಬೇಕಾಗಿದೆ. ಅಲ್ಲಿ ಹೀಗೆಹೇಳಿಕೆ ನೀಡುವುದು ಮತ್ತು ರಾಷ್ಟ್ರಘಾತಕ ‘ಮೌನ’ ವಹಿಸುವುದು ಇದು ಆ ಷಡ್ಯಂತ್ರ್ಯದ ತೈಲಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುವುದಿಲ್ಲವೇ ?  ಅಷ್ಟೇ ಅಲ್ಲ, ಇದರಿಂದಲೇ ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರ ಮುಖಂಡತ್ವದಲ್ಲಿ ಕೇಂದ್ರ ಸರಕಾರವು ಕಲಂ ೩೭೦ ರದ್ದುಗೊಳಿಸಲು ತೋರಿಸಿದ ಧೈರ್ಯ ಮತ್ತು ಚಾಣಾಕ್ಷತನ ಅವಲಂಬಿಸಿತ್ತು. ಇದು ಶೇ. ೧೦೦ ರಷ್ಟು ರಾಷ್ಟ್ರಹಿತವನ್ನು ಅವಲಂಬಿಸಿಯೇ ಇತ್ತು ಎಂದು ಹೇಳುವ ಸಮಯ ಬಂದಿದೆ.

ಅನ್ಸಾರಿಯವರ ಹೇಳಿಕೆಯು ವೈಚಾರಿಕ ಭಯೋತ್ಪಾದಕತೆಯ ಕೃತ್ಯವಾಗಿದ್ದು, ಇದು ಜಿಹಾದಿ ಭಯೋತ್ಪಾದನೆಗಿಂತ ಭಯಂಕರವಾಗಿದೆ ಎಂದರಿತು ಅವರ ಹೇಳಿಕೆಯನ್ನು ಎಲ್ಲ ವೇದಿಕೆಗಳಲ್ಲಿಯೂ ವೈಚಾರಿಕವಾಗಿ ಪ್ರತಿಕ್ರಿಯಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಧರ್ಮಪ್ರೇಮಿ, ರಾಷ್ಟ್ರಪ್ರೇಮಿ ಮತ್ತು ಅದಕ್ಕಿಂತ ಹೆಚ್ಚಾಗಿ ಸರಕಾರವು ಕಠಿಣ ಪ್ರಯತ್ನಗಳನ್ನು ಮಾಡುವುದು ಆವಶ್ಯಕವಾಗಿದೆ.