ಮಂಗಳೂರಿನ ಸಾಧಕಿ ಕು. ಮಾಧವಿ ಪೈ ಇವರು ಮೊದಲ ಪ್ರಯತ್ನದಲ್ಲಿಯೇ ಸಿ.ಎ.ಯ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಕು. ಮಾಧವಿ ಪೈ

ಮಂಗಳೂರು – ಮಂಗಳೂರಿನ ಯುವ ಸಾಧಕಿಯಾದ ಕು. ಮಾಧವಿ ಪೈ ಇವರು ತಮ್ಮ ಪ್ರಥಮ ಪ್ರಯತ್ನದಲ್ಲೇ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎರಡು ಗ್ರೂಪ್ ಒಂದೇ ಸಲ ಉತ್ತೀರ್ಣರಾಗಿ ವಿಶೇಷ ಸಾಧನೆ ಮಾಡಿದ್ದಾರೆ. ಇವರು ಮಂಗಳೂರಿನ ಸಾಧಕಿಯಾದ ಸೌ. ಲಕ್ಷ್ಮಿ ಪೈ ಇವರ ಹಿರಿಯ ಪುತ್ರಿಯಾಗಿದ್ದಾರೆ. ತಮ್ಮ ವ್ಯಾಸಂಗದ ಜೊತೆಗೆ ನಿಯಮಿತ ಗುರುಸೇವೆಯನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸನಾತನ ಪ್ರಭಾತದ ಜಾಹೀರಾತು ಸಂರಚನೆ ಸೇವೆಯನ್ನು ಮಾಡುತ್ತಿದ್ದಾರೆ. ‘ತಮ್ಮ ಯಶಸ್ಸಿಗೆ ಕೇವಲ ಗುರುಕೃಪೆಯೊಂದೇ ಕಾರಣ’ ಎಂದುತಮ್ಮ ಮನೋಗತವನ್ನು ವ್ಯಕ್ತಪಡಿಸಿ ಗುರುಚರಣಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಕು. ಮಾಧವಿಯ ಬಗ್ಗೆ ಅವರ ತಾಯಿಯಾದ ಸೌ.ಲಕ್ಷ್ಮಿ ಪೈಇವರು ವ್ಯಕ್ತ ಪಡಿಸಿದ ಅಭಿಪ್ರಾಯ

ಕು. ಮಾಧವಿಯಲ್ಲಿ ಕೆಲವು ವಿಶಿಷ್ಟ ಗುಣಗಳಿವೆ. ನಿಯೋಜನಾಬದ್ಧವಾಗಿ ಅಧ್ಯಯನ ಮಾಡುವುದು, ಸ್ವಯಂಶಿಸ್ತು, ಪರಿಶ್ರಮ ಪಡುವುದು, ಮನಮುಕ್ತತೆ, ಸಂಘರ್ಷ ಮಾಡುವುದು, ಇವೆಲ್ಲಗುಣಗಳಿಂದ ಅವಳು ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡಲು ಸಾಧ್ಯವಾಗುತ್ತಿತ್ತು. ಎಷ್ಟೇ ಆಯಾಸವಾದರೂ ಗುರು ಸೇವೆಯನ್ನು ಸಮಯದೊಳಗೆ ಪೂರ್ಣಮಾಡಲು ಮತ್ತು ತಪ್ಪಿಲ್ಲದೆ ಮಾಡಲು ಅವಳ ಪ್ರಯತ್ನ ಇರುತ್ತಿತ್ತು. ಅವಳಿಗೆ ಆಗಾಗ ಅನಾರೋಗ್ಯದ ಸಮಸ್ಯೆ ಇರುತ್ತಿತ್ತು. ಆದರೆ ಯಾವಾಗ ಜಾಹೀರಾತು ಸಂರಚನೆಯ ಸೇವೆ ಬರುತ್ತಿತ್ತು ಆಗ ಪಟ್ಟುಹಿಡಿದು ಸೇವೆಯನ್ನುಸಮಯದಲ್ಲಿ ಪೂರ್ಣ ಮಾಡಿ ಕಳಿಸುತ್ತಿದ್ದಳು. ತನ್ನ ತಂಗಿಗೆ ಕೂಡ ಸಾಧನೆ ಮತ್ತು ಸೇವೆಯ ಮಹತ್ವದ ಬಗ್ಗೆ ತಿಳಿಸಿ ಅವಳಿಂದಲೂ ಸಾಧನೆಯನ್ನು ಮಾಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ‘ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ ಮತ್ತು ಅವರ ಕೃಪಾಶೀರ್ವಾದದಿಂದ ಈ ಸಾಧನೆ ತನ್ನಿಂದ ಸಾಧ್ಯವಾಗಿದೆ’ ಎಂದು ಯಾವಾಗಲೂ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇಂದು ಅವಳ ಯಶಸ್ಸಿನ ಹಿಂದೆ ಕೇವಲ ಸಂತರ ಕೃಪಾಶೀರ್ವಾದ ಮತ್ತು ಪರಮಪೂಜ್ಯಗುರುದೇವರ ಅಪಾರ ಕೃಪೆಯೊಂದೇ ಕಾರಣವಾಗಿದೆ ಎಂಬುದು ನಿಸ್ಸಂಶಯ. ಅದಕ್ಕಾಗಿ ಶ್ರೀ ಗುರುಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.