ರಾಮನಗರ (ಬೆಳಗಾವಿ)– ಇಲ್ಲಿಯ ಸನಾತನದ ಸಾಧಕಿ ಕು. ನಕುಶಾ ರಾಮಾ ನಾಯಿಕ ಇವರ ‘ಬಿ.ಎಸ್.ಸಿ. ನರ್ಸಿಂಗ’ ನ ದ್ವಿತೀಯ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ರ‍್ಯಾಂಕ ಪಡೆದಿದ್ದಾರೆ, ಅವರು ‘ರಾಜೀವಗಾಂಧಿ ಯುನಿವರ್ಸಿಟಿಆಫ್ ಹೆಲ್ತ್ ಸೈನ್ಸ್, ಬೆಂಗಳೂರು’ ನ ಅಂತರ್ಗತ ‘ಕೆ.ಎಲ್.ಇ. ಸೊಸೈಟಿ ಇನ್ಸಟಿಟ್ಯೂಟ್ ಆಫ್ ನರ್ಸಿಂಗ್ ಸೊಸೈಟಿ, ಹುಬ್ಬಳ್ಳಿ’, ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಸುವರ್ಣಪದಕವನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಇವರು ಉಪಸ್ಥಿತರಿದ್ದರು. ಇವರೊಂದಿಗೆ ಈ ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ವೈದ್ಯಕೀಯ ಶಿಕ್ಷಣಮಂತ್ರಿಗಳೂ ಉಪಸ್ಥಿತರಿದ್ದರು. ಕು. ನಕುಶಾ ಅವಳ ಯಶಸ್ಸಿನ ಶ್ರೇಯಸ್ಸನ್ನು ಪರಾತ್ಪರ ಗುರು ಡಾ. ಆಠವಲೆ ಮತ್ತು ಅವಳ ಶಿಕ್ಷಕರಿಗೆ ನೀಡಿದ್ದಾರೆ.
ಅಧ್ಯಯನ ಮಾಡುವಾಗ ಮತ್ತು ಪರೀಕ್ಷೆಯ ಸಮಯದಲ್ಲಿ ಕು. ನಕುಶಾ ಆಧ್ಯಾತ್ಮಿಕ ಸ್ತರದಲ್ಲಿಮಾಡಿರುವ ಪ್ರಯತ್ನಗಳು!
ಶಿಕ್ಷಣವನ್ನು ಪಡೆಯುವಾಗ ಮತ್ತು ಪರೀಕ್ಷೆಯ ಮೊದಲು ಅಧ್ಯಯನ ಮಾಡುವಾಗ ಕು. ನಕುಶಾ ಇವರು ಪರಾತ್ಪರ ಗುರುದೇವ ಡಾ. ಆಠವಲೆಯವರನ್ನು ಸ್ಮರಿಸುವುದು, ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು, ನಾಮಜಪದ ಧ್ವನಿ ತಟ್ಟೆಯನ್ನು ಹಾಕುವುದು ಮುಂತಾದ ಪ್ರಯತ್ನಗಳನ್ನು ಮಾಡುತ್ತಿದ್ದರು. ಪರೀಕ್ಷೆಯ ಕಾಲಾವಧಿಯಲ್ಲಿ ಅವಳು ‘ಮನಸ್ಸಿನಿಂದ ಗುರು ದೇವರ ಆಶ್ರಮಕ್ಕೆ ಹೋಗಿ ಅವರ ಚರಣಗಳ ಬಳಿ ಕುಳಿತುಕೊಂಡು ಪ್ರಶ್ನೆಪತ್ರಿಕೆಯನ್ನು ಉತ್ತರಿಸುತ್ತಿದ್ದೇನೆ’, ಎಂಬ ಭಾವವನ್ನು ಇಟ್ಟುಕೊಳ್ಳುತ್ತಿದ್ದರು. ಪರೀಕ್ಷೆಯ ಮೊದಲು ಅವರು ಭಗವಾನಶ್ರೀಕೃಷ್ಣನ ಶ್ಲೋಕವನ್ನು ಪಠಿಸುವುದು, ಎಲ್ಲ ವಸ್ತುಗಳಿಗೆ ವಂದಿಸುವುದು, ಹಾಗೆಯೇ ಪರೀಕ್ಷೆ ಮುಗಿದ ಬಳಿಕ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮುಂತಾದ ಪ್ರಯತ್ನಗಳನ್ನು ಮಾಡುತ್ತಿದ್ದರ. ಪರೀಕ್ಷೆಯ ಸಮಯದಲ್ಲಿ ಅವರ ತಂಗಿ ಕು. ಪ್ರಾಪ್ತಿ ಅವಳಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿದ್ದಳು.