‘ಹಿಂದೂ ರಾಷ್ಟ್ರದ ಧರ್ಮವೀರ’ ರನ್ನು ತಯಾರಿಸುವ ‘ಹಿಂದೂ ಜನಜಾಗೃತಿ ಸಮಿತಿ’ಯ ‘ಸ್ವರಕ್ಷಣಾ ತರಬೇತಿವರ್ಗ’ಗಳ ಮಹತ್ವ ಮತ್ತು ಅದರಿಂದ ಪ್ರಶಿಕ್ಷಣಾರ್ಥಿಗಳಿಗಾದ ಲಾಭ !

೧. ಸದ್ಯದ ಕರಾಟೆ ಪ್ರಶಿಕ್ಷಣಾರ್ಥಿಗಳ ತರಬೇತಿಯ ಉಪಯೋಗವು ರಾಷ್ಟ್ರ ಮತ್ತು ಧರ್ಮಕ್ಕಾಗುವುದು ವಿರಳವೇ ಆಗಿದೆ

‘ಸದ್ಯ ಸಮಾಜದಲ್ಲಿ ಕರಾಟೆಯ ಅನೇಕ ತರಬೇತಿ ವರ್ಗಗಳು ನಡೆಯುತ್ತವೆ. ಕರಾಟೆಯನ್ನು ಕಲಿಯುವ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ‘ಬಿಳಿ, ಹಳದಿ, ನೇರಳ, ಹಸಿರು, ನೀಲಿ, ಕಂದು ಮತ್ತು ಕಪ್ಪು’, ಹೀಗೆ ವಿವಿಧ ‘ಬೆಲ್ಟ್’ (ಪಟ್ಟಿ) ಗಳನ್ನು ಕೊಡಲಾಗುತ್ತದೆ; ಆದರೆ ‘ಅವರಿಂದ ಪ್ರತ್ಯಕ್ಷ ಘಟಿಸುವ ಘಟನೆಗಳನ್ನು ಎದುರಿಸಲು ಆವಶ್ಯಕವಿರುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಿದ್ಧತೆಯನ್ನು ಮಾಡಿಸಿಕೊಳ್ಳುವುದಿಲ್ಲ. ಆದುದರಿಂದ ಕರಾಟೆಯ ತರಬೇತಿಯು ಎಷ್ಟೇ ಉತ್ತಮವಾಗಿದ್ದರೂ, ನಾಲ್ಕು ಗೋಡೆಗಳ ಹೊರಗೆ ಆ ವಿದ್ಯಾರ್ಥಿಗಳ ಕೌಶಲ್ಯ, ಶೌರ್ಯ ಮತ್ತು ಅವರು ಪಡೆದಿರುವ ತರಬೇತಿಯು ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕೆ ಉಪಯೋಗವಾಗುವುದಿಲ್ಲ.

೨. ‘ಹಿಂದೂ ಜನಜಾಗೃತಿ ಸಮಿತಿ’ಯ ಮೂಲಕ ನೀಡಲಾಗುತ್ತಿರುವ ಉಚಿತ ‘ಸ್ವರಕ್ಷಣಾ ತರಬೇತಿದಿಂದ ಯುವ ಪೀಳಿಗೆಯು ಅಲ್ಪಾವಧಿಯಲ್ಲಿಯೇ ಎಲ್ಲ ರೀತಿಯಿಂದ ಸಕ್ಷಮವಾಗುವುದು

‘ಹಿಂದೂ ಜನಜಾಗೃತಿ ಸಮಿತಿ’ಯ ಮೂಲಕ ಯುವ ಪೀಳಿಗೆಗೆ ಉಚಿತ ‘ಸ್ವರಕ್ಷಣಾ ತರಬೇತಿ’ಯನ್ನು ನೀಡಲಾಗುತ್ತದೆ. ‘ಈ ವರ್ಗಗಳ ಮಾಧ್ಯಮದಿಂದ ಯುವ ಪೀಳಿಗೆಯನ್ನು ಅಲ್ಪಾವಧಿಯಲ್ಲಿಯೇ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಸಕ್ಷಮರಾಗುವ ವೇಗವು ಹೆಚ್ಚಿದೆ’, ಎಂದು ಅನೇಕ ಧರ್ಮಪ್ರೇಮಿಗಳು ಹೇಳಿದ್ದಾರೆ.

೩. ಹಿಂದೂ ಜನಜಾಗೃತಿ ಸಮಿತಿಯ ‘ಸ್ವರಕ್ಷಣಾ ತರಬೇತಿವರ್ಗ’ಗಳ ಲಾಭ

ಶ್ರೀ. ಹರ್ಷದ ಖಾನವಿಲಕರ

‘ಹಿಂದೂ ಜನಜಾಗೃತಿ ಸಮಿತಿ’ಯ ಮೂಲಕ ಸದ್ಯ ೭ ದಿನಗಳ ಆನ್‌ಲೈನ್ ‘ಶೌರ್ಯಜಾಗೃತಿ ವರ್ಗ’ಗಳನ್ನು (ಕ್ರ್ಯಾಶ್ ಕೋರ್ಸ) ಮತ್ತು ಇತರ ಸಮಯದಲ್ಲಿ ಪ್ರತ್ಯಕ್ಷ ‘ಸ್ವರಕ್ಷಣಾ ತರಬೇತಿವರ್ಗ’ಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ೭ ದಿನಗಳ ವರ್ಗಗಳಲ್ಲಿ ಹುಡುಗ-ಹುಡುಗಿಯರಲ್ಲಿ ಕೆಲವು ವೈಶಿಷ್ಟ್ಯಪೂರ್ಣ ಬದಲಾವಣೆಗಳು ಕಂಡುಬಂದವು. ಈ ಪ್ರಶಿಕ್ಷಣಾರ್ಥಿಗಳು ಮುಂದಿನಂತೆ ತಮ್ಮಲ್ಲಿ ಬದಲಾವಣೆ ಮತ್ತು ಆಗಿರುವ ಲಾಭವನ್ನು ಹೇಳಿದರು.

೩ ಅ. ಶಾರೀರಿಕ

೧. ಪ್ರಶಿಕ್ಷಣಾರ್ಥಿಗಳು ಒಂದರಿಂದ ಒಂದೂವರೆ ಗಂಟೆಯಷ್ಟು ತರಬೇತಿಯ ನಂತರ ಶಾರೀರಿಕ ಮಾನಸಿಕವಾಗಿ ದಣಿವಾಗದೇ ಹೆಚ್ಚು ಉತ್ಸಾಹವೆನಿಸುವುದು.

೨. ನಿಯಮಿತ ವ್ಯಾಯಾಮದ ಅಥವಾ ಇತರ ಶಾರೀರಿಕ ಪರಿಶ್ರಮದ ಅಭ್ಯಾಸವಿಲ್ಲದಿದ್ದರೂ ಸ್ವರಕ್ಷಣಾ ತರಬೇತಿವರ್ಗಗಳಲ್ಲಿ ಯಾವುದೇ ತೊಂದರೆ ಆಗದಿರುವುದು.

. ಪ್ರಶಿಕ್ಷಣಾರ್ಥಿಗಳಲ್ಲಿ ತಮ್ಮ ಶಾರೀರಿಕ ಕ್ಷಮತೆ ಅಲ್ಪಾವಧಿಯಲ್ಲಿಯೇ ಹೆಚ್ಚಾಗಿರುವುದರ ಅರಿವಾಗುವುದು.

೪. ಸ್ವರಕ್ಷಣಾ ತರಬೇತಿವರ್ಗಗಳಿಗೆ ಬಂದ ನಂತರ ಕೆಲವರ ಶಾರೀರಿಕ ತೊಂದರೆಗಳು ಸ್ವಲ್ಪ ಕಡಿಮೆಯಾಗಿ ಅವರಿಗೆ ಒಳ್ಳೆಯದೆನಿಸುವುದು.

೩ ಆ. ಮಾನಸಿಕ

೧. ಸ್ವರಕ್ಷಣಾ ತರಬೇತಿಯಿಂದ ಎಲ್ಲರ ಆತ್ಮವಿಶ್ವಾಸ ಹೆಚ್ಚಾಗಿ ಭಯ ಕಡಿಮೆಯಾಗುವುದು.

೨. ‘ಅನ್ಯಾಯದ ವಿರುದ್ಧ ಪ್ರತಿರೋಧ (ವಿರೋಧ) ಮಾಡಬಹುದು’, ಎಂಬ ಭಾವನೆಯು ನಿರ್ಮಾಣವಾಗುವುದು.

೩. ಸ್ವರಕ್ಷಣಾ ತರಬೇತಿವರ್ಗಗಳಲ್ಲಿ ರಾಷ್ಟ್ರ ಮತ್ತು ಧರ್ಮದ ಮೇಲಾಗುವ ವಿವಿಧ ಆಘಾತಗಳ ಪ್ರಸಂಗ ಮತ್ತು ಘಟನೆಗಳನ್ನು ಹೇಳಲಾಗುತ್ತದೆ. ಇದರಿಂದ ‘ಸಮಾಜದಲ್ಲಿ ಘಟಿಸುವ ಇಂತಹ ಪ್ರಸಂಗಗಳನ್ನು ಯಾವ ದೃಷ್ಟಿಯಿಂದ ನೋಡಬೇಕು ?’, ಎಂಬುದು ಅವರಿಗೆ ಕಲಿಯಲು ಮತ್ತು ಅನುಭವಿಸಲು ಸಾಧ್ಯವಾಯಿತು.

೪. ಹುಡುಗಿಯರಲ್ಲಿ ಹೆಚ್ಚು ಪ್ರಮಾಣದಲ್ಲಿ ಬದಲಾವಣೆ ಕಂಡುಬಂದಿತು. ‘ಇಂದಿನ ಯುವತಿಯರು ಪೀಡಿತ ಮತ್ತು ಅತ್ಯಾಚಾರಗಳನ್ನು ಸಹಿಸುವವರಾಗಿರದೇ ಅವರು ‘ರಣರಾಗಿಣಿ’ಯರಾಗಿದ್ದಾರೆ. ಅವರು ಹೋರಾಡಿ ಪ್ರತಿಕಾರವನ್ನೂ ಮಾಡಬಹುದು’, ಎಂಬ ಭಾವನೆಯು ಈ ೭ ದಿನಗಳಲ್ಲಿ ಅವರಲ್ಲಿ ನಿರ್ಮಾಣವಾಯಿತು.

. ಪ್ರಶಿಕ್ಷಣಾರ್ಥಿಗಳಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮ, ಜಾಗರೂಕತೆ  ಮತ್ತು ಆತ್ಮೀಯತೆ ಹೆಚ್ಚಾಗಿರುವುದು ಕಂಡು ಬಂದಿತು.

೬. ವರ್ಗಗಳಲ್ಲಿ ಇತಿಹಾಸದಲ್ಲಿನ ಶೌರ್ಯದ ವಿವಿಧ ಪ್ರಸಂಗಗಳನ್ನು ಹೇಳಿದ ನಂತರ ಪ್ರಶಿಕ್ಷಣಾರ್ಥಿಗಳ ಅಲ್ಪವಾಗಿರುವ ಶಾರೀರಿಕ ಊರ್ಜೆಯು ಪುನಃ ಜಾಗೃತವಾಗಿ ಮನಸ್ಸು ಶಾರೀರಿಕ ತರಬೇತಿ ವನ್ನು ಮಾಡಲು ಸಿದ್ಧವಾಯಿತು.

. ಈ ತರಬೇತಿವರ್ಗಗಳಿಂದಾಗಿ ಅನೇಕ ಯುವಕ-ಯುವತಿಯರು ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳುವುದು ಹೆಚ್ಚಾಯಿತು. ‘ನಾವು ಪಡೆದಿರುವ ತರಬೇತಿಯನ್ನು ನಮಗಾಗಿ ಸೀಮಿತವಾಗಿಡದೇ, ಅದನ್ನು ಇತರರಿಗೂ ಕಲಿಸಬೇಕು’, ಎಂಬ ಭಾವನೆಯು ಅವರಲ್ಲಿ ನಿರ್ಮಾಣವಾಯಿತು ಮತ್ತು ಅನೇಕ ಹೊಸ ಧರ್ಮಪ್ರೇಮಿಗಳು ಉತ್ತಮ ಪ್ರಶಿಕ್ಷಕರೆಂದು ತಯಾರಾದರು.

೩ ಇ. ಆಧ್ಯಾತ್ಮಿಕ

೩ ಇ ೧. ಎಲ್ಲರಿಗೂ ಭಗವಂತನ ಅಸ್ತಿತ್ವ, ಶಕ್ತಿ ಮತ್ತು ಈಶ್ವರೀ ಸಾಮರ್ಥ್ಯವನ್ನು ಅನುಭವಿಸಲು ಸಾಧ್ಯವಾಯಿತು.

೩ ಇ ೨. ನಾಮಜಪದಲ್ಲಿನ ಶಕ್ತಿ ಮತ್ತು ಆನಂದವನ್ನು ಅನುಭವಿಸುವುದು : ಆರಂಭದ ೨-೩ ದಿನ ವರ್ಗದಲ್ಲಿ ಕುಲದೇವತೆ ಮತ್ತು ಶ್ರೀ ದತ್ತಗುರುಗಳ ನಾಮಜಪವನ್ನು ಮಾಡಲು ಹೇಳಲಾಗುತ್ತದೆ. ಎಲ್ಲ ಧರ್ಮಪ್ರೇಮಿಗಳು ಕೂಡಲೇ ನಾಮಜಪವನ್ನು ಮಾಡಲು ಆರಂಭಿಸಿ ಅದರಲ್ಲಿನ ಶಕ್ತಿ ಮತ್ತು ಆನಂದವನ್ನು ಅನುಭವಿಸಿದರು. ನಾಮಜಪವನ್ನು ಮಾಡಿದುದರಿಂದ ಆಗುವ ಲಾಭ ಮತ್ತು ಮನಸ್ಸಿನ ಸ್ಥಿತಿಯಲ್ಲಿ ಆಗುವ ಬದಲಾವಣೆಯನ್ನು ಪ್ರತ್ಯಕ್ಷ ಅನುಭವಿಸಿದ್ದರಿಂದ ಅವರಿಗೆ ತುಂಬಾ ಆನಂದವಾಯಿತು.

೩ ಇ ೩. ಧರ್ಮಾಚರಣೆಯ ಕೃತಿಗಳ ಲಾಭವನ್ನು ಅನುಭವಿಸುವುದು : ವರ್ಗದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ‘ಹುಡುಗರು ಹಣೆಯಲ್ಲಿ ತಿಲಕವನ್ನು ಹಚ್ಚುವುದು, ಹುಡುಗಿಯರು ಕುಂಕುಮವನ್ನು ಹಚ್ಚುವುದು, ಕೈ ಜೋಡಿಸಿ ನಮಸ್ಕರಿಸುವುದು, ‘ಹಲೋ’ ಎನ್ನದೇ ಪರಸ್ಪರರಿಗೆ ‘ಜಯ ಶ್ರೀರಾಮ’ ಅಥವಾ ‘ನಮಸ್ಕಾರ’ ಹೇಳುವುದು’, ಇಂತಹ ಧರ್ಮಾಚರಣೆಯ ಕೃತಿಗಳನ್ನು ಹೇಳಿದ ನಂತರ ಅವರು ಅವುಗಳನ್ನು ಆಚರಣೆಯಲ್ಲಿ ತರಲು ಆರಂಭಿಸಿದರು. ಸ್ವತಃ ಕೃತಿ ಮಾಡಿ ಇತರರಿಗೂ ಹೇಳಿದರು. ಈ ಚಿಕ್ಕಚಿಕ್ಕ ಕೃತಿಗಳ ಮಾಧ್ಯಮದಿಂದಲೂ ಅವರಿಗೆ ಆಧ್ಯಾತ್ಮಿಕದೃಷ್ಟಿಯಿಂದ ಆಗುವ ಧರ್ಮಾಚರಣೆಯ ಲಾಭವು ಗಮನಕ್ಕೆ ಬಂದಿತು.

೩ ಇ ೪. ಕೆಲವರಲ್ಲಿ ಈಶ್ವರಪ್ರಾಪ್ತಿಯ ಭಾವವು ಹೆಚ್ಚಿತು.

೩ ಇ ೫. ವಿವಿಧ ಭಾವಪ್ರಯೋಗಗಳಿಂದ ಅನುಸಂಧಾನದಲ್ಲಿರಲು ಸಾಧ್ಯವಾಗುವುದು : ಪ್ರಶಿಕ್ಷಣಾರ್ಥಿಗಳು ಈಶ್ವರನೊಂದಿಗೆ ಅನುಸಂಧಾನದಲ್ಲಿರಲು ವರ್ಗಗಳಲ್ಲಿ ವಿವಿಧ ಭಾವಪ್ರಯೋಗಗಳನ್ನು ತೆಗೆದುಕೊಳ್ಳಲಾಗುತ್ತದೆ, ಉದಾ. ‘ಸಾಕ್ಷಾತ್ ಸುದರ್ಶನ ಚಕ್ರಧಾರಿ ಭಗವಾನ ಶ್ರೀಕೃಷ್ಣನು ತನ್ನ ವಿರಾಟ ರೂಪದಲ್ಲಿ ನಮ್ಮ ಮುಂದೆ ನಿಂತಿದ್ದಾನೆ ಮತ್ತು ನಾವು ಅವನ ಮುಂದೆ ಅರ್ಜುನನಂತೆ ಸ್ವರಕ್ಷಣೆಯ ತರಬೇತಿಯನ್ನು ಪಡೆಯುತ್ತಿದ್ದೇವೆ.’ ‘ಆದಿಶಕ್ತಿ ಶ್ರೀ ದುರ್ಗಾದೇವಿಯು ನಮ್ಮ ಮುಂದೆ ನಿಂತಿದ್ದಾಳೆ ಮತ್ತು ಅವಳ ಚರಣಗಳಲ್ಲಿ ನತಮಸ್ತಕರಾಗಿ ಮತ್ತು ಅವಳಿಗೆ ಸಂಪೂರ್ಣ ಶರಣಾಗಿ ನಾವು ಸ್ವರಕ್ಷಣಾ ತರಬೇತಿಯನ್ನು ಕಲಿಯುತ್ತಿದ್ದೇವೆ.’ ಎಂಬ ವಿವಿಧ ಭಾವಪ್ರಯೋಗಗಳನ್ನು ಈ ವರ್ಗಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಅದರಿಂದ ಎಲ್ಲರಿಗೂ ತುಂಬಾ ಲಾಭವಾಯಿತು.

೩ ಇ ೬. ಪ್ರಾರ್ಥನೆ ಮತ್ತು ಕೃತಜ್ಞತೆಗಳಿಂದ ಅಹಂ ಕಡಿಮೆಯಾಗಲು ಸಹಾಯವಾಗುವುದು : ಈ ವರ್ಗದ ಆರಂಭದಲ್ಲಿ ಧರ್ಮಸಂಸ್ಥಾಪಕ ಭಗವಾನ ಶ್ರೀಕೃಷ್ಣ ಮತ್ತು ಆದಿಶಕ್ತಿ ಶ್ರೀ ದುರ್ಗಾದೇವಿ ಇವರಿಗೆ ಪ್ರಾರ್ಥನೆಯನ್ನು ಮಾಡಿ ತರಬೇತಿವರ್ಗವನ್ನು ಆರಂಭಿಸಲಾಗುತ್ತದೆ ಮತ್ತು ವರ್ಗ ಮುಗಿದ ನಂತರ ಅವರೇ ಈ ಸ್ವರಕ್ಷಣಾ ತರಬೇತಿಯನ್ನು ಮಾಡಿಸಿಕೊಂಡರೆಂದು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲಾಗುತ್ತದೆ. ವರ್ಗದಲ್ಲಿ ಆಗಾಗ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲಾಗುತ್ತದೆ. ಇದರಿಂದಾಗಿ ‘ನಾನು’ ಈ ಶಾರೀರಿಕ ತರಬೇತಿಯನ್ನು ಮಾಡಿದೆನು, ‘ನಾನು’ ಈ ಎಲ್ಲ ಪ್ರಕಾರಗಳನ್ನು ಚೆನ್ನಾಗಿ ಮಾಡಿದೆನು, ‘ನನಗೆ ಮಾಡಲು ಸಾಧ್ಯವಾಯಿತು’, ಎಂಬ ಅಹಂಯುಕ್ತ ವಿಚಾರಗಳು ಕಡಿಮೆಯಾಗಲು ಸಹಾಯವಾಗುತ್ತದೆ.

೪. ‘ಹಿಂದೂ ಜನಜಾಗೃತಿ ಸಮಿತಿ’ಯ ಸ್ವರಕ್ಷಣಾ ತರಬೇತಿವರ್ಗಗಳೆಂದರೆ ಶೌರ್ಯದ (ಸಾಹಸದ) ಉಪಾಸನೆಯ ಸಾಮರ್ಥ್ಯವನ್ನು ಅನುಭವಿಸುವ ಒಂದು ಕೇಂದ್ರವೇ ಆಗಿದೆ

ಈ ರೀತಿ ‘ಹಿಂದೂ ಜನಜಾಗೃತಿ ಸಮಿತಿ’ಯ ಸ್ವರಕ್ಷಣೆಯ ತರಬೇತಿವರ್ಗಗಳೆಂದರೆ ‘ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ‘ಹಿಂದೂ ರಾಷ್ಟ್ರದ ಧರ್ಮಯೋಧರನ್ನು ತಯಾರಿಸುವ ಕೇಂದ್ರಗಳಾಗಿದ್ದು ಅದು ಶೌರ್ಯದ ಉಪಾಸನೆಯಾಗಿದೆ. ನನಗೆ, ಈ ವರ್ಗವು ಉಪಾಸನೆಯ ಸಾಮರ್ಥ್ಯವನ್ನು ಅನುಭವಿಸುವ ಒಂದು ಕೇಂದ್ರವೇ ಆಗಿದೆ’, ಎಂದು ಅನಿಸುತ್ತದೆ. ಸಾಕ್ಷಾತ್ ಶ್ರೀ ಗುರುಗಳ ಸಂಕಲ್ಪ ಮತ್ತು ಭಗವಾನ ಶ್ರೀಕೃಷ್ಣ ಹಾಗೂ ಸಂತರ ಆಶೀರ್ವಾದವಿರುವ ಸ್ವರಕ್ಷಣಾ ತರಬೇತಿಯನ್ನು ಎಲ್ಲೆಡೆ ತಲುಪಿಸುವ ಅವಕಾಶವು ನಮಗೆ ಸಿಗುತ್ತಿದೆ. ಕಾಲಕ್ಕನುಸಾರ ಹಿಂದೂ ರಾಷ್ಟ್ರಕ್ಕಾಗಿ ಆವಶ್ಯಕವಾಗಿರುವ ಶೌರ್ಯದ ಸಾಧನೆಯನ್ನು ಸಮಾಜದಿಂದ ಮಾಡಿಸಿಕೊಳ್ಳುವ ಅವಕಾಶವು ನಮಗೆ ಲಭಿಸಿದ್ದು ‘ಭಗವಂತನ ಮತ್ತು ಶ್ರೀ ಗುರುಗಳ ಕೃಪೆಯಿಂದಾಗಿ ಈ ಕಾರ್ಯವು ಆಗುತ್ತಿದೆ’, ಇದು ನಮಗೆ ಪ್ರತ್ಯಕ್ಷ ಅನುಭವಿಸಲು ಸಿಗುತ್ತಿದೆ. ಅದಕ್ಕಾಗಿ ಜಗದ್ಗುರು ಭಗವಾನ ಶ್ರೀಕೃಷ್ಣ ಮತ್ತು ಕೃಪಾಳು ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– ಶ್ರೀ. ಹರ್ಷದ ಖಾನವಿಲಕರ, ಯುವಾ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ. (೨೩.೧೧.೨೦೨೦)

ಹಿಂದೂಗಳು ಶೌರ್ಯಹೀನರಾಗಿರುವುದರಿಂದಲೇ ಹಿಂದೂದ್ರೋಹಿಗಳು ಅವರ ಮೇಲೆ ಸತತವಾಗಿ ಆಕ್ರಮಣ ಮಾಡುವುದು

ಕಳೆದ ಅನೇಕ ಶತಮಾನಗಳಿಂದ ಹಿಂದೂಗಳಿಗೆ ತಥಾಕಥಿತ ಅಹಿಂಸೆಯ ಪಾಠವನ್ನು ಅದೆಷ್ಟು ಕಲಿಸಲಾಗಿದೆಯೆಂದರೆ, ಇದುವರೆಗೆ ಹಿಂದೂಗಳು ತಮ್ಮ ಮೇಲೆ ಆಗುವ ಆಕ್ರಮಣಗಳ ಪ್ರತಿರೋಧವನ್ನು ಕ್ಷಾತ್ರವೃತ್ತಿಯಿಂದ ಮಾಡುತ್ತಿಲ್ಲ. ಕಾಶ್ಮೀರದಿಂದ ಕೇರಳದವರೆಗೆ ಹಿಂದೂಗಳ ಮೇಲೆ ಅಥವಾ ಹಿಂದೂಗಳ ಶ್ರದ್ಧಾಸ್ಥಾನದ ಮೇಲೆ ಸತತವಾಗಿ ನಡೆಯುತ್ತಿರುವ ಆಕ್ರಮಣಗಳು ಮತ್ತು ನೋವು ಇದೇ ಇದರಿಂದ ಸಿದ್ಧವಾಗುತ್ತಿದೆ.

೧೮೭೮ ರ’ ಶಸ್ತ್ರ ಎಕ್ಟ್ (ಆರ್ಮ ಎಕ್ಟ್)’ ಮತ್ತು ಮೆಕಾಲಿನ ಪಾಶ್ಚಾತ್ಯ ಶಿಕ್ಷಣಪ್ರಣಾಲಿಯಿಂದ ಸ್ವಲ್ಪಮಟ್ಟಿಗೆ ಉಳಿದಿರುವ ಕ್ಷಾತ್ರವೃತ್ತಿಯೂ ನಷ್ಟವಾಯಿತು. ಈಗ ಹಿಂದೂಗಳು ಇಷ್ಟೊಂದು ಶವದಂತೆ ಆಗಿದ್ದಾರೆಂದರೆ, ಅವರಿಗೆ ಕ್ಷಾತ್ರವೃತ್ತಿಯ ಶಬ್ದದ ಜ್ಞಾತವಿಲ್ಲ (ತಿಳಿದಿಲ್ಲ); ಅದಕ್ಕಾಗಿ ನಮಗೆ ಇಂದು ಸಮಾನ್ಯ ಹಿಂದೂಗಳ ಮನೆಗಳಲ್ಲಿ ಸ್ವರಕ್ಷಣೆಗಾಗಿ ಒಂದು ಕೋಲು ಸಹ ಸಿಗುವುದಿಲ್ಲ. ಇದರಿಂದಾಗಿ ಇಂದು ಅಹಿಂದೂಗಳ ಮೂಲಕ ಆಗುವ ಈ ಆಘಾತಗಳ ಪ್ರತಿಕಾರವು, ಸಾಮೂಹಿಕ ರೂಪದಿಂದ ಮಾಡಿದ ನಂತರ ಭಯಭೀತರಾಗುತ್ತಾರೆ. ಹಿಂದೂಗಳು ಅತೀಶಾಂತಪ್ರಿಯ ಅಥವಾ ಅತಿಸಹಿಷ್ಣು ಇರುವುದರಿಂದಲೇ ಅದರ ಪತನಕ್ಕೆ ಕಾರಣವಾಗಿದೆ.

(ಆಧಾರ : ಮಾಸಿಕ ‘ವೈದಿಕ ಉಪಾಸನೆ’ ವರ್ಷ : ೨, ಸಂಚಿಕೆ ೧೧, ೨೨.೭.೨೦೨೦)