ಆಹಾರ ಮತ್ತು ಆಚಾರಗಳ ಕುರಿತು ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಸದ್ಯ ವಿವಿಧ ಕಂಪನಿಗಳು ಉತ್ಪಾದನೆಗಳ ಮಾರಾಟವನ್ನು ಹೆಚ್ಚಿಸಲು ತಮ್ಮ ಉತ್ಪಾದನೆಗಳ ಬಗ್ಗೆ ಆಕರ್ಷಕ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ಅವುಗಳಿಂದ ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮವಾಗುತ್ತದೆ. ಸಮಾಜವು ಈ ಉತ್ಪಾದನೆಗಳ ಕಡೆಗೆ ಸಹಜವಾಗಿಯೇ ಆಕರ್ಷಿತವಾಗುತ್ತದೆ. ಈ ಉತ್ಪಾದನೆಗಳಲ್ಲಿ ಒಂದೆಂದರೆ ಬಿಸ್ಕೇಟ್‌ಗಳು !
ಇತ್ತೀಚೆಗೆ ಎಲ್ಲರೂ ಬಿಸ್ಕೇಟ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿಯೂ (ಪೇಟೆಯಲ್ಲಿಯೂ) ಆಕರ್ಷಕ ಹೊದಿಕೆ (ಕವರ್‌ಗಳಲ್ಲಿ ವಿವಿಧ ‘ಬ್ರ್ಯಾಂಡ್’ಗಳ ಬಿಸ್ಕೇಟ್‌ಗಳು ಮಾರಾಟಕ್ಕಾಗಿ ಲಭ್ಯವಿವೆ. ‘ಚಾಕಲೇಟ್’ ಫ್ಲೇವರ್ (ಚಾಕಲೇಟಿನ ರುಚಿಯ) ಮತ್ತು ‘ಕ್ರೀಮ್’ ಬಿಸ್ಕೇಟ್‌ಗಳಿಗೆ (ಸಕ್ಕರೆಪುಡಿ, ಕರಗದಿರುವ ಬೆಣ್ಣೆಗೆ ಹೋಲುವಂತಹ ಪದಾರ್ಥ ಮತ್ತು ಇಸೆನ್ಸ್ (ಸುಗಂಧ) ಇವುಗಳನ್ನು ಸೇರಿಸಿ ತಯಾರಿಸಿದ ಮಿಶ್ರಣಕ್ಕೆ ‘ಕ್ರೀಮ್’ ಎನ್ನುತ್ತಾರೆ. ಎರಡು ಬಿಸ್ಕೇಟ್‌ಗಳ ಮಧ್ಯದಲ್ಲಿ ಕ್ರೀಮನ್ನು ತೆಳ್ಳಗೆ ಹಚ್ಚಿ ಈ ಬಿಸ್ಕೇಟ್‌ಗಳನ್ನು ತಯಾರಿಸುತ್ತಾರೆ.) ಚಿಕ್ಕ ಮಕ್ಕಳಿಗೆ ಇವು ವಿಶೇಷ ಪ್ರಿಯವಾಗಿರುತ್ತವೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಬಿಸ್ಕೇಟ್‌ಗಳ ಸಂದರ್ಭದಲ್ಲಿ ವಿಫುಲ ಸಂಶೋಧನೆಯನ್ನು ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿನ (ಪೇಟೆಯಲ್ಲಿನ) ಕೆಲವು ಜನಪ್ರಿಯ (ಪಾಪ್ಯುಲರ್) ಬಿಸ್ಕೇಟ್‌ಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ವಿಜ್ಞಾನದ ಮೂಲಕ ಅಧ್ಯಯನವನ್ನು ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಈ ಉಪಕರಣದ ಮೂಲಕ ಬಿಸ್ಕೇಟ್‌ಗಳ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ಪರಿಶೀಲನೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ವಿವೇಚನೆ
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಗಳಲ್ಲಿನ ವಿಶ್ಲೇಷಣೆ :
ಪರೀಕ್ಷಣೆಯಲ್ಲಿ ಬಿಸ್ಕೇಟ್‌ಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಇರುವುದು : ಪರೀಕ್ಷಣೆಯಲ್ಲಿ ಬಿಸ್ಕೇಟ್ ಕ್ರ. ೧ ರಿಂದ ೪ ಇವುಗಳಲ್ಲಿ ಸಕಾರಾತ್ಮಕ ಊರ್ಜೆಯು ಸ್ವಲ್ಪವೂ ಇರಲಿಲ್ಲ, ತುಂಬಾ ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಪರೀಕ್ಷಣೆಯಲ್ಲಿ ಬಿಸ್ಕೇಟ್ ಕ್ರ. ೫ ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯು ಕಂಡುಬಂದಿತು. ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.
೨. ಪರೀಕ್ಷಣೆಯಲ್ಲಿ ಬಿಸ್ಕೇಟ್‌ಗಳಿಂದ ತುಂಬಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು
ಯಾವುದಾದರೊಂದು ಪದಾರ್ಥದ ಸಾತ್ತ್ವಿಕತೆಯು ಅನೇಕ ಘಟಕಗಳ ಮೇಲೆ ಅವಲಂಬಿಸಿರುತ್ತದೆ, ಉದಾ.ಬಿಸ್ಕೇಟ್‌ಗಳ ಪದಾರ್ಥಗಳನ್ನು ತಯಾರಿಸುವಾಗ ಉಪಯೋಗಿ ಸಿರುವ ಸಾಹಿತ್ಯಗಳು (ಹಿಟ್ಟು, ಸಕ್ಕರೆ ಇತ್ಯಾದಿ), ಬಿಸ್ಕೇಟ್‌ಗಳನ್ನು ತಯಾರಿಸುವ ಸ್ಥಳ, ಬಿಸ್ಕೇಟ್‌ಗಳ ಆಕಾರ, ಅವುಗಳ ಮೇಲೆ ಮೂಡಿಸಿದ ಆಕೃತಿಗಳು ಮತ್ತು ಅವುಗಳ ರಚನೆ, ಬಿಸ್ಕೇಟ್‌ಗಳನ್ನು ತಯಾರಿಸುವ ವ್ಯಕ್ತಿ ಇತ್ಯಾದಿ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಆ ಪದಾರ್ಥಗಳು ಸಾತ್ತ್ವಿಕವಾಗುತ್ತವೆ. (‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಈ ಕುರಿತು ವಿಪುಲ ಸಂಶೋಧನೆಯನ್ನು ಮಾಡಲಾಗುತ್ತಿದೆ. – ಸಂಕಲನಕಾರರು) ಸದ್ಯದ ವಾತಾವರಣವು ಅತ್ಯಧಿಕ ರಜ-ತಮಪ್ರಧಾನವಾಗಿರುವುದರಿಂದ ಅದರ ವನಸ್ಪತಿ, ಪ್ರಾಣಿ-ಪಕ್ಷಿ, ವ್ಯಕ್ತಿ ಇವರೆಲ್ಲರ ಮೇಲೆ ದುಷ್ಪರಿಣಾಮವಾಗುತ್ತದೆ. ಇದರಿಂದ ಅವುಗಳ ಮೇಲೆ ಕಪ್ಪು (ತೊಂದರೆದಾಯಕ ಸ್ಪಂದನಗಳ) ಆವರಣ ಬರುತ್ತದೆ. ಈ ಆವರಣವು ಸ್ಥೂಲ ಕಣ್ಣುಗಳಿಗೆ ಕಾಣಿಸುವುದಿಲ್ಲ; ಆದರೆ ಅದರ ದುಷ್ಪರಿಣಾಮವಾಗುತ್ತವೆ, ಎಂಬುದರತ್ತ ಗಮನ ಹರಿಸುವುದು ಆವಶ್ಯಕವಾಗಿದೆ. ಪರೀಕ್ಷಣೆಯಲ್ಲಿ ಜನಪ್ರಿಯ ಬಿಸ್ಕೇಟ್‌ಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉಪಯುಕ್ತವಾಗಿಲ್ಲವೆಂದು ಕಂಡು ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿ ಎಲ್ಲರಿಗೂ ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಬಿಸ್ಕೇಟ್‌ಗಳನ್ನು ತಿನ್ನಲು ಕೊಡುವುದಕ್ಕಿಂತ ಮನೆಯಲ್ಲಿ ತಯಾರಿಸಿದ ತಾಜಾ ಪೌಷ್ಟಿಕ ಪದಾರ್ಥಗಳನ್ನು ತಿನ್ನಲು ಕೊಡುವುದು ಉತ್ತಮ !’
– ಸೌ. ಸ್ವಾತಿ ವಸಂತ ಸಣಸ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧೨.೨೦೨೦)
ವಿ-ಅಂಚೆ ವಿಳಾಸ: [email protected]