ದೃಷ್ಟಿಯನ್ನು ತೆಗೆಯುವುದರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ದೃಷ್ಟಿಯನ್ನು ತೆಗೆದ ನಂತರ ದೃಷ್ಟಿಯನ್ನು ತೆಗೆಯಲು ಉಪಯೋಗಿಸಿದ ವಸ್ತುಗಳ ಮೇಲಾಗುವ ಪರಿಣಾಮ

ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರೀ (ಧರ್ಮ) ರಾಜ್ಯದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡಚಣೆಗಳನ್ನು ತರಲು ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಸತತವಾಗಿ ಆಕ್ರಮಣಗಳನ್ನು ಮಾಡುತ್ತವೆ. ಇದರಿಂದ ಪರಾತ್ಪರ ಗುರು ಡಾಕ್ಟರರಿಗೆ ವಿವಿಧ ಶಾರೀರಿಕ ತೊಂದರೆ ಗಳಾಗುತ್ತವೆ. ಅವರಿಗಾಗುವ ಈ ತೊಂದರೆಗಳು ದೂರವಾಗಬೇಕೆಂದು, ಮಹರ್ಷಿಗಳು ಮತ್ತು ಕೆಲವು ಸಂತರು ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಹೇಳುತ್ತಾರೆ. ಪರಾತ್ಪರ ಗುರು ಡಾಕ್ಟರರು ಆ ಎಲ್ಲ ಉಪಾಯಗಳನ್ನು ಭಾವಪೂರ್ಣವಾಗಿ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿರುವ ಶ್ರೀಕ್ಷೇತ್ರ ಅಪ್ಪಾಚಿ ವಾಡಿ, ಕುರ್ಲಿಯಲ್ಲಿನ ಶ್ರೀ ಹಾಲಸಿದ್ಧನಾಥರು ಪೂ. ಭಗವಾನ ಡೋಣೆ ಮಹಾರಾಜರ ಮಾಧ್ಯಮದಿಂದ ಮೊಸರನ್ನ, ಕಪ್ಪು ಎಳ್ಳು, ಅಡ್ಡ ಹೆಚ್ಚಿದ ಒಂದು ಲಿಂಬೆಕಾಯಿ ಮತ್ತು ಒಂದು ಬಾಳೆಹಣ್ಣು ಈ ವಸ್ತುಗಳನ್ನು ಒಂದು ಪತ್ರಾವಳಿಯಲ್ಲಿಟ್ಟು ಅವುಗಳಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆಯಲು ಹೇಳಿದರು. ಅದಕ್ಕನುಸಾರ ೩.೮.೨೦೧೯ ರಂದು ಸದ್ಗುರು (ಡಾ.) ಮುಕುಲ ಗಾಡಗೀಳ ಇವರು ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದರು. ದೃಷ್ಟಿಯನ್ನು ತೆಗೆದ ನಂತರ ದೃಷ್ಟಿ ತೆಗೆದ ವಸ್ತುಗಳ ಮೇಲೆ ಏನು ಪರಿಣಾಮವಾಗುತ್ತದೆ ? ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನಮಾಡಲು ದೃಷ್ಟಿ ತೆಗೆಯುವ ವಸ್ತುಗಳ ಮತ್ತು ದೃಷ್ಟಿ ತೆಗೆದ ನಂತರದ ವಸ್ತುಗಳ ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.

ಪೂ. ಭಗವಾನ ಡೋಣೆ ಮಹಾರಾಜರು

ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಯು.ಟಿ.ಎಸ್. ಉಪಕರಣದ ಮೂಲಕ ತಪಾಸಣೆ ಮಾಡುತ್ತಿರುವ ಶ್ರೀ. ಆಶಿಷ ಸಾವಂತ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ದೃಷ್ಟಿಯನ್ನು ತೆಗೆದ ನಂತರ ದೃಷ್ಟಿಯನ್ನು ತೆಗೆದ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅವುಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು : ಮೊದಲು (ದೃಷ್ಟಿಯನ್ನು ತೆಗೆಯುವ ಮೊದಲು) ದೃಷ್ಟಿಯನ್ನು ತೆಗೆಯುವ ವಸ್ತುಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಇದರ ಬದಲು ಅವುಗಳಲ್ಲಿ  ಸಕಾರಾತ್ಮಕ ಊರ್ಜೆಯಿತ್ತು. ಆ ವಸ್ತುಗಳಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದ ನಂತರ ಆ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ  ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಇನ್ಫ್ರಾರೆಡ್ ಮತ್ತು ಅಲ್ಟ್ರಾವೈಯೋಲೆಟ್ ಈ ನಕಾರಾತ್ಮಕ ಊರ್ಜೆಗಳು ನಿರ್ಮಾಣವಾದವು. ಇದು ಕೆಳಗೆ ನೀಡಿದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

           

೨. ನಿಷ್ಕರ್ಷ

ದೃಷ್ಟಿಯನ್ನು ತೆಗೆದ ನಂತರ ದೃಷ್ಟಿಯನ್ನು ತೆಗೆದ ವಸ್ತುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಇದರ ಕಾರಣವೆಂದರೆ, ದೃಷ್ಟಿ ತಾಗಿದ ವ್ಯಕ್ತಿಯ ಸುತ್ತಲಿನ ತೊಂದರೆದಾಯಕ ಸ್ಪಂದನಗಳು ದೃಷ್ಟಿಯನ್ನು ತೆಗೆದ ವಸ್ತುಗಳಲ್ಲಿ ಸೆಳೆಯಲ್ಪಟ್ಟವು.

೩. ಪರೀಕ್ಷಣೆಯ

ಪ್ರಾ. ಸುಹಾಸ ಜಗತಾಪ

ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದೃಷ್ಟಿಯನ್ನು ತೆಗೆದುದರಿಂದ ವ್ಯಕ್ತಿಯ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ದೂರವಾಗುವುದು : ವ್ಯಕ್ತಿಗೆ ದೃಷ್ಟಿ ತಗಲುವುದರಿಂದ ಅವನ ಸುತ್ತಲೂ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ನಿರ್ಮಾಣವಾಗುತ್ತದೆ. ಇದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಯಾವಾಗ ವ್ಯಕ್ತಿಯ ಸ್ಥೂಲದೇಹ ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆಯೋ, ಆಗ ಅವನು ಶಾರೀರಿಕ ರೋಗಗಳಿಂದ ಬಳಲುತ್ತಾನೆ. ಶಾರೀರಿಕ ರೋಗಗಳಲ್ಲಿ ತೀವ್ರ ತಲೆನೋವು, ಕಿವಿಯಲ್ಲಿ ಸೆಳೆತ, ಕಣ್ಣುಗಳು ನೋಯುವುದು, ಕಣ್ಣುಗಳೆದುರು ಕತ್ತಲು ಕವಿಯುವುದು, ಕೈ-ಕಾಲುಗಳು ಜೋಮು ಹಿಡಿಯುವುದು, ಎದೆಯಲ್ಲಿ ಜೋರಾಗಿ ಬಡಿತವಾಗುವುದು, ಕೈ-ಕಾಲುಗಳು ತಣ್ಣಗಾಗಿ ದಣಿವಾದಂತಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ದೃಷ್ಟಿಯನ್ನು ತೆಗೆಯುವುದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣವು ದೂರವಾಗುತ್ತದೆ. ಇದರಿಂದ ವ್ಯಕ್ತಿಗಾಗುವ ತೊಂದರೆಗಳು ಕಡಿಮೆಯಾಗುತ್ತವೆ ಅಥವಾ ಇಲ್ಲವಾಗುತ್ತವೆ.

೩ ಆ. ದೃಷ್ಟಿಯನ್ನು ತೆಗೆದ ನಂತರ ದೃಷ್ಟಿಯನ್ನು ತೆಗೆದಿರುವ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರುವುದು : ದೃಷ್ಟಿಯನ್ನು ತೆಗೆಯಲು ಉಪಯೋಗಿಸಲಾಗುವ ಘಟಕಗಳಲ್ಲಿ ರಜ-ತಮಾತ್ಮಕ ಲಹರಿಗಳನ್ನು ಆಕರ್ಷಿಸಿ, ಅವುಗಳನ್ನು ಘನಿಕೃತಗೊಳಿಸಿ ಅವುಗಳ ಉಚ್ಚಾಟಿಸುವ ಕ್ಷಮತೆಯಿರುತ್ತದೆ. ಉಪ್ಪು-ಸಾಸಿವೆ, ಉಪ್ಪು-ಸಾಸಿವೆ-ಕೆಂಪು ಮೆಣಸಿನಕಾಯಿ, ನಿಂಬೆಕಾಯಿ, ತೆಂಗಿನಕಾಯಿ ಇತ್ಯಾದಿ ವಿವಿಧ ವಸ್ತುಗಳನ್ನು ದೃಷ್ಟಿ ತೆಗೆಯಲು ಬಳಸುತ್ತಾರೆ. ದೃಷ್ಟಿಯನ್ನು ತೆಗೆಯುವುದರಿಂದ ವ್ಯಕ್ತಿಯ ಸುತ್ತಲಿನ ತೊಂದರೆದಾಯಕ ಸ್ಪಂದನಗಳು ದೃಷ್ಟಿಯನ್ನು ತೆಗೆಯಲು ಉಪಯೋಗಿಸಿದ ವಸ್ತುಗಳಲ್ಲಿ ಆಕರ್ಷಿಸಲ್ಪಡುತ್ತವೆ. ಇದರಿಂದ ವ್ಯಕ್ತಿಗಾಗುವ ತೊಂದರೆಗಳು ಕಡಿಮೆ ಅಥವಾ ಇಲ್ಲವಾಗುತ್ತವೆ. ಶ್ರೀ ಹಾಲಸಿದ್ಧನಾಥ ಮಹಾರಾಜರು ಹೇಳಿದಂತೆ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದುದರಿಂದ ಅವರ ಸುತ್ತಲಿನ ತೊಂದರೆದಾಯಕ ಸ್ಪಂದನಗಳು ದೃಷ್ಟಿಯನ್ನು ತೆಗೆದ ವಸ್ತುಗಳಲ್ಲಿ ಸೆಳೆಯಲ್ಪಟ್ಟವು. ಇದರಿಂದ ಆ ವಸ್ತುಗಳಲ್ಲಿನ ಸಕಾರಾತ್ಮಕ ಊರ್ಜೆಯು ಇಲ್ಲವಾಗಿ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬಂದಿತು.

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೧೦.೨೦೨೦)

ವಿ-ಅಂಚೆ ವಿಳಾಸ : [email protected]