ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಸನಾತನವು ಕಳೆದ ಅನೇಕ ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಈಗ ಬಾಗಿಲಿನ ಹೊಸ್ತಿಲಿನ ಮೇಲೆ ಬಂದು ನಿಂತಿದೆ. ಅದು ಯಾವುದೇ ಕ್ಷಣ ಒಳಗೆ ಬರಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿದ ಕರೋನಾ ಮಹಾಮಾರಿಯೂ ಆಪತ್ಕಾಲದ ಒಂದು ಸಣ್ಣ ಮಾದರಿಯೇ ಆಗಿದೆ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಇದರಲ್ಲಿ ಮಾನವನಿರ್ಮಿತ ಮತ್ತು ನೈಸರ್ಗಿಕ ಎರಡೂ ವಿಪತ್ತುಗಳೂ ಇರಲಿವೆ, ಆಪತ್ಕಾಲವು ವಿಭಿನ್ನ ರೂಪಗಳಲ್ಲಿ ಬಂದೆರಗಲಿದೆ. ಅವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ ನೋಡಲಿದ್ದೇವೆ. ಈ ಆಪತ್ಕಾಲದಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಸ್ವಲ್ಪ ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸಿದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.

ಮೂರನೇ ಮಹಾಯುದ್ಧದಲ್ಲಿ ಅಣುಬಾಂಬ್‌ಗಳ ಅಥವಾ ಪರಮಾಣು ಬಾಂಬ್‌ಗಳ ಬಳಕೆಯಾಗುವುದು ನಿಸ್ಸಂದೇಹವಾಗಿದೆ. ಅಣುಬಾಂಬ್ ಅಂದರೆ ಏನು ? ಅಣುಬಾಂಬಿನ ಸ್ಫೋಟದ ಸ್ವರೂಪ ಹೇಗಿರುತ್ತದೆ, ಮಾನವನ ಜೀವನದ ಮೇಲೆ ಅದರ ಸ್ಫೋಟದ ದುಷ್ಪಪರಿಣಾಮ, ಇವುಗಳ ಬಗೆಗಿನ ಮಾಹಿತಿಯನ್ನು ನಾವು ಹಿಂದಿನ ಲೇಖನದಲ್ಲಿ ನೋಡಿದೆವು.

(ಭಾಗ ೨ )

೬. ಅಣುಬಾಂಬ್ ಆಕ್ರಮಣ ಆಗುವ ಮೊದಲು ತಮ್ಮ ರಕ್ಷಣೆಗಾಗಿ ಮಾಡಬೇಕಾದ ಉಪಾಯಯೋಜನೆ

ಅ. ಸುರಕ್ಷಿತ ಆಶ್ರಯವನ್ನು ಪಡೆಯಲು ನೆಲಮನೆ (ನೆಲಮಾಳಿಗೆ) ಅಥವಾ ಕಟ್ಟಡದ ಮಧ್ಯದಲ್ಲಿ ಮೊದಲೇ ಒಂದು ಸ್ಥಳವನ್ನು ಗೊತ್ತುಪಡಿಸಿಡಬೇಕು, ಸಾಧ್ಯವಾದರೆ ಮನೆಯ ಸುತ್ತಲೂ ಕಂದಕವನ್ನು ನಿರ್ಮಿಸಬೇಕು : ಅಣುಬಾಂಬ್ ದಾಳಿಯು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಆದ್ದರಿಂದ, ಜನರು ಈ ಆಪತ್ತನ್ನು ಎದುರಿಸಲು ತಮ್ಮ ಮನೆ, ತಮ್ಮ ಕೆಲಸದ ಸ್ಥಳ, ದಿನದ ಹೆಚ್ಚಿನ ಸಮಯವನ್ನು ಕಳೆಯುವ ಕಚೇರಿ ಅಥವಾ ಶಾಲೆ, ಜೊತೆಗೆ ನಿಯಮಿತವಾಗಿ ಪ್ರಯಾಣಿಸುವ ಮಾರ್ಗದಲ್ಲಿಯೂ ಈ ಅನಾಹುತವನ್ನು ಎದುರಿಸಲು ಸಮೀಪದಲ್ಲಿರುವ ಸುರಕ್ಷಿತ ಸ್ಥಳಗಳನ್ನು ನೋಡಿಡಬೇಕು. ಭೂಗತ ನೆಲಮನೆಗಳು (ನೆಲಮಾಳಿಗೆಗಳು) ಮತ್ತು ದೊಡ್ಡ ದೊಡ್ಡ ಭದ್ರ ಕಟ್ಟಡಗಳ ಮಧ್ಯದ ಭಾಗಗಳು ಅಣುಬಾಂಬ್ ದಾಳಿಯಿಂದ ರಕ್ಷ್ಷಣೆ ಪಡೆಯಲು ಅತ್ಯುತ್ತಮ ಸ್ಥಳಗಳಾಗಿವೆ. ಅಂತಹ ಸ್ಥಳಗಳು ಲಭ್ಯವಿಲ್ಲದಿದ್ದರೆ, ಯಾರಿಗೆ ಸಾಧ್ಯವೋ ಅವರು ಮನೆಯ ಮುಂದೆ ತೆರೆದ ಜಾಗದಲ್ಲಿ ಯುದ್ಧದ ಸಮಯದಲ್ಲಿ ನಿರ್ಮಿಸುವಂತಹ ಕಂದಕಗಳನ್ನು (trenches) ತಯಾರಿಸಬಹುದು ಮತ್ತು ಅದರಲ್ಲಿ ಆಶ್ರಯ ಪಡೆಯಬಹುದು.

(ಆಧಾರ: www.nrc.gov/about-nrc/emerg-preparedness/about-emerg-preparedness/potassium-iodide-use.html)

೭. ಅಣುಬಾಂಬ್ ಸ್ಫೋಟಗೊಂಡ ನಂತರ ವಿಕಿರಣಗಳು ಹೊರಬೀಳುವ ಮೊದಲು ತಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು

ಅ. ಅಣುಬಾಂಬ್ ಸ್ಫೋಟದ ಸ್ಥಳದಿಂದ ತಕ್ಷಣ ದೂರ ಹೋಗಬೇಕು : ಅಣುಬಾಂಬ್ ಬಿದ್ದಿದೆ ಎಂದು ತಿಳಿದ ತಕ್ಷಣ, ಅದರ ವಿಕಿರಣಗಳು ನಿಮ್ಮ ಮೇಲೆ ಪರಿಣಾಮ ಬೀರುವ ಮೊದಲೇ ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು. ಇದಕ್ಕಾಗಿ, ಸಾಧ್ಯವಾದಷ್ಟು ಬೇಗ ಸ್ಫೋಟದ ಸ್ಥಳದಿಂದ ದೂರ ಹೋಗಬೇಕು. ಇದಕ್ಕೆ ಫಾಲಔಟ್ ಅವಧಿ ಉಪಯುಕ್ತವಾಗಿದೆ. ಈ ಅವಧಿಯು ಹಿಂದಿನ ಲೇಖನದಲ್ಲಿ ಹೇಳಿದಂತೆ ೧೫ ನಿಮಿಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿರಬಹುದು. ವಿಕಿರಣ ಸ್ಥಳವು ಮನೆಯ ಸಮೀಪದಲ್ಲಿದ್ದರೆ, ಮನೆಯೊಳಗೇ ಇರಬೇಕು.

ಆ. ವಿಕಿರಣೋತ್ಸವದ ಸಮಯದಲ್ಲಿ ಹೊರಸೂಸುವ ಗಾಮಾ ಕಿರಣಗಳಿಂದ ರಕ್ಷಣೆಯನ್ನು ಪಡೆಯಲು ಸಾಧ್ಯವಿದ್ದಲ್ಲಿ ಕಂದಕದಲ್ಲಿ ಅಡಗಿಕೊಳ್ಳಬೇಕು : ಸಾಧ್ಯವಾದರೆ, ಸ್ಫೋಟದ ನಂತರದ ವಿಕಿರಣೋತ್ಸವದ ಸಮಯದಲ್ಲಿ ಹೊರಸೂಸುವ ಗಾಮಾ ಕಿರಣಗಳಿಂದ ರಕ್ಷಣೆಯನ್ನು ಪಡೆಯಲು ೪-೫ ಅಡಿ ಆಳದ ಕಂದಕವನ್ನು ಬಳಸಬೇಕು; ಆದರೆ ಸ್ಫೋಟದಿಂದ ಕಂದಕವು ನಾಶವಾಗುವುದಿಲ್ಲ ಮತ್ತು ಅದರಲ್ಲಿ ನೀವು ಜೀವಂತವಾಗಿ ಹೂತು ಹೋಗುವುದಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಇ. ಮನೆ ಅಥವಾ ಕಟ್ಟಡದ ಮೇಲ್ಛಾವಣಿಯ (ಟೆರೇಸ್) ಮೇಲೆ ಹೋಗಬಾರದು : ಫಾಲಔಟ್ ಅಂದರೆ ವಿಕಿರಣೋತ್ಸರ್ಗದ ಧೂಳು ಕಟ್ಟಡದ ಮೇಲ್ಛಾವಣಿಯ (ಟೆರೇಸ್) ಮೇಲೆ ಮತ್ತು ಹೊರಗಿನ ಗೋಡೆಗಳ ಮೇಲೆ ಬೇಗನೇ ಶೇಖರಿಸುತ್ತದೆ; ಆದ್ದರಿಂದ ಸಾಧ್ಯವಾದಷ್ಟು ಮಹಡಿಯ ಮೇಲೆ ಹೋಗಬಾರದು, ಹಾಗೆಯೇ ಹೊರಗಿನ ಗೋಡೆಗಳಿಂದಲೂ ದೂರವಿರಬೇಕು.

ಈ. ಅಣುಬಾಂಬ್ ಸ್ಫೋಟದ ಸಮಯದಲ್ಲಿ ಉತ್ಪನ್ನವಾಗುವ ಪ್ರಚಂಡ ಬೆಳಕನ್ನು ನೋಡಲು ಅಥವಾ ಶಬ್ದವನ್ನು ಕೇಳಲು ಕಿಟಕಿಯ ಬಳಿ ಹೋಗಬಾರದು : ಅಣುಬಾಂಬ್ ಸ್ಫೋಟದ ಸಮಯ ದಲ್ಲಿ, ಮೊದಲು ಪ್ರಚಂಡ ಬೆಳಕು ಕಾಣಿಸುತ್ತದೆ ಮತ್ತು ನಂತರ ಪ್ರಚಂಡ ಶಬ್ದ ಕೇಳಿ ಬರುತ್ತದೆ. ಒಂದು ವೇಳೆ ನಿಮಗೆ ಇಂತಹ ಬೆಳಕಿನ ಅರಿವಾದರೆ, ಕುತೂಹಲದಿಂದ ಕಿಟಕಿಯಿಂದ ಹೊರಗೆ ನೋಡಬೇಡಿರಿ. ಶಾಕ್ ವೇವ್ಸ್‌ಗಳಿಂದಾಗಿ (ಸ್ಫೋಟದಿಂದ ಸೃಷ್ಟಿ ಯಾದ ಅತ್ಯಂತ ತೀವ ಒತ್ತಡದ ಗಾಳಿಯ ಲಹರಿಗಳಿಂದ) ನಮಗೆ ತೊಂದರೆಯಾಗಬಹುದು. ಇಂತಹ ಸಂದರ್ಭದಲ್ಲಿ ರಕ್ಷಣೆಗಾಗಿ, ಕೋಣೆಯಲ್ಲಿ ಬೀರು (ಕಪಾಟು) ಅಥವಾ ಇಂತಹ ಸ್ಥಳಗಳ ಹಿಂದೆ ಅಡಗಿ ಕುಳಿತುಕೊಳ್ಳಬೇಕು. ಅಣುಬಾಂಬ್ ಸ್ಫೋಟದ ನಂತರ ಹೆಚ್ಚಿನ ಮನೆಗಳು ನೆಲಸಮವಾಗಲು ಇಂತಹ ಶಾಕ್ ವೇವ್ಸ್‌ಗಳೇ ಕಾರಣವಾಗಿರುತ್ತವೆ.

ಉ. ಮನೆಯ ಎಲ್ಲ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿರಿ, ಅವುಗಳಲ್ಲಿನ ಸಣ್ಣ ಬಿರುಕು, ಸಂದುಗಳನ್ನು ಸಹ ಮುಚ್ಚಿರಿ: ಅಣುಬಾಂಬ್ ಸ್ಫೋಟದ ಸಮಯದಲ್ಲಿ ನೀವು ಮನೆಯಲ್ಲಿದ್ದರೆ, (ನೀವು ಮನೆಯೊಳಗೇ ಇರಬೇಕಾದ ಪರಿಸ್ಥಿತಿ ಇದ್ದರೆ) ಹೊರಗಿನ ಗಾಳಿ ಅಥವಾ ಧೂಳು ಮನೆಯೊಳಗೆ ಬರದಂತೆ ತಡೆಯಲು ಬಾಗಿಲು, ಕಿಟಕಿಗಳನ್ನು ಭದ್ರವಾಗಿ ಮುಚ್ಚಬೇಕು. ಬಾಗಿಲುಗಳು, ಕಿಟಕಿಗಳು, ಗೋಡೆಗಳು ಮತ್ತು ಟೈಲ್ಸ್‌ಗಳಲ್ಲಿ ಬಿರುಕುಗಳಿದ್ದರೆ, ಅವುಗಳನ್ನು ಮುಚ್ಚಲು ಸೆಲೋಟೇಪ್ ಇತ್ಯಾದಿಗಳನ್ನು ಬಳಸಬೇಕು.

ಊ. ನೀವು ವಾಹನದಲ್ಲಿದ್ದರೆ, ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಮಾಡಬೇಕಾದ ಕೃತಿಗಳು : ಸ್ಫೋಟದ ಸಮಯದಲ್ಲಿ ನೀವು ವಾಹನದಲ್ಲಿದ್ದರೆ, ಗಾಳಿಯಲ್ಲಿ ಹಾರುವ ಭಗ್ನಾವಶೇಷಗಳಿಂದ ಹಾಗೂ ಶಾಖದಿಂದ ರಕ್ಷಣೆ ಪಡೆಯಲು ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿರಿ. ಹತ್ತಿರದಲ್ಲಿನ ಸುರಕ್ಷಿತ ಸ್ಥಳವನ್ನು ಹುಡುಕಿ ಅಲ್ಲಿ ಅಡಗಿಕೊಳ್ಳಿರಿ. ಸುರಕ್ಷಿತ ಸ್ಥಳವು ಸಿಗದಿದ್ದರೆ, ವಾಹನದಲ್ಲಿಯೇ ಕುಳಿತು ನಿಮ್ಮ ಕೈಗಳಿಂದ ಕುತ್ತಿಗೆ ಮತ್ತು ತಲೆಯನ್ನು ಮುಚ್ಚಿಕೊಂಡು ರಕ್ಷಣೆಯನ್ನು ಮಾಡಿಕೊಳ್ಳಿರಿ. ನೀವು ಹೊರಾಂಗಣ ದಲ್ಲಿದ್ದರೆ (ಓಪನ್ ಸ್ಪೇಸ್‌ನಲ್ಲಿ), ನೆಲದ ಕಡೆಗೆ ಮುಖ ಮಾಡಿ ಮಲಗಿಕೊಳ್ಳಿರಿ.

ಋ. ವಿಕಿಣೋತ್ಸರ್ಗದಿಂದ ರಕ್ಷಣೆಯನ್ನು ಮಾಡಬಹುದಾದ ವಸ್ತುಗಳ (ಉದಾ. ಸೀಸದ ತಗಡುಗಳು (ಹಾಳೆಗಳು), ಕೆಮಿಕಲ್ ಪ್ರೊಟೆಕ್ಟಿವ್ ಮಾಸ್ಕ) ಬಳಕೆಯನ್ನು ಮಾಡಬಹುದು : ಸೀಸ (lead), ಕಾಂಕ್ರೀಟ್ ಅಥವಾ ನೀರು ಗಾಮಾ ಕಿರಣ ಮತ್ತು ಎಕ್ಸರೆಗಳಿಂದ ರಕ್ಷಿಸುತ್ತವೆ. ಆದುದರಿಂದ ವಿಕಿರಣಶೀಲ ವಸ್ತುಗಳನ್ನು ಇಡಲು ಸಾಮಾನ್ಯವಾಗಿ ನೀರು, ಕಾಂಕ್ರೀಟ್ ಅಥವಾ ಸೀಸದ ಪೆಟ್ಟಿಗೆ ಅಥವಾ ಕೋಣೆಗಳನ್ನು ಉಪಯೋಗಿಸುತ್ತಾರೆ. ಅಣುಬಾಂಬ್ ಸ್ಫೋಟಗೊಂಡ ನಂತರ ಸಂಭವಿಸುವ ವಿಕಿರಣೋತ್ಸರ್ಗದಿಂದ ರಕ್ಷಣೆಪಡೆಯಲು ಕಾಂಕ್ರೀಟ್ ಕಟ್ಟಡಗಳ ಮಧ್ಯದಲ್ಲಿ, ನೀರಿನ ಅಡಿಯಲ್ಲಿ ಅಥವಾ ನೀರಿನಿಂದ ತುಂಬಿದ ದೊಡ್ಡ ಪೀಪಾಯಿಯಲ್ಲಿ ಅಡಗಿ ಕುಳಿತುಕೊಳ್ಳಬಹುದು. ಹಾಗೆಯೇ ಸೀಸದ ಹಾಳೆ(ತಗಡು)ಗಳನ್ನು ಸಹ ಬಳಸಬಹುದು. ಅಂದರೆ, ನಾಲ್ಕು ಬದಿಯಲ್ಲಿ ಮತ್ತು ಮೇಲೆ ಸೀಸದ ಹಾಳೆ (ತಗಡು)ಗಳನ್ನು ಇಟ್ಟು ಅದರ ಮಧ್ಯದಲ್ಲಿ ಕುಳಿತುಕೊಳ್ಳಬಹುದು. ಈ ರೀತಿ ಯೋಗ್ಯ ಕವಚವನ್ನು ನಿರ್ಮಿಸಿದರೆ ವಿಕಿರಣಗಳಿಂದ ನಮ್ಮ ರಕ್ಷಣೆಯಾಗಬಹುದು. ಸಾಧ್ಯವಾದರೆ, ಕೆಮಿಕಲ್ ಪ್ರೊಟೆಕ್ಟಿವ್ ಮಾಸ್ಕಗಳನ್ನೂ ಕೂಡ ಬಳಸಬಹುದು.

ಆಧಾರ

೧. www.remm.nlm.gov/nuclearexplosion.htm

೨. www.remm.nlm.gov/RemmMockup_files/nuke_timeline.png

. www.epa.gov/radiation/protecting-yourself-radiation

೮. ಅಣುಬಾಂಬ್ ಸ್ಫೋಟದ ವಿಕಿರಣೋತ್ಸರ್ಗದ ನಂತರ ತಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು

ಅ. ವಿಕಿರಣೋತ್ಸರ್ಗದ ಧೂಳು ದೇಹದ ಮೇಲೆ ಬಿದ್ದಿದ್ದರೆ, ಅದನ್ನು ಆದಷ್ಟು ಬೇಗ ಒರೆಸಿಕೊಳ್ಳಬೇಕು ಅಥವಾ ಸ್ನಾನ ಮಾಡಬೇಕು : ಫಾಲಔಟ್ ಆಗಿ ಹೋದ ನಂತರ, ದೇಹದ ಮೇಲಿರುವ ಬಟ್ಟೆಗಳ ಮೇಲೆ ವಿಕಿರಣೋತ್ಸರ್ಗದ ಧೂಳು ಬಿದ್ದಿರುತ್ತದೆ. ಅಂತಹ ಕಲುಷಿತ ಬಟ್ಟೆಗಳನ್ನು ನಿಧಾನವಾಗಿ ತೆಗೆಯಬೇಕು, ವಿಕಿರಣಗಳ ಧೂಳು ಎಲ್ಲಿಯೂ ಬೀಳದಂತೆ ಅಥವಾ ಎಲ್ಲೆಡೆ ಹರಡದಂತೆ ನೋಡಿಕೊಳ್ಳಬೇಕು. ಅಲ್ಲದೆ, ಬಟ್ಟೆಯಿಂದ ಮುಚ್ಚದೇ ಇದ್ದ ದೇಹದ ಭಾಗಗಳನ್ನು ಸ್ವಚ್ಛವಾದ ನೀರಿನಿಂದ ಒರೆಸಿಕೊಳ್ಳಬೇಕು ಅಥವಾ ಸ್ನಾನ ಮಾಡಬೇಕು. ಎಷ್ಟು ಬೇಗ ಈ ಧೂಳು ನಿಮ್ಮ ದೇಹದಿಂದ ಬೇರ್ಪಡುತ್ತದೆಯೋ ಅಷ್ಟು ಒಳ್ಳೆಯದು. ತಕ್ಷಣ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಸಾಧ್ಯವಾದಷ್ಟು ಬೇಗ ಕಾಗದ / ಒದ್ದೆ ಬಟ್ಟೆಯಿಂದ ಧೂಳನ್ನು ಒರೆಸಿ ನಂತರ ಸ್ನಾನ ಮಾಡಬೇಕು. ಜೋರಾಗಿ ಉಸಿರು ಬಿಟ್ಟು ಮೂಗಿನ ಹೊಳ್ಳೆಗಳನ್ನು ಸ್ವಚ್ಛ ಮಾಡಬೇಕು. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವುಗಳನ್ನು ಅದೇ ರೀತಿಯಲ್ಲಿ ಸ್ವಚ್ಛಗೊಳಿಸಬೇಕು.

ಆ. ವಿಕಿರಣೋತ್ಸರ್ಗದ ಧೂಳಿನಿಂದ ಕಲುಷಿತವಾದ ಬಟ್ಟೆ, ಪಾದರಕ್ಷೆ ಇತ್ಯಾದಿ ವಸ್ತುಗಳನ್ನು ಚೀಲದಲ್ಲಿ ಹಾಕಿ ಕಟ್ಟಿಡಬೇಕು : ತಾವು ತೊಟ್ಟಿರುವ ಕಲುಷಿತ ಬಟ್ಟೆಗಳು, ಇತರ ವಸ್ತುಗಳು, ಪಾದರಕ್ಷೆ ಇತ್ಯಾದಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟು ನಂತರ ವಿಕಿರಣ ಪರೀಕ್ಷೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಅವರು ಆ ಬಟ್ಟೆಗಳು ಸುರಕ್ಷಿತವಾಗಿವೆ ಎಂದು ಹೇಳಿದರೆ ಮಾತ್ರ ಅವುಗಳನ್ನು ಬಳಸಬಹುದು, ಇಲ್ಲದಿದ್ದರೆ ಬಳಸಬಾರದು.

ಇ. ಕೂದಲುಗಳನ್ನು ಕಾಳಜಿಯಿಂದ ಸ್ವಚ್ಛವಾಗಿ ತೊಳೆಯಬೇಕು : ಕೂದಲುಗಳನ್ನು ತೊಳೆಯಲು ಶಾಂಪೂವನ್ನು ಬಳಸಬಹುದು; ಆದರೆ ಹೇರ್ ಕಂಡಿಷನರನ್ನು ಬಳಸಬಾರದು; ಅದರಿಂದ ವಿಕಿರಣೋತ್ಸರ್ಗದ ಧೂಳು ಕೂದಲಿಗೆ ಅಂಟಿಕೊಳ್ಳುತ್ತದೆ.

ಈ. ಎಲ್ಲ ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು : ಆಹಾರ, ನೀರು ಮತ್ತು ಇತರ ತಿಂಡಿ-ತಿನಿಸುಗಳನ್ನು ಸರಿಯಾಗಿ ಮುಚ್ಚಿಡಬೇಕು. ಮುಚ್ಚಿದ ಆಹಾರವನ್ನು ಹೊರತುಪಡಿಸಿ ಬೇರೇ ಏನನ್ನೂ ತಿನ್ನಬಾರದು ಮತ್ತು ಸಾಕುಪ್ರಾಣಿಗಳಿಗೂ ಅದನ್ನು ಕೊಡಬಾರದು. ತೆರೆದ ಬಾವಿಗಳು, ಕೊಳಗಳು, ಹಾಗೆಯೇ ತೆರೆದ ಆಹಾರ ಧಾನ್ಯಗಳು, ತರಕಾರಿಗಳು, ಹಾಲನ್ನು ಬಳಸಬಾರದು.

ಉ. ಪೊಟ್ಯಾಶಿಯಮ್ ಅಯೋಡೈಡ್ ಔಷಧಿ ಮಾತ್ರೆಗಳ ಬಳಕೆ : ಆಪತ್ಕಾಲಕ್ಕಾಗಿ ಒಂದು ತುರ್ತು ಪರಿಸ್ಥಿತಿಗಾಗಿ ಉಪಯೋಗಿಸಲು ಬರುವ ಕಿಟ್‌ಅನ್ನು ತಯಾರಿಸಿಡಬೇಕು. ಸಾಧ್ಯವಾದರೆ, ಅದರಲ್ಲಿ ಪೊಟ್ಯಾಶಿಯಮ್ ಅಯೋಡೈಡ್ ಮಾತ್ರೆಗಳನ್ನು ಇಟ್ಟುಕೊಳ್ಳಬೇಕು. ವಿಪತ್ತಿನ ಸಮಯದಲ್ಲಿ ಆ ಮಾತ್ರೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ಆಧುನಿಕ ವೈದ್ಯರಿಂದ ತಿಳಿದುಕೊಳ್ಳಬೇಕು. ಈ ಮಾತ್ರೆಗಳು ವಿಕಿರಣದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಿದೇಶಗಳಲ್ಲಿ ಅಣು ರಿಯಾಕ್ಟರ್‌ಗಳ ಬಳಿ ವಾಸಿಸುವ ಜನರು ಇವುಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ.

ಊ. ಕುಟುಂಬ ಮತ್ತು ಸಾಕುಪ್ರಾಣಿಗಳ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು : ಅಣುಬಾಂಬ್ ಸ್ಫೋಟದ ಸಮಯದಲ್ಲಿ ಕುಟುಂಬಗಳು ಚದುರಿ ಹೋಗಿದ್ದರೆ, ಅವರು ಇದ್ದಲ್ಲಿಯೇ ಇರಬೇಕು, ಮುಂದೆ ಅಪಾಯಕಾರಿ ವಿಕಿರಣಗಳ ಪ್ರಭಾವ ಕಡಿಮೆಯಾದ ನಂತರ ಪುನಃ ಎಲ್ಲರೂ ಒಟ್ಟಿಗೆ ಬರಬಹುದು. ಇದನ್ನು ಎಲ್ಲರಿಗೂ ಹೇಳಬೇಕು ಮತ್ತು ತಾವೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಅವುಗಳನ್ನು ಮನೆಯೊಳಗೆ ಅಥವಾ ಸುರಕ್ಷಿತ ಜಾಗದಲ್ಲಿಯೇ ಇಡಬೇಕು.

ಋ. ಸರಕಾರದಿಂದ ಸೂಚನೆಗಳು ಬರುವವರೆಗೂ ವಾಸ್ತುವಿನಲ್ಲಿಯೇ ಇರಬೇಕು : ಅಣುಬಾಂಬ್ ಸ್ಫೋಟದ ನಂತರ ಮೊದಲ ೨೪ ರಿಂದ ೪೮ ಗಂಟೆಗಳ ಕಾಲ (ವಿಕಿರಣ ಅಪಾಯ ಅತಿ ಹೆಚ್ಚಿರುವ ಕಾಲ) ಅಥವಾ ಸ್ಥಳೀಯ ಆಡಳಿತದ ಸೂಚನೆ ಸಿಗುವವರೆಗೆ ಮನೆಯೊಳಗೆ, ದೊಡ್ಡ ಕಟ್ಟಡಗಳ ಮುಚ್ಚಿದ ಸುರಕ್ಷಿತ ಜಾಗದಲ್ಲಿಯೇ ಇರಬೇಕು. ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು.

ಎ. ಸರಕಾರದಿಂದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಕಟ್ಟಡವನ್ನು ಖಾಲಿ ಮಾಡಲು ಸರ್ಕಾರಿ ಅಧಿಕಾರಿಗಳು ಆದೇಶಿಸಿದರೆ (ಅಥವಾ ಅಧಿಕಾರಿಗಳು ನಿಮಗೆ ಹಾಗೆ ಸಲಹೆ ನೀಡಿದರೆ) ಮುಂದೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ? ಎಲ್ಲಿ ಆಶ್ರಯವನ್ನು ಪಡೆಯಬೇಕು ? ಅದರ ಕಾರ್ಯ ಪದ್ಧತಿ ಏನಿದೆ ? ಇತ್ಯಾದಿ ಮಾಹಿತಿಯನ್ನು ಎಚ್ಚರಿಕೆಯಿಂದ ಕೇಳಿಕೊಳ್ಳಬೇಕು. ಅದರಂತೆ ಸರಕಾರದ ಸೂಚನೆಗಳ ಜೊತೆಗೆ ಮುಂದಿನ ಸೂಚನೆಗಳನ್ನೂ ಪಾಲಿಸಬೇಕು.

೧. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬಾರದು.

. ನೀವು ಮನೆಯನ್ನು ಖಾಲಿ ಮಾಡಿದ್ದರೆ, ಸ್ಥಳೀಯ ಸರಕಾರಿ ಅಧಿಕಾರಿಗಳು ಮನೆ ಸುರಕ್ಷಿತವಾಗಿದೆ ಎಂದು ಹೇಳುವವರೆಗೆ ಹಿಂದಿರುಗಿ ಮನೆಗೆ ಹೋಗಬಾರದು.

. ಅಣುಬಾಂಬ್ ಸ್ಫೋಟಗಳ ಅಧಿಕ ಒತ್ತಡದ ಅಲೆಗಳಿಂದ ಹಳೆಯ ಕಟ್ಟಡಗಳು, ಮರ ಇತ್ಯಾದಿಗಳು ಬೀಳುವ ಸಾಧ್ಯತೆಯಿರುವುದರಿಂದ ಅವುಗಳಿಂದ ದೂರವಿರಬೇಕು; ಏಕೆಂದರೆ ಅವು ಯಾವುದೇ ಸಮಯದಲ್ಲಿ ಬೀಳಬಹುದು.

ಏ. ರೇಡಿಯೋ, ದೂರದರ್ಶನ (ಟಿ.ವಿ), ಇತ್ಯಾದಿಗಳ ಮೂಲಕ ವಿಪತ್ತಿನ ಬಗ್ಗೆ ಮಧ್ಯ-ಮಧ್ಯದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬೇಕು : ಅಧಿಕೃತ ಮಾಹಿತಿಗಾಗಿ ರೇಡಿಯೋ, ದೂರದರ್ಶನ ಇತ್ಯಾದಿಗಳಲ್ಲಿ ಲಭ್ಯವಿರುವ ಯಾವುದಾದರೊಂದು ಮಾಧ್ಯಮದ ಮೂಲಕ ಆವಶ್ಯಕ ಮಾಹಿತಿಯನ್ನು ಪಡೆಯಬೇಕು, ಉದಾ. ಹೊರಗೆ ಹೋಗುವುದು ಸುರಕ್ಷಿತವೇ ? ಅಥವಾ ಎಲ್ಲಿಗೆ ಹೋಗಬೇಕು ?

(ಆಧಾರ : ndma.gov.in/images/pdf/pocketbook-do-dont.pdf )

೯. ಜಲಜನಕ (ಹೈಡ್ರೋಜನ) ಬಾಂಬ್ ದಾಳಿಗಳು

ಇದು ಅಣುಬಾಂಬಿಗಿಂತ ಅಥವಾ ಪರಮಾಣುಬಾಂಬಿಗಿಂತ ಒಂದು ಸಾವಿರ ಪಟ್ಟು ಹೆಚ್ಚು ವಿನಾಶಕಾರಿಯಾಗಿರುತ್ತದೆ. ಅದರ ಶಕ್ತಿಯನ್ನು ನಮಗೆ ಬೇಕಾದಷ್ಟು ಪ್ರಮಾಣದಲ್ಲಿ ಹೆಚ್ಚಿಸಬಹುದು, ಇದರಿಂದ ಹೆಚ್ಚೆಚ್ಚು ವಿನಾಶವನ್ನು ಮಾಡಬಹುದು. ಯಾವಾಗ ಈ ಬಾಂಬ್‌ನ್ನು ಸ್ಫೋಟಿಸುವುದಿರುತ್ತದೆ, ಆಗ ಅದರ ಜೊತೆಗೆ  ಒಂದು ಅಣುಬಾಂಬ್‌ವೂ ಇರುತ್ತದೆ. ಮೊದಲು ಅಣುಬಾಂಬ್ ಸ್ಫೋಟವಾಗುತ್ತದೆ, ನಂತರ ಅದರ ಉಷ್ಣತೆಯಿಂದ  ಹೈಡ್ರೋಜನ್ ಅಣುಗಳು ಪರಸ್ಪರ ಜೋಡಿಸಲ್ಪಡುತ್ತವೆ, ಆದುದರಿಂದ ಇದಕ್ಕೆ ಫೂಜನ್ ಬಾಂಬ್ ಎಂದೂ ಹೇಳುತ್ತಾರೆ. ಈ ಅಣುಗಳು ಒಟ್ಟಿಗೆಬಂದು ಒಂದು ದೊಡ್ಡ ಚೆಂಡಿನಂತಹ (ಬಾಲ್‌ನಂತಹ) ಗೋಲ ನಿರ್ಮಾಣವಾಗುತ್ತದೆ ಮತ್ತು ಮುಂದೆ ಅದು ಹೀಲಿಯಂಮ್ ವಾಯುವಿನಲ್ಲಿ ರೂಪಾಂತರವಾಗುತ್ತದೆ