ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

೫ ಜುಲೈ ೨೦೨೦ ರಂದು ಗುರುಪೂರ್ಣಿಮೆ ಇತ್ತು. ಈ ನಿಮಿತ್ತದಿಂದ ಸಾಧಕರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ’, ಎಂಬ ವಿಷಯದಲ್ಲಿ ಈ ಹಿಂದೆ ಪರಾತ್ಪರ ಗುರು ಡಾಕ್ಟರರು ಸಾಧಕರೊಂದಿಗೆ ನಡೆಸಿದ ಮಾರ್ಗದರ್ಶನಾತ್ಮಕ ಸಂವಾದದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಆಗ ಸಾಧಕರು ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಪರಾತ್ಪರ ಗುರುದೇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡುತ್ತಿದ್ದೇವೆ. (ಮುಂದುವರಿದ ಭಾಗ)

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಈಶ್ವರನು ಸರ್ವಜ್ಞನಾಗಿರುವುದರಿಂದ ಸಾಧನೆಯನ್ನು ಮಾಡುವಾಗ ಅವನಿಂದ ಏನನ್ನೂ ಮುಚ್ಚಿಡಬಾರದು, ನಮ್ಮ ಸ್ವಭಾವದೋಷಗಳನ್ನೂ ಮುಚ್ಚಿಡಬಾರದು !

ಸೌ. ಶ್ವೇತಾ ಕ್ಲಾರ್ಕ್ : ಓರ್ವ ಸಾಧಕರಲ್ಲ ಪ್ರತಿಷ್ಠೆಯನ್ನು ಕಾಪಾಡುವುದು ಬಹಳ ಕಡಿಮೆ ಇರುವುದರಿಂದ ಕಾರ್ಯಾಗಾರದಲ್ಲಿ ಅವರು ತಮ್ಮ ಮನಸ್ಸಿನ ಎಲ್ಲ ವಿಚಾರಗಳನ್ನು ಅತ್ಯಂತ ಮನಮುಕ್ತತೆಯಿಂದ ಮತ್ತು ಮರೆಮಾಚದೇ ಹೇಳಿದರು. ಅವರ ವಿಚಾರಗಳನ್ನು ಕೇಳುವಾಗ ನಮಗೆ ತುಂಬಾ ಒಳ್ಳೆಯದೆನಿಸುತ್ತಿತ್ತು.

ಪರಾತ್ಪರ ಗುರು ಡಾ. ಆಠವಲೆ : ಸಾಧನೆಯಲ್ಲಿ ಇದು ಬಹಳ ಮಹತ್ವದ್ದಾಗಿದೆ. ನಾವು ಇತರರ ಮನಸ್ಸಿನಲ್ಲಿ ನಮ್ಮ ಒಂದು ಪ್ರತಿಷ್ಠೆಯನ್ನು ನಿರ್ಮಾಣ ಮಾಡುತ್ತೇವೆ, ಆ ಸಮಯದಲ್ಲಿ ನಾವು ನಮ್ಮಲ್ಲಿರುವ ಸ್ವಭಾವದೋಷಗಳನ್ನು ಮತ್ತು ತಪ್ಪುಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತೇವೆ. ನಾವು ಈಶ್ವರನಿಂದ ಏನನ್ನಾದರು ಮುಚ್ಚಿಡಬಹುದೇ ? ಇಲ್ಲವಲ್ಲ, ಹಾಗಾದರೆ ನಮ್ಮ ಸ್ವಭಾವದೋಷಗಳನ್ನು ಇತರರಿಂದ ಏಕೆ ಮುಚ್ಚಿಡಬೇಕು ? ನಿಮಗೆ ಸಾಧನೆಯ ಈ ಅಂಗವು ಮೊದಲಿನಿಂದಲೇ ಗೊತ್ತಿದೆ. ಒಳ್ಳೆಯದಾಯಿತು !

ಈಶ್ವರಪ್ರಾಪ್ತಿಯ ತಳಮಳ ಯಾವಾಗಲೂ ಉಳಿದುಕೊಳ್ಳಲು, ಸಾಧಕರು ತಮ್ಮಲ್ಲಿನ ಸ್ವಭಾವದೋಷಗಳ ಮತ್ತು ಅಹಂನ ನಿರ್ಮೂಲನೆಯನ್ನು ಮಾಡುವುದು ಅಥವಾ ಸತತವಾಗಿ ಭಾವಾವಸ್ಥೆಯಲ್ಲಿರುವುದು ಆವಶ್ಯಕವಾಗಿದೆ

ಓರ್ವ ಸಾಧಕರು : ಪ್ರತಿಯೊಂದು ಪರಿಸ್ಥಿತಿಯಲ್ಲಿ ನನ್ನಲ್ಲಿ ಈಶ್ವರ ಪ್ರಾಪ್ತಿಯ ತಳಮಳ ಜಾಗೃತವಾಗಿರಲು ನಾನೇನು ಪ್ರಯತ್ನ ಮಾಡಲಿ ?

ಪರಾತ್ಪರ ಗುರು ಡಾ. ಆಠವಲೆ : ನಮ್ಮಲ್ಲಿನ ಸ್ವಭಾವದೋಷಗಳು ಮತ್ತು ಅಹಂ ಕಡಿಮೆಯಾದ ನಂತರ ಮನಸ್ಸಿನಲ್ಲಿ ಕೇವಲ ಈಶ್ವರನ ವಿಚಾರಗಳೇ ಇರುತ್ತವೆ. ಅದಕ್ಕಾಗಿ ಸ್ವಭಾವದೋಷಗಳ ಮತ್ತು ಅಹಂನ ನಿರ್ಮೂಲನೆಯನ್ನು ಮಾಡಲು ಹೆಚ್ಚೆಚ್ಚು ಪ್ರಯತ್ನ ಮಾಡಬೇಕು ಅಥವಾ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಯಾವುದಾದರೊಂದು ಜೀವವು ಭಾವಾವಸ್ಥೆಯಲ್ಲಿದ್ದರೆ, ಅದರ ಮನಸ್ಸಿನಲ್ಲಿ ಇತರ ವಿಚಾರಗಳು ಬರುವುದಿಲ್ಲ. ಆಗ ಅದಕ್ಕೆ ‘ಎಲ್ಲೆಡೆ ಈಶ್ವರನಿದ್ದಾನೆ, ಎಂಬ ಅನುಭೂತಿ ಬರುತ್ತದೆ.

ಯಾವುದಾದರೊಂದು ಅಜ್ಞಾತ ವಿಷಯದ ಬಗ್ಗೆ ಭಯವೆನಿಸುವುದು’ ಈ ಸ್ವಭಾವದೋಷವನ್ನು ದೂರಗೊಳಿಸಲು ಮತ್ತು ಕಲಿಯುವ ವೃತ್ತಿ ನಿರ್ಮಾಣವಾಗಲು ಸ್ವಯಂಸೂಚನೆಗಳನ್ನು ನೀಡುವುದು ಲಾಭದಾಯಕವಾಗಿದೆ !

ಸೌ. ಶ್ವೇತಾ ಕ್ಲಾರ್ಕ್ : ಸೌ. ಪ್ರೇಮಾ ಲೂಝ್ ಹೆರ್ನಾಡೆಝ್ ಇವರಿಗೆ ಕಾರ್ಯಾಗಾರದ ಸಮಯದಲ್ಲಿ ಸ್ವಲ್ಪ ಆಧ್ಯಾತ್ಮಿಕ ತೊಂದರೆಯಾಯಿತು. ‘ನಾಮಜಪಾದಿ ಉಪಾಯದ ಸತ್ರದಲ್ಲಿ ಸದ್ಗುರು ಸಿರಿಯಾಕ್ ವಾಲೆ ಇವರು ‘ವಿಭೂತಿಯನ್ನು ಹೇಗೆ ಊದಬೇಕು ?, ಎಂಬ ಪ್ರಯೋಗವನ್ನು ಮಾಡಿ ತೋರಿಸುತ್ತಿದ್ದರು. ಅದನ್ನು ನೋಡಿ ಪ್ರೇಮಾ ಇವರ ಮನಸ್ಸಿನಲ್ಲಿ ‘ಅವರು ನನ್ನ ಮೇಲೆ ವಿಭೂತಿಯನ್ನು ಊದಬಹುದು , ಎಂಬ ವಿಚಾರ ಬಂದು ತುಂಬಾ ಗಾಬರಿಯಾಗಿದ್ದರು.

ಪರಾತ್ಪರ ಗುರು ಡಾ. ಆಠವಲೆ : ವಿಭೂತಿಯ ಬಗ್ಗೆ ಏಕೆ ಭಯವೆನಿಸುತ್ತದೆ ? ಅದಕ್ಕೆ ಬದಲಾಗಿ ನಿಮಗೆ ವಿಭೂತಿ ಊದುವುದರಿಂದ ಆನಂದವಾಗಬೇಕಾಗಿತ್ತು. ನಿಮಗೆ ನಾಮಜಪಾದಿ ಉಪಾಯಗಳ ಸತ್ರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಆದ್ದರಿಂದ ನೀವು ಭಾಗ್ಯವಂತರಾಗಿರುವಿರಿ. ನೀವು ಇಲ್ಲಿ ಎಲ್ಲವನ್ನೂ ಕಲಿಯಲು ಬಂದಿರುವಿರಿ. ಯಾರಿಗೆ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆಯೋ, ಅವರಿಗೆ ಈ ರೀತಿ ಭಯವಾಗುತ್ತದೆ. ನಿಮಗೆ ಈ ಭಯದ ಅನುಭವ ಸ್ವಲ್ಪ ಹೊಸದಾಗಿದೆ. ನೀವು ಮೊದಲ ಬಾರಿಗೆ ಈ ದೃಶ್ಯವನ್ನು ನೋಡಿರುವಿರಿ. ನಿಮ್ಮ ಭಯವು ಮಾನಸಿಕವಾಗಿತ್ತು. ಚಿಂತೆಯನ್ನು ಮಾಡಬೇಡಿರಿ.

(ಮುಂದುವರಿಯುವುದು)