ಪರಾತ್ಪರ ಗುರು ಡಾಕ್ಟರರು ಕಮಲ ಕುಂಡದಲ್ಲಿ ಬಿಡಲು ತಂದಿರುವ ಮೀನು ನೇರ ದಿಕ್ಕಿನಲ್ಲಿ ಈಜಾಡದೇ ವಿರುದ್ಧ ದಿಕ್ಕಿನಲ್ಲಿ ಈಜಿವುದರ ಬಗ್ಗೆ ಡಾ. ಅಜಯ ಜೋಶಿಯವರಿಗೆ ಕೇಳಿದಾಗ ಡಾ. ಅಜಯ ಜೋಶಿಯವರ ಆಧ್ಯಾತ್ಮಿಕ ಸ್ತರದಲ್ಲಿ ಆಗಿರುವವರ ವಿಚಾರಪ್ರಕ್ರಿಯೆ !

ಪರಾತ್ಪರ ಗುರು ಡಾ. ಆಠವಲೆ

೧. ಕಮಲದ ಕುಂಡದಲ್ಲಿ ಬಿಡಲು ತಂದಿರುವ ಮೀನನ್ನು ಪರಾತ್ಪರ ಗುರು ಡಾಕ್ಟರರಿಗೆ ತೋರಿಸಿದ ನಂತರ ಅವರು ‘ಅದು ವಿರುದ್ಧ ದಿಕ್ಕಿನಲ್ಲಿ ಈಜಾಡುತ್ತಿದೆ’, ಎಂಬುದನ್ನು ಗಮನಕ್ಕೆ ತಂದುಕೊಟ್ಟು ಅದನ್ನು ಡಾ. ಅಜಯ ಜೋಶಿಯವರಿಗೆ ತೋರಿಸಲು ಹೇಳುವುದು

‘೨೩.೨.೨೦೧೯ ರಂದು ರಾಮನಾಥಿ ಆಶ್ರಮದಲ್ಲಿ ಕಮಲದ ಕುಂಡದಲ್ಲಿ ಬಿಡಲು ಓರ್ವ ಸಾಧಕರು (ಶ್ರೀ. ರೇಶಕ ಗಾವಕರ ಇವರು) ಒಂದು ಚಿಕ್ಕ ಮೀನನ್ನು ತಂದಿದ್ದರು. ನಾವು ಅದನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ಪರಾತ್ಪರ ಗುರು ಡಾಕ್ಟರರಿಗೆ ತೋರಿಸಿದೆವು. ಆ ಮೀನನ್ನು ನೋಡಿ ಪರಾತ್ಪರ ಗುರು ಡಾಕ್ಟರರಿಗೆ ತುಂಬಾ ಆನಂದವಾಯಿತು. ಯಾವುದಾದರೊಂದು ಚಿಕ್ಕ ಮಗುವನ್ನು ನೋಡಿ ಹೇಗೆ ನಮಗೆ ತುಂಬಾ ಆನಂದವಾಗುದೆಯೋ, ಹಾಗೆ ಅವರಿಗೆ ಆ ಮೀನನ್ನು ನೋಡಿ ಆನಂದವಾಗುತ್ತಿತ್ತು. ಆಗ ಆ ಮೀನು ನೇರ ದಿಕ್ಕಿನಲ್ಲಿ ಈಜಾಡದೇ ವಿರುದ್ಧ ದಿಕ್ಕಿನಲ್ಲಿ ಈಜಾಡುತ್ತಿತ್ತು. ಪರಾತ್ಪರ ಗುರು ಡಾಕ್ಟರರು ‘ಮೀನು ವಿರುದ್ಧ ದಿಕ್ಕಿನಲ್ಲಿ ಈಜಾಡುತ್ತಿದೆ’, ಎಂಬುದನ್ನು ನಮ್ಮ ಗಮನಕ್ಕೆ ತಂದುಕೊಟ್ಟರು ಮತ್ತು ರಾಮನಾಥಿ ಆಶ್ರಮದ ಸಾಧಕ ಮತ್ತು ಪಶುವೈದ್ಯರಾದ ಡಾ. ಅಜಯ ಜೋಶಿಯವರಿಗೆ ಆ ಮೀನನ್ನು ಮತ್ತು ಅದು ಈಜಾಡುವುದನ್ನು ತೋರಿಸಲು ಹೇಳಿದರು.

೨ ಡಾ. ಅಜಯ ಜೋಶಿಯವರು ಮೀನಿನ ಈಜುವ ಕೂದಲುಗಳಿಗೆ ‘ಫಂಗಸ್’ (ಬುರುಸು) ಆಗಿರುವುದರಿಂದ ‘ಅದು ವಿರುದ್ಧ ದಿಕ್ಕಿನಲ್ಲಿ ಈಜಾಡುತ್ತಿದೆ’, ಎಂದು ಹೇಳುವುದು

ಡಾ. ಅಜಯ ಗಣಪತರಾವ್ ಜೋಶಿ

ಡಾ. ಅಜಯ ಜೋಶಿಯವರಿಗೆ ಮೀನನ್ನು ತೋರಿಸಿದ ನಂತರ ಅವರು ಮೀನಿನ ಈಜುವ ಕೂದಲುಗಳಿಗೆ ‘ಫಂಗಸ್’ (ಬುರುಸು) ಬಂದಿದೆ’, ಆದುದರಿಂದ ಅದು ಮುಂದಿನ ದಿಕ್ಕಿನಲ್ಲಿ ಈಜಾಡದೇ ಹಿಂದೆ ಹಿಂದೆ ಹೋಗುತ್ತಿದೆ ಎಂದು ಹೇಳಿದರು. ಅವರು ಮೀನಿನ ಕೂದಲುಗಳ ಮೇಲಿನ ‘ಫಂಗಸ್’ನ್ನು ತೆಗೆದರು. ಅನಂತರ ಅದು ಮೊದಲಿನಂತೆ ಈಜಾಡತೊಡಗಿತು. ಕೂದಲುಗಳಿಗೆ ‘ಫಂಗಸ್’ ಆಗಿರುವುದರಿಂದ ಮೀನಿಗೆ ನಿತ್ಯದಂತೆ ಈಜಾಡಲು ಅಡಚಣೆ ಬರುತ್ತಿತ್ತು. ಆದುದರಿಂದ ಅದು ವಿರುದ್ಧ ದಿಕ್ಕಿನಲ್ಲಿ ಈಜಾಡುತ್ತಿತ್ತು. ಪರಾತ್ಪರ ಗುರು ಡಾಕ್ಟರರು ಇದನ್ನು ಗಮನಕ್ಕೆ ತಂದುಕೊಟ್ಟರು. ಗುರುದೇವರ ಕೃಪೆಯಿಂದ ಮೀನಿನ ಅಡಚಣೆಯ ಉತ್ತರ ಸಿಕ್ಕಿತು ಮತ್ತು ಅದರ ಉಪಾಯವೂ ಆಯಿತು.

ಯಾವುದಾದರೊಂದು ವಿಷಯವು ಎಷ್ಟೇ ಚಿಕ್ಕದಿದ್ದರೂ, ಪರಾತ್ಪರ ಗುರು ಡಾಕ್ಟರರು ಅದನ್ನು ಎಲ್ಲ ರೀತಿಯಿಂದ  ವಿಚಾರ ಮಾಡುತ್ತಾರೆ ಮತ್ತು ಸಾಧಕರಿಗೆ ಚಿಕ್ಕ ಚಿಕ್ಕ ವಿಷಯಗಳನ್ನು ಅಧ್ಯಯನ ಮಾಡಲು ಕಲಿಸುತ್ತಾರೆ. ಇದರಲ್ಲಿ ಅವರ ಜಿಜ್ಞಾಸೆ, ಸರ್ವಜ್ಞತೆ ಮತ್ತು ಪ್ರತಿಯೊಂದು ವಿಷಯದ ಬಗ್ಗೆ ಅವರಲ್ಲಿರುವ ಪ್ರೀತಿ ಅರಿವಾಗುತ್ತದೆ. ಇತರರಿಗೆ ಹೊಸ ವಿಷಯವನ್ನು ತೋರಿಸಿ ಅವರಿಗೆ ಅದರಲ್ಲಿನ ಆನಂದ ಮತ್ತು ಜ್ಞಾನವನ್ನೂ ನೀಡುತ್ತಾರೆ.’

– ಓರ್ವ ಸಾಧಕ, ಸನಾತನ ಆಶ್ರಮ, ರಾಮನಾಥಿ, ಗೋವಾ.

೩. ಡಾ. ಅಜಯ ಜೋಶಿಯವರ ಆಧ್ಯಾತ್ಮಿಕ ಸ್ತರದಲ್ಲಾದ ವಿಚಾರಪ್ರಕ್ರಿಯೆ

೩ ಅ. ಪರಾತ್ಪರ ಗುರು ಡಾಕ್ಟರರ ಸಂದೇಶದಲ್ಲಿ ಅಡಗಿದ ಇನ್ನೊಂದು ಸಂದೇಶ ! : ‘೨೩.೨.೨೦೧೯ ರಂದು ರಾತ್ರಿ ಓರ್ವ ಸಾಧಕನು ನನಗೆ ವಿರುದ್ಧ ದಿಕ್ಕಿನಲ್ಲಿ ಈಜಾಡುವ ಒಂದು ಮೀನನ್ನು ತಂದು ತೋರಿಸಿದನು. ಪರಾತ್ಪರ ಗುರು ಡಾಕ್ಟರರು ಆ ಮೀನನ್ನು ನನಗೆ ತೋರಿಸಲು ಹೇಳಿದ್ದರು. ನನಗೆ ಆ ಸಂದೇಶವು ಸಿಕ್ಕಿತು, ನನಗೆ ಅದರಲ್ಲಿ ಇನ್ನೂ ಒಂದು ಸಂದೇಶ ಅಡಗಿತ್ತು, ‘ಮೀನು ವಿರುದ್ಧ ದಿಕ್ಕಿನಲ್ಲಿ ಈಜುವುದರ ಪರೀಕ್ಷಣೆಯನ್ನು ಮಾಡಿ ಕಾರಣವನ್ನು ಹುಡುಕುವುದು ಮತ್ತು ಹಾಗೆಯೇ ‘ಅಧ್ಯಾತ್ಮದ ದೃಷ್ಟಿಯಿಂದ ಅದರ ರಹಸ್ಯವೇನು ?’, ಎಂಬುದನ್ನೂ ಕಂಡುಹಿಡಿಯುವುದು.

೩ ಆ. ಪ್ರಾರ್ಥನೆಯನ್ನು ಮಾಡಿದ ನಂತರ ಸೂಕ್ಷ್ಮದಿಂದ ದೊರಕಿದ ಉತ್ತರಗಳು : ನಾನು ಪರಾತ್ಪರ ಗುರು ಡಾಕ್ಟರರಿಗೆ ಮತ್ತು ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿದೆ ಮತ್ತು ನನಗೆ ಸೂಕ್ಷ್ಮದಿಂದ ಪರಾತ್ಪರ ಗುರುದೇವರ ಮಾಧ್ಯಮದಿಂದ ಉತ್ತರಗಳು ದೊರಕತೊಡಗಿದವು.

. ಮೀನುಗಳು ಯಾವತ್ತು ವಿರುದ್ಧ ದಿಕ್ಕಿನಲ್ಲಿ ಈಜಾಡುವುದಿಲ್ಲ. ಯಾವಾಗ ಮಾನವನ ಸ್ಥಿತಿಯೂ ಈ ರೀತಿ ಆಗುತ್ತದೆಯೋ, ಅಂದರೆ ಯಾವಾಗ ಮಾನವನು ವಿರುದ್ಧ ದಿಕ್ಕಿನಲ್ಲಿ ಹೋಗತೊಡಗುತ್ತಾನೆಯೋ, ಆಗ ಅವನು ಅಧೋಗತಿಯ ಕಡೆಗೆ ಹೋಗತೊಡಗುವುದರಿಂದ ಅವನ ಆಧ್ಯಾತ್ಮಿಕ ಅಧೋಗತಿ ಪ್ರಾರಂಭವಾಗುತ್ತದೆ.

೨. ಆ ಮೀನಿಗೆ ಪರಾತ್ಪರ ಗುರು ಡಾಕ್ಟರರ ದರ್ಶನವಾಗುವುದೆಂದರೆ, ಗುರುಗಳ ಅಥವಾ ಈಶ್ವರನ ದರ್ಶನದ ಲಾಭವಾಗುವುದು. ಆದುದರಿಂದ ಅದರ ಎಲ್ಲ ಪಾಪಗಳು ಮುಗಿಯಲು ಆರಂಭವಾದವು.

೩. ಮೀನು ವಿರುದ್ಧ ದಿಕ್ಕಿನಲ್ಲಿ ಈಜಾಡುತ್ತಿತ್ತು. ‘ಅದು ನೇರ ದಿಕ್ಕಿನಲ್ಲಿ ಈಜಬೇಕು’, ಎಂದು ಪರಾತ್ಪರ ಗುರುದೇವರ ಅವ್ಯಕ್ತ ಸಂಕಲ್ಪವಾಗಿತ್ತು. ಅದು ಪೂರ್ಣವಾಗಲು ಅವರು ನನಗೆ ಸೂಕ್ಷ್ಮದಿಂದ ಜ್ಞಾನವನ್ನು ನೀಡಿದರು. ಆದುದರಿಂದ ‘ಮೀನಿನ ಕೂದಲುಗಳಿಗೆ ‘ಫಂಗಸ್’ (ಬುರಸು) ಬಂದಿದೆ ಮತ್ತು ಅದನ್ನು ಆ ಮೀನಿಗೆ ನೋವಾಗದೇ ತೆಗೆಯಬೇಕು’, ಎಂಬ ಪ್ರೇರಣೆಯು ನನಗೆ ಸಿಕ್ಕಿತು.

೪. ಮನುಷ್ಯನೂ ಸಂಸಾರದಲ್ಲಿ ಇದೇ ರೀತಿ ಸಿಲುಕಿರುತ್ತಾನೆ ಮತ್ತು ಗುರುಗಳು ಅವನನ್ನು ಸಂಸಾರದಿಂದ ಸಹಜವಾಗಿ ಹೊರಗೆ ತೆಗೆಯುತ್ತಾರೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ, ಭಾವ ನಿರ್ಮಿತಿ, ಹಾಗೆಯೇ ಈಶ್ವರನ ಅನುಸಂಧಾನ ಇವುಗಳಿಂದ ಜೀವದ ಮೇಲೆ ಬಂದಿರುವ ಆವರಣವು ಹೋಗತೊಡಗುತ್ತದೆ ಮತ್ತು ಅವನ ಆಧ್ಯಾತ್ಮಿಕ ಆನಂದದ ಜೀವನವು ಪ್ರಾರಂಭವಾಗುತ್ತದೆ.

ಮೀನಿನ ಕೂದಲುಗಳಿಗೆ ಹಿಡಿದಿರುವ ಫಂಗಸ್‌ನ್ನು (ಬುರುಸು) ನಿಧಾನವಾಗಿ ತೆಗೆದನಂತರ ಕೂದಲುಗಳು ನೇರ ದಿಕ್ಕಿನಿಂದ ಮತ್ತು ಯೋಗ್ಯ ಪದ್ಧತಿಯಿಂದ ಅಲುಗಾಡುವುದರಿಂದ ಮೀನು ನೇರ ಮುಂದೆ ಹೋಗತೊಡಗಿತು.

ಅಧ್ಯಾತ್ಮ ಸಾಧನೆಯಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಅಧ್ಯಾತ್ಮದ ದೃಷ್ಟಿಯಿಂದ ‘ಗುರುಗಳು ಭೇಟಿ ಆಗುವುದು ಅತ್ಯಂತ ಮಹತ್ವದ್ದಾಗಿದೆ. ಪರಾತ್ಪರ ಗುರು ಡಾಕ್ಟರರ ದರ್ಶನದಿಂದ ಒಂದು ವೇಳೆ ಮೀನಿನ ದುಃಖ ದೂರವಾಗುತ್ತದೆ ಎಂದಾದರೆ, ಸಾಮಾನ್ಯ ವ್ಯಕ್ತಿಗಳು ಮಾಯೆಯ ಜೀವನದಿಂದ ಖಚಿತವಾಗಿ ಬಿಡುಗಡೆಯಾಗಿ ಪರಮ ಗತಿಯು ಪ್ರಾಪ್ತವಾಗಲು ಸಾಧ್ಯವಿದೆ.

ಶ್ರೀಕೃಷ್ಣನ ಕೃಪೆಯಿಂದ ನಮಗೆ ಇಂತಹ ಗುರುಗಳು ಲಭಿಸಿದ್ದಾರೆ, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’  – ಡಾ. ಅಜಯ ಜೋಶಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ, ಗೋವಾ. (೧೦.೧೧.೨೦೧೯)