೧೩ ಡಿಸೆಂಬರ್ ೨೦೨೦ ರಂದು ಪ್ರಕಟಿಸಿದ ಮೊದಲನೆಯ ಭಾಗದಲ್ಲಿ ಭಗವಂತನೊಂದಿಗೆ ಏಕರೂಪವಾಗಲು ಗುರುವಾಜ್ಞೆಯನ್ನು ಪಾಲಿಸುವುದು, ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ಹೋಗುವುದರಿಂದಾಗುವ ವಿವಿಧ ಲಾಭಗಳ ಬಗ್ಗೆ ತಿಳಿದುಕೊಳ್ಳುವ ಆವಶ್ಯಕತೆಯನ್ನು ಓದಿದೆವು. ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡಿದ್ದೇವೆ. (ಭಾಗ ೨)
ಸಾಧಕರಿಗೆ ಸಹಾಯ ಮಾಡುವ ಹಳ್ಳಿಯ ಜನರಲ್ಲಿಗೆ ಭಗವಂತನು ನಮ್ಮನ್ನು ಖಂಡಿತ ಕರೆದುಕೊಂಡು ಹೋಗುವನು !
ಪ್ರಶ್ನೆ : ಈಗ ವಾಸಿಸುತ್ತಿರುವ ಮನೆಯನ್ನು ಮಾರಾಟ ಮಾಡಿ ೫ ತಿಂಗಳಲ್ಲಿ ಹಳ್ಳಿಯಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಲು ಸಾಧ್ಯವಿದೆಯೇ ?
ದೃಷ್ಟಿಕೋನ : ಪರಾತ್ಪರ ಗುರು ಡಾಕ್ಟರರು ಕಳೆದ ಕೆಲವು ವರ್ಷಗಳಿಂದ ‘ಹಳ್ಳಿಗಳಲ್ಲಿ ಹೆಚ್ಚು ಪ್ರಸಾರ ಮಾಡಿರಿ, ಎಂದು ಹೇಳುತ್ತಿದ್ದರು. ಇದರಿಂದ ಅವರ ದಾರ್ಶನಿಕತೆಯ ಅರಿವಾಗುತ್ತದೆ; ಆದರೆ ನಾವು ಅದನ್ನು ಗಮನಿಸಲಿಲ್ಲ. ಹಳ್ಳಿಯಲ್ಲಿ ಪ್ರಸಾರವಾಗುತ್ತಿದ್ದರೆ, ಈಗ ಅಲ್ಲಿರುವ ಸಾಧಕರಿಗೆ ಸಹಾಯವಾಗುತ್ತಿತ್ತು. ಇಂದು ಕೂಡ ಅಂತಹ ಸಾಧಕರು ಹಳ್ಳಿಗಳಲ್ಲಿ ಇರಬಹುದು. ನಾವು ಭಗವಂತನಿಗೆ ಶರಣಾಗಿ ಪ್ರಯತ್ನಿಸೋಣ. ಭಗವಂತನು ಖಂಡಿತ ನಮ್ಮನ್ನು ಅವರಿದ್ದಲ್ಲಿಗೆ ಕರೆದುಕೊಂಡು ಹೋಗುವನು. ಕೆಲವು ಸಾಧಕರು ಅಂತಹ ಅನುಭೂತಿಯನ್ನು ಪಡೆಯುತ್ತಿದ್ದಾರೆ.
ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ೪೦ ರಿಂದ ೫೦ ಸಾಧಕರು ಒಟ್ಟಾಗಿ ವಾಸಿಸುವಂತಹ ಸಣ್ಣ ಆಶ್ರಮಗಳನ್ನು ನಿರ್ಮಾಣ ಮಾಡಿದರೆ ಅಂತಹ ಸಾಧಕರಿಗೆ ಅಲ್ಲಿ ವ್ಯವಸ್ಥೆಯಾಗಬಹುದು.
ಪ್ರಶ್ನೆ : ಎಲ್ಲರ ಆರ್ಥಿಕ ಸ್ಥಿತಿ ಚೆನ್ನಾಗಿರುವುದಿಲ್ಲ. ಯಾರಲ್ಲಿ ಹಣವಿಲ್ಲವೋ, ಅವರು ಏನು ಮಾಡಬೇಕು ?
ದೃಷ್ಟಿಕೋನ : ಇಂದು ಕೆಲವು ಸಾಧಕರ ಆರ್ಥಿಕ ಸ್ಥಿತಿ ಚೆನ್ನಾಗಿದೆ, ಅವರು ಹಳ್ಳಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಸಾಧಕರು ತಮ್ಮ ಸ್ವಂತ ಮನೆಗಳನ್ನು ನಿರ್ಮಾಣ ಮಾಡಿ ಪುನಃ ಮಾಯೆಯಲ್ಲಿ ಸಿಲುಕುವ ಬದಲು ಅವರೆಲ್ಲರೂ ಒಟ್ಟಾಗಿ ಹೆಚ್ಚು ಕಡಿಮೆ ೪೦ ರಿಂದ ೫೦ ಸಾಧಕರು ಒಟ್ಟಾಗಿ ಇರುವ ಹಾಗೆ ಒಂದೇ ಸೂರಿನಡಿ ವ್ಯವಸ್ಥೆ ಮಾಡಿದರೆ, ಯಾರಲ್ಲಿ ಹಣವಿಲ್ಲ ಅಥವಾ ಕಡಿಮೆಯಿದೆಯೋ, ಅಂತಹ ಸಾಧಕರು ಸಂಕೋಚ ಪಡದೆ ಅಲ್ಲಿ ವಾಸಿಸಬಹುದು. ಬೇರೆ ಬೇರೆ ಊರಿನಲ್ಲಿರುವ ಈ ಸಾಧಕರು ಒಟ್ಟಾಗಿ ಆವಶ್ಯಕವಿರುವ ಎಲ್ಲ ಸೌಲಭ್ಯಗಳಿರುವ ಸಣ್ಣ ಸಣ್ಣ ಆಶ್ರಮಗಳನ್ನು ನಿರ್ಮಾಣ ಮಾಡಿದರೆ, ಕರ್ತೃತ್ವ ಹಾಗೂ ಆಸಕ್ತಿ ಉಳಿಯುವುದಿಲ್ಲ. (ಆಪತ್ಕಾಲದ ನಂತರ ಏನು ಮಾಡುವುದು ?, ಎನ್ನುವ ವಿಚಾರ ಇರುವುದಿಲ್ಲ.) ಭಾರತದಾದ್ಯಂತ ಭಗವಂತನ ಅನೇಕ ಆಶ್ರಮಗಳು ನಿರ್ಮಾಣವಾಗುವವು, ಅಲ್ಲಿಂದ ಎಲ್ಲ ಕಡೆಗೆ ಚೈತನ್ಯ ಹರಡುತ್ತಾ ಇರುವುದು.
‘ಆಪತ್ಕಾಲದ ನಂತರದ ಸ್ಥಿತಿ ಹೇಗಿರಬಹುದು ?, ಎಂಬುದನ್ನು ಈಗ ಬುದ್ಧಿಯಿಂದ ಕಲ್ಪನೆ ಮಾಡುವುದು ಅಸಾಧ್ಯವಿರುವುದರಿಂದ ವರ್ತಮಾನದಲ್ಲಿದ್ದು ಗುರುವಾಜ್ಞಾಪಾಲನೆ ಮಾಡುವುದು ಆವಶ್ಯಕವಾಗಿದೆ
ಪ್ರಶ್ನೆ : ನಗರದಲ್ಲಿರುವ ತಮ್ಮ ಮನೆಗಳನ್ನು ಮಾರಾಟ ಮಾಡದೆ ಹಾಗೆಯೇ ಇಟ್ಟು ಆಪತ್ಕಾಲದ ನಂತರ ಪುನಃ ಕೆಲವು ವರ್ಷಗಳ ನಂತರ ಹಿಂತಿರುಗಿ ಬಂದು ಅಲ್ಲಿ ವಾಸಿಸಬಹುದಲ್ಲವೇ ?
ದೃಷ್ಟಿಕೋನ : ಅನೇಕ ನಗರಗಳು ಆಪತ್ಕಾಲದಲ್ಲಿ ನಾಶವಾಗಲಿಕ್ಕಿವೆ. ‘ಹಿಂದಿನ ಎರಡೂ ಮಹಾಯುದ್ಧಗಳು ಸಣ್ಣ ಮಕ್ಕಳ ಆಟದಂತೆ ಅನಿಸಬಹುದು, ಅಷ್ಟು ಭಯಂಕರ ವಿನಾಶವಾಗಲಿಕ್ಕಿದೆ. ಪೃಥ್ವಿಯ ಮೇಲಿನ ಶೇ. ೬೦ ರಷ್ಟು ಜನಸಂಖ್ಯೆ ನಾಶವಾಗಲಿಕ್ಕಿದೆ. ಇಂತಹ ಸ್ಥಿತಿಯಲ್ಲಿ ‘ನಮ್ಮ ಮನೆ ಸುರಕ್ಷಿತವಾಗಿರಬಹುದು, ಎಂದು ಹೇಳಲು ಸಾಧ್ಯವಿದೆಯೇ ? ‘ಆಪತ್ಕಾಲದ ನಂತರದ ಸ್ಥಿತಿ ಹೇಗಿರಬಹುದು ?, ಎನ್ನುವುದನ್ನು ಈಗ ಬುದ್ಧಿಯಿಂದ ಕಲ್ಪನೆ ಮಾಡುವುದು ಅಸಾಧ್ಯವಾಗಿದೆ. ಆದ್ದರಿಂದ ನಾವು ‘ವರ್ತಮಾನಕಾಲದಲ್ಲಿದ್ದು ಈಗ ಭಗವಂತ ಏನು ಹೇಳುತ್ತಾನೋ ?, ಅದನ್ನು ಪಾಲನೆ ಮಾಡಲು ಪ್ರಯತ್ನಿಸೋಣ.
ಕಾಲಮಹಾತ್ಮೆಗನುಸಾರ ೧೯೯೯ ರಿಂದ ಸೂಕ್ಷ್ಮದಿಂದ ಆಪತ್ಕಾಲ ಆರಂಭವಾಗಿದ್ದು, ಸಾಧಕರ ಎಲ್ಲ ತೊಂದರೆಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ತನ್ನ ಮೇಲೆ ತೆಗೆದುಕೊಂಡಿದ್ದಾರೆ. ಸಾಧಕರೇ, ಕಾಲಮಹಾತ್ಮೆಗನುಸಾರ ೧೯೯೯ ರಲ್ಲಿಯೇ ಸೂಕ್ಷ್ಮದ ಕೆಟ್ಟ ಶಕ್ತಿಗಳು ಸಾಧಕರ ಮೇಲೆ ಆಕ್ರಮಣ ಮಾಡಿದವು. ಆಗಲೇ ಆಪತ್ಕಾಲ (ಮಹಾಯುದ್ಧ) ಆರಂಭವಾಗಿದೆ. ಅಂದಿನಿಂದ ಇಂದಿನವರೆಗೆ ಆ ಮಹಾಯುದ್ಧದ ಬಿಸಿ ನಮಗೆ ಸ್ವಲ್ಪವೂ ತಾಗಿಲ್ಲ. ‘ಆ ಎಲ್ಲ ಆಕ್ರಮಣಗಳನ್ನು ನಮ್ಮ ರಕ್ಷಣೆಗಾಗಿ ಪರಾತ್ಪರ ಗುರು ಡಾಕ್ಟರರೇ ತಮ್ಮ ಮೇಲೆ ತೆಗೆದುಕೊಂಡರು ಹಾಗೂ ಕಳೆದ ಎಷ್ಟೋ ವರ್ಷಗಳಿಂದ ಅವರು ಶಾರೀರಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ, ಎಂಬುದು ನಮ್ಮೆಲ್ಲರಿಗೂ ತಿಳಿದಿದೆ.
ಸಾಧಕರಿಗೆ ಆಪತ್ಕಾಲದ ತೀವ್ರತೆಯ ಅರಿವನ್ನು ನಿರಂತರ ಮಾಡಿಕೊಟ್ಟಿದ್ದರೂ ಅವರ ಮನಸ್ಸಿನಲ್ಲಿ ‘ಭಗವಂತ ಮತ್ತು ಮಾಯೆ ಇವುಗಳಲ್ಲಿ ಯಾವುದನ್ನು ಆರಿಸುವುದು ?, ಎನ್ನುವ ವಿಷಯದಲ್ಲಿ ದ್ವಂದ್ವ ನಿರ್ಮಾಣವಾಗಿದೆ.
ಸಾಧಕರೇ, ಪರಾತ್ಪರ ಗುರು ಡಾಕ್ಟರರು ಕಳೆದ ಅನೇಕ ವರ್ಷಗಳಿಂದ ನಮಗೆ ‘ಸಾಧನೆ ಹೇಗೆ ಮಾಡುವುದು ?, ಎಂಬುದನ್ನು ಕಲಿಸಿದರು. ಮುಂಬರುವ ಆಪತ್ಕಾಲದ ವಿಷಯದಲ್ಲಿ ನಿರಂತರ ಹೇಳಿದ್ದಾರೆ. ಅಂತಹ ಕೆಲವು ಪ್ರಸಂಗಗಳ ಅನುಭವಗಳೂ ನಮಗಾಗುತ್ತಿವೆ. ಆಪತ್ಕಾಲದ ತೀವ್ರತೆಯ ಅರಿವನ್ನು ನಿರಂತರ ಮಾಡಿಕೊಟ್ಟಿದ್ದರೂ ಇಂದು ಸಹ ನಮ್ಮ ಮನಸ್ಸಿನಲ್ಲಿ ‘ಭಗವಂತ ಹಾಗೂ ಮಾಯೆಯಲ್ಲಿ ಯಾವುದನ್ನು ಆರಿಸುವುದು ?, ಎನ್ನುವ ದ್ವಂದ್ವವು ನಡೆಯುತ್ತಿದೆ; ಆದ್ದರಿಂದಲೇ ಪರಾತ್ಪರ ಗುರು ಡಾಕ್ಟರರು, ‘ಸಾಧಕರೇ, ನೀವು ಗೆದ್ದೀರಿ, ನಾನು ಸೋತೆನು ! ಎಂದು ಹೇಳಿದ್ದರು.
ಸಾಧಕರೇ, ಜೀವನ್ಮುಕ್ತಿಯ ಮಾರ್ಗದಲ್ಲಿ ಕಳೆದ ಕೆಲವು ವರ್ಷ ನಾವು ಸಾಧನೆಯ ಅಭ್ಯಾಸ ಮಾಡಿದೆವು. ಈಗ ಪ್ರವೇಶ ಪರೀಕ್ಷೆಯಿದೆ. ಮುಂದಿನ ೩ – ೪ ವರ್ಷ ಪ್ರತ್ಯಕ್ಷ ಪರೀಕ್ಷೆ ಹಾಗೂ ನಂತರ ಫಲಿತಾಂಶವಿದೆ. ಭಗವಂತನು (ಪರಾತ್ಪರ ಗುರು ಡಾಕ್ಟರರು) ಈಗಲೇ ಹೇಳಿ ನಮ್ಮೆಲ್ಲರನ್ನೂ ಜಾಗೃತಗೊಳಿಸಿದ್ದಾರೆ. ಹಾಗಿರುವಾಗ ನಾವು ಏಕೆ ಹಿಂದೆ ಉಳಿಯಬೇಕು ? ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಕಾಲಮಹಾತ್ಮೆಗನುಸಾರ ಆಗಿಯೇ ಆಗುವುದು; ಆದರೆ ಈ ಕಾರ್ಯದಲ್ಲಿ ಯಾರು ತನು-ಮನ-ಧನದ ತ್ಯಾಗ ಮಾಡಿ ಭಾಗವಹಿಸುವರೋ, ಅವರ ಸಾಧನೆಯಾಗಿ ಅವರು ಜನನ-ಮರಣದ ಚಕ್ರದಿಂದ ಮುಕ್ತರಾಗುವರು. – (ಪರಾತ್ಪರ ಗುರು) ಡಾ. ಆಠವಲೆ, ದೈನಿಕ ‘ಸನಾತನ ಪ್ರಭಾತ, ೨೪.೯.೨೦೨೦)
‘ಎಲ್ಲ ಸಾಧಕರ ಮನಸ್ಸಿನಲ್ಲಿ ಉದ್ಭವಿಸುವ ವಿವಿಧ ಪ್ರಶ್ನೆಗಳು ಹಾಗೂ ಮನಸ್ಸು ಮತ್ತು ಬುದ್ಧಿಯ ಮೇಲಿನ ಆವರಣವನ್ನು ದೂರಗೊಳಿಸಿ ಎಲ್ಲರೂ ಜೀವನಮುಕ್ತವಾಗುವ ನಿರ್ಣಯವನ್ನು ತೆಗೆದುಕೊಳ್ಳುವ ಸದ್ಬುದ್ಧಿಯನ್ನು ನೀಡಿರಿ, ಎಂದು ಕಳಕಳಿಯ ಪ್ರಾರ್ಥನೆ !
ಶ್ರೀಗುರುಚರಣಾರ್ಪಣಮಸ್ತು |
– ಶ್ರೀ. ಮಂದಾರ ವಿಜಯ ಜೋಶಿ, ಬೆಳಗಾವಿ
(ಮುಂದುವರಿಯುವುದು)