ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಬಂಧನ

ಹಲಾಲ್ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವಾಗ ಯಾರಾದರೂ ಅಂತಹ ಕರೆ ನೀಡುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ? ಹಿಂದೂಪರ ಸಂಘಟನೆಗಳು ಕೇವಲ ಕರೆ ನೀಡಿದ ಮಾತ್ರಕ್ಕೆ ಕೇರಳದಲ್ಲಿ ಹಿಂದೂದ್ವೇಷಿ ಸಾಮ್ಯವಾದಿ ಸರಕಾರ ಕ್ರಮ ಕೈಗೊಳ್ಳುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ !

ಕೊಚ್ಚಿ (ಕೇರಳ) – ಹಿಂದೂಪರ ಸಂಘಟನೆಯಾದ ಹಿಂದೂ ಐಕ್ಯ ವೇದಿಯ ಪ್ರಧಾನ ಕಾರ್ಯದರ್ಶಿ ಆರ್.ವಿ. ಬಾಬು ಇವರು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂಗಳಿಗೆ ಕರೆ ನೀಡಿದ್ದಕ್ಕಾಗಿ ಅವರನ್ನು ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಸರಕಾರದ ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಶ್ರೀ. ಬಾಬು ಇವರು ‘ಹಲಾಲ್ ಎಕನಾಮಿಕ್ಸ್ನ ಅಪಾಯವನ್ನು ವಿವರಿಸುತ್ತಾ ‘ಹಿಂದೂಗಳು ಇದಕ್ಕೆ ಬಲಿಯಾಗಬಾರದು, ಎಂದು ಕರೆ ನೀಡಿದ್ದರು. ಅದೇ ರೀತಿ ಯೂಟ್ಯೂಬ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ವಿವಾದ ಉಂಟಾಗಬಹುದು ಎಂದು ಹೇಳುತ್ತಾ ಪೊಲೀಸರು ಬಾಬು ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು.

೧. ಆರ್.ವಿ. ಬಾಬು ಇವರ ಬಂಧನದ ವಿರುದ್ಧ ಹಿಂದೂ ಪರ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಈ ಹಿಂದೆ ಬೇಕರಿಯಲ್ಲಿ ಹಲಾಲ್ ಚಿಹ್ನೆ ಯನ್ನು ಪ್ರದರ್ಶಿಸುವುದನ್ನು ವಿರೋಧಿಸಿ ಹಿಂದೂ ಐಕ್ಯ ವೇದಿಯ ಐವರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

೨. ಈ ಹಿಂದೆ ಆರ್. ವಿ. ಬಾಬುರವರು ‘ಜಮಿಯತ್-ಉಲೆಮಾ-ಹಿಂದ್ ಟ್ರಸ್ಟ್ ಈ ಕಂಪನಿಯು ಅರ್ಜಿದಾರರಿಂದ ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರವನ್ನು ಪಡೆಯಲು ಶುಲ್ಕ ವಿಧಿಸುತ್ತದೆ ಎಂದು ಹೇಳಿದ್ದರು. ಅವರು ಈ ಮೊತ್ತದ ಒಂದು ಭಾಗವನ್ನು ಜಕತ್ ಎಂದು ಪಾವತಿಸುತ್ತಾರೆ. ಇದರ ಹಿಂದಿನ ಒಂದು ಕಾರಣವೆಂದರೆ ಈ ಜಕತ್‌ಅನ್ನು ಅನುಮಾನಾಸ್ಪದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಪ್ರಸ್ತುತ ಕಾರಾಗೃಹದಲ್ಲಿರುವ ಉಗ್ರರಿಗೆ ಕಾನೂನು ನೆರವುಗಾಗಿ ಇದನ್ನು ಬಳಸಲಾಗುತ್ತಿದೆ. ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ಸಹ ಈ ವಿಷಯ ಲಭ್ಯವಿದೆ, ಎಂದಿದ್ದರು.

. ಭಾಜಪದ ಕೇರಳದ ಪ್ರದೇಶಾಧ್ಯಕ್ಷ ಕೆ. ಸುರೇಂದ್ರನ್ ಮತ್ತು ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಯೋಜಕರಾದ ಜೆ. ನಂದಕುಮಾರ್ ಇವರು ಈ ಬಂಧನವನ್ನು ಖಂಡಿಸಿದ್ದು, ರಾಜ್ಯ ಸರ್ಕಾರವು ಬಂಧನದ ಮೂಲಕ ಮೂಲಭೂತವಾದಿಗಳನ್ನು ಓಲೈಸುತ್ತಿದೆ ಎಂದು ಆರೋಪಿಸಿವೆ.