ಎಲ್ಲರ ಹಾಗೆಯೇ ನನಗೆ ಸಹ ಅಡುಗೆ ಮಾಡಿದ ನಂತರ ಅಡುಗೆ ಮನೆಯನ್ನು ಸ್ವಚ್ಛ ಮಾಡದೆ ನಿದ್ದೆ ಬರುವುದಿಲ್ಲ; ಆದರೆ ಸ್ವಚ್ಛ ಮಾಡಿದ ನಂತರ ಕಳೆದ ೬ ತಿಂಗಳಿಂದ ನಾನು ಒಂದು ನಿತ್ಯಕ್ರಮವನ್ನು ನಿಯಮಿತವಾಗಿ ಮಾಡುತ್ತಿದ್ದೇನೆ, ಅದರಿಂದ ನನಗೆ ತುಂಬಾ ಲಾಭವಾಗಿದೆ. ನಾನು ರಾತ್ರಿ ಮಲಗುವಾಗ ಅಡುಗೆ ಮನೆಯಲ್ಲಿರುವ ದೇವರಕೋಣೆಯಲ್ಲಿ ಸಾಯಂಕಾಲ ಹಚ್ಚುವ ದೀಪ ಒಂದು ವೇಳೆ ಆರಿದ್ದರೆ, ಅದನ್ನು ಪುನಃ ಹಚ್ಚುತ್ತೇನೆ; ಆದರೆ ಅದರೊಂದಿಗೆ ಕುಡಿಯುವ ನೀರಿನ ಪಾತ್ರೆಯ ಸಮೀಪ ಕೂಡ ಒಂದು ದೀಪವನ್ನು ಹಚ್ಚುತ್ತೇನೆ ಮತ್ತು ಸಾಧ್ಯವಾದರೆ ಅಲ್ಲಿ ಒಂದು ಹೂವನ್ನೂ ಅರ್ಪಿಸುತ್ತೇನೆ ಹಾಗೂ ಮನಸ್ಸಿನಲ್ಲಿಯೇ ನೀರಿನ ಎಲ್ಲ ಪಾತ್ರೆಗಳಿಗೆ ಕೈಮುಗಿದು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕೆಲವರಿಗೆ ಈ ಮೇಲಿನ ವಿಷಯವನ್ನು ಓದುವಾಗ ವಿಚಿತ್ರ ಅಥವಾ ಹಾಸ್ಯಾಸ್ಪದವೆನಿಸಬಹುದು; ಆದರೆ ನಾನು ಓರ್ವ ವೈದ್ಯಳಾಗಿದ್ದೇನೆ. ವಿಜ್ಞಾನದ ಪರೀಕ್ಷೆಗಳ ಎಲ್ಲ ಕಷ್ಟನಷ್ಟಗಳನ್ನು ಅನುಭವಿಸದೆ ಸಹಜವಾಗಿ ಯಾವ ವಿಷಯದಲ್ಲಿಯೂ ವಿಶ್ವಾಸ ವಿಡುವುದಿಲ್ಲ; ಆದರೆ ೬ ತಿಂಗಳ ಹಿಂದೆ ನನಗೆ ‘ನೀರು ಎನ್ನುವ ವಿಷಯದಲ್ಲಿ ಅತ್ಯಂತ ಮಹತ್ವದ ಒಂದು ಸಂಶೋಧನೆಯು ನನ್ನ ಕೈಸೇರಿತು. ಅನಂತರ ಕೆಲವು ಧಾರ್ಮಿಕ ಪುಸ್ತಕಗಳಲ್ಲಿ ಅದರ ಬಗ್ಗೆ ಉದಾಹರಣೆಗಳೂ ಸಿಕ್ಕಿದವು. ಅದನ್ನು ಸುಲಭ ಭಾಷೆಯಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. |
ಹೊರಗಿನಿಂದ ಬರುವ ಪ್ರತಿಯೊಂದು ವಿಧದ ಊರ್ಜೆಯ ತಕ್ಕಂತೆ ನೀರಿನಲ್ಲಿ ಬದಲಾವಣೆಯಾಗುವುದು
ನೀರು ಎಂದರೆ ಜೀವನ. ನೀರಿಗೆ ವಿಶಿಷ್ಟವಾದ ಒಂದು ಸ್ಮರಣಶಕ್ತಿ ಇರುತ್ತದೆ. ನೀರನ್ನು ಕುಡಿಯುವಾಗ ನಮ್ಮಲ್ಲಿ ಯಾವ ರೀತಿಯ ವಿಚಾರವಿರುವುದೋ ಅಥವಾ ಯಾವ ಮಾನಸಿಕ ಸ್ಥಿತಿಯಲ್ಲಿ ನಾವು ನೀರನ್ನು ಕುಡಿಯುತ್ತೇವೆಯೋ, ಅದರಂತೆ ನೀರಿಗೆ ಮತ್ತು ಕುಡಿಯುವವರ ಮೇಲೆ ಬಹಳ ಪರಿಣಾಮವಾಗುತ್ತದೆ. ವಾತಾವರಣದಿಂದ ಬರುವ ಪ್ರತಿಯೊಂದು ರೀತಿಯ ಊರ್ಜೆಗನುಸಾರ ನೀರಿನಲ್ಲಿ ಬದಲಾವಣೆಯಾಗುತ್ತಾ ಇರುತ್ತದೆ ಹಾಗೂ ಆ ಬದಲಾವಣೆಗನುಸಾರ ಅದು ನಿಮ್ಮ ಶರೀರದ ಮೇಲೆ ಪರಿಣಾಮವನ್ನು ಬೀರುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ಶರೀರದಲ್ಲಿ ನೀರಿನ ಮೂಲಕ ಆಗುವ ಕಾರ್ಯ
ನೀರು ಪ್ರತಿಯೊಬ್ಬರ ಶರೀರದಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾರ್ಯ ಮಾಡುತ್ತದೆ. ನಮ್ಮ ಶರೀರದ ಸುಮಾರು ಶೇ. ೭೦ ರಿಂದ ೭೫ ರಷ್ಟು ಭಾಗ ನೀರಿನಿಂದ ಸಿದ್ಧವಾಗಿದೆ, ಅಂದರೆ ಶರೀರದ ಕಾರ್ಯ ಹೇಗೆ ನಡೆಯಬೇಕೆಂಬುದನ್ನು ಅದೇ ನಿರ್ಧರಿಸುತ್ತದೆ. ನೀರು ಕುಡಿಯುವಾಗ ನಿಮ್ಮ ವಿಚಾರ, ನೀರನ್ನು ನೋಡುವ ನಿಮ್ಮ ದೃಷ್ಟಿ, ನೀರನ್ನು ಕುಡಿಯುವಾಗ ನಿಮ್ಮ ಮನಸ್ಸಿನಲ್ಲಿ ಬರುವ ಭಾವನೆ ಅಥವಾ ನಿಮ್ಮ ಬಾಯಿಯಿಂದ ಹೊರಡುವ ಉಚ್ಚಾರ ಇತ್ಯಾದಿಗಳಿಂದ ನೀರಿನಲ್ಲಿ ಭಯಂಕರ ಪರಿಣಾಮವಾಗುತ್ತದೆ. ಅದನ್ನು ನಾವು ‘ಮೈಕ್ರೋಸ್ಕೋಪ್ನಿಂದ ನೋಡಬಹುದು. ನಿಮ್ಮ ಮಾನಸಿಕ ಸ್ಥಿತಿ ತೀವ್ರ ಸಕಾರಾತ್ಮಕವಾಗಿದ್ದರೆ ಮತ್ತು ಕೈಯಲ್ಲಿರುವ ನೀರಿನ ವಿಷಯದಲ್ಲಿ ಕೃತಜ್ಞರಾಗಿದ್ದರೆ, ಹೊಲಸಾದ ಅಥವಾ ಮಲಿನ ನೀರು ಕೂಡ ನಿಮಗೆ ಯಾವುದೇ ತರಹದ ಅಪಾಯವನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಮನಸ್ಸು ನಕಾರಾತ್ಮಕವಾಗಿದ್ದರೆ ಮತ್ತು ನೀವು ನೀರು ಕುಡಿಯುವಾಗ ನೀರಿನ ಬಗ್ಗೆ ನಿಶ್ಚಿಂತರಾಗಿದ್ದರೆ, ಅತ್ಯಂತ ಶುದ್ಧ ನೀರು ಕೂಡಾ ಭಯಂಕರ ಅಪಾಯಕಾರಿಯಾಗಬಹುದು.
ನೀರಿನ ‘ಕೋಶಗಳು ಮಾನವನ ಮೆದುಳಿನ ಹಾಗೆ ಕಾರ್ಯ ಮಾಡುತ್ತವೆ ?
ನೀರು ‘ಜೀವಂತವಾಗಿದ್ದು ಮಾನವನ ಮೆದುಳು ಹೇಗೆ ಕಾರ್ಯ ಮಾಡುತ್ತದೋ, ಅದೇ ರೀತಿ ನೀರು ಮತ್ತು ಅದರ ಕೋಶಗಳು ಕಾರ್ಯ ಮಾಡುತ್ತದೆ. ನೀರನ್ನು ಕೈಯಲ್ಲಿ ಹಿಡಿದು ಅಥವಾ ಸಮೀಪದಲ್ಲಿಟ್ಟು ಮನಸ್ಸಿನಲ್ಲಿ ಪ್ರೇಮಭಾವನೆಯನ್ನು ಪ್ರಕಟ ಮಾಡಿದರೆ, ಆ ನೀರಿನ ಕೋಶಗಳ ಅಥವಾ ಕಣಗಳ (ಮೊಲಿಕ್ಯೂಲ್) ಆಕಾರ ಸುಂದರವಾಗಿರುತ್ತದೆ ಹಾಗೂ ನೀರನ್ನು ಕೈಯಲ್ಲಿ ಹಿಡಿದು ಅಥವಾ ಸಮೀಪದಲ್ಲಿಟ್ಟುಕೊಂಡು ಕೋಪ ಅಥವಾ ದ್ವೇಷದಂತಹ ಭಾವನೆಯನ್ನು ಮನಸ್ಸಿನಲ್ಲಿ ಪ್ರಕಟಿಸಿದರೆ ಆ ನೀರಿನ ಕಣಗಳ ಆಕಾರ ತುಂಬಾ ವಿಚಿತ್ರ ಹಾಗೂ ಹರಕುಬುರುಕು ಆಗಿರುತ್ತದೆ. ನೀವು ನೀರು ಕುಡಿಯುವಾಗ ಹೇಗೆ ನೀರಿನೊಂದಿಗೆ ವರ್ತಿಸುವಿರೋ, ಆ ನೀರು ಅದನ್ನು ಹೆಚ್ಚು ಸಮಯದ ವರೆಗೆ ‘ಸ್ಮರಣೆಯಲ್ಲಿಡುತ್ತದೆ ಹಾಗೂ ಅದೇ ರೀತಿ ನಿಮ್ಮ ಶರೀರಕ್ಕೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ನೀಡುತ್ತದೆ.
‘ವಾಟರ್ ಥೆರಪಿ ಉದಯವಾಗುವುದು
ಇಂದು ನೀರನ್ನು ‘ಲಿಕ್ವಿಡ್ ಕಂಪ್ಯೂಟರ್ ಎಂದು ಕೂಡ ವಿಚಾರ ಮಾಡುತ್ತಿದ್ದು ಅದರಲ್ಲಿ ನೀರನ್ನು ‘ಸ್ಮರಣೆಯಲ್ಲಿಡುವುದು (ಮೆಮೋರಿ) ಈ ಗುಣಧರ್ಮವನ್ನು ಉಪಯೋಗಿಸಲಾಗುತ್ತದೆ. ಇಂದು ನೀರಿನ ಈ ಗುಣಧರ್ಮವನ್ನು ಉಪಯೋಗಿಸಿ ‘ನಿಮಗೆ ಏನೆಲ್ಲ ಒಳ್ಳೆಯ ಉದ್ದೇಶಗಳನ್ನು ಸಾಧಿಸಲಿಕ್ಕಿದೆಯೋ, ಅದಕ್ಕಾಗಿ ಕೈಯಲ್ಲಿ ನೀರಿನ ಲೋಟವನ್ನು ಹಿಡಿದುಕೊಂಡು ಮನಸ್ಸಿನಲ್ಲಿ ಆ ಉದ್ದೇಶಗಳನ್ನು ಸ್ಮರಿಸುತ್ತಾ ಆ ನೀರನ್ನು ಕುಡಿಯಬೇಕು ಇಂತಹ ವಿವಿಧ ‘ವಾಟರ್ ಥೆರಪಿಗಳು ಉದಯವಾಗುತ್ತಿವೆ. ಇವೆಲ್ಲ ವೈಜ್ಞಾನಿಕ ಮಾಹಿತಿಯಾಗಿದ್ದು ಯಾರಿಗೆ ಇನ್ನೂ ವಿಸ್ತಾರವಾದ ಮಾಹಿತಿ ಬೇಕಿದ್ದರೆ, ಅವರು ಇಂಟರ್‌ನೆಟ್‌ನಲ್ಲಿ ಡಾ. ಮಸಾರೂ ಇಮೋತೋ ಇವರ ನೀರಿನ ಬಗೆಗಿನ ಸಂಶೋಧನೆಯನ್ನು ಓದಬಹುದು.
ನೀರಿನ ದಿವ್ಯ ಹಾಗೂ ಶಕ್ತಿಶಾಲಿ ಕ್ಷಮತೆಯನ್ನು ತಿಳಿದುಕೊಳ್ಳಲು ಮಾಡಿದ ಪ್ರಯತ್ನ
ನೀರಿನ ಈ ದಿವ್ಯ ಹಾಗೂ ಶಕ್ತಿಶಾಲಿ ಕ್ಷಮತೆಯನ್ನು ಹಿಂದೂ ಧರ್ಮ ಮತ್ತು ಸಂಸ್ಕೃತಿಯೊಂದಿಗೆ ಹೊಂದಾಣಿಕೆ ಮಾಡುವ ಪ್ರಯತ್ನ ಮಾಡಿದೆನು. ಅದರಿಂದ ಏನೆಲ್ಲ ಲಭಿಸಿತೋ, ಅದರಿಂದ ನಾನು ಈ ಮುಂದಿನ ಕೃತಿಗಳನ್ನು ಕಳೆದ ೬ ತಿಂಗಳಿಂದ ಮಾಡುತ್ತಿದ್ದೇನೆ.
೧. ಕುಡಿಯುವ ನೀರನ್ನು ತಾಮ್ರದ ಪಾತ್ರೆಯಲ್ಲಿಯೇ ತುಂಬಿಸಿಡಬೇಕು ಮತ್ತು ಸಾಧ್ಯವಿದ್ದರೆ ತಾಮ್ರದ ಲೋಟದಿಂದಲೇ ಕುಡಿಯಬೇಕು; ಏಕೆಂದರೆ ತಾಮ್ರವು ಊರ್ಜೆಯ ‘ವಾಹಕವಾಗಿದೆ.
೨. ಪ್ರತಿದಿನ ರಾತ್ರಿ ಆ ಪಾತ್ರೆಗಳನ್ನು ಅರಿಶಿನ ಮತ್ತು ಹುಣಸೆ ಹಣ್ಣಿನಿಂದ ಉಜ್ಜಿ ತೊಳೆಯಬೇಕು.
೩. ಅನಂತರ ಅದರ ಮೇಲೆ ಹತ್ತಿಯ ಬಟ್ಟೆಯನ್ನು ಸುತ್ತಿ ಅದರಿಂದ ನೀರನ್ನು ಗಾಳಿಸಿ ತುಂಬಿಸಬೇಕು.
೪. ಅನಂತರ ಈ ನೀರಿನ ಪಾತ್ರೆಯ ಪಕ್ಕದಲ್ಲಿ ಒಂದು ದೀಪವನ್ನು ಹಚ್ಚಿ ಪಾತ್ರೆಯ ಮೇಲೆ ಒಂದು ಹೂವನ್ನಿಡಬೇಕು ಮತ್ತು ಅತ್ಯಂತ ಕೃತಜ್ಞತಾಭಾವದಿಂದ ಕೈಜೋಡಿಸಿ ಮನಸ್ಸಿನಲ್ಲಿ ‘ನಮಗೆ ಆರೋಗ್ಯ ಭಾಗ್ಯ ಮತ್ತು ಜೀವನವನ್ನು ನೀಡಿದ್ದಕ್ಕಾಗಿ ಕೃತಜ್ಞರಾಗಿದ್ದೇವೆ, ಎಂದು ಅಥವಾ ಇಂತಹ ಯಾವುದೇ ಪ್ರಾರ್ಥನೆಯನ್ನು ಶುದ್ಧ ಮನಸ್ಸಿನಿಂದ ಮಾಡಬಹುದು.
೫. ಬೆಳಗ್ಗೆ ಎದ್ದ ತಕ್ಷಣ ಈ ಪಾತ್ರೆಯ ನೀರನ್ನು ಕುಡಿದು ದಿನವನ್ನು ಪ್ರಾರಂಭಿಸಬೇಕು.
೬. ನೀರು ಕುಡಿಯುವ ಯೋಗ್ಯವಾದ ಪದ್ಧತಿಯೆಂದರೆ ಬೊಗಸೆಯಲ್ಲಿ ನೀರು ಕುಡಿಯುವುದು; ಆದರೆ ನಮಗೆ ಅದು ಸಾಧ್ಯವಿಲ್ಲ. ಆದ್ದರಿಂದ ಯಾವ ಲೋಟದಿಂದ ನೀರು ಕುಡಿಯುವಿರೋ, ಆ ಲೋಟವನ್ನು ಎರಡೂ ಕೈಯಿಂದ ಹಿಡಿದು ನೀರು ಕುಡಿಯಬೇಕು.
೭. ನೀರನ್ನು ಕುಡಿಯುವಾಗ ಕೆಲವೇ ಸೆಕೆಂಡ್ ನೀರಿನ ಲೋಟವನ್ನು ಎರಡೂ ಕೈಯಲ್ಲಿ ಹಿಡಿದು ಮನಸ್ಸಿನಲ್ಲಿ ಒಳ್ಳೆಯ ವಿಚಾರವನ್ನು ಸ್ಮರಣೆ ಮಾಡಿ ನೀರನ್ನು ಕುಡಿಯಬೇಕು.
೮. ನಾವು ಹೋದಲ್ಲಿ ಎಲ್ಲಿಯಾದರೂ ನೀರು ಕುಡಿಯುವಾಗ ಈ ಮೇಲಿನ ಕೃತಿಯ ಅವಧಿಯನ್ನು ಸ್ವಲ್ಪ ಹೆಚ್ಚಿಸಬೇಕು.
೯. ಕೇವಲ ಬಾಯಾರಿಕೆಯಾದಾಗ ನೀರು ಕುಡಿಯಬೇಕು. ಅನಾವಶ್ಯಕ ನೀರು ಕುಡಿಯುತ್ತಾ ಇರಬಾರದು.
೧೦. ಆಹಾರದಲ್ಲಿ ನೀರಿನ ಪ್ರಮಾಣ ಹೆಚ್ಚು (ಶೇ. ೮೦-೯೦ ರಷ್ಟು) ಇರುವ ಹಣ್ಣುಗಳಿರಬೇಕು.
ಯೋಗ್ಯ ಪದ್ಧತಿಯಲ್ಲಿ ನೀರು ಕುಡಿಯುವುದರಿಂದ ಆಗುವ ಲಾಭಗಳು
ಈ ಮೇಲಿನಂತೆ ನೀರು ಕುಡಿಯುವುದರಿಂದ ಮತ್ತು ೬ ತಿಂಗಳು ಸತತ ಪ್ರಯತ್ನಿಸಿದುದರಿಂದ ನನಗಾದ ಲಾಭಗಳು ಈ ಮುಂದಿನಂತಿವೆ.
ಅ. ನನ್ನ ಮಗಳು ನಿರಂತರ ಕಾಯಿಲೆಗೆ ತುತ್ತಾಗುತ್ತಿದ್ದಳು ಹಾಗೂ ಅವಳಿಗೆ ಪ್ರತಿ ತಿಂಗಳು ‘ಆಂಟೀಬಯೋಟಿಕ್ಸ್ ಕೊಡಬೇಕಾಗುತ್ತಿತ್ತು, ಅದು ಪೂರ್ಣ ನಿಂತಿತು.
ಆ. ನನ್ನ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ತುಂಬಾ ಹದಗೆಟ್ಟಿತ್ತು, ಅದು ಸುಧಾರಣೆಯಾಯಿತು.
ಇ. ನನ್ನ ಮನೆಯಲ್ಲಿ ಕೆಲವರಿಗೆ ಪಿತ್ತದ ತೊಂದರೆಯಿತ್ತು, ಅದು ಹೆಚ್ಚಿನಂಶ ನಿವಾರಣೆಯಾಯಿತು.
ಈ. ಬೆಳಗ್ಗೆ ಮನೆಯ ವಾತಾವರಣ ತುಂಬಾ ಚೆನ್ನಾಗಿದ್ದು ನಗು ನಗುತ್ತಾ ಉತ್ಸಾಹಭರಿತವಾಗಿರುತ್ತದೆ.
ಉ. ಒಟ್ಟಾರೆ ಅಡುಗೆ ಮನೆಯನ್ನು ಮತ್ತು ನೀರನ್ನು ನೋಡುವ ನನ್ನ ದೃಷ್ಟಿಕೋನವು ಬದಲಾಗಿದೆ.
ಊ. ಎಂದಾದರೂ ಒಮ್ಮೆ ದೀಪ ಹಚ್ಚಲು ಮರೆತರೆ ಅದು ನೀರಿನ ಸ್ವಾದದಿಂದಲೇ ಅರಿವಾಗುತ್ತದೆ.
ಎ. ನಾನು ನನ್ನ ಮಗಳಿಗೂ ಇದನ್ನು ಅಭ್ಯಾಸ ಮಾಡಿಸಿದ್ದೇನೆ. ಅವಳು ಅದನ್ನು ಮಾಡಲು ಇಷ್ಟಪಡುತ್ತಾಳೆ.
ನೀರಿನ ವಿಷಯದಲ್ಲಿ ಮಾಡಿದ ಪ್ರಯೋಗವು ವೈಜ್ಞಾನಿಕ ಹಾಗೂ ತಾರ್ಕಿಕ ಪದ್ಧತಿಯಿಂದ ಸಿದ್ಧವಾಗಿದೆ. ಈ ಪದ್ಧತಿಯಿಂದ ನೀರು ಕುಡಿಯಲು ಆರಂಭಿಸಿದರೆ ಶಾಶ್ವತವಾಗಿ ಆರೋಗ್ಯವನ್ನು ಕಾಪಾಡಬಹುದು. ಈ ಲೇಖನವನ್ನು ಮೌಢ್ಯತೆಯೆಂದು ತಿಳಿಯುವ ಪ್ರಶ್ನೆಯೇ ಇಲ್ಲ; ಏಕೆಂದರೆ ಇವೆಲ್ಲ ವಿಷಯಗಳು ವೈಜ್ಞಾನಿಕ ಹಾಗೂ ತಾರ್ಕಿಕ ಪದ್ಧತಿಯಲ್ಲಿ ಸಿದ್ಧವಾಗಿದೆ. ನಮ್ಮ ತೀರ್ಥಕ್ಷೇತ್ರಗಳು ಅಥವಾ ನದಿಗಳ ಕುಂಡ ಅಥವಾ ದೇವಸ್ಥಾನಗಳಲ್ಲಿ ಕೊಡುವ ತೀರ್ಥ ಅಥವಾ ಊಟದ ಮೊದಲು ಮತ್ತು ನಂತರ ಮಾಡುವ ಆಚಮನ ಇತ್ಯಾದಿ ಎಲ್ಲವೂ ಹಿಂದೂ ಸಂಸ್ಕೃತಿಯು ಪುರಾತನ ಕಾಲದಿಂದಲೂ ನೀರಿನ ಮಿತಿಮೀರಿದ ಹಾಗೂ ಜೀವಂತ ಶಕ್ತಿಯ ಅಭ್ಯಾಸದಿಂದಲೇ ನೀರಿನ ಮಹತ್ವವನ್ನು ಮತ್ತು ಲಾಭವನ್ನು ನಮಗೆ ತಲುಪಿಸಲು ಸಿದ್ಧಪಡಿಸಿದ ಕೃತಿಯಾಗಿದೆ. ಇದನ್ನು ಗಮನದಲ್ಲಿಡುವುದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಅಡುಗೆಮನೆಯದ್ದು ಮಾತ್ರವಲ್ಲ, ಜೀವನದಲ್ಲಿ ಯಾವುದೇ ಕೆಲಸವೂ ನೀರಿನ ಹೊರತು ಆಗಲು ಸಾಧ್ಯವಿಲ್ಲ. ಆದ್ದರಿಂದ ಇಂದಿನಿಂದಲೇ ನೀರಿನ ಶಕ್ತಿಯನ್ನು ತಿಳಿದುಕೊಂಡು ಅದರ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸೋಣ.
– ಡಾ. ಗೌರಿ ಕೈವಲ್ಯ ಗಾಯಕವಾಡ, ಬಾರ್ಶಿ, ಸೋಲಾಪುರ.