‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
ತಮ್ಮ ಸುತ್ತಲೂ ನಿರ್ಮಾಣವಾಗುವ ತೊಂದರೆದಾಯಕ ಸ್ಪಂದನಗಳ ಆವರಣವನ್ನು ನಾಶ ಮಾಡಲು ಪ್ರತಿದಿನ ದೃಷ್ಟಿಯನ್ನು ತೆಗೆಯಿರಿ !
‘ಸನಾತನದ ಸಾಧಕರು ಸಮಷ್ಟಿ ಸಾಧನೆಯನ್ನು ಮಾಡಿ ‘ಈಶ್ವರೀ ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ತದ್ವಿರುದ್ಧ ಕೆಟ್ಟ ಶಕ್ತಿಗಳು ‘ಆಸುರಿ ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಆದುದರಿಂದ ಕೆಟ್ಟ ಶಕ್ತಿಗಳು ಸಾಧಕರಿಗೆ ದೊಡ್ಡ ಪ್ರಮಾಣದಲ್ಲಿ ಮತ್ತು ವಿವಿಧ ರೀತಿಯಲ್ಲಿ ತೊಂದರೆಗಳನ್ನು ಕೊಡುತ್ತಿವೆ. ದೃಷ್ಟಿ ತಗಲುವುದು ಸಹ ಕೆಟ್ಟ ಶಕ್ತಿಗಳ ತೊಂದರೆಯ ಒಂದು ವಿಧವಾಗಿದೆ. ಕೆಟ್ಟ ಶಕ್ತಿಗಳ ತೊಂದರೆಗಳಿಂದ ಸಾಧಕರು ವಿವಿಧ ರೀತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕಳೆದ ೨೦ ವರ್ಷಗಳಿಂದ ನಡೆದಿರುವ ಈ ದೇವಾಸುರರ ಯುದ್ಧವು ಈಗ ಅಂತಿಮ ಹಂತವನ್ನು ತಲುಪಿದೆ. ಇದರಿಂದ ಸಾಧಕರಿಗಾಗುವ ತೊಂದರೆಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಧಕರಿಗಾಗುವ ತೊಂದರೆಗಳು ಕಡಿಮೆಯಾಗಬೇಕೆಂದು ಉಪ್ಪು-ಸಾಸಿವೆಯಿಂದ ಅವರ ದೃಷ್ಟಿಯನ್ನು ತೆಗೆಯಲಾಯಿತು. ‘ದೃಷ್ಟಿಯನ್ನು ತೆಗೆದ ನಂತರ ಅದರ ಪರಿಣಾಮ ವ್ಯಕ್ತಿಯ ಮೇಲೆ ಎಷ್ಟು ಸಮಯದವರೆಗೆ ಅಥವಾ ದಿನಗಳವರೆಗೆ ಉಳಿಯುತ್ತದೆ ?, ಎಂಬುದರ ವೈಜ್ಞಾನಿಕ ಅಧ್ಯಯನಕ್ಕಾಗಿ ಗೋವಾದ ರಾಮನಾಥಿಯಲ್ಲಿ ಸನಾತನದ ಆಶ್ರಮದಲ್ಲಿ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಎಂಬ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ೧.೮.೨೦೨೦ ರಂದು ತೀವ್ರ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ)ಯಿರುವ ಸಾಧಕಿಯ ದೃಷ್ಟಿಯನ್ನು ಒಟ್ಟು ೩ ಸಲ ಉಪ್ಪು-ಸಿವೆಯಿಂದ ತೆಗೆಯಲಾಯಿತು. ಮೂರನೇಯ ಬಾರಿ ದೃಷ್ಟಿಯನ್ನು ತೆಗೆದ ಬಳಿಕ ಅವಳ ತೊಂದರೆ ದಾಯಕ ಸ್ಪಂದನಗಳು ಸಂಪೂರ್ಣ ಇಲ್ಲವಾದವು. ‘ದೃಷ್ಟಿ ತೆಗೆದ ನಂತರ ಅದರ ಪರಿಣಾಮ ಅವಳ ಮೇಲೆ ಎಷ್ಟು ದಿನಗಳವರೆಗೆ ಉಳಿಯುತ್ತದೆ ?, ಎಂಬುದನ್ನು ಅಧ್ಯಯನ ಮಾಡಲು ಮರುದಿನದಿಂದ (೨.೮.೨೦೨೦ ರಿಂದ) ೨೩.೮.೨೦೨೦ ರ ವರೆಗೆ ಪ್ರತಿದಿನ ಅವಳ ನಿರೀಕ್ಷಣೆಯನ್ನು ಮಾಡಲಾಯಿತು. (೨.೮.೨೦೨೦ ರಿಂದ ೨೩.೮.೨೦೨೦ ಈ ಕಾಲಾವಧಿಯಲ್ಲಿ ಸಾಧಕಿಯ ದೃಷ್ಟಿಯನ್ನು ತೆಗೆಯಲಿಲ್ಲ)
ಟಿಪ್ಪಣಿ : ಸ್ಥಳದ ಅಭಾವದಿಂದ ಮುಂದಿನ ಕೋಷ್ಟಕದಲ್ಲಿ ಎಲ್ಲ ದಿನಗಳ ನಿರೀಕ್ಷಣೆಗಳನ್ನು ಕೊಡದೇ ಆಯ್ದ ಕೆಲವು ದಿನಗಳ ನಿರೀಕ್ಷಣೆಗಳನ್ನು ಮಾತ್ರ ಕೊಡಲಾಗಿದೆ.
ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧. ೧.೮.೨೦೨೦ ರಂದು ಮೂರನೇ ಸಲ ಸಾಧಕಿಯ ದೃಷ್ಟಿಯನ್ನು ತೆಗೆದ ನಂತರ ಅವಳಲ್ಲಿ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ರೀತಿಯ ನಕಾರಾತ್ಮಕ ಊರ್ಜೆಗಳು ಸಂಪೂರ್ಣ ಇಲ್ಲವಾದವು ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ವೃದ್ಧಿಯಾಯಿತು.
೨. ತದನಂತರ ಮರುದಿನದಿಂದ (೨.೮.೨೦೨೦ ರಿಂದ) ಅವಳಲ್ಲಿ ‘ಇನ್‌ಫ್ರಾರೆಡ್ ನಕಾರಾತ್ಮಕ ಊರ್ಜೆ ನಿರ್ಮಾಣವಾಗಿ, ಹಂತಹಂತವಾಗಿ ಅದರಲ್ಲಿ ಪ್ರತಿದಿನ ವೃದ್ಧಿಯಾಗುತ್ತಾ ಹೋಯಿತು. ೨೧.೮.೨೦೨೦ ರಂದು ಅದು ೮.೩೫ ಮೀಟರ್‌ಗಳಷ್ಟಾಯಿತು.
೩. ಮೂರನೇಯ ದಿನದಿಂದ (೩.೮.೨೦೨೦ ರಿಂದ) ಅವಳಲ್ಲಿ ‘ಅಲ್ಟ್ರಾವೈಲೆಟ್ ನಕಾರಾತ್ಮಕ ಊರ್ಜೆ ನಿರ್ಮಾಣವಾಗಿ ಹಂತಹಂತವಾಗಿ ಅದರಲ್ಲಿ ಪ್ರತಿದಿನ ಹೆಚ್ಚಳವಾಗುತ್ತಾ ಹೋಯಿತು. ೨೧.೮.೨೦೨೦ ರಂದು ಅದು ೭.೫೪ ಮೀಟರುಗಳಷ್ಟಾಯಿತು.
ಒಟ್ಟಾರೆ ೨೧ ದಿನಗಳ ನಂತರ (೨೧.೮.೨೦೨೦ ರಂದು) ಸಾಧಕಿಯಲ್ಲಿ ನಕಾರಾತ್ಮಕ ಊರ್ಜೆಗಳ ಪ್ರಮಾಣ ಮೊದಲ ದಿನ (೧.೮.೨೦೨೦ ರಂದು) ದೃಷ್ಟಿ ತೆಗೆಯುವ ಮೊದಲು ಎಷ್ಟು ಇತ್ತೋ, ಸರಿಸುಮಾರು ಅಷ್ಟೇ ಆಗಿರುವುದು ಕಂಡು ಬಂದಿತು. ತದನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆ ವೃದ್ಧಿಯಾಗದ ಕಾರಣ ಅವಳ ನಿರೀಕ್ಷಣೆ ಮಾಡುವುದನ್ನು ನಿಲ್ಲಿಸಲಾಯಿತು.
೨. ನಿಷ್ಕರ್ಷ
ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯ ದೃಷ್ಟಿಯನ್ನು ತೆಗೆದ ಪರಿಣಾಮ ಕೇವಲ ಒಂದು ದಿನ ಮಾತ್ರ ಉಳಿಯಿತು. ಮರುದಿನದಿಂದ ಅವಳಲ್ಲಿ ಪುನಃ ನಕಾರಾತ್ಮಕ ಊರ್ಜೆ ನಿರ್ಮಾಣವಾಗಿ ದಿನಕಳೆದಂತೆ ಅದು ಹೆಚ್ಚಾತ್ತಾ ಹೋಯಿತು ಮತ್ತು ೨೧ ನೇ ದಿನದಂದು ಅದು ಅತ್ಯಧಿಕವಿತ್ತು.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ದೃಷ್ಟಿಯನ್ನು ತೆಗೆದಾಗ ವ್ಯಕ್ತಿಯ ಸ್ಥೂಲ ದೇಹ, ಮನೋದೇಹ ಮತ್ತು ಸೂಕ್ಷ್ಮ ದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣವು (ತೊಂದರೆದಾಯಕ ಸ್ಪಂದನಗಳು) ದೂರವಾಗುವುದು : ವ್ಯಕ್ತಿಗೆ ದೃಷ್ಟಿ ತಗಲುವುದರಿಂದ ಅವನ ಸುತ್ತಲೂ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ನಿರ್ಮಾಣವಾಗುತ್ತದೆ. ಇದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಅನಿಷ್ಟ ಪರಿಣಾಮವಾಗುತ್ತದೆ. ಯಾವಾಗ ವ್ಯಕ್ತಿಯ ಸ್ಥೂಲದೇಹವು ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆಯೋ, ಆಗ ಆ ವ್ಯಕ್ತಿಯು ಶಾರೀರಿಕ ರೋಗಗಳಿಂದ ಬಳಲುತ್ತಾನೆ. ಶಾರೀರಿಕ ರೋಗಗಳಲ್ಲಿ ತೀವ್ರ ತಲೆನೋವು, ಕಿವಿಗಳು ನೋವು, ಕಣ್ಣುಗಳು ನೋವು ಕಣ್ಣುಗಳ ಮುಂದೆ ಕತ್ತಲೆ ಬರುವುದು, ಕೈ-ಕಾಲುಗಳ ಜುಮ್ಮುಗಟ್ಟುವುದು, ಎದೆ ಬಡಿತ ಹೆಚ್ಚಾಗುವುದು, ಕೈ-ಕಾಲುಗಳು ತಣ್ಣಗಾಗಿ ಬಲಹೀನವಾಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ದೃಷ್ಟಿಯನ್ನು ತೆಗೆದಾಗ ವ್ಯಕ್ತಿಯ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣ ದೂರವಾಗುತ್ತದೆ. ಇದರಿಂದ ವ್ಯಕ್ತಿಗಾಗುವ ತೊಂದರೆಗಳು ಕಡಿಮೆಯಾಗುತ್ತವೆ ಅಥವಾ ಇಲ್ಲವಾಗುತ್ತವೆ.
೩ ಆ. ಉಪ್ಪು-ಸಾಸಿವೆಯಿಂದ ದೃಷ್ಟಿಯನ್ನು ತೆಗೆಯುವುದರ ಮಹತ್ವ : ಉಪ್ಪು ಮತ್ತು ಸಾಸಿವೆಯಿಂದ ದೃಷ್ಟಿಯನ್ನು ತೆಗೆದಾಗ ಸ್ಥೂಲ ದೇಹದ ಮೇಲಿನ ರಜ-ತಮಾತ್ಮಕ ಆವರಣವು (ತೊಂದರೆದಾಯಕ ಸ್ಪಂದನಗಳು) ಉಪ್ಪಿನ ಸಹಾಯದಿಂದ ಸೆಳೆಯಲ್ಪಟ್ಟು, ಅವು ಸಾಸಿವೆಯಲ್ಲಿ ವೇಗವಾದ ಲಹರಿಗಳ ಸಹಾಯದಿಂದ ಘನೀಕೃತವಾಗಿ ಬಳಿಕ ಅಗ್ನಿಯ ಸಹಾಯದಿಂದ ಸುಟ್ಟು ನಾಶವಾಗುತ್ತವೆ. ಇದರಿಂದ ವ್ಯಕ್ತಿಗಾಗುತ್ತಿದ್ದ ತೊಂದರೆಗಳು ಕಡಿಮೆಯಾಗುತ್ತವೆ ಅಥವಾ ಇಲ್ಲವಾಗುತ್ತವೆ.
೩ ಇ. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯಲ್ಲಿ ಎರಡನೇಯ ದಿನದಿಂದ ನಕಾರಾತ್ಮಕ ಊರ್ಜೆ ನಿರ್ಮಾಣವಾಗಿ, ಅದು ಮುಂದಿನ ದಿನಗಳಲ್ಲಿ ವೃದ್ಧಿಯಾಗುತ್ತಾ ಹೋಗುವುದರ ಕಾರಣಗಳು : ೧.೮.೨೦೨೦ ರಂದು ಸಾಧಕಿಯ ಮೂರನೇಯ ಸಲ ದೃಷ್ಟಿಯನ್ನು ತೆಗೆದ ಬಳಿಕ ಅವಳಲ್ಲಿನ ನಕಾರಾತ್ಮಕ ಊರ್ಜೆ ಸಂಪೂರ್ಣ ಇಲ್ಲವಾಗಿತ್ತು. ಮರುದಿನ ಅವಳಲ್ಲಿ ಪುನಃ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಮತ್ತು ಅದು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತ ಹೋಯಿತು. ಇದರ ಕಾರಣವೆಂದರೆ, ದೇವಾಸುರರ ಯುದ್ಧ ಈಗ ಅಂತಿಮ ಹಂತಕ್ಕೆ ತಲುಪಿದೆ. ಇದರಿಂದ ಕೆಟ್ಟ ಶಕ್ತಿಗಳು ಅತ್ಯಧಿಕ ಕ್ರೋಧದಿಂದ ಸಾಧಕರ ಮೇಲೆ ಆಕ್ರಮಣಗಳನ್ನು ಮಾಡುತ್ತಿವೆ. ಇದರ ಪರಿಣಾಮದಿಂದ ಸಾಧಕರ ಮೇಲೆ ಪುನಃ ಪುನಃ ತೊಂದರೆದಾಯಕ ಸ್ಪಂದನಗಳ ಆವರಣ ಬರುತ್ತಿದ್ದು ಅದು ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಆದುದರಿಂದ ಸಾಧಕರ ದೃಷ್ಟಿಯನ್ನು ತೆಗೆದ ಬಳಿಕ ಅವರ ಸುತ್ತಲಿನ ತೊಂದರೆದಾಯಕ ಸ್ಪಂದನಗಳು ಬಹಳಷ್ಟು ಕಡಿಮೆ ಅಥವಾ ಇಲ್ಲವಾದರೂ, ದೃಷ್ಟಿ ತೆಗೆದ ಪರಿಣಾಮವು ಅವರ ಮೇಲೆ ಒಂದು ದಿನವೇ ಉಳಿಯುತ್ತದೆ ಎಂಬುದು ಪರೀಕ್ಷಣೆಯ ನಿರೀಕ್ಷಣೆಯಿಂದ ಸ್ಪಷ್ಟವಾಗುತ್ತದೆ. (ಇದೇ ರೀತಿಯ ಪರಿಣಾಮವು ಇತರ ಸಾಧಕರ ದೃಷ್ಟಿ ತೆಗೆದ ಬಳಿಕ ಪ್ರತಿದಿನ ಮಾಡಿದ ನಿರೀಕ್ಷಣೆಯಿಂದ ಗಮನಕ್ಕೆ ಬಂದಿದೆ)
೩ ಈ. ತಮ್ಮ ಸುತ್ತಲೂ ನಿರ್ಮಾಣವಾಗುವ ತೊಂದರೆದಾಯಕ ಸ್ಪಂದನಗಳ ಆವರಣವನ್ನು ನಾಶ ಮಾಡಲು ಪ್ರತಿದಿನ ದೃಷ್ಟಿಯನ್ನು ತೆಗೆಯಿರಿ : ದೃಷ್ಟಿ ತೆಗೆಯುವ ಉಪಾಯ ಪರಿಣಾಮಕಾರಿಯಾಗಿದೆ. ಸದ್ಯಕ್ಕೆ ಸಾಧಕರಿಗಾಗುತ್ತಿರುವ ತೊಂದರೆಗಳ ತೀವ್ರತೆಯನ್ನು ಗಮನಿಸಿದರೆ, ಪ್ರತಿದಿನ ಅವರ ದೃಷ್ಟಿ ತೆಗೆಯುವುದು ಆವಶ್ಯಕವಾಗಿದೆ. ಇದರಿಂದ ಅವರಲ್ಲಿನ ತೊಂದರೆದಾಯಕ ಸ್ಪಂದನಗಳು ಕಡಿಮೆಯಾಗಿ ಅಥವಾ ಇಲ್ಲವಾಗಿ ಅವರ ತೊಂದರೆಗಳು ಕಡಿಮೆಯಾಗುವವು. ಕೆಲವು ಅನಿವಾರ್ಯ ಕಾರಣಗಳಿಂದ ಯಾವುದಾದರೊಂದು ದಿನ ದೃಷ್ಟಿಯನ್ನು ತೆಗೆಯಲು ಸಾಧ್ಯವಾಗದಿದ್ದರೆ, ಆಗ ಕಡಿಮೆಪಕ್ಷ ‘ಮಾನಸ ದೃಷ್ಟಿಯನ್ನಾದರೂ (ಟಿಪ್ಪಣಿ)ತೆಗೆಯಿರಿ.
ಟಿಪ್ಪಣೆ – ಮಾನಸ ದೃಷ್ಟಿ : ಸಾಮಾನ್ಯವಾಗಿ ದೃಷ್ಟಿಯನ್ನು ತೆಗೆಯುವಾಗ ಸ್ಥೂಲದಲ್ಲಿ ಕೃತಿಗಳನ್ನು ಮಾಡಬೇಕಾಗುತ್ತದೆ, ಮಾನಸ ದೃಷ್ಟಿಯಲ್ಲಿ ಮನಸ್ಸಿನಲ್ಲಿ ಆಯಾ ಕೃತಿಗಳ ಸ್ಮರಣೆಯನ್ನು ಮಾಡುವುದಿರುತ್ತದೆ. ‘ಮಾನಸ ದೃಷ್ಟಿಯ ಸಂದರ್ಭದ ಸವಿಸ್ತಾರವಾದ ಮಾಹಿತಿಯನ್ನು ಸನಾತನದ ಗ್ರಂಥ ‘ನಿವಾಳಿಸುವುದು ಮತ್ತು ಮಾನಸ ದೃಷ್ಟಿ ಇದರಲ್ಲಿ ಕೊಡಲಾಗಿದೆ.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ(೨೨.೧೧.೨೦೨೦)