‘ಹಿಂದೂ ರಾಷ್ಟ್ರದ ಸ್ಥಾಪನೆ ಎಂಬ ‘ಸನಾತನ ಪ್ರಭಾತದ ಧ್ಯೇಯವಾಕ್ಯವನ್ನು ಸಾರ್ಥಕಗೊಳಿಸಿ !
‘ಸಾಪ್ತಾಹಿಕ ‘ಸನಾತನ ಪ್ರಭಾತ’ದ ತಪಶ್ಚರ್ಯೆಯು ೨೨ ವರ್ಷಗಳನ್ನು ಪೂರೈಸಿದೆ. ಸಂತರು ನೀಡಿದ ಆಶೀರ್ವಾದದಿಂದಾಗಿ ಮತ್ತು ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸಾಧಕರು ಮಾಡಿದ ಅಪಾರ ತ್ಯಾಗದಿಂದ ಸನಾತನ ಪ್ರಭಾತ’ವು ಅವ್ಯಾಹತವಾಗಿ ಹಿಂದೂ ಸಮಾಜದಲ್ಲಿ ಜಾಗೃತಿಮಾಡುತ್ತಿದೆ. ಈ ಕುರಿತು ಅದೆಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಇದೆ.
‘ಹಿಂದೂ ರಾಷ್ಟ್ರದ ಸ್ಥಾಪನೆ ಎಂಬುದು ‘ಸನಾತನ ಪ್ರಭಾತದ ಧ್ಯೇಯವಾಕ್ಯವಿದೆ. ಅದು ಕೇವಲ ಶೋಭೆಗಾಗಿ ಇಲ್ಲ, ಬದಲಾಗಿ ಅದು ಆಚರಣೆಯಲ್ಲಿ ತರುವುದಕ್ಕಾಗಿ ಇದೆ. ‘ಸನಾತನ ಪ್ರಭಾತದ ವಾಚಕರೆಂದರೆ ಹಿಂದೂ ರಾಷ್ಟ್ರದ ವೈಚಾರಿಕ ಶಕ್ತಿಯಾಗಿದ್ದಾರೆ. ಈ ಶಕ್ತಿಯು ಈಗ ಸಕ್ರಿಯವಾಗುವುದು ಕಾಲಾನುಸಾರ ಅಗತ್ಯವಿದೆ. ‘ಸನಾತನ ಪ್ರಭಾತವು ಹಿಂದೂಗಳಿಗೆ ಮುಂಬರಲಿರುವ ಆಪತ್ಕಾಲದ ಬಗ್ಗೆ ಆಯಾ ಸಮಯಕ್ಕೆ ಕಲ್ಪನೆಯನ್ನು ನೀಡಿತ್ತು. ಇಂದು ಮಹಾಮಾರಿ, ಹಾಗೆಯೇ ಅಂತರ್ಗತ ಮತ್ತು ಬಾಹ್ಯ ಯುದ್ಧಜನ್ಯ ಪರಿಸ್ಥಿತಿಯನ್ನು ನೋಡಿದರೆ, ‘ಸನಾತನವು ಹೇಳುತ್ತಿದ್ದ ಕೆಟ್ಟ ಕಾಲ ಇದೇ ಆಗಿದೆ, ಎಂಬುದನ್ನು ಎಲ್ಲರೂ ಗಮನದಲ್ಲಿಡಬೇಕು. ಆದರೆ ಕೆಟ್ಟದರಲ್ಲೂ ಒಳ್ಳೆಯದೇ ಸಂಭವಿಸುತ್ತದೆ. ಅದರಂತೆ ಈ ಮೂಲಕವೇ ಮುಂದೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ, ಎಂಬುದು ಖಚಿತ.
‘ಎಲ್ಲರಿಗೂ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕಾಗಿ ತಮ್ಮ ಕ್ಷಮತೆಗನುಸಾರ ಯೋಗದಾನ ನೀಡುವ ಮತ್ತು ‘ಸನಾತನ ಪ್ರಭಾತದ ಧ್ಯೇಯವಾಕ್ಯವನ್ನು ಸಾರ್ಥಕಗೊಳಿಸುವ ಸದ್‌ಬುದ್ಧಿ ಸಿಗಲಿ, ಎಂದು ನಾನು ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ.
– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ ನಿಯತಕಾಲಿಕೆ