೨೫ ವರ್ಷಗಳಿಂದ ವಿವಿಧ ಚಳುವಳಿಗಳ ಮೂಲಕ ಸಮಾಜಜಾಗೃತಿಯ ‘ಸನಾತನ ಪ್ರಭಾತ’ ಈಶ್ವರನಿರ್ಮಿತ ಆಗಿರುವುದರಿಂದ ಭವಿಷ್ಯದಲ್ಲಿಯೂ ಪ್ರಜ್ವಲಿಸುತ್ತಲೇ ಇರುವುದು !

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ನಿರ್ಮಿಸಿದ ಯಜ್ಞಕರ್ಮದಲ್ಲಿ ಸಾಧಕರಾದ ನಮಗೆಲ್ಲರಿಗೆ ‘ಸನಾತನ ಪ್ರಭಾತ’ದ ಮೂಲಕ ಸೇವೆಯನ್ನು ಮಾಡುವ ಅವಕಾಶ ಸಿಗುತ್ತಿದೆ. ಗುರುದೇವರು ಇದರಿಂದ ಅನೇಕ ಜೀವಗಳಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಅದೇ ರೀತಿ ಅವರ ಕೃಪೆಯಿಂದ ಸಮಾಜ ಜಾಗೃತವಾಗುತ್ತಿದೆ ಮತ್ತು ‘ಸನಾತನ ಪ್ರಭಾತ’ದ ವಾಚಕರು ಕೃತಿಶೀಲರಾಗುತ್ತಿದ್ದಾರೆ. ಅವರು ಕೂಡ ಸಾಧನೆಯನ್ನು ಆರಂಭಿಸಿದ್ದು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯರಾಗುತ್ತಿದ್ದಾರೆ. ಅದಕ್ಕಾಗಿ ನಾನು ಗುರುದೇವರ ಸುಕೋಮಲ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞಳಾಗಿದ್ದೇನೆ. ‘ಅವರು ಇವರೆಲ್ಲರಿಂದ ಮುಂದೆ ಕೂಡ ಹೀಗೆಯೆ ಸಾಧನೆ ಮಾಡಿಸಿಕೊಳ್ಳಬೇಕೆಂದು’, ನಾನು ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’

೧. ‘ಸಾಪ್ತಾಹಿಕ ಸನಾತನ ಪ್ರಭಾತ’ದ ಉದ್ದೇಶ

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಪ್ರಾಮುಖ್ಯವಾಗಿ ಸಮಾಜ ಸಹಾಯ, ರಾಷ್ಟ್ರರಕ್ಷಣೆ ಹಾಗೂ ಸಮಾಜದಲ್ಲಿ ಧರ್ಮಜಾಗೃತಿಯಾಗಬೇಕೆಂದು ‘ಸಾಪ್ತಾಹಿಕ ಸನಾತನ ಪ್ರಭಾತ’ ವನ್ನು ಆರಂಭಿಸಿದರು. ಆರಂಭದ ಕಾಲದಲ್ಲಿ ‘ಸಾಪ್ತಾಹಿಕ ಸನಾತನ ಪ್ರಭಾತ’ದಲ್ಲಿ ಅಧ್ಯಾತ್ಮದ ಬಗ್ಗೆ ಮಾರ್ಗದರ್ಶನ ಮತ್ತು ಸಾಧನೆಯ ಮಹತ್ವ ಈ ವಿಷಯಗಳ ಬಗ್ಗೆ ಗಮನ ಹರಿಸಿದ್ದರು. ಅದರಲ್ಲಿ ನಾಮಜಪದ ಮಹತ್ವ, ನಾಮಜಪ ಹೇಗೆ ಮಾಡಬೇಕು ?,

ಸತ್ಸಂಗದ ಮಹತ್ವ, ಹಬ್ಬ ಹಾಗೂ ಉತ್ಸವಗಳ ಮಹತ್ವ ಮತ್ತು ಅವುಗಳನ್ನು ಹೇಗೆ ಆಚರಿಸಬೇಕು ?, ಅವುಗಳ ಹಿಂದಿನ ಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ಮಾರ್ಗದರ್ಶನ ಇರುತ್ತಿತ್ತು. ಅದೇ ರೀತಿ ಸಮಾಜದಲ್ಲಿ ಅಧ್ಯಾತ್ಮದ ಬಗ್ಗೆ ಆಸಕ್ತಿ ಮೂಡಿಸಲು ಆಧ್ಯಾತ್ಮಿಕ ಪದಬಂಧ, ಮಕ್ಕಳು ಮತ್ತು ಮಹಿಳೆಯರಿಗಾಗಿ ಧರ್ಮಾಚರಣೆ, ಹಬ್ಬ-ಉತ್ಸವಗಳನ್ನು ಧರ್ಮಶಾಸ್ತ್ರಕ್ಕನುಸಾರ ಹೇಗೆ ಆಚರಿಸಬೇಕು ?,
ಇತ್ಯಾದಿ ವಿಷಯಗಳನ್ನು ಪ್ರಸ್ತುತಪಡಿಸಲಾಗುತ್ತಿತ್ತು.

೨. ‘ಸಾಪ್ತಾಹಿಕ ಸನಾತನ ಪ್ರಭಾತ’ದ ಪರಿಣಾಮ

ಪ್ರಾರಂಭದ ಕಾಲದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸ್ವತಃ ಸಾಪ್ತಾಹಿಕದ ಸಂಪಾದಕರಾಗಿದ್ದ ಕಾರಣ ಅದರಲ್ಲಿನ ಆಧ್ಯಾತ್ಮಿಕ ಲೇಖನಗಳಲ್ಲಿ ತುಂಬಾ ಚೈತನ್ಯ ಇರುತ್ತಿತ್ತು ಮತ್ತು ಅದರಿಂದ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತಿತ್ತು. ಆದ್ದರಿಂದ ವಿತರಣೆ ಮತ್ತು ವಾಚಕರ ಸಂಖ್ಯೆಯೂ ಹೆಚ್ಚಾಗತೊಡಗಿತು. ಅದರಲ್ಲಿನ ಪ್ರಬೋಧನಾತ್ಮಕ ವಿಚಾರಗಳ ಪರಿಣಾಮ ಆಗತೊಡಗಿತು ಹಾಗೂ ಸಮಾಜದಲ್ಲಿ ಜಾಗೃತಿಯಾಗಲು ಆರಂಭವಾಯಿತು. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕಾಲದಲ್ಲಿ ಅನೇಕ ವರ್ತಮಾನಪತ್ರಿಕೆಗಳು ಪ್ರಕಾಶನವಾಗುತ್ತಿದ್ದವು; ಆದರೆ ‘ಸಾಪ್ತಾಹಿಕ ಸನಾತನ ಪ್ರಭಾತ’ವು ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡಿ, ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿ, ಸಮಾಜಕ್ಕೆ ದೃಷ್ಟಿಕೋನ ನೀಡಿ ಒಂದು ಸಾಮಾಜಿಕ ಚಳುವಳಿಯನ್ನೇ ಹುಟ್ಟುಹಾಕಿತು. ಈ ಆಧ್ಯಾತ್ಮಿಕ ಪತ್ರಿಕೋದ್ಯಮವು ಕಾನೂನಿನ ಚೌಕಟ್ಟಿನಲ್ಲಿದ್ದು ಯೋಗ್ಯ ದೃಷ್ಟಿಕೋನ ನೀಡಿದ್ದರಿಂದ ಅದು ಸಮಾಜದಲ್ಲಿ ಜಾಗೃತಿಯನ್ನು ತಂದಿತು.

೩. ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹಿಂದಿರುವ ಈಶ್ವರನ ಬೆಂಬಲ ಹಾಗೂ ಸಂತರ ಆಶೀರ್ವಾದ

ಇದೆಲ್ಲವೂ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಸಂಕಲ್ಪ ದಿಂದಲೇ ಸಾಧ್ಯವಾಯಿತು. ಒಂದು ಆಧ್ಯಾತ್ಮಿಕ ಸಂಸ್ಥೆಯು ವರ್ತಮಾನಪತ್ರಿಕೆಯನ್ನು ನಡೆಸುವುದು ಅಷ್ಟು ಸುಲಭದ ವಿಷಯವಲ್ಲ. ಇತರ ವರ್ತಮಾನಪತ್ರಿಕೆಗಳು ಒಂದಲ್ಲ ಒಂದು ಅಧಿಕಾರರೂಢ ಪಕ್ಷದ ಅಥವಾ ದೊಡ್ಡ ಬಂಡವಾಳದಾರರ ಮಾಲಕತ್ವದ್ದಾಗಿರುತ್ತವೆ. ಆದ್ದರಿಂದ ಅವುಗಳಿಗೆ ಆರ್ಥಿಕ ಬೆಂಬಲ ಸಹಜವಾಗಿ ಸಿಗುತ್ತಿರುತ್ತದೆ; ಆದರೆ ‘ಸನಾತನ ಪ್ರಭಾತ’ದ ಹಿಂದೆ ಕೇವಲ ಈಶ್ವರನ ಬೆಂಬಲ ಹಾಗೂ ಸಂತರ ಆಶೀರ್ವಾದವಿದೆ.

೪. ‘ಸಾಪ್ತಾಹಿಕ ಸನಾತನ ಪ್ರಭಾತ’ಕ್ಕೆ ಆರ್ಥಿಕ ಸಹಾಯವಾಗಬೇಕೆಂದು ಸನಾತನ ಸಂಸ್ಥೆಯ ಸಾಧಕರು ತಮ್ಮ ಸೇವೆ ಎಂದು ಜಾಹೀರಾತುಗಳನ್ನು ತರುವುದು

‘ಸಾಪ್ತಾಹಿಕ ಸನಾತನ ಪ್ರಭಾತ’ಕ್ಕೆ ಆರ್ಥಿಕ ಸಹಾಯ ಮಾಡಲು ಸನಾತನ ಸಂಸ್ಥೆಯ ಸಾಧಕರಿಂದ ಸೇವೆ ಎಂದು ಜಾಹೀರಾತುಗಳನ್ನು ಪಡೆಯುವ ಪ್ರಯತ್ನ ಆರಂಭವಾಯಿತು. ಅದಕ್ಕಾಗಿ ಜಾಹೀರಾತುಗಳ ಕಂಪನಿಗಳು, ಇನ್ನಿತರ ದೊಡ್ಡ ಕಂಪನಿಗಳು, ಬ್ಯಾಂಕ್‌ಗಳು, ಔದ್ಯೋಗಿಕ ಸಂಸ್ಥೆಗಳನ್ನು ಭೇಟಿಯಾಗಿ ಜಾಹೀರಾತುಗಳನ್ನು ಪಡೆಯುವ ಪ್ರಯತ್ನ ಆರಂಭವಾಯಿತು.

೫. ‘ಸಾಪ್ತಾಹಿಕ ಸನಾತನ ಪ್ರಭಾತ’ಕ್ಕೆ ಜಾಹೀರಾತುಗಳನ್ನು ಪಡೆಯುವಾಗ ಅಡಚಣೆಗಳು ಬರುವುದು

ಆರಂಭದಲ್ಲಿ ಕೆಲವರು, ”ಇಷ್ಟೆಲ್ಲ ಸಾಪ್ತಾಹಿಕಗಳಿರುವಾಗ ನೀವು ಇನ್ನೊಂದು ಸಾಪ್ತಾಹಿಕವನ್ನು ಏಕೆ ಆರಂಭಿಸಿದಿರಿ ? ನಿಮ್ಮ ಧರ್ಮ ಹಾಗೂ ಅಧ್ಯಾತ್ಮದ ವಿಷಯದ ಲೇಖಗಳಿರುವ ಈ ಸಾಪ್ತಾಹಿಕವನ್ನು ಯಾರು ಓದುವರು ? ಇಂತಹ ಎಷ್ಟೋ ವರ್ತಮಾನಪತ್ರಿಕೆಗಳು ಬರುತ್ತವೆ ಹಾಗೂ ಕೆಲವೇ ದಿನಗಳಲ್ಲಿ ಕಾಣೆಯಾಗುತ್ತವೆ. ನಿಮ್ಮದೂ ಹಾಗೆಯೇ ಆಗುವುದು’’ ಎಂದರು. ಆಗ ಅವರಿಗೆ ಉತ್ತರವೆಂದು, ”ನಾವು ವ್ಯಾಪಾರಿ ದೃಷ್ಟಿಯಿಂದ ವರ್ತಮಾನಪತ್ರಿಕೆಯನ್ನು ಆರಂಭಿಸಿಲ್ಲ, ನಾವು ರಾಷ್ಟ್ರ ಮತ್ತು ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಲು, ಅಧ್ಯಾತ್ಮಪ್ರಸಾರ, ಸಮಾಜಸಹಾಯ, ಇವೆಲ್ಲ ಉದ್ದೇಶಗಳಿಂದ ಅದನ್ನು ಆರಂಭಿಸಿದ್ದೇವೆ’’ ಎಂದು ಹೇಳಿದೆವು. ಆಗ ‘ಸನಾತನ ಪ್ರಭಾತ’ ನಿಯತಕಾಲಿಕೆಗೆ ಸರಕಾರಿ ಮಾನ್ಯತೆ ಸಿಗಲು ತುಂಬಾ ಪ್ರಯತ್ನ ಮಾಡಲಾಯಿತು; ಆದರೆ ಕೆಲವು ದುಷ್ಟಶಕ್ತಿಗಳ ವಿರೋಧದಿಂದ ಅದಕ್ಕೆ ಯಶಸ್ಸು ಸಿಗಲಿಲ್ಲ.

೬. ‘ಸನಾತನ ಪ್ರಭಾತ’ ಈಶ್ವರ ನಿರ್ಮಿತ

ಆಗಿರುವುದರಿಂದ ಅದು ಎಂದಿಗೂ ನಿಂತು ಹೋಗುವುದಿಲ್ಲ ೧೯೯೯ ರಿಂದ ‘ಸನಾತನ ಪ್ರಭಾತ’ ದೈನಿಕ ಆರಂಭವಾಯಿತು. ಅದರ ೪ ಆವೃತ್ತಿಗಳು ಆರಂಭವಾದವು (ಮುಂಬಯಿ-ಠಾಣೆ, ರಾಯಗಡ-ವಿದರ್ಭ, ಪಶ್ಚಿಮ ಮಹಾರಾಷ್ಟ್ರ-ರತ್ನಾಗಿರಿ, ಗೋವಾ-ಸಿಂಧುದುರ್ಗ) ಹಾಗೂ ಹಿಂದಿ ಮತ್ತು ಆಂಗ್ಲ ಭಾಷೆ ಯಲ್ಲಿ ಪಾಕ್ಷಿಕ ಮತ್ತು ಕನ್ನಡ ಭಾಷೆಯಲ್ಲಿ ಸಾಪ್ತಾಹಿಕ ಸನಾತನ ಪ್ರಭಾತವು ಆರಂಭವಾಯಿತು. ಅವುಗಳಿಗೂ ಒಳ್ಳೆಯ ಪ್ರೋತ್ಸಾಹ ಸಿಗುತ್ತಿದೆ. ‘ದೈನಿಕ ಸನಾತನ ಪ್ರಭಾತ’ದ ಮೂಲಕ ಆರಂಭಿಸಿದ ಉಪಕ್ರಮಗಳಿಗೆ ಸಮಾಜದಿಂದ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಅದರಿಂದ ತುಂಬಾ ಹಿಂದುತ್ವನಿಷ್ಠ ಸಂಘಟನೆಗಳು ಸನಾತನದೊಂದಿಗೆ ಜೋಡಿಸಲ್ಪಟ್ಟವು ಹಾಗೂ ಸನಾತನದ ಕಾರ್ಯ ವೃದ್ಧಿಯಾಯಿತು.

೭. ‘ಸನಾತನ ಪ್ರಭಾತ’ದ ಉದ್ದೇಶ ಜಗತ್ತಿನ ಮುಂದೆ ಬಂದ ನಂತರ ವಿರೋಧ ಕಡಿಮೆಯಾಗುತ್ತಾ ಹೋಗುವುದು

ಹೇಗೆ ‘ಸನಾತನ ಪ್ರಭಾತ’ದ ಧರ್ಮಕಾರ್ಯ ಹೆಚ್ಚುತ್ತಾ ಹೋಯಿತೋ, ಹಾಗೆ ಅದಕ್ಕೆ ಆಗುವ ವಿರೋಧವೂ ಹೆಚ್ಚುತ್ತಾ ಹೋಯಿತು; ಆದರೆ ‘ಸನಾತನ ಪ್ರಭಾತದ ಉದ್ದೇಶ ಜಗತ್ತಿಗೆ ತಿಳಿದಾಗ ವಿರೋಧ ಕಡಿಮೆಯಾಗಲು ಆರಂಭವಾಯಿತು. ‘ಸನಾತನ ಪ್ರಭಾತ’ ಈಶ್ವರ ನಿರ್ಮಿತ ಆಗಿರುವುದರಿಂದ ಅದು ಎಂದಿಗೂ ನಿಲ್ಲುವುದಿಲ್ಲ, ಅದು ಅಖಂಡವಾಗಿ ಮುಂದುವರಿಯುವುದು !

‘ಸಾಪ್ತಾಹಿಕ ಸನಾತನ ಪ್ರಭಾತ’ವು ೨೫ ವರ್ಷಗಳನ್ನು ಪೂರ್ಣಗೊಳಿಸಿರುವುದು, ಅದರದ್ದೇ ಪರಿಣಾಮವಾಗಿದೆ.

೮. ‘ಸಾಪ್ತಾಹಿಕ ಸನಾತನ ಪ್ರಭಾತ’ಕ್ಕೆ ‘ದೈನಿಕ ಸನಾತನ ಪ್ರಭಾತ’ದ ಜೊತೆ

ಇಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷಗಳು ಪೂರ್ಣವಾಗಿವೆ. ‘ಸಾಪ್ತಾಹಿಕ ಸನಾತನ ಪ್ರಭಾತ’ಕ್ಕೆ ೨೫ ವರ್ಷಗಳು ಪೂರ್ಣವಾಗಿ ಅದು ಈ ವರ್ಷ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ‘ಸಾಪ್ತಾಹಿಕ ಸನಾತನ ಪ್ರಭಾತ’ದ ಜೊತೆಗೆ ‘ದೈನಿಕ ಸನಾತನ ಪ್ರಭಾತ’ವೂ ಇಷ್ಟರವರೆಗೆ ಸ್ವತಂತ್ರ ಭಾರತದ ನಾಗರಿಕರಿಗೆ ಪ್ರಬೋಧನೆ ಮಾಡಿದೆ. ಅವರಿಗೆ ಆವಶ್ಯಕವಿರುವ ಮಾರ್ಗದರ್ಶನ ಮಾಡಿದೆ, ಅದೇ ರೀತಿ ಜನಜಾಗೃತಿ, ಹಿಂದೂ ಸಂಘಟನೆ, ಮಂದಿರ ಸರಕಾರೀಕರಣ, ದೇವತೆಗಳ ವಿಡಂಬನೆಯನ್ನು ತಡೆಗಟ್ಟುವುದು, ‘ಲವ್‌ ಜಿಹಾದ್‌’ನ ವಿಷಯದಲ್ಲಿ ಜಾಗೃತಿ, ಲ್ಯಾಂಡ್‌ ಜಿಹಾದ್‌ನ ವಿಷಯದಲ್ಲಿ ಜಾಗೃತಿ, ಮತಾಂತರವನ್ನು ತಡೆಗಟ್ಟುವುದು ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರ ಇತ್ಯಾದಿ ವಿಷಯಗಳ ಮೇಲೆ ಪ್ರಕಾಶ ಬೀರಿದೆ. ಇದರಿಂದ ಭಾರತದಾದ್ಯಂತದ ಹಿಂದುತ್ವವಾದಿ ಸಂಘಟನೆಗಳು ಹಾಗೂ ಹಿಂದುತ್ವನಿಷ್ಠರಿಗಾಗಿ ಕಾರ್ಯ ಮಾಡುವ ಕಾರ್ಯಕರ್ತರಿಂದ ಸಕಾರಾತ್ಮಕ ಪ್ರೋತ್ಸಾಹ ದೊರೆತು ಆಡಳಿತದವರಿಗೂ ‘ಸನಾತನ ಪ್ರಭಾತ’ದ ವಿವಿಧ ಚಳುವಳಿಗಳನ್ನು ಅವಲೋಕಿಸಬೇಕಾಯಿತು. ಭಾರತ ಸ್ವಾತಂತ್ರ್ಯದ ಶತಕಪೂರ್ತಿಯಾಗುವಾಗ ಕೂಡ ‘ಸನಾತನ ಪ್ರಭಾತ’ದ ದೀವಟಿಗೆ ಪ್ರಜ್ವಲಿಸುತ್ತಿರುವುದು; ಏಕೆಂದರೆ, ‘ಸನಾತನ ಪ್ರಭಾತ’ ಈಶ್ವರ ನಿರ್ಮಿತವಾಗಿದೆ.

– ಶ್ರೀಮತಿ ಸ್ಮಿತಾ ನವಲಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೭೧ ವರ್ಷ), ಸನಾತನ ಆಶ್ರಮ, ದೇವದ, ಪನವೇಲ. (೧೨.೭.೨೦೨೩)