ಹಿಂದೂ ದೇವತೆಗಳ ಮೂರ್ತಿಗಳನ್ನು ಒದೆಯುವ ಪಾದ್ರಿ ಪ್ರವೀಣ ಚಕ್ರವರ್ತಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಪಾದ್ರಿಯು ರಾಜ್ಯದಲ್ಲಿ ೬೯೯ ‘ಕ್ರಿಶ್ಚಿಯನ್ ವಿಲೇಜ್ ಹೆಸರಿನ ಗ್ರಾಮಗಳನ್ನು ಕಟ್ಟಿದ್ದಾನೆ. ಈ ಪಾದ್ರಿಯ ಹೆಸರು ‘ಪ್ರವೀಣ ಚಕ್ರವರ್ತಿ ಎಂದಾಗಿದೆ. ಇದರರ್ಥ ಈ ಹಿಂದೆ ಪ್ರವೀಣ ಚಕ್ರವರ್ತಿ ಅಥವಾ ಅವನ ಪೂರ್ವಜರು ಮತಾಂತರಗೊಂಡಿರಬೇಕು. ಹಿಂದೂ ಧರ್ಮದ ವಿಷಯದಲ್ಲಿ ಇಷ್ಟು ದ್ವೇಷದಿಂದ ಕೂಡಿರುವ ಈ ಪಾದ್ರಿಗೆ ಹಿಂದೂ ಹೆಸರು ಹೇಗೆ ನಡೆಯುತ್ತದೆ, ಎನ್ನುವುದೂ ಒಂದು ಸಂಶೋಧನೆಯ ವಿಷಯವಾಗಿದೆ. ಇಲ್ಲಿ ಮುಖ್ಯ ವಿಷಯವೆಂದರೆ, ೬೯೯ ಕ್ರೈಸ್ತ ಗ್ರಾಮಗಳು ನಿರ್ಮಾಣವಾಗಿರುವುದನ್ನು ಗಮನಿಸಿದರೆ ಪ್ರವೀಣ ಚಕ್ರವರ್ತಿ ಮತ್ತು ಇತರ ಮತಾಂಧ ಕ್ರೈಸ್ತರು ಆಂಧ್ರಪ್ರದೇಶದಲ್ಲಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಮತಾಂತರ ಚಟುವಟಿಕೆ ನಡೆಸುತ್ತಿರಬಹುದು ಎನ್ನುವ ಕಲ್ಪನೆ ಬರುತ್ತದೆ. ಪ್ರವೀಣ ಚಕ್ರವರ್ತಿಯ ಕ್ರಿಶ್ಚಿಯನ್ ಗ್ರಾಮಗಳ ವಿಷಯದ ಮಾಹಿತಿ ನೀಡುವ ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಅವನು ಹಿಂದೂ ದೇವತೆಗಳ ಮೂರ್ತಿಗಳನ್ನು ಕಾಲಿನಿಂದ ಒದ್ದಿರುವುದಾಗಿ ಹೇಳುತ್ತಾ, ಅದರಿಂದ ಅವನಿಗೆ ಸಂತೋಷ ಸಿಗುತ್ತದೆಯೆಂದು ಹೇಳುತ್ತಿದ್ದಾನೆ. ಈ ಪಾದ್ರಿಯು ಎಷ್ಟು ಹಿಂದೂಗಳನ್ನು ಮತಾಂತರಗೊಳಿಸಿರಬೇಕು, ಅವರಲ್ಲಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂದ್ವೇಷವನ್ನು ಮೂಡಿಸಿರಬಹುದು ? ಈ ಕಾರಣದಿಂದ ಒಂದು ರಾಜ್ಯದಲ್ಲಿ ೬೯೯ ಕ್ರಿಶ್ಚಿಯನ್ ಗ್ರಾಮಗಳ ನಿರ್ಮಾಣವಾಗುವುದು ಸಾಮಾನ್ಯ ವಿಷಯವಲ್ಲ.
ಮತಾಂತರವೆಂದರೆ ರಾಷ್ಟ್ರಾಂತರ ಎನ್ನಬಹುದು. ಏಕೆಂದರೆ ಈಶಾನ್ಯದ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಳವಾದ ಬಳಿಕ ಅದರ ಅನುಭವ ಬಹಳಷ್ಟು ಸಲ ಬಂದಿದೆ. ಈ ೬೯೯ ಗ್ರಾಮಗಳ ಬಹಳಷ್ಟು ಮತಾಂತರಗೊಂಡ ಕ್ರೈಸ್ತರ ಮಾನಸಿಕತೆಯೂ ಹಿಂದೂದ್ವೇಷಿಯಾಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಗ್ರಾಮಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಕುಟುಂಬದವರೊಂದಿಗೆ ಈ ಮತಾಂತರಿತಗೊಂಡ ಕ್ರೈಸ್ತರು ಯಾವ ರೀತಿ ನಡೆಸಿಕೊಳ್ಳುತ್ತಿರಬಹುದು ? ಅವರ ಮೇಲೆಯೂ ಮತಾಂತರದ ಒತ್ತಡ ನಿರ್ಮಾಣ ಮಾಡಲಾಗುತ್ತಿಲ್ಲವೆಂದು ಹೇಗೆ ನಂಬುವುದು ? ಇತ್ಯಾದಿ ವಿವಿಧ ಪ್ರಶ್ನೆಗಳು ಪ್ರವೀಣ ಚಕ್ರವರ್ತಿಯವರ ವಿಡಿಯೋದಿಂದ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತಿದೆ. ಇಷ್ಟೆಲ್ಲ ಘಟಿಸುತ್ತಿರುವಾಗ ಆಂಧ್ರಪ್ರದೇಶದ ವೈ.ಎಸ್.ಆರ್. ಕಾಂಗ್ರೆಸ್ ಸರಕಾರ ಏನು ಮಾಡುತ್ತಿತ್ತು ? ಜಗನಮೋಹನ ರೆಡ್ಡಿ ಕಟ್ಟಾ ಕ್ರೈಸ್ತರಾಗಿದ್ದಾರೆ. ರಾಜ್ಯದಲ್ಲಿ ಕಳೆದ ೮-೯ ತಿಂಗಳುಗಳಲ್ಲಿ ೧೫೦ ಕ್ಕಿಂತ ಅಧಿಕ ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಘಟನೆ ಜರುಗಿದೆ. ಇದನ್ನು ಹಿಂದೂಗಳು ವಿರೋಧಿಸಿದ ಬಳಿಕ ರೆಡ್ಡಿಯವರು ಈ ಪ್ರಕರಣದ ವಿಚಾರಣೆಗಾಗಿ ಸಮಿತಿಯನ್ನು ರಚಿಸಿದರು. ಈ ಸಮಿತಿಯು ಈ ಧ್ವಂಸದ ಪ್ರಕರಣದಲ್ಲಿ ಭಾಜಪದ ಕಾರ್ಯಕರ್ತರನ್ನು ಬಂಧಿಸಿತು. ಇದರರ್ಥ ಸಮಾಜದ ಶಾಂತಿಯನ್ನು ಕದಡಲು ಹಿಂದೂಗಳೇ ಹಿಂದೂಗಳ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡುವ ಷಡ್ಯಂತ್ರವನ್ನು ರಚಿಸಿದರು ಎಂದಾಗುತ್ತದೆ. ಹಿಂದೂಗಳ ಹೆಸರು ಕೆಡಿಸಲು ಆಂಧ್ರಪ್ರದೇಶ ಸರಕಾರದ ಸುನಿಯೋಜಿತ ಸಂಚು ಆಗಿರಬಹುದೇ ? ಇವೆಲ್ಲ ಘಟನೆಗಳನ್ನು ನೋಡಿದರೆ ‘ಹಿಂದೂಗಳನ್ನು ಮತಾಂತರಿಸುವಂತಹ ಘಟನೆಗಳಿಗೆ ಅವರ ಬೆಂಬಲವಿದೆ, ಎಂದು ಹೇಳಬಹುದು. ರೆಡ್ಡಿ ಎಷ್ಟು ಸಮಯದವರೆಗೆ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿ ಇರುವರೋ, ಅಲ್ಲಿಯವರೆಗೆ ಹಿಂದೂಗಳನ್ನು ಬೆಂಬಲಿಸುವವರು ಯಾರೂ ಇಲ್ಲ. ಆದುದರಿಂದ ಕೇಂದ್ರ ಸರಕಾರದ ಜವಾಬ್ದಾರಿ ಹೆಚ್ಚಾಗುತ್ತದೆ. ಈ ಪ್ರಕರಣದಲ್ಲಿ ನೇರ ಹಸ್ತಕ್ಷೇಪ ಮಾಡಿ ಪ್ರವೀಣ ಚಕ್ರವರ್ತಿಗಳಂತಹ ಮತಾಂತರಿತ ಪಾದ್ರಿಗಳ ಮೇಲೆ ಕ್ರಮ ಕೈಕೊಳ್ಳುವುದು ಆವಶ್ಯಕವಿದೆ. ಒಂದು ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರ ಆಗುತ್ತಿದ್ದರೆ ಅದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ. ಭಾರತ ಸರಕಾರ ‘ಜಾತ್ಯತೀತ ಆಗಿರುವುದರಿಂದ, ಇಂತಹ ಪ್ರಕರಣಗಳ ವಿಷಯದಲ್ಲಿ ಸರಕಾರಕ್ಕೆ ಏನೂ ಅನಿಸುವುದಿಲ್ಲ. ಆದುದರಿಂದ ಸರಕಾರವು ಮತಾಂಧರಲ್ಲಿ ಭಯ ಮೂಡಿಸಲು ಕಠಿಣ ಹೆಜ್ಜೆಯನ್ನಿಡುವುದು ಆವಶ್ಯಕವಾಗಿದೆ.