ಹಿಂದೂದ್ವೇಷಿ, ರಾಷ್ಟ್ರ ಮತ್ತು ಸಮಾಜ ದ್ರೋಹಿ ‘ತಾಂಡವ ವೆಬ್ ಸಿರೀಸ್ : ಇದರ ಒಂದು ಪಕ್ಷಿನೋಟ !

‘ಅಮೇಝಾನ್ ಪ್ರೈಮ್’ನಲ್ಲಿ ಪ್ರಸಾರವಾಗುತ್ತಿರುವ ‘ತಾಂಡವ’ ವೆಬ್ ಸಿರೀಸ್‌ಗೆ ದಿನಕಳೆದಂತೆ ಹಿಂದುತ್ವನಿಷ್ಠರ ವಿರೋಧ ಹೆಚ್ಚುತ್ತಿದೆ. ನಿರ್ಮಾಪಕ ಹಿಮಾಂಶೂ ಮೆಹರಾ, ನಿರ್ದೇಶಕ ಅಲೀ ಅಬ್ಬಾಸ್ ಜಫರ ಇವರ ಈ ವೆಬ್ ಸಿರೀಸ್‌ನಲ್ಲಿ ಭಗವಾನ ಶಿವ ಮತ್ತು ಪ್ರಭು ಶ್ರೀರಾಮನ ವಿಡಂಬನೆ ಮಾಡಲಾಗಿದೆ. ಇದರೊಂದಿಗೆ ಹಿಂದೂ ಧರ್ಮ, ಭಾರತ, ಹಿಂದೂಗಳನ್ನು ಅಯೋಗ್ಯವಾಗಿ ಚಿತ್ರಿಸಲಾಗಿದ್ದು ಸಾಂಪ್ರದಾಯಿಕತೆ, ಜಾತಿದ್ವೇಷ ಇತ್ಯಾದಿಗಳನ್ನು ಬಿಂಬಿಸಲಾಗಿದೆ. ವೆಬ್ ಸಿರೀಸ್‌ನ ಮುಖ್ಯಪಾತ್ರದಲ್ಲಿ ‘ಸಮರ ಪ್ರತಾಪ ಸಿಂಹ’ (ನಟ ಸೈಫ ಅಲೀ ಖಾನ್) ಮತ್ತು ‘ಶಿವಾ ಶೇಖರ’ (ನಟ ಮಹಮ್ಮದ ಝಿಶಾನ) ಇವರಿದ್ದು ಸದ್ಯ ಸಿರೀಸ್‌ನ ೯ ಭಾಗಗಳನ್ನು ಅಮೇಜಾನ್ ಪ್ರೈಮ್’ನಲ್ಲಿ ಪ್ರಸಾರ ಮಾಡಲಾಗಿದೆ.

ಈ ಸಿರೀಸ್‌ನ ಮೂಲಕ ಸೂಕ್ಷ್ಮದಿಂದ ಹಿಂದೂ ಧರ್ಮವನ್ನು ಕೀಳಾಗಿ ಬಿಂಬಿಸಲಾಗಿದೆ. ‘ತಾಂಡವ’ ವೆಬ್ ಸಿರೀಸ್‌ನಲ್ಲಿ ಕೆಲವು ಪ್ರಮುಖ ಪ್ರಸಂಗಗಳು ಈ ಮುಂದಿನಂತಿವೆ.

೧. ಭಾರತದ ಸರಕಾರಿ ವ್ಯವಸ್ಥೆಯು ಮುಸಲ್ಮಾನ ವಿರೋಧಿಯಾಗಿದೆ !

ಸಿರೀಸ್‌ನ ಆರಂಭದಲ್ಲಿ ರೈತರ ಒಂದು ಆಂದೋಲನವನ್ನು ತೋರಿಸಲಾಗಿದ್ದು ಆಡಳಿತ ಪಕ್ಷವು ಅದನ್ನು ಹೊಸಕಿ ಹಾಕಲು ಪ್ರಯತ್ನಿಸುತ್ತಿದೆ. ಪ್ರಧಾನಮಂತ್ರಿಯ ಮಗನೊಂದಿಗೆ ಆಪ್ತನಾಗಿರುವ ರಾಜಕೀಯ ಮುಖಂಡನು ಆಂದೋಲನದಲ್ಲಿ ಪಾಲ್ಗೊಂಡ ಮೂರು ಮುಸಲ್ಮಾನ ಯುವಕರನ್ನು ಕೊಲೆ ಮಾಡುವಂತೆ ಪೊಲೀಸರಿಗೆ ಆದೇಶವನ್ನು ಕೊಡುತ್ತಿದ್ದಾನೆ. ಅದರಲ್ಲಿ ‘ಅಯೂಬ್’ ಮತ್ತು ‘ಸಲೀಮ್’ ಮೇಲೆ ಗುಂಡು ಹಾರಿಸಿ ಅವರನ್ನು ಕೊಲೆ ಮಾಡಲಾಗುತ್ತದೆ. ಮತಾಂಧ ನಿರ್ದೇಶಕರು ಈ ಮೂಲಕ ಭಾರತದಲ್ಲಿ ಆಡಳಿತ ಪಕ್ಷವು ಮುಸಲ್ಮಾನರನ್ನು ಹೇಗೆ ಕೊಲೆ ಮಾಡುತ್ತದೆ, ಎಂದು ಪರೋಕ್ಷವಾಗಿ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ.

೨. ಹಿಂದೂ ಧರ್ಮರಕ್ಷಕ ಸ್ವಾಮಿ ವಿವೇಕಾನಂದರ ಅವಮಾನ !

ಈ ಮೇಲಿನ ಮೂರು ಯುವಕರಲ್ಲಿ ‘ಇಮ್ರಾನ್’ ಎಂಬ ಯುವಕನು ಗುಂಡು ಹಾರಿಸುವ ಮೊದಲೇ ಅವನ ದೆಹಲಿಯ ಮಹಾವಿದ್ಯಾಲಯದ ಒಳಗೆ ಹೋಗಿದ್ದ ಕಾರಣ ಅವನ ರಕ್ಷಣೆಯಾಗುತ್ತದೆ. ವಿವೇಕಾನಂದ ವಿಶ್ವವಿದ್ಯಾಲಯ (ವಿ.ಎನ್.ಯು.) ಇದು ಆ ವಿಶ್ವವಿದ್ಯಾಲಯದ ಹೆಸರಾಗಿದ್ದು ಅದು ರಾಷ್ಟ್ರದ್ರೋಹಿಗಳು ಮತ್ತು ಸಾಮ್ಯವಾದಿಗಳೇ ತುಂಬಿರುವ ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯಕ್ಕೆ (‘ಜೆ.ಎನ್.ಯು’ಗೆ) ತತ್ಸಮವಾಗಿದೆ ಎಂದು ತೋರಿಸಲಾಗಿದೆ. ಈ ಮೂಲಕ ಹಿಂದೂ ಧರ್ಮರಕ್ಷಕ ಮತ್ತು ಯೋಧ ಸಂನ್ಯಾಸಿ ಸ್ವಾಮಿ ವಿವೇಕಾನಂದರನ್ನು ಸಹ ಒಂದು ರೀತಿಯಲ್ಲಿ ಅವಮಾನಿಸಲಾಗಿದೆ.

೩. ಭಗವಾನ ಶಿವ ಮತ್ತು ಪ್ರಭು ಶ್ರೀರಾಮನ ವಿಡಂಬನೆ !

ವಿಶ್ವವಿದ್ಯಾಲಯದಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದ್ದು ಅದರಲ್ಲಿ ‘ಶಿವಾ ಶೇಖರ’ ಎಂಬ ವಿದ್ಯಾರ್ಥಿಯು ಭಗವಾನ ಶಿವನ ವೇಷ ತೊಟ್ಟು ಅವನ ವಿಡಂಬನೆ ಮಾಡುತ್ತಿದ್ದಾನೆ. ಅಲ್ಲಿರುವ ವಿದ್ಯಾರ್ಥಿಗಳಿಗೆ ನಗು ಬರುತ್ತಿದ್ದು ನಾಟಕದ ಮೂಲಕ ಪ್ರಭು ಶ್ರೀರಾಮನನ್ನು ಸಹ ಅವಮಾನಿಸಲಾಗಿದೆ.

೪. ಭಾರತದ ಪೊಲೀಸರು ‘ಜನತಾದ್ರೋಹಿ’ ಆಗಿದ್ದಾರೆಂಬ ಚಿತ್ರಣವನ್ನು ಮೂಡಿಸುವ ಪ್ರಯತ್ನ !

ನಾಟಕ ನಡೆಯುತ್ತಿರುವಾಗ ಪೊಲೀಸರು ಇಮ್ರಾನ್‌ಗೆ ‘ಉಗ್ರವಾದಿ’ ಎಂದು ಹೇಳುತ್ತಾ ಅವನನ್ನು ಬಂಧಿಸುತ್ತಾರೆ. ಈ ಬಂಧನ ಅನಧಿಕೃತವಾಗಿದೆಯೆಂದು ಹೇಳುತ್ತಾ ಶಿವಾ ಶೇಖರ ಮತ್ತು ಎಲ್ಲ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಹೋಗುತ್ತಾರೆ. ಅಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆಯೇ ಲಾಠಿಚಾರ್ಜ್ ಮಾಡುತ್ತಾರೆ; ಆದರೆ ವಿದ್ಯಾರ್ಥಿಗಳೇ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣ ಕೆಲವು ಪೊಲೀಸರು ಗಾಯಗೊಳ್ಳುತ್ತಾರೆ; ಆದ್ದರಿಂದ ವಿದ್ಯಾರ್ಥಿಗಳ ವಿರುದ್ಧವೇ ದೂರು ದಾಖಲಿಸಲಾಗಿದೆಯೆಂದು ತೋರಿಸಲಾಗಿದೆ. ಈ ಮೂಲಕ ಭಾರತದ ಪೊಲೀಸರು ಜನರ ಮೇಲೆ ಹೇಗೆ ಅನ್ಯಾಯ ಮಾಡುತ್ತಾರೆ, ಎಂಬುದನ್ನು ತೋರಿಸಲಾಗಿದೆ.

೫. ರಾಷ್ಟ್ರದ್ರೋಹಿ ನಾಯಕರ ತತ್ಸಮ ಪಾತ್ರಗಳು !

ನಂತರ ಶಿವಾ ಶೇಖರ ಒಂದು ಸುಳ್ಳು (ಡಮೀ) ನಾಟಕವನ್ನು ಮಾಡಿ ರೈತರ ಆಂದೋಲನದಲ್ಲಿ ಪೊಲೀಸರು ಇಬ್ಬರು ಮುಸಲ್ಮಾನ ಯುವಕರನ್ನು ಕೊಲೆ ಮಾಡಿರುವ ವಿಡಿಯೋ ವೈರಲ್ ಮಾಡುತ್ತಾನೆ. ಹೆಚ್ಚುತ್ತಿರುವ ಜನರ ಆಕ್ರೋಶದಿಂದ ಪೊಲೀಸರಿಗೆ ಇಮ್ರಾನನನ್ನು ಬಿಡುಗಡೆಗೊಳಿಸಬೇಕಾಗುತ್ತದೆ. ಈ ಪ್ರಸಂಗದಿಂದ ಶಿವಾ ಶೇಖರ ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಮತ್ತು ಇಂದಿನ ಸಾಮ್ಯವಾದಿ ಪಕ್ಷದ ಮುಖಂಡ ಕನ್ಹಯ್ಯಾ ಕುಮಾರನಂತಹವರನ್ನು ತೋರಿಸಲಾಗಿದೆ ಮತ್ತು ಇಮ್ರಾನ್‌ಗೆ ದೇಶದ್ರೋಹದ ಆರೋಪವಿರುವ ಉಮರ ಖಾಲೀದ್‌ನೊಂದಿಗೆ ಸಂಪರ್ಕವಿರುವುದನ್ನು ತೋರಿಸಲಾಗಿದೆ. ‘ಸನಾ ಮೀರ್’ ಎಂಬ ಹೆಸರಿನ ವಿ.ಎನ್.ಯು.ವಿನ ಯುವತಿಯನ್ನು ರಾಷ್ಟ್ರದ್ರೋಹಿ ಶೆಹಲಾ ರಶೀದಳಂತೆ ತೋರಿಸಲಾಗಿದೆ.

೬. ‘ತುಕಡೆ ತುಕಡೆ ಗ್ಯಾಂಗ್’ನ ಘೋಷಣೆಯ ಚಿತ್ರಣ !

ಇಮ್ರಾನನ ಬಿಡುಗಡೆಯಿಂದ ವಿಶ್ವವಿದ್ಯಾಲಯದಲ್ಲಿ ಆನಂದದ ವಾತಾವರಣವಿದ್ದು ೨೦೧೬ ರಲ್ಲಿ ‘ಜೆ.ಎನ್.ಯು.’ನಲ್ಲಿ ಹೇಗೆ ‘ಭಾರತ ತೆರೆ ತುಕಡೆ ಹೋಂಗೆ…’ ಇತ್ಯಾದಿ ರಾಷ್ಟ್ರದ್ರೋಹಿ ಘೊಷಣೆಯನ್ನು ನೀಡಲಾಗಿತ್ತು, ಹಾಗೆಯೇ ಅದಕ್ಕೆ ತತ್ಸಮವಾಗಿರುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲೊಡ್ಡುವ ಘೋಷಣೆಯನ್ನು ನೀಡುವ ‘ವಿ.ಎನ್.ಯು.’ವಿನ ವಿದ್ಯಾರ್ಥಿಗಳನ್ನು ತೋರಿಸಲಾಗಿದೆ. ಇಲ್ಲಿ ಒಂದು ಮಹತ್ವದ ವಿಚಾರವನ್ನು ವಿಮರ್ಶೆ ಮಾಡುವ ಹಾಗಿದೆ. ಅದೆಂದರೆ, ಎಲ್ಲ ವಿದ್ಯಾರ್ಥಿಗಳು ಬಹಳ ಒಳ್ಳೆಯವರು, ಅನ್ಯಾಯದ ವಿರುದ್ಧ ಧ್ವನಿಯೆತ್ತುವವರು ಹಾಗೂ ಆದರ್ಶವಾದಿಗಳಾಗಿರುವುದನ್ನು ಚಿತ್ರಿಸಲಾಗಿದೆ. ಈ ಮೂಲಕ ಎಡವಿಚಾರಶೈಲಿಯ ವೈಭವೀಕರಣವಾಗುತ್ತಿರುವುದು ಅರಿವಾಗುತ್ತಿದೆ.

೭. ಭಾಜಪ ವಿರೋಧಿ ಚಿತ್ರಣ !

ಆಡಳಿತ ಪಕ್ಷ ‘ಜನ ಲೋಕ ದಳ’ವನ್ನು ಭಾಜಪಕ್ಕೆ ತತ್ಸಮವಾಗಿ ತೋರಿಸಿ ಅದು ಎಡ ವಿಚಾರಶೈಲಿಯದ್ದಾಗಿದೆಯೆಂದು ಹೇಳಲಾಗಿದೆ. ಪಕ್ಷದ ಮುಖಂಡ ‘ದೇವಕೀನಂದನ’ ಇವರು ದೇಶದ ಪ್ರಧಾನಮಂತಿಯಾಗಿದ್ದು ಅವರ ಮಗ ‘ಸಮರ ಪ್ರತಾಪ ಸಿಂಹ (ಸೈಫ ಆಲೀಖಾನ್)ನು ಅವರ ಹತ್ಯೆ ಮಾಡುತ್ತಾನೆ. ಅನಂತರ ಪ್ರಧಾನಮಂತ್ರಿಗಳ ಕುರ್ಚಿಯ ಪೈಪೋಟಿಯಲ್ಲಿ ಪಕ್ಷಾಂತರ್ಗತ ಹೊಲಸು ಹಾಗೂ ನೀಚತನದ ರಾಜಕಾರಣವನ್ನು ತೋರಿಸಲಾಗಿದೆ. ಈ ಮೂಲಕ ಒಂದು ರೀತಿಯಲ್ಲಿ ಭಾಜಪವಿರೋಧಿ ಚಿತ್ರಣವನ್ನೂ ಮೂಡಿಸುವ ಸ್ಪಷ್ಟ ಸಂಕೇತವು ಅನೇಕಬಾರಿ ಸಿಗುತ್ತದೆ. ಈ ಮೂಲಕ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಂಚನ್ನು ಸೂಚಿಸಲಿಕ್ಕಿದೆಯೇ ? ಎಂಬ ವಿಚಾರವೂ ‘ತಾಂಡವ’ ನೋಡುವಾಗ ಬಂದು ಹೋಗುತ್ತದೆ.

೮. ಕೊಲೆಗಡುಕನಾಗಿರುವ ಎಡಪಂಥೀಯ ವಿಚಾರಶೈಲಿಯ ಪಕ್ಷ !

ಆಡಳಿತ ಪಕ್ಷದ ಹೀನ ರಾಜಕಾರಣದೊಂದಿಗೆ ಸಾಮ್ಯತೆಯುಳ್ಳ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯ ಚಟುವಟಿಕೆಯನ್ನು ಚಿತ್ರಿಸಲಾಗಿದೆ. ಇದರಲ್ಲಿ ಆಡಳಿತ ಪಕ್ಷ ‘ಜನ ಲೋಕ ದಳವು ರಾಜಕೀಯ ಲಾಭಗಳಿಸಲು ಎಡ ವಿಚಾರ ಶೈಲಿಯ ಮೂವರು ವಿದ್ಯಾರ್ಥಿ ಮುಖಂಡರ ಹತ್ಯೆ ಮಾಡಿಸುತ್ತದೆ.

೯. ಹಿಂದೂ ಸಂತರ ಅಶ್ಲಾಘ್ಯ ಅಗೌರವ !

ಹತ್ಯೆ ಮಾಡುವ ಅಥವಾ ಎಲ್ಲ ಹತ್ಯೆಗಳನ್ನು ನಡೆಸಿದ ನಟನು ಪಾಪದಿಂದ ಮುಕ್ತನಾಗಲು ಹಾಗೂ ಮನಃಶಾಂತಿ ಲಭಿಸಲು ಓರ್ವ ಹಿಂದೂ ಸಂತರ ದೂರಚಿತ್ರವಾಣಿಯ ಮಾರ್ಗದರ್ಶನದಿಂದ ಬೋಧನೆಯನ್ನು ಪಡೆಯುತ್ತಿರುವಂತೆ ವೆಬ್ ಸಿರೀಸ್‌ನಲ್ಲಿ ಪದೇ ಪದೇ ತೋರಿಸಲಾಗುತ್ತಿದೆ. ಈ ಹಿಂದೂ ಸಂತರು ಕೂಡ ಅಯೋಗ್ಯ ಶಬ್ದಗಳಲ್ಲಿ ಅಥವಾ ದ್ವಂದ್ವಾರ್ಥ ಬರುವಂತಹ ಪದ್ದತಿಯಲ್ಲಿ ಮಾತನಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಈ ಮೂಲಕ ಹಿಂದೂ ಸಂತರನ್ನು ಅಗೌರವಿಸಲಾಗಿದೆ. ಬಹುಶಃ ಹಿಂದೂಗಳ ಸಾಧೂ-ಸಂತರು ಹೇಗೆ ನೀಚರಾಗಿರುತ್ತಾರೆ, ಎನ್ನುವ ಸಂದೇಶವನ್ನೇ ಈ ಹಿಂದೂದ್ವೇಷಿ ಸಿರೀಸ್‌ನಿಂದ ನೀಡಲಾಗಿದೆ.

೧೦. ದಲಿತ ಮತ್ತು ಉಚ್ಚ ವರ್ಣದ ಹಿಂದೂಗಳ ನಡುವೆ ಒಡಕುಂಟು ಮಾಡುವ ಪ್ರಯತ್ನ !

‘ತಾಂಡವದ ಮೂಲಕ ಹಿಂದೂಗಳಲ್ಲಿ ಇನ್ನೂ ಜಾತಿಭೇದ ವಿರುವುದನ್ನು ಕೆಲವು ಪ್ರಸಂಗಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಪ್ರಧಾನಮಂತ್ರಿ ದೇವಕೀನಂದನ ಇವರು ತಮ್ಮದೇ ಪಕ್ಷದ ಓರ್ವ ಹಿರಿಯ ದಲಿತ ಮುಖಂಡನಿಗೆ ಜಾತಿನಿಂದನೆ ಮಾಡುತ್ತಾರೆ. ‘ಉಚ್ಚ ವರ್ಣದ ಹಿಂದೂ ಮಹಿಳೆಗೆ ಅವಳ ಪ್ರಿಯಕರನಾಗಿದ್ದ ದಲಿತ ಮುಖಂಡನು ಅತ್ಯಾಚಾರ ಮಾಡುತ್ತಿದ್ದು ಕಳೆದ ನೂರಾರು ವರ್ಷಗಳಿಂದ ದಲಿತರ ಮೇಲಾಗಿರುವ ಅತ್ಯಾಚಾರದ ಸೇಡನ್ನು ತೀರಿಸಿಕೊಳ್ಳುತ್ತಿದ್ದಾನೆ’, ಎನ್ನುವ ವಾಕ್ಯಗಳನ್ನು ಹೇಳಲಾಗಿದೆ.

೧೧. ಮುಸಲ್ಮಾನರ ವೈಭವೀಕರಣ ಮತ್ತು ‘ಮುಸಲ್ಮಾನರು ಭಾರತದಲ್ಲಿ ಬಲಿಯಾಗುತ್ತಿದ್ದಾರೆ’ ಎನ್ನುವ ಸ್ವರೂಪವನ್ನು ತೋರಿಸಲಾಗುತ್ತದೆ !

ಒಂದು ಪ್ರಸಂಗದಲ್ಲಿ ಇಮ್ರಾನನು ‘ದಶರತಿ ರಾಮ’ನಾಗಿದ್ದು ತುಂಬ ಒಳ್ಳೆಯವನಾಗಿದ್ದಾನೆಂದು ಶಿವಾ ಶೇಖರ ಹೇಳುತ್ತಿದ್ದಾನೆ. ಅದೇ ರೀತಿ ವಿಶ್ವವಿದ್ಯಾಲಯದ ಚುನಾವಣೆಯಲ್ಲಿ ಇಮ್ರಾನನು ಇನ್ನೊಂದು ಪಕ್ಷದ ನಾಯಕನಾಗಿದ್ದರೂ ಶಿವಾ ಶೇಖರನಿಗೆ ಮತ ನೀಡುವುದನ್ನು ತೋರಿಸಿ ಅವನ ವ್ಯಾಪಕ ವಿಚಾರಧಾರೆಯನ್ನು ತೋರಿಸಲು ಪ್ರಯತ್ನಿಸಲಾಗಿದೆ. ಇನ್ನೊಂದು ಪ್ರಸಂಗದಲ್ಲಿ ಒಬ್ಬ ಮುಸಲ್ಮಾನ ವಿದ್ಯಾರ್ಥಿಯು ‘ಭಾರತದಲ್ಲಿ ನಮ್ಮೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ನಿನಗೆ ಗೊತ್ತೇ ಇದೆ !’, ಈ ರೀತಿಯಲ್ಲಿ ಶಿವಾ ಶೇಖರನೊಂದಿಗೆ ಸಂಭಾಷಣೆ ಮಾಡುತ್ತಾ ತನ್ನ ದುಃಖವನ್ನು ವ್ಯಕ್ತಪಡಿಸುತ್ತಾನೆ. ಇನ್ನೊಂದು ಪ್ರಸಂಗದಲ್ಲಿ ಪೊಲೀಸ್ ಅಧಿಕಾರಿಯೊಬ್ಬನು ಮುಸಲ್ಮಾನನ ಕುರಿತು ‘ನಿಮಗೆ ಇಂತಹದ್ದೆಲ್ಲವನ್ನು (ಅಪರಾಧಗಳನ್ನು) ಮಾಡುವ ಅಭ್ಯಾಸವಿರಬಹುದು !’ ಎಂದು ಹೇಳುತ್ತಿದ್ದಾನೆ. ಇನ್ನೊಂದು ಪ್ರಸಂಗದಲ್ಲಿ ‘ಸನಾ ಮೀರ’ ಮತ್ತು ಅವನ ತಂಗಿಗೆ ‘ಕಿಶನ್’ ಎಂಬ ಭ್ರಷ್ಟ ಪೊಲೀಸ್ ಅಧಿಕಾರಿ ಮೋಸ ಮಾಡುತ್ತಿರುವಂತೆ ಮತ್ತು ಇಬ್ಬರಿಂದಲೂ ಲಕ್ಷಗಟ್ಟಲೆ ರೂಪಾಯಿಗಳನ್ನು ಕೀಳುತ್ತಿರುವಂತೆ ತೋರಿಸಲಾಗಿದೆ.

೧೨. ‘ತಾಂಡವ’ ಇದು ಸಾಮ್ಯವಾದಿ ಶಿವಾ ಶೇಖರನ ಪಕ್ಷದ ಹೆಸರು !

ಎಡಪಂಥೀಯ ವಿಚಾರಶೈಲಿಯ ಶಿವಾ ಶೇಖರನು ವಿಶ್ವವಿದ್ಯಾಲಯದ ಚುನಾವಣೆಯ ಕಣಕ್ಕಿಳಿಯಲು ‘ತಾಂಡವ’ ಎಂದು ತನ್ನ ಹೊಸ ಪಕ್ಷದ ಹೆಸರನ್ನಿಡುತ್ತಾನೆ. ಚುನಾವಣೆಯಲ್ಲಿ ಶಿವಾ ಗೆಲ್ಲುತ್ತಾನೆ, ಎಂದು ತೋರಿಸಲಾಗಿದೆ.

ಒಟ್ಟಾರೆ ಸಂಪೂರ್ಣ ವೆಬ್ ಸಿರೀಸ್‌ನಲ್ಲಿ ಎಡವಿಚಾರಶೈಲಿಯನ್ನು ವೈಭವೀಕರಿಸಲಾಗಿದೆ. ಬಲಪಂಥೀಯ ವಿಚಾರಶೈಲಿಯ ರಾಜಕೀಯ ಪಕ್ಷವು ಎಷ್ಟು ನೀಚವಾಗಿದೆ, ಮುಸಲ್ಮಾನರು ಎಷ್ಟು ಒಳ್ಳೆಯವರಾಗಿರುತ್ತಾರೆ, ಹಿಂದೂಗಳಲ್ಲಿ ತಥಾಕಥಿತ ಜಾತಿದ್ವೇಷ ಇತ್ಯಾದಿಗಳನ್ನು ಪುರಸ್ಕರಿಸಲಾಗಿದೆ. ಅದೇರೀತಿ ಹಿಂದೂ-ಮುಸಲ್ಮಾನರಲ್ಲಿ ದ್ವೇಷ ನಿರ್ಮಿಸಲು ಪ್ರಯತ್ನಿಸಲಾಗಿದ್ದು ಮುಸಲ್ಮಾನರು ಸಾಮಾನ್ಯರು ಹಾಗೂ ಒಳ್ಳೆಯವರಾಗಿರುತ್ತಾರೆ, ಎಂದು ತೋರಿಸಲಾಗಿದೆ. ಆದ್ದರಿಂದ ಈ ವೆಬ್ ಸಿರೀಸ್ ಹಿಂದೂದ್ವೇಷಿ, ರಾಷ್ಟ್ರದ್ರೋಹಿ ಮತ್ತು ಸಮಾಜದ್ರೋಹಿ ಆಗಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಮತ್ತು ರಾಷ್ಟ್ರ ಪ್ರೇಮಿ ನಾಗರಿಕರು ಈ ವೆಬ್ ಸಿರೀಸ್‌ಅನ್ನು ಒಟ್ಟಾಗಿ ಕಾನೂನುಮಾರ್ಗದಲ್ಲಿ ವಿರೋಧಿಸುವ ಆವಶ್ಯಕತೆಯಿದೆ. – ಶ್ರೀ. ವಿಕ್ರಮ ಡೋಂಗ್ರೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೭.೧.೨೦೨೧)