ಪರಾತ್ಪರ ಗುರು ಡಾ. ಆಠವಲೆಯವರಿಂದ ಸಂಪಾದಕೀಯ ಶಿಕ್ಷಣವನ್ನು ಪಡೆಯುವಾಗ ಅನುಭವಿಸಿದ ಅವರ ಶ್ರೇಷ್ಠತೆ !

ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ಪ್ರತ್ಯಕ್ಷ ಕೃತಿಯಿಂದ ಸಿದ್ಧಪಡಿಸಿದರು. ಸಂಸ್ಥೆಯ ಆರಂಭದ ದಿನಗಳಲ್ಲಿ ಪ್ರತಿಯೊಂದು ಸೇವೆಯ ಅಡಿಪಾಯವನ್ನು ಅವರೇ ಹಾಕಿದ್ದಾರೆ. ೧೯೯೮ ರಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ, ಮತ್ತು ೧೯೯೯ ರಲ್ಲಿ ದೈನಿಕ ‘ಸನಾತನ ಪ್ರಭಾತವನ್ನು ಆರಂಭಿಸಿದ ನಂತರ ನಿಯತಕಾಲಿಕೆಗಳಲ್ಲಿ ಲೇಖನದ ಪ್ರಾಧಾನ್ಯತೆ ಹೇಗಿರಬೇಕು ?, ಸಾಮಾಜಿಕ ವಾರ್ತೆಗಳ ರಾಷ್ಟ್ರ ಹಾಗೂ ಧರ್ಮ ಹಿತದ ದೃಷ್ಟಿಕೋನ ಹೇಗಿರಬೇಕು ?, ಇತ್ಯಾದಿ ಎಲ್ಲ ಸೇವೆಗಳನ್ನು ಅವರೇ ಸಾಧಕರಿಗೆ ಕಲಿಸಿದರು. ದೈನಿಕ ‘ಸನಾತನ ಪ್ರಭಾತದಲ್ಲಿ ಸೇವೆ ಕಲಿಯುವಾಗ ಸಾಧಕ ಶ್ರೀ. ಪ್ರಭಾಕರ ಪ್ರಭುದೇಸಾಯಿ ಇವರಿಗೆ ಅರಿವಾದ ಪರಾತ್ಪರ ಗುರು ಡಾಕ್ಟರರ ಅಲೌಕಿಕ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.

ಪ.ಪೂ. ಗುರುದೇವರು ಸಣ್ಣ ಸಣ್ಣ ಕಾಗದಗಳ ತುಂಡುಗಳಲ್ಲಿ ಲೇಖನಗಳನ್ನು ಬರೆದು ಮಿತವ್ಯಯವನ್ನು ಕಲಿಸುವುದು

ಸರಕಾರಿ ಕಾರ್ಯಾಲಯದಲ್ಲಿ ೪ ಸಾಲಿನ ಲೇಖನವಿದ್ದರೂ ನಾವು ‘ಫುಲ್‌ಸೈಜ್ ಪೇಪರ್ ಉಪಯೋಗಿಸುತ್ತೇವೆ; ಆದರೆ ಪ.ಪೂ. ಗುರುದೇವರು ಅತೀ ಸಣ್ಣ ಒಂದು ಬದಿಯಲ್ಲಿ ಬರೆದಿರುವ ಕಾಗದದಲ್ಲಿ ಬರೆದು ಅದನ್ನು ನಮಗೆ ಕೊಡುತ್ತಿದ್ದರು. ಇಂತಹ ಸಣ್ಣ ಕಾಗದದಲ್ಲಿ ಬರೆದಿರುವ ಲೇಖನವನ್ನು ಜೋಡಿಸುವುದೆಂದರೆ ನಮಗೆ ದೊಡ್ಡ ಸಮಸ್ಯೆಯೆನಿಸುತ್ತಿತ್ತು. ನಂತರ ಮಾತ್ರ ನಮಗೆ ಇದರ ಅಭ್ಯಾಸವಾಯಿತು.

‘ದೈನಿಕ ‘ಸನಾತನ ಪ್ರಭಾತದ ಮುಂಬಯಿ, ಠಾಣೆ ಮತ್ತು ರಾಯಗಡ ಆವೃತ್ತಿಯನ್ನು ಆರಂಭಿಸಲು ನಿರ್ಧರಿಸಿದ ನಂತರ ಪ.ಪೂ. ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ನನ್ನನ್ನು ಸಂಪಾದಕನೆಂದು ಆರಿಸಿದರು. ಆಗ ನಾನು ನೌಕರಿ ಮಾಡುತ್ತಿದ್ದೆನು.

೧. ಪ.ಪೂ. ಗುರುದೇವರಲ್ಲಿ ‘ಸಂಪಾದಕನೆಂದು ಪರಿಪೂರ್ಣ ಸೇವೆ ಮಾಡಲು ಸಾಧ್ಯವಾಗಬೇಕು, ಎಂಬ ಮುಖ್ಯ ದೃಷ್ಟಿಕೋನವಿತ್ತು

ಆಗಸ್ಟ್ ೧೯೯೭ ರಲ್ಲಿ ಸನಾತನ ಸಂಸ್ಥೆಯ ಮೂಲಕ ನನ್ನ ಸಾಧನೆಯು ಆರಂಭವಾಯಿತು. ಆಗ ಪ.ಪೂ. ಗುರುದೇವರು ಮುಂಬಯಿಯಲ್ಲಿ ವಾಸಿಸುತ್ತಿದ್ದರು, ನಾನು ಮುಂಬಯಿಯ ಸಾಂತಾಕ್ರೂಝ್‌ನಲ್ಲಿ ವಾಸಿಸುತ್ತಿದ್ದೆನು. ಸಂಪಾದಕನೆಂದು ಆರಿಸಿದ ನಂತರ ಡಿಸೆಂಬರ್ ೧೯೯೯ ರಲ್ಲಿ ನನಗೆ ಗೋವಾದಲ್ಲಿ ಸಂಪಾದಕೀಯ ಶಿಕ್ಷಣವನ್ನು ಪಡೆಯಲು ಕರೆಯಲಾಯಿತು. ‘ಸಂಪಾದಕನೆಂದು ಪರಿಪೂರ್ಣ ಸೇವೆ ಮಾಡಲು ಸಾಧ್ಯವಾಗಬೇಕು ಹಾಗೂ ಯಾರಾದರೂ ರಜೆ ಪಡೆದರೆ ಕೆಲಸ ನಿಲ್ಲಬಾರದು, ಎಂಬುದು ಅವರ ಮುಖ್ಯ ದೃಷ್ಟಿಕೋನವಾಗಿತ್ತು. ಮುಂಬಯಿಯ ಜವಾಬ್ದಾರ ಸಾಧಕರು ನನಗೆ “ಒಮ್ಮೆ ಶಿಕ್ಷಣ ಪಡೆಯಲು ಹೋದ ನಂತರ ಅವರು ‘ಹಿಂತಿರುಗಿ ಹೋಗುವ ಅಥವಾ ವಾಪಾಸು ಹೋಗುವ ಬಗ್ಗೆ ಅವರಲ್ಲಿ ಕೇಳಬಾರದು, ಎಂದಿದ್ದರು. ಆದ್ದರಿಂದ ನಾನು ಪ್ರಾರಂಭದಲ್ಲಿ ೧ ತಿಂಗಳಿನ ರಜೆ ಹಾಕಿ ಅಲ್ಲಿಗೆ ಹೋದೆನು. ನಂತರ ಪ.ಪೂ. ಗುರುದೇವರು ನನಗೆ ‘ಹಿಂತಿರುಗಿ ಹೋಗು ಎಂದು ಹೇಳುವ ತನಕ ರಜೆಯನ್ನು ಮುಂದುವರಿಸುತ್ತಾ ಹೋದೆನು.

೨. ‘ಸರಕಾರಿ ಸೇವೆಯಲ್ಲಿ ಮೇಲಧಿಕಾರಿಗಳು ಇತರರನ್ನು ತಮ್ಮ ‘ಕ್ಯಾಬಿನ್ಗೆ ಕರೆಯುತ್ತಾರೆ, ಆದರೆ ಪ.ಪೂ.ಗುರುದೇವರು ಸಂಪಾದಕರ ಮೇಜಿನ ಸಮೀಪ ಹೋಗಿ ಸೂಚನೆ ಕೊಡುತ್ತಿದ್ದರು

ಆಗ ಗೋವಾದಲ್ಲಿ ಗೋವಾ ಮತ್ತು ಸಿಂಧುದುರ್ಗದ ದೈನಿಕ ‘ಸನಾತನ ಪ್ರಭಾತದ ಆವೃತ್ತಿ ಆರಂಭವಾಗಿತ್ತು. ಸ್ವತಃ ಪ.ಪೂ. ಗುರುದೇವರು ಆ ಆವೃತ್ತಿಯ ‘ಸಂಪಾದಕರ ಹುದ್ದೆಯನ್ನು ಅಲಂಕರಿಸುತ್ತಿದ್ದರು. ಆಗ ಆ ಸಂಪಾದಕೀಯ ವಿಭಾಗದಲ್ಲಿ ನನ್ನ ಸಹಿತ ೮-೧೦ ಸಾಧಕರು ಸೇವೆ ಮಾಡುತ್ತಿದ್ದರು. ಪ.ಪೂ. ಗುರುದೇವರು ನಮ್ಮ ಜೊತೆಯಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ನಾನು ಸರಕಾರಿ ಸೇವೆಯಲ್ಲಿ ಮತ್ತು ಉನ್ನತ ಹುದ್ದೆಯಲ್ಲಿ ಸೇವೆ ಮಾಡುತ್ತಿದ್ದ ಕಾರಣ ನನಗೆ ಸ್ಥಾನಮಾನವನ್ನು ನೋಡುವ ಅಭ್ಯಾಸವಿತ್ತು. ಇಲ್ಲಿ ಮಾತ್ರ ಅದರ ವಿರುದ್ಧವಿತ್ತು. ಸರಕಾರಿ ಸೇವೆಯಲ್ಲಿ ಮೇಲಧಿಕಾರಿಗಳು ಏನಾದರೂ ಚರ್ಚೆ ಮಾಡಲಿಕ್ಕಿದ್ದರೆ, ನಮ್ಮನ್ನು ಅವರ ಕ್ಯಾಬಿನ್‌ಗೆ ಕರೆಯುತ್ತಿದ್ದರು; ಆದರೆ ಪ.ಪೂ. ಗುರುದೇವರು ಏನಾದರೂ ಹೇಳಲಿಕ್ಕಿದ್ದರೆ, ನಮ್ಮ ಮೇಜಿನ ಸಮೀಪ ಬಂದು ಸೂಚನೆ ಕೊಡುತ್ತಿದ್ದರು. ಅವರ ಈ ಗುಣವು ನನಗೆ ತುಂಬಾ ಪ್ರಶಂಸಾರ್ಹವೆನಿಸುತ್ತಿತ್ತು. ‘ಇದರಲ್ಲಿಯೇ ಅವರ ಶ್ರೇಷ್ಠತ್ವವು ಸಮಾವೇಶವಾಗಿತ್ತು, ಎಂದು ನನಗೆ ಅನಿಸುತ್ತಿತ್ತು.

೩. ಪ.ಪೂ.ಗುರುದೇವರು ಒಂದು ಪುಟದ ಜವಾಬ್ದಾರಿಯನ್ನು ನೀಡಿ ಸಂಪಾದಕನ ಸೇವೆ ಮಾಡಿಸಿಕೊಂಡರು

ಸಂಪಾದಕೀಯ ವಿಭಾಗದಲ್ಲಿ ಸೇವೆಯ ತರಬೇತಿ ಮುಗಿಯುತ್ತಾ ಬರುವಾಗ ಒಂದು ದಿನ ನನಗೆ ‘ಇಂದು ನೀವು ಪುಟ ಕ್ರ. ೩ ರ ಸಂಪಾದಕರಾಗಿದ್ದೀರಿ, ಎಂದು ಹೇಳಲಾಯಿತು. ನೀವು ಪಡೆದಿರುವ ಶಿಕ್ಷಣಕ್ಕನುಸಾರ ಇಂದು ದೈನಿಕದ ಪುಟವನ್ನು ಸಿದ್ಧಗೊಳಿಸಿದ ನಂತರ ಗುರುದೇವರಿಗೆ ತೋರಿಸಿ ಪೂರ್ಣಗೊಳಿಸಿರಿ, ಎನ್ನಲಾಯಿತು. ನನಗೆ ಈ ಜವಾಬ್ದಾರಿಯನ್ನು ನಿರ್ವಹಿಸುವುದು ಕಠಿಣವೆನಿಸಿತು; ಆದರೆ ಅವರ ಕೃಪೆಯಿಂದಲೇ ಪುಟ ಸಿದ್ಧವಾಯಿತು. ಆಗ ನಮಗೆ ‘ಪುಟ ಸಿದ್ಧವಾದ ತಕ್ಷಣ ಪ.ಪೂ.ಗುರುದೇವರಿಗೆ ಅದನ್ನು ತೋರಿಸಿ ಪೂರ್ಣಗೊಳಿಸಬೇಕು, ಎನ್ನುವ ಸೂಚನೆ ಯಿತ್ತು. ನನ್ನ ಪುಟ ಸಿದ್ಧವಾಯಿತು. ಆಗ ಪ.ಪೂ.ಗುರುದೇವರು ಇತರರೊಡನೆ ಮಾತನಾಡುತ್ತಿದ್ದರು. ನಾನು ಅವರಿಗೆ ಪುಟವನ್ನು ತೋರಿಸಲು ಹೋದಾಗ ಅವರು ಒಂದು ನಿಮಿಷದಲ್ಲಿ ಪೂರ್ಣ ಪುಟವನ್ನು ನೋಡಿದರು. ಅವರು ನೋಡುವ ಪದ್ಧತಿಯನ್ನು ನೋಡಿ ನಾನು ಆಶ್ಚರ್ಯಚಕಿತನಾದೆನು. ಅಷ್ಟು ಮಾತ್ರವಲ್ಲ, ಕ್ಷಣದಲ್ಲಿಯೇ ಅವರು ನನಗೆ ೭ ಕಡೆ ತಿದ್ದುಪಡಿ ಮಾಡಲು ಹೇಳಿದರು ಹಾಗೂ ‘ಈ ತಿದ್ದುಪಡಿಯನ್ನು ಏಕೆ ಮಾಡುವುದು, ಎಂಬುದನ್ನೂ ಹೇಳಿದರು. ನಾನು ಅಲ್ಲಿಂದ ಹೊರಟು ನನ್ನ ಸ್ಥಾನಕ್ಕೆ ಬಂದು ಕುಳಿತೆನು. ನೆನಪಿರಬೇಕೆಂದು ನಾನು ಆ ೭ ಸ್ಥಾನಗಳಲ್ಲಿ ಪೆನ್ಸಿಲ್ನಿಂದ ಸಂಕೇತ ಮಾಡುತ್ತಿದ್ದೆನು. ಅಷ್ಟರಲ್ಲಿ ‘ಇಂಟರ್‌ಕಾಮ್ನಲ್ಲಿ ಅವರು ಆ ೭ ತಿದ್ದುಪಡಿಗಳು ಯಾವುವು ಎಂದು ಪುನಃ ಹೇಳಿದರು ಹಾಗೂ ಕೇಳಿದರು, “ತಿದ್ದುಪಡಿ ಮಾಡಿದ್ದೀರಾ ? ಅವರ ತತ್ಪರತೆ ಮತ್ತು ಸ್ಮರಣಶಕ್ತಿಯನ್ನು ನೋಡಿ ನಾನು ಪುನಃ ಆಶ್ಚರ್ಯಚಕಿತನಾದೆನು.

೪. ಪ.ಪೂ. ಗುರುದೇವರು ‘ರಾಜ್ಯ ವಿದ್ಯುತ್ ನಿಗಮ ಈ ವಿಷಯದಲ್ಲಿ ಮಾಲಿಕೆಯನ್ನು ಮಾಡಿಸಿಕೊಳ್ಳುವುದು

ಒಂದು ದಿನ ಪ.ಪೂ. ಗುರುದೇವರು ನನ್ನ ಮೇಜಿನ ಸಮೀಪ ಬಂದು ‘ನಮಗೆ ‘ರಾಜ್ಯ ವಿದ್ಯುತ್ ನಿಗಮ ಮತ್ತು ದೇಶದಲ್ಲಿನ ವಿದ್ಯುತ್ ವ್ಯವಸ್ಥೆಯ ವಿಷಯದಲ್ಲಿ ಮಾಲಿಕೆಯನ್ನು ಸಿದ್ಧಪಡಿಸಲಿಕ್ಕಿದೆ. ನಾವು ನಾಳೆಯಿಂದ ಲೇಖನವನ್ನು ಆರಂಭಿಸೋಣ, ಎಂದರು. ಅವರು ಹೀಗೆ ಹೇಳಿದಾಗ ಏನು ಬರೆಯಬೇಕು, ಎಲ್ಲಿಂದ ಆರಂಭಿಸಬೇಕು ? ಏನೂ ತಿಳಿಯುತ್ತಿರಲಿಲ್ಲ. ಆದರೆ ಅವರ ಕೃಪೆಯಿಂದಲೇ ಮೊದಲ ಲೇಖನ ಸಿದ್ಧವಾಯಿತು.

ಸಂಪಾದಕೀಯ ವಿಭಾಗದಲ್ಲಿ ಸೇವೆ ಮಾಡುವ ತರಬೇತಿಯನ್ನು ಪಡೆಯುತ್ತಿರುವಾಗ ಪ.ಪೂ. ಗುರುದೇವರ ಜೊತೆಗೆ ಅನೇಕ ಪ್ರಸಂಗಗಳು ಅನುಭವಿಸಲು ಸಿಕ್ಕಿದವು. ಅದಕ್ಕಾಗಿ ಗುರುದೇವರ ಚರಣಗಳಿಗೆ ಕೃತಜ್ಞತೆಗಳು ! – ಶ್ರೀ. ಪ್ರಭಾಕರ ಪ್ರಭುದೇಸಾಯಿ, ಸನಾತನ ಆಶ್ರಮ, ದೇವದ.