ಸದ್ಗುರು (ಸೌ.) ಅಂಜಲಿ ಗಾಡಗೀಳರು ಸನಾತನ ಪ್ರಭಾತದ ವಿಷಯದಲ್ಲಿ ಹೇಳಿದ ವೈಶಿಷ್ಟ್ಯಪೂರ್ಣ ವಿಷಯಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ‘ಸನಾತನ ಪ್ರಭಾತ’ದ ಅಡಿಪಾಯವನ್ನು ಪ.ಪೂ. ಡಾ. ಆಠವಲೆಯವರು ರಚಿಸಿರುವುದರಿಂದ ಅದರ ಕಾರ್ಯವು ಚಿರಂತನವಾಗಿರುವ ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಿಸಿದೆ ‘ಸನಾತನ ಪ್ರಭಾತ ದೈನಿಕದ ಕಾರ್ಯ ಮಾಡುವ ಉದ್ದೇಶವು ಕೇವಲ ಹಣ ಸಂಪಾದನೆಗಾಗಿ ಅಲ್ಲ, ಉದಾರತೆಯ ಧ್ಯೇಯಕ್ಕೆ ಸಂಬಂಧಿಸಿದ ‘ಈಶ್ವರೀ ರಾಜ್ಯ ಸ್ಥಾಪನೆಯೊಂದಿಗೆ ಇದೆ. ಈ ದೈನಿಕದ ಅಡಿಪಾಯವನ್ನು ಪ.ಪೂ.ಡಾ. ಆಠವಲೆಯವರೆ ರಚಿಸಿರುವುದರಿಂದ ದೈನಿಕದ ಕಾರ್ಯವು ಚಿರಂತನವಾಗಿರುವ ಮೂಲ ಈಶ್ವರೀ ತತ್ತ್ವದೊಂದಿಗೆ ಸಂಬಂಧಿಸಿದೆ. ಈ ದೈನಿಕವನ್ನು ಸಾಧಕರು ‘ಸಾಧನೆಯೆಂದು ನಡೆಸುತ್ತಿರುವುದರಿಂದ ಅದರಲ್ಲಿ ರಜ-ತಮಯುಕ್ತ ಸ್ಪಂದನಗಳಿಲ್ಲ. ಇದರಲ್ಲಿ ಮೂಲತಃ ಸಾತ್ತ್ವಿಕತೆ ಇರುವುದರಿಂದ ಕೇವಲ ಅದರ ಅಸ್ತಿತ್ವದಿಂದಲೆ ವಾತಾವರಣ ಶುದ್ಧವಾಗುತ್ತದೆ. ಇದರಿಂದ ಎಲ್ಲರಿಗೂ ತನ್ನಿಂತಾನೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ.

೨. ಈಶ್ವರನ, ಪ.ಪೂ.ಡಾಕ್ಟರರ, ಹಾಗೂ ಅನೇಕ ಸಂತರ ಕೃಪಾಶೀರ್ವಾದದಿಂದ ಈ ದೈನಿಕ ನಡೆಯುತ್ತಿರುವುದರಿಂದ ಅದಕ್ಕೆ ಧರ್ಮದ್ರೋಹಿಗಳಿಂದ ‘ನಿರ್ಬಂಧ’ದಂತಹ ಸಂಕಟ ಬಂದರೂ ಅದರ ಈಶ್ವರೀ ಕಾರ್ಯದಲ್ಲಿ ಯಾವುದೇ ಅಡ್ಡಿಯಾಗಿಲ್ಲ ಈಶ್ವರನ, ಪ.ಪೂ. ಡಾಕ್ಟರರ ಹಾಗೂ ಅನೇಕ ಸಂತರ ಕೃಪಾಶೀರ್ವಾದದಿಂದ ಈ ದೈನಿಕ ನಡೆಯುತ್ತಿರುವುದರಿಂದ ಆರ್ಥಿಕ ಕೊರತೆಯನ್ನು ಸಹಿಸಿಕೊಂಡು ಹಾಗೂ ಅದಕ್ಕೆ ಧರ್ಮದ್ರೋಹಿಗಳಿಂದ ಬರುವ ‘ನಿರ್ಬಂಧದ ಸಂಕಟಗಳು ಬಂದರೂ ಅದರ ಈಶ್ವರೀ ಕಾರ್ಯದಲ್ಲಿ ಯಾವುದೇ ಪ್ರಕಾರದ ಅಡಚಣೆಯಾಗಿಲ್ಲ, ತದ್ವಿರುದ್ಧ ಇದರ ಕಾರ್ಯ ನಿರಂತರ ನಡೆಯುತ್ತಿದ್ದು ಅದು ವೃದ್ಧಿಯಾಗುತ್ತಾ ಇದೆ. – (ಸದ್ಗುರು) ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ ರಾಮನಾಥಿ ಗೋವಾ.