ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ಪತ್ರಿಕೋದ್ಯಮದ ಮಾಧ್ಯಮದಿಂದ ನಡೆಸುತ್ತಿರುವ ಸಾಮಾಜಿಕ ಚಳುವಳಿ !

ಕು. ಸುಪ್ರಿಯಾ ನವರಂಗೆ

೧. ಭಗವಂತನ ಅಧಿಷ್ಠಾನವಿರುವ ಪತ್ರಿಕೋದ್ಯಮ ! : ಪರಾತ್ಪರ ಗುರು ಡಾ. ಆಠವಲೆಯವರು ಪತ್ರಿಕೋದ್ಯಮದ ಮಾಧ್ಯಮದಿಂದ ಧರ್ಮ ಹಾಗೂ ರಾಷ್ಟ್ರಗಳ ವಿಷಯದಲ್ಲಿ ಪ್ರಬೋಧನೆಯ ವಿಚಾರಗಳನ್ನು ಪ್ರಸಾರ ಮಾಡಿದರು. ‘ಸನಾತನ ಪ್ರಭಾತ ಅಂದರೆ ಅಧ್ಯಾತ್ಮ, ಈಶ್ವರನಿಷ್ಠೆ, ಶ್ರದ್ಧೆ ಹಾಗೂ ಸಾಧನೆಯ ಧೃಢವಾದ ಅಡಿಪಾಯವನ್ನು ರೂಪಿಸಿದ ಧರ್ಮ ಹಾಗೂ ರಾಷ್ಟ್ರಗಳಿಗೆ ಸಂಬಂಧಿಸಿದ ಪತ್ರಿಕೋದ್ಯಮ. ಈ ಹಿಂದೆ ಈ ರೀತಿಯಲ್ಲಿ ಪತ್ರಿಕೋದ್ಯಮ ಆಗಿಲ್ಲ, ಹೀಗಿಲ್ಲ; ಆದರೆ ಭಗವಂತನ ಅಧಿಷ್ಠಾನವಿರುವ ಧರ್ಮ ಹಾಗೂ ರಾಷ್ಟ್ರಗಳಿಗೆ ಸಂಬಂಧಿಸಿದ ಪತ್ರಿಕೋದ್ಯಮವನ್ನು ಪ್ರಾರಂಭಿಸಿದವರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮೊದಲಿಗರಿದ್ದಾರೆ.

೨. ‘ಕಾನೂನಿನ ಚೌಕಟ್ಟಿನಲ್ಲಿದ್ದು ಚಳುವಳಿಯನ್ನು ಹೇಗೆ ಮಾಡಬೇಕು ?, ಇದರ ಆದರ್ಶವನ್ನು ಹಾಕಿಕೊಡುವ ‘ಸನಾತನ ಪ್ರಭಾತ ನಿಯತಕಾಲಿಕೆ ! : ‘ಸನಾತನ ಪ್ರಭಾತ ನಿಯತಕಾಲಿಕೆಯಲ್ಲಿ ನಡೆದ ಘಟನೆಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿದ್ದು ದೃಷ್ಟಿಕೋನವನ್ನು ನೀಡಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿದ್ದು ‘ಸನಾತನ ಪ್ರಭಾತ ನಿಯತಕಾಲಿಕೆಯ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ. ‘ಸನಾತನ ಪ್ರಭಾತ ನಿಯತಕಾಲಿಕೆಯಿಂದ ಕ್ರಿಯಾಶೀಲ ವಾಚಕರು ತಯಾರಾದರು. ಯಾವ ಸಾಧಕರು ಕ್ರಿಯಾಶೀಲ ಇರಲಿಲ್ಲವೋ, ಅವರು ‘ಸನಾತನ ಪ್ರಭಾತದಲ್ಲಿ ಲೇಖನಗಳಿಂದ ಕ್ರಿಯಾಶೀಲರಾದರು. ‘ಚಳುವಳಿಯನ್ನು ಶಾಂತಿಯುತ ಮಾರ್ಗದಿಂದ ಹಾಗೂ ಕಾನೂನಿನ ಚೌಕಟ್ಟಿನಲ್ಲಿದ್ದು ಹೇಗೆ ಮಾಡಬೇಕು ? ಎಂಬ ಆದರ್ಶವನ್ನು ‘ಸನಾತನ ಪ್ರಭಾತದ ಮಾಧ್ಯಮದಿಂದ ಪರಾತ್ಪರ ಗುರು ಡಾ. ಆಠವಲೆಯವರು ಹಾಕಿಕೊಟ್ಟರು ಹಾಗೂ ಇಡೀ ವಿಶ್ವಕ್ಕೆ ಕಲಿಸಿದರು. ಈ ಆದರ್ಶವನ್ನು ಮುಂದಿಟ್ಟು ಭವಿಷ್ಯದಲ್ಲಿ ಯಾವುದೇ ಅತ್ಯುತ್ತಮ ರಾಜ್ಯ ವ್ಯವಸ್ಥೆ ರೂಪಿಸುವ ದೃಷ್ಟಿಯಿಂದ ಹೆಜ್ಜೆ ಇಡಬಹುದು.

೩. ಎಲ್ಲ ಹಂತಗಳಲ್ಲಿ ವಿರೋಧವಾಗುತ್ತಿದ್ದರೂ ‘ಸನಾತನ ಪ್ರಭಾತದ ಪತ್ರಿಕೋದ್ಯಮವು ಕೇವಲ ಭಗವಂತನ ಅಧಿಷ್ಠಾನದಿಂದಾಗಿ ಯಾರ ಮುಂದೆಯೂ ಬಾಗದಿರುವುದು : ಪತ್ರಿಕೋದ್ಯಮವು ಕೇವಲ ಭಗವಂತನ ಅಧಿಷ್ಠಾನವಿದ್ದುದರಿಂದಲೇ ಯಾರ ಮುಂದೆಯೂ ಬಾಗಲಿಲ್ಲ. ಶಾರೀರಿಕ, ವೈಚಾರಿಕ ಹಾಗೂ ಮಾನಸಿಕ ಹೀಗೆ ಎಲ್ಲ ಹಂತಗಳಲ್ಲಿ ವಿರೋಧವಾಗುತ್ತಿದ್ದರೂ ಕೇವಲ ಭಗವಂತನ ಅಧಿಷ್ಠಾನವಿದ್ದುದರಿಂದಲೇ ‘ಸನಾತನ ಪ್ರಭಾತವು ಇಂದು ತೇಜಸ್ವೀಯಾಗಿದೆ. ಭಗವಂತನ ಅಧಿಷ್ಠಾನ ಇಲ್ಲದಿರುವ ಚಳುವಳಿಯು ಕಾಲಾಂತರದಲ್ಲಿ ವಿರೋಧ ಹೆಚ್ಚಾದಾಗ ಬಾಗುತ್ತದೆ; ಆದರೆ ವಿರೋಧವಾಯಿತು ಎಂದು ‘ಸನಾತನ ಪ್ರಭಾತವು ಬಾಗಲಿಲ್ಲ. ಭಗವಂತನ ಅಧಿಷ್ಠಾನವೇ ಇದರ ಹಿಂದಿರುವ ಏಕೈಕ ಕಾರಣವಾಗಿದೆ ! – ಕು. ಸುಪ್ರಿಯಾ ನವರಂಗೆ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧.೩.೨೦೨೦)